ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುತ್ತಾ ಕುವೆಂಪು 

ಜ್ಞಾನಪೀಠ ಪ್ರಶಸ್ತಿ ಸ್ವೀಕಾರ ಸಂದರ್ಭದ ಭಾಷಣದಿಂದ :

ಕುವೆಂಪು 

‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ವ್ಯಾವಹಾರಿಕವಾಗಿ ‘ಕುವೆಂಪುಕೃತಿ’ ಎಂದು ಕರೆಯಲಾಗಿದ್ದರೂ ಪಾರಮಾರ್ಥಿಕವಾಗಿ ನೋಡಿದರೆ ‘ಕುವೆಂಪು’ವನ್ನೇ ಅದು ಸೃಜಿಸಿದೆ.

ಅದು ಯುಗಚೈತನ್ಯದ ಸಮಷ್ಟಿಪ್ರಜ್ಞೆಯ ಸೃಷ್ಟಿ. ಅದು ಶ್ರೀ ರಾಮಾಯಣದ ಅತ್ಯಂತ ಆಧುನಿಕ ಅವತಾರ ;

ಅದು ವೈದಿಕ ಸಂಪ್ರದಾಯದ ವಾಲ್ಮೀಕಿ ರಾಮಾಯಣಕ್ಕೆ ಋಣಿಯಾಗಿರುವಂತೆ ಜೈನಸಂಪ್ರದಾಯದ ರಾಮಾಯಣಗಳಿಗೂ ಋಣಿಯಾಗಿದೆ. ವ್ಯಾಸ, ವಾಲ್ಮೀಕಿ, ಪಂಪ, ನಾಗಚಂದ್ರಾದಿಗಳಿಗೆಂತೊ ಅಂತೆಯೇ ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನ್ ರಿಗೂ ಋಣಿಯಾಗಿದೆ.

ಅಲ್ಲಿ ಶ್ರೀ ರಾಮಕೃಷ್ಣ- ವಿವೇಕಾನಂದರ ಸಮನ್ವಯ ದರ್ಶನವನ್ನೆಂತೊ ಅಂತೆಯೇ ಗಾಂಧೀಜಿ – ವಿನೋಬಾಜಿಯವರಿಂದ ಪ್ರಣೀತವಾದ ಸರ್ವೋದಯ ಭಾವನೆಯನ್ನೂ , ಪಾಶ್ಚಾತ್ಯ ವಿಜ್ಞಾನದ ವಿಕಾಸವಾದವನ್ನೆಂತೊ ಅಂತೆ ಶ್ರೀ ಅರವಿಂದ ಪ್ರಣೀತವಾದ ಪೂರ್ಣಯೋಗ ದರ್ಶನವನ್ನೂ ಸಂದರ್ಶಿಸಬಹುದು.

ಸಮನ್ವಯ > ಸರ್ವೋದಯ > ಮತ್ತು ಪೂರ್ಣದೃಷ್ಟಿ…
ಇವುಗಳೇ ‘ಶ್ರೀ ರಾಮಾಯಣ ದರ್ಶನಂ’
(ಮಹಾಕಾವ್ಯ)ದ ತ್ರಿಣೇತ್ರಗಳಾಗಿವೆ….

[ನವದೆಹಲಿ: 20 ಡಿಸೆಂಬರ್ 1968]

ಚಂದ್ರಶೇಖರ ನಂಗಲಿ ಅವರ ಫೇಸ್ ಬುಕ್ ಪೇಜ್ ನಿಂದ..

‍ಲೇಖಕರು avadhi

February 2, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: