ಟೀ ☕ ಜೊತೆ ತೇಜಸ್ವಿ

ashik mulky

ಆಶಿಕ್ ಮುಲ್ಕಿ

ಅವತ್ತು ಬೆಳಿಗೆ 6.30 ಕ್ಕೆ ಎದ್ದು ಹಲ್ಲುಜ್ಜಿ, ಸ್ನಾನ ಮಾಡಿ 10.30 ಕ್ಕೆ ಕೃಷಿಯ ಬಗ್ಗೆ ಇದ್ದ ಶಿಬಿರಕ್ಕೆ ಹೋಗ್ಬೇಕು. 10.30 ಕ್ಕೆ ತಾನೇ ಶಿಬಿರ ಮತ್ಯಾಕೆ ಇವನು 6.30 ಕ್ಕೆ ಎದ್ದಿದ್ದಾನೆ.
ನಂ ರೂಮಲ್ಲಿ 6 ಜನ. ಬೆಳ್ಳಂಬೆಳಗ್ಗೆಯ ವಿಧಾನಸೌಧಕ್ಕೆ ಹೋದರೆ ಚಳಿಗಾಲ ಅಧಿವೇಶನ ಮುಗಿಯದೆ ಹೊರಬರಲ್ಲ .
ಓಹ್ ! 9 ಗಂಟೆಯು ಗಡಿಯಾರದಲ್ಲಿ ಟನ್.. ಟನ್..
” ಎಲ್ರೂ ಬನ್ರೊ ಬೇಗ
ಏನ್ ಮಾಡ್ತೀರ್ರೋ ಲೇಟಾಗುತ್ತೆ … ನಿಮ್ಮವ್ವನ ” ಎಂದು ಕೆಳಗಿಂದ ಆರುಮೂರು ಹಲ್ಲಿನ ಯಮ ಜೋರಾಗಿ ಕೂಗಿದ.
ಯಮಾ ಅಂದ್ರೆ ನನ್ ಗೆಳಯ ಯಶಸ್ ಮಾವತ್ತೂರು . ಯಶಸ್ ನ ‘ಯ’ ಮಾವತ್ತೂರ್ ನ ‘ಮಾ’ ಸೇರಿಸ್ಬಿಟ್ಟು ಯಮಾ ಅಂತ ಕರೀತೀವಿ.

ಉತ್ತರ ಕರ್ನಾಟಕದಿಂದ, ಮೈಸೂರಿನಿಂದ, ಬೆಂಗಳೂರಿನಿಂದ ಬಂದವರ ಜೊತೆ ಮಂಗಳೂರಿನವನಾದ ನನ್ನನ್ನೂ ಸೇರಿಸಿ ಆರು ಜನ ರೂಂ ನಲ್ಲಿ ಇದ್ದೀವಿ .

ಎಲ್ರೂ ರೆಡಿಯಾಗಿದ್ದಾರೆ. ನಾನು 6.30 ಕ್ಕೆ ಅಧಿವೇಶನ ಮುಗ್ಸಿದ್ರೂ ಬೇಗನೆ ರೆಡಿಯಾಗಲಾಗಿಲ್ಲ . ದಿನ ನಾನು ಮನಸಲ್ಲೆ ಬೈಕೊಳುವೆ
” ಎಂತ ಸಾವ್ ಮಾರ್ರೆ ಇವರು
ದಿನಾ ಹೀಗೆ ಮಾಡುವುದು
ಅರ್ಜೆಂಟ್ ಅರ್ಜಂಟ್ ರೆಡಿ ಅಗ್ಬೇಕು ”
ಅಂತ ಕೋಪ ಬರುತ್ತೆ ,
ಆದ್ರೆ ನನ್ನಿಂದ ಎಲ್ರಿಗೂ ಲೇಟಾಗುತ್ತಲ್ವ ಅನ್ನುವ ನೋವು ಇದೆ.

ಎಲ್ಲರ ಲೇಟಾಗುವಿಕೆ ಕ್ರಮೇಣ ಬೈಗಳಾಗಿ ಪರಿವರ್ತನೆಯಾಗಿ
ಉತ್ತರ ಕರ್ನಾಟಕದ ಸೋ ಕಾಲ್ಡ್ ಕೆಟ್ಟ ಬೈಗಳು
ಬೆಂಗಳೂರಿನ ಸೋ ಕಾಲ್ಡ್ ಸ್ಟಾಂಡರ್ಡ್ ಬೈಗಳು
ಮೈಸೂರಿನ ಸೋ ಕಾಲ್ಡ್ ಅಧಿಕಾರ ಶಕ್ತಿಯ ಬೈಗಳೆಲ್ಲವೂ ಚೆನ್ನೈನ ಮೇಲೆ ನಿಲ್ಲದ ಮಳೆ ಬಿದ್ದಂತೆ ಈ ಮಂಗಳೂರಿನ ಮುಲ್ಕಿಯ ಮೇಲೆ ಬಿದ್ದವು .

ಈ ಮಳೆಗೆ ಒದ್ದೆಯಾಗಿ
ಮನದಲ್ಲಿ ನನ್ನನ್ನು ನಾನೇ ಸಮಾಧನಪಡಿಸಿಕೊಂಡು,

ಕಸ್ತೂರಿಯಕ್ಕನ ಮನವೊಲಿಸಿ ಒಂದು ಕಪ್ ಟೀ ತೆಗೆದು ನನ್ನ ನೆಚ್ವಿನ ತೇಜಸ್ವಿಯ ಕಿರಗೂರಿನ ಗಯ್ಯಾಳಿಗಳು
ಕೈಲ್ಲಿಡಿದು , ಅದರಲ್ಲಿಯ
‘ಹಾ ದೂಡು ಐಸಾ ..
ಇನ್ನೋಂಚೂರು ಐಸಾ ..
ಬಂದೇ ಬಿಡ್ತು ಐಸಾ .. ‘
ಎಂದು ಮನದಲ್ಲಿ ಗುಣುಗಿ ಕನ್ನಡಿ ನೋಡಿ ಒಂದು ಮುಗುಳ್ನಗೆ ಬೀರಿ “ವಿ ಅರ್ ಮ್ಯಾಂಗ್ಳೂರಿಯನ್ಸ್” ಎಂದು ಜೋರಾಗಿ ಕೂಗಾಡಿದೆ .

‍ಲೇಖಕರು admin

December 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಶಮ, ನಂದಿಬೆಟ್ಟ

    Good One Ashik.. ವಿ ಅರ್ ಮ್ಯಾಂಗ್ಳೂರಿಯನ್ಸ್..

    ಪ್ರತಿಕ್ರಿಯೆ
  2. ಆಶಿಕ್ ಮುಲ್ಕಿ

    ದಿಬೆಟ್ಟ
    ಹೌದು ಮ್ಯಾಂಗ್ಳೂರಿಯನ್ಸ್

    Anonymous
    Thank U

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: