ಟೈಮ್ ಪಾಸ್ ಕಡ್ಲೇಕಾಯ್: ಗೋಮೂತ್ರದಲ್ಲಿ ಸಗಣಿ ಬೆರಸ್ಕಂಡು ಬಾಯಿ ಮುಕ್ಕಳಿಸಿ..

ಕಡಿದಾಳು ಶಾಮಣ್ಣ ನಿಮಗೆ ಗೊತ್ತು, ಅವರ ಹೋರಾಟ ನಿಮಗೆ ಗೊತ್ತು, ಕೆ ಅಕ್ಷತಾ ನಿಮಗೆ ಗೊತ್ತು. ಅವರು ಶಾಮಣ್ಣನವರ ಅನುಭವಗಳನ್ನ ನಿರೂಪಿಸಿರುವುದು ಗೊತ್ತು. ಅಹರ್ನಿಶಿ ಪ್ರಕಾಶನ ನಿಮಗೆ ಗೊತ್ತು. ಅವರು ಈ ಕೃತಿಯನ್ನು ಹೊರತಂದಿರುವುದು ಗೊತ್ತು.

ಈ ಎಲ್ಲಾ ಗೊತ್ತು..ಗೊತ್ತು..ಗಳ ಮಧ್ಯೆ ಗೊತ್ತಿಲ್ಲದ ಸಂಗತಿ ಇಲ್ಲಿದೆ. ಅದು ಕಡಿದಾಳು ಶಾಮಣ್ಣನವರ ಮಹಾ ಹಾಸ್ಯಪ್ರಜ್ಞೆ. ಅವರ ಕೃತಿಯಿಂದ ಆಯ್ದ ಇಂತಹ ಪುಟ್ಟ ಜ್ಹಲಕ್ ಗಳು ಆಗೀಗ ನಿಮ್ಮ ಮುಂದೆ ಇಡುತ್ತೇವೆ-

++

ಹಂದಿ ಮಾಂಸ ತಿನ್ನೋದು ಅಂದ್ರೆ..

ಮೂಡುವಳ್ಳಿ ಮನೇಲಿ ಇಬ್ಬರು ಹೆಗ್ಗಡತ್ಯಮ್ಮಾರಿದ್ದರು. ಕೂಡು ಕುಟುಂಬದ ಆ ಮನೆಯ ಎರಡು ಭದ್ರ ಕಂಬದಂಗಿದ್ದರು ಈ ಮುದುಕಿಯರು. ಅಣ್ಣಯ್ಯ ಹೆಗ್ಡೇರ ತಾಯಿ ಈರಮ್ಮ, ಅವರಕ್ಕ ಬೊಮ್ಮಮ್ಮ, ಅವರೇನೂ ಸ್ವಂತ ಅಕ್ಕ ತಂಗಿಯರಲ್ಲ. ಅಣ್ಣಯ್ಯ ಹೆಗ್ಡೇರ ದೊಡ್ಡಪ್ಪನ ಹೆಂಡತಿ ಬೊಮ್ಮಮ್ಮ, ಎಂಟನೇ ವರ್ಷಕ್ಕೆ ಮದುವೆಯಾಗಿ ಒಂಬತ್ತನೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ರು. ಈರಮ್ಮಂಗೆ ಸಾಲು ಸಾಲು ಮಕ್ಕಳು. ಅವುಗಳನ್ನ ಜೋಪಾನ ಮಾಡುವಲ್ಲಿ ಬೊಮ್ಮಮ್ಮನ ಪಾತ್ರ ಭಾಳ ಇತ್ತು. ಅಣ್ಣಯ್ಯ ಹೆಗ್ಡೇರಾದಿಯಾಗಿ ಎಲ್ಲರೂ ಬೊಮ್ಮಜ್ಜಿಗೆ ಬಹಳ ಗೌರವ ಕೊಡೋರು. ಮನೇಲಿ ಹಿರಿತಲೆಯಾದ ಈ ಅಜ್ಜಮ್ಮನ ಮಾತಿಗೆ ಬಹಳ ಬೆಲೆ ಇತ್ತು. ನಮ್ಮ ಹುಡುಗ್ರ ಗುಂಪಿಗೂ ಈ ಅಜ್ಜಿ ಕಂಡ್ರೆ ಭಾಳ ಪ್ರೀತಿ. ಆದ್ರೇನು ಮಾಡೋದು? ಒಂದೆ ಒಂದು ವಿಷಯದಲ್ಲಿ ಈ ಅಜ್ಜಿ ಭಾಳ ಇರುಸು ಮುರಿಸು ಮಾಡೋದು.

ತುಂಬಾ ಚೆನ್ನಾಗಿ ಹಂದಿ ಮಾಂಸದ ಸಾರು ಮಾಡಿ ಬಡಿಸ್ತಿದ್ದ ಬೊಮ್ಮಜ್ಜಿದು ಒಂದು ಕಂಡಿಷನ್. ಏನಪ್ಪ ಅಂದ್ರೆ ಹಂದಿ ಸಾರು ಉಂಡೋರು, ಅದು ಹೊಲಸು ಪದಾರ್ಥವಾದ್ದರಿಂದ ಉಂಡ ಬಾಯಿನ ಶುದ್ದಿ ಮಾಡ್ಕಂಡು ಒಳಗೆ ಬರಬೇಕು. ಯಾವುದರ ಮೂಲಕ ಈ ಶುದ್ಧೀಕರಣ ಅಂತಂದ್ರೆ ಗೋಮೂತ್ರದಲ್ಲಿ ಸಗಣಿನ ಬೆರಸ್ಕಂಡು ಅದರಲ್ಲಿ ಬಾಯಿ ಮುಕ್ಕಳಿಸಬೇಕಿತ್ತು. ಸಗಣಿ ನೀರಿನಿಂದ ಬಾಯಿ ತೊಳ್ಕಳಕ್ಕೆ ಆಗದಿದ್ದವರು ಹಂದಿ ಸಾರಿನ ವಾಸನೆ ತಗಳ್ಳಕ್ಕೂ ಅರ್ಹರಾಗಿರಲಿಲ್ಲ. ನಮಗೆ ಸಗಣಿ ಗೋಮೂತ್ರದ ವಾಸನೆಗೆ ಉಂಡ ಹಂದಿ ಸಾರು ಹೊರಗೆ ಬರೋ ಹಂಗಾಗಾದು.

ಆದರೆ ಅಜ್ಜಿ ಹೇಳದಂಗೆ ಮಾಡ್ದೆ ವಿಧಿನೇ ಇರಲಿಲ್ಲ. ಅಣ್ಣಯ್ಯ ಹೆಗ್ಡೆಯರಾದಿಯಾಗಿ ಎಲ್ಲರೂ ಅಜ್ಜಿ ಮಾಡಿದ ನಿಯಮಾನ ಪಾಲಿಸ್ತಿದ್ವಿ ಯಾವುದೇ ಕಾರಣಕ್ಕೂ ಹಂದಿ ಮಾಂಸ ತಿನ್ನದರಿಂದ ಮಾತ್ರ ವಂಚಿತರಾಗ್ತಿರಲಿಲ್ಲ.

 

‍ಲೇಖಕರು G

July 8, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. KS Naveen

    ಮಾನ್ಯರೆ,

    ಈ ಬರೆಹದ ತುಣುಕುಗಳನ್ನು ಹಂಚಿಕೊಂಡದ್ದು ಬಹಳ ಸಂತೋಷ. ಗೋಮೂತ್ರಕ್ಕೆ ಸಗಣಿ ಬೆರೆಸ್ಕೊಂಡು…ಇದು ತಮಾಶೆಯಾಗಿ, ಅಸಹ್ಯವಾಗಿ ಕಾಣಿಸಿದರೂ ಒಂದು ಸಾಮಾಜಿಕ ದಾಖಲೆ. ಮಾಂಸಾಹಾರ ಕುರಿತು ಇಂತಹುದ್ದೆಲ್ಲ ಯಾಕ ಅನ್ನೊದರ ಮೂಲ ಹುಡುಕಬೇಕು. ಶೋಷಣೆಗೆ ಎಷ್ಟು ಮುಖಗಳು!! ತೇಜಸ್ವಿ ಇದನ್ನು ಓದಬೇಕಿತ್ತು.

    ಆದರಗಳೊಂದಿಗೆ,

    ಕೆ ಎಸ್ ನವೀನ್

    ಪ್ರತಿಕ್ರಿಯೆ
  2. D.RAVIVARMA

    SHAMANNA AVARA ONDU DODDA KHAJANE AVARA ODANATADALLIDDAVARU AVARA BADUKINA VAISISTYAGALANNU HELABEKU,THIS IS WONDERFUL KELAVU SAMPRADAYAGALIGE ARTHAVIDDARU INNU KELAVONDU PRASNEYAGI ULIDIVE,NAMMA KADE ONDU PADDATHI YARE SATTAGA MANNIGE HOGI BANDAGA SAMBANDIKARU ANDALLI BEEGARU VISHA BAYIYANNU TOLESUTTARE ADAKKE SODA,ILLAVADALLI MANDAKKI AVARU KOTTADDANNU BAYALLI HAKI MUKKALISI UGALABEKU, VISHAVANNE KARUVA JANA VISHADA BAYI TOLASADU NANAGANTU PRASNEYAGIYE ULIDIDE D,RAVI VARMA HOSPET

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: