‘ಶೂದ್ರ’ ಪತ್ರಿಕೆಯ ಜಿ.ಎಸ್. ಶಿವರುದ್ರಪ್ಪ
ಅವರ ಗೌರವ ಕಾವ್ಯ ಸ್ಪರ್ಧೆ
ಶೂದ್ರ ಸಾಹಿತ್ಯಕ ಪತ್ರಿಕೆಯು ಪ್ರೊ. ಜಿ.ಎಸ್. ಶಿವರುದ್ರಪ್ಪ ಗೌರವ ಕಾವ್ಯಸ್ಪರ್ಧೆಯನ್ನು ಕೆಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ 2008ನೇ ವರ್ಷಕ್ಕೆ ಟಿ. ಯಲ್ಲಪ್ಪ ಅವರ ‘ಕಡಲಿಗೆ ಕಳಿಸಿದ ದೀಪ’ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ.
2009ನೇ ವರ್ಷಕ್ಕೆ ಎಲ್.ಎನ್. ಮುಕುಂದರಾಜ್ ಅವರ ‘ವಿಲೋಮ ಚರಿತೆ’ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯ ಮೊತ್ತ ಎಂಟು ಸಾವಿರ ರೂ.ಗಳು. ಈ ಸಂಕಲನಗಳ ತೀರ್ಪುಗಾರರು: ಡಾ|| ಹೆಚ್.ಎಸ್. ಮಾಧವರಾವ್ ಮತ್ತು ಜಯಶಂಕರ್ ಹಲಗೂರು ಅವರು.
ಪ್ರಶಸ್ತಿಯನ್ನು ಫೆಬ್ರವರಿ 20ರಂದು ಭಾನುವಾರ ಶೂದ್ರದ 38ನೇ ವರ್ಷದ ಕಾರ್ಯಕ್ರಮದಲ್ಲಿ ನೀಡಲಾಗುವುದು.
ನಿಮ್ಮ,
ಶೂದ್ರ ಶ್ರೀನಿವಾಸ್]]>
ಟಿ ಯಲ್ಲಪ್ಪ, ಮುಕುಂದರಾಜ್ ಗೆ ಜಿ ಎಸ್ ಎಸ್ ಪ್ರಶಸ್ತಿ
ನಿಮಗೆ ಇವೂ ಇಷ್ಟವಾಗಬಹುದು…




ಅಭಿನಂದನೆ…. 🙂
CONGRATULATIONS! BOTH OF YOU.
congratulation sir…
prashasthi vijetarige abhinandanegalu.