ಜೋಗಿಯನ್ನು ನಾನು ಮೊದಲು ಭೇಟಿಯಾದದ್ದು ವೈ ಎನ್ ಕೆ ಸಾನಿಧ್ಯದಲ್ಲಿ. ಆಮೇಲೆ ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಅವರನ್ನು ನಿತ್ಯ ಭೇಟಿಯಾಗುತ್ತಲೇ ಇದ್ದೇನೆ. ಆದರೆ ಯಾವತ್ತೂ ವನವಾಸದ ಅನುಭವವಾಗಿಲ್ಲ. ನಾವಿಬ್ಬರೂ ಒಂಟಿಯಾಗಿ ಹಲವು ಸಾಹಸಗಳನ್ನು ಮಾಡಿದ್ದೇವೆ. ಆದರೆ ಯಾವತ್ತೂ ಜಗಳವಾಡಿಲ್ಲ. ಹಗಲುರಾತ್ರಿ ಜೊತೆಯಾಗಿ ದುಡಿದಿದ್ದೇವೆ. ಯಾವತ್ತೂ ಹೈರಾಣಾಗಿಲ್ಲ. ನನ್ನ ಆಸಕ್ತೀನೇ ಬೇರೆ, ಅವರ ಆಸಕ್ತೀನೇ ಬೇರೆ. ಆದರೆ ಯಾವತ್ತೂ ಅವುಗಳು ಪರಸ್ಪರ ಢಿಕ್ಕಿ ಹೊಡೆದಿಲ್ಲ. ಅವರಿಗೆ ನನಗಿಂತ ತಡವಾಗಿ ಬೀಪಿ ಬಂತು ಅನ್ನೋದೊಂದೇ ಬೇಜಾರು.
ಅವರಾಡಿದ ಮಾತುಗಳು ನನಗೆ ಅರ್ಥ ಆದ ಹಾಗೆ, ನಾನಾಡದೆ ಇರುವ ಮಾತುಗಳೂ ಅವರಿಗೆ ಅರ್ಥವಾಗುತ್ತವೆ. ಆ ಕಾರಣಕ್ಕೆ ನಾವಿಬ್ಬರೂ ಇಷ್ಟು ದೀರ್ಘಕಾಲ ‘ಸಂಸಾರ’ ಮಾಡುವುದಕ್ಕೆ ಸಾಧ್ಯವಾಗಿದೆ ಅನ್ನುವುದು ನನ್ನ ಭಾವನೆ. ಇಪ್ಪತ್ತು ಕೈಗಳ ರಾವಣನಂತೆ ಏಕಕಾಲದಲ್ಲಿ ಹತ್ತಾರು ಕೆಲಸಗಳನ್ನು ಲೀಲಾಜಾಲವಾಗಿ ಮಾಡುವ ಅವರ ಶಕ್ತಿ ನನ್ನಲ್ಲಿ ಸದಾ ಅಚ್ಚರಿಯನ್ನೂ ಅಸೂಯೆಯನ್ನೂ ಮೂಡಿಸುತ್ತಲೇ ಇದೆ. ಆದರೆ ಅವರು ಏರಿದ ಎತ್ತರ ನೋಡುವಾಗ ನಾನು ನಿತ್ಯ ಸಂತೋಷಿ. ಅವರ ಬೆಳವಣಿಗೆ ಹೀಗೆ ಕಂತುಗಳಲ್ಲಿ, ಎಪಿಸೋದುಗಳಲ್ಲಿ, ಕಥೆಯಾಗಿ, ಕಾದಂಬರಿಯಾಗಿ, ಸಿನೆಮಾ ಆಗಿ ಮುಂದುವರಿಯುತ್ತಲೇ ಇರಲಿ ಮತ್ತು ಅದರಲ್ಲಿ ನ್ಯಾಯವಾಗಿ ಸಿಗಬೇಕಾದ ಪಾಲು ಸಿಗುತ್ತಲೇ ಇರಲಿ ಅನ್ನೋದು ನನ್ನಾಸೆ.
-ಉದಯ ಮರಕಿಣಿ
ಜೋಗಿಯವರ ‘ಯಾಮಿನಿ’ ಕಾದಂಬರಿಗೆ ಬರೆದ ಬೆನ್ನುಡಿ-
ಜೋಗಿ ಕೈಯಲ್ಲಿ 'ಯಾಮಿನಿ'
ನಿಮಗೆ ಇವೂ ಇಷ್ಟವಾಗಬಹುದು…





congrats!
ಜೋಗಿಯವರ ಬ್ಲಾಗ್ ಕಾಣೆಯಗಿದೆಯಾ???
ಯಾರಮ್ಮ ನೀನೂ ಯಾಮಿನೀ… :-)waitn for its release….