ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕಹಾನಿ

ಛತ್ರ


ಚಳಿಗಾಲದ ಒಂದು ಮುಸ್ಸಂಜೆ ದರವೇಶಿಯೊಬ್ಬ ಅರಮನೆಯತ್ತ ಸಾಗಿದ. ಬೆಚ್ಚನೆಯ ಆಸ್ಥಾನದಲ್ಲಿ ತನ್ನ ಕಂಬಳಿ ಹಾಸಿಕೊಂಡು ಮಲಗಲು ಸನ್ನದ್ಧನಾದ. ಅವನನ್ನು ಮಾತಾಡಿಸುವ ಧೈರ್ಯ ಯಾರಿಗೂ ಬರಲಿಲ್ಲ. ಕೊನೆಗೆ ಚಕ್ರವರ್ತಿಯೇ ನಡೆದು ಬಂದ. ಅವರಿಬ್ಬರ ನಡುವೆ ಹೀಗೆ ಮಾತಾಯಿತು:

ಇಲ್ಲೇನು ಮಾಡ್ತಿದ್ದೀಯಾ?

ರಾತ್ರಿ ಮಲಗಿದ್ದು ಬೆಳಗ್ಗೆ ಎದ್ದು ಹೋಗ್ತೀನಿ

ಇದು ನನ್ನ ಅರಮನೆಯ ಆಸ್ಥಾನ. ಧರ್ಮಛತ್ರ ಅಂದ್ಕೋಡ್ಯೇನು ಹೋಗೋರು ಬರೋಲ್ಲ ಮಲಗಿ ಎದ್ದು ಹೋಗೋದಕ್ಕೆ?

ಅರಮನೆ? ನಿನಗೆಲ್ಲಿಂದ ಸಿಕ್ಕಿತು ಇದು?

ನಮ್ಮಪ್ಪನಿಂದ ಬಂತು?

ಅವರಿಗೆ

ಅವರ ತಂದೆಯವರಿಂದ ಬಂತು

ಅವರಿಗೆ

ಮುತ್ತಾತನಿಂದ ಬಂದಿರಬೇಕು

ಅಂದರೆ ನಿನ್ನ ಮುತ್ತಾತ, ತಾತ, ಅಪ್ಪ ಎಲ್ಲರೂ ಇಲ್ಲಿ ಮಲಗಿ ಎದ್ದು ಹೋದವರೇ ತಾನೆ? ಅಂದ ಮೇಲೆ ಇದು ಧರ್ಮ ಛತ್ರ ಅಲ್ಲ ಅಂತ ಹೇಗೆ ಹೇಳ್ತೀಯಾ?

‍ಲೇಖಕರು avadhi

2 November, 2008

5 Comments

  1. srikanth hunasavadi

    nimma kalpane super agide. howdu neevu
    heliruva hage a ella armanegalu dharma
    chtragele. prajegele irralilla endare raja
    ninnelli.

  2. RM

    idanna high school hindi text book nalli odida nenapu. The idea is dfntly not Jogi’s?

  3. jogi

    you are right. this is not my idea. I am collecting and translating sufi stories. This series is from that collection.
    -jogi

  4. SP

    ಕತೆ ಅದ್ಭುತವಾಗಿದೆ ಎನ್ನುವ ಬಗ್ಗೆ ಎರಡು ಮಾತಿಲ್ಲ, ಆದರೆ ಕತೆಯ ಮೂಲದ ಬಗ್ಗೆ ತಿಳಿಸಬೇಕಿತ್ತು ಎನ್ನುವುದು ನನ್ನ ಆಶಯ. ಈ ಕೆಳಗಿನ ಕಮೆಂಟು ಓದುವವರೆಗೂ ಈ ಕತೆಯು ಮೂಲತಃ ಜೋಗಿಯವರದ್ದೆ ಎಂದು ನಾನು ತಿಳಿದಿದ್ದೆ! ಓದುಗ ಹಾಗು ಕತೆ ಎರಡಕ್ಕೂ ಇದು ಒಂದು ಬಗೆಯ ಅಪಚಾರವಲ್ಲವೆ!?

  5. M G Harish

    ಇದನ್ನೆಲ್ಲೋ ಬೇರೆಡೆ ಓದಿದ ನೆನಪು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading