‘ಜೋಗಿ ಎಲ್ಲಿ ಕಾಣಿಸ್ತಾ ಇಲ್ವಲ್ಲ?’ ಅಂತ ಕೇಳ್ತಾ ಇದ್ದವರಿಗೆ ಇಲ್ಲಿ ಉತ್ತರ ಇದೆ. ಅವರು ಅಂಡರ್ ಗ್ರೌಂಡ್ ಆಗಿದ್ದಾರೆ. ಯಾವ ಆಪಾದನೆಯೂ ಅವರ ಮೇಲಿಲ್ಲ.
ಅಂಡರ್ ಗ್ರೌಂಡ್ ಆಗಿರೋದು ಕಾದಂಬರಿ ಬರೆಯೋದಿಕ್ಕೆ, ಅಪಾರ ನಿಜಕ್ಕೂ ಕವರ್ ಪೇಜ್ ಮುಗಿಸಿ ಪ್ರಕಾಶ್ ಕಂಬತ್ತಳ್ಳಿ ಕೈಗಿತ್ತಿದ್ದಾರೆ ಅಂತ ಗೊತ್ತಾದ ಮೇಲೆ ಸೀರಿಯಸ್ ಆಗಿದ್ದಾರೆ. ಕಂಬತ್ತಳ್ಳಿ ಅವರು ಪುಸ್ತಕ ಇಲ್ಲದೆ ಹೋದರೂ ಪರವಾಗಿಲ್ಲ, ಕವರ್ ಪೇಜೇ ಬಿಡುಗಡೆ ಮಾಡಿಸ್ತೀನಿ ಅಂತ ಆವಾಜ್ ಹಾಕಿದ ಮೇಲೆ ಅಯ್ಯೋ ಇನ್ನು ನಾಲ್ಕು ದಿನ ಇದೆ ಇನ್ನಾದರೂ ಕಾದಂಬರಿ ಬರೀಲೆಬೇಕಾಗುತ್ತೆ ಅಂತ ಗೊತ್ತಾಗಿದೆ.
ಸೋ, ಜೋಗಿ ಕಾದಂಬರಿ ಖಂಡಿತಾ ಬರುತ್ತೆ. ನೀವು ಬನ್ನಿ ಈ ಭಾನುವಾರ ಬೆಳಗ್ಗೆ ೧೦-೩೦ಕ್ಕೆ. ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ..






ಪುಸ್ತಕ ಇಲ್ಲದೆ ಹೋದರೂ ಪರವಾಗಿಲ್ಲ, ಕವರ್ ಪೇಜೇ ಬಿಡುಗಡೆ ಮಾಡಿಸ್ತೀನಿ …
LOL 😀