ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕವಿತೆ….ಕಾಲಕೆಟ್ಟದ್ದು..

20 Comments

  1. madhu

    ನೀವೇ ಹೇಳುವ ಕವನಕ್ಕೆ ಬೇಕಾದ ಅನಿರೀಕ್ಷಿತ ಹೊಳಹೇ ಕಾಣಲಿಲ್ವಲ್ಲ ಜೋಗಿ ಸಾರ್

  2. Ushana Bhat

    ಕವಿತೆ ಚೆನ್ನಾಗಿದೆ. ಆದರೆ ಆಶಯ ಸ್ಪಷ್ಟವಾಗಿಲ್ಲ ಎಂದೆನಿಸಿತು. ಏನನ್ನು ಹೇಳಲು ಹೊರಟಿರುವಿರಿ ಎನ್ನುವುದೇ ಗೊತ್ತಾಗಲಿಲ್ಲ. ನಿಮ್ಮ ಕವಿತೆ- ಇಷ್ಟೆಲ್ಲಾ ಮಾಡಬಹುದು ಇದೊಂದು ಮಾಡಬಾರದೆನ್ನುತ್ತಿದೆಯೇ ಇಲ್ಲಾ ಇಷ್ಟೆಲ್ಲಾ ಮಾಡಿದರೂ ಸೈ ಇದೊಂದು ಮಾಡಬೇಡ ಎನ್ನುತ್ತಿದೆಯೇ? ಕವನದೊಳಗಿನ ವ್ಯಂಗ್ಯ ಯಾವ ವಿಷಯವನ್ನು ಎತ್ತಿ ಹಿಡಿಯುತ್ತಿದೆ? – ಗೊತ್ತಾಗಲಿಲ್ಲ. ಆದರೆ ಒಟ್ಟಾರೆ ಕವನ ಚೆನ್ನಾಗಿದೆ. 🙂

  3. Bharatesh

    Kannada kaavya lokakke entha ketta kaala bantappa!!!

  4. jogimane

    I am sorry. This is not poem. This is a response. A part of my Hi bangalore column. It starts like this: ಈ ಮಧ್ಯೆ ಏನೇನೋ ರಾದ್ದಾಂತಗಳಾಗುತ್ತಿವೆ. ಅದರ ಕುರಿತು ಬರೆಯ ಹೊರಟಾಗ ಹೀಗೊಂದಷ್ಟು ಸಾಲುಗಳು ಹುಟ್ಟಿದವು. ಇದನ್ನು ಪದ್ಯ ಎಂದು ತಪ್ಪುತಿಳಿಯಬಾರದಾಗಿ ವಿನಂತಿ.

    ಕೆಟ್ಟಕಾಲದಲ್ಲಿ ಕಟ್ಟಿಕೊಂಡವಳಿಗೆ….

  5. Vithal Dalawai

    Suttaroo kelabarada kaala olleyade jogiyaware?

  6. a

    ಕಾಲ ಯಾವುದೇ ಇರಲಿ ಹೆಂಡತಿಯಿಂದ ಒದೆಸಿಕೋ
    ನಡುರಾತ್ರಿ ತಡವಾದರೆ ತಿವಿಸಿಕೋ
    ಹಳೆ ಗೆಳತಿಯತ್ತ ನೋಡಿ ಉಗಿಸಿಕೋ
    ಮನೆಗೆಲಸ ಮಾಡದೇ ಬೈಸಿಕೋ
    ಬಿಲ್ ತುಂಬಲು ಮರೆತು ಅನಿಸಿಕೋ
    ಬೈಕು ಹಳೆದಾಯ್ತೆಂದು ಕಿರಿಕಿರಿಸಿಕೋ
    ಸಿಗರೇಟು ಸೇದಿ ಹೊಡೆಸಿಕೋ
    ಸೆರೆ ಕುಡಿದು ತುಳಿಸಿಕೋ
    ಸುಮ್ಮನಿದ್ದರೂ ಬಡಿಸಿಕೋ
    ಕೋಕೋ ಅನ್ನದೇ ಸಹಿಸಿಕೋ

  7. vijayaraghavan

    ಪ್ರಿಯ ಜೋಗಿ, ಮೂಲತಃ ನಿಮಗೆ ಈ ಕವನ ಬರೆಯುವ ಮನಸ್ಸೇ ಹುಟ್ಟಬಾರದಿತ್ತು. ನೀವೇನಾದರೂ ಮೇಲ್‌ ಚವನಿಸಂನ ವಿರುದ್ಧವಾಗಿ ಈ ಕವಿತೆ ಬರೆದಿದ್ದರೆ ಅದಕ್ಕೊಂದು ಆಯಾಮವಿರುತ್ತಿತ್ತು. ನೀವು ಯಾಕೆ ನಿಮ್ಮ ಸುಸಂಗತ ಮನಸ್ಸನ್ನು ಹಾಳುಮಾಡಿಕೊಂಡಿರಿ? ನನಗಂತೂ ಸುಸಂಬದ್ಧವಾಗಿ ಯೋಚಿಸುವ ನೀವೇ ಈ ರೀತಿ ಯೋಚಿಸಲು ಶುರುಮಾಡಿದ್ದು ದುಃಖ ತಂದಿತು. ವೆರಿ ಸ್ಯಾಡ್‌. let darshan be him; you jogi
    ಆರ್‌ ವಿಜಯರಾಘವನ್‌

  8. Nagaraj e

    beautiful wordings, its message to the people, by showing ur writing creativity, very nice, all the best, no body accepts the truth because its stronger than a dimond.

  9. Vasanth

    You can write like machine. But you must also have sense. When there is no ideological foundations for writers. They can only produce this sorts of non-sense.

  10. jogimane

    ವಿಜಯರಾಘವನ್. ನಿಮಗಿದರ ವ್ಯಂಗ್ಯ ಅರ್ಥವಾಗಲಿಲ್ಲ ಎಂದು ಕಾಣುತ್ತದೆ. ಏನು ಮಾಡೋದು. ಎಲ್ಲವನ್ನೂ ನೇರವಾಗಿಯೇ ಹೇಳಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ದರ್ಶನ್ ಮಾಡಿದ್ದು ತಪ್ಪು ಅಂತ ನೇರಾನೇರ ಹೇಳದೇ ಹೋದರೆ ಅರ್ಥವಾಗುವುದಿಲ್ಲವೋ ಅಥವಾ ವಿಪರ್ಯಾಸವನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವಾ…

    • vijayaraghavan

      Not like that Jogi, your poem left no clues about your intentions; neither it was sublime. You know that anything can be misunderstood. it was not the fault of your poem that it was misunderstood — by many. Nonetheless please do not be disheartened. you write well. I admire your diction and ability.

      R. Vijayaraghavan

  11. jogimane

    ಕವಿತೆಯನ್ನು ವಿವರಿಸಬೇಕಾಗಿ ಬರುವುದು ಕವಿತೆಯ ಸೋಲು. ಅಷ್ಟಕ್ಕೂ ಇದು ಕವಿತೆಯಲ್ಲ ಪ್ರತಿಕ್ರಿಯೆ ಎಂದು ಮೊದಲೇ ಹೇಳಿದ್ದೆ. ಅಷ್ಟೆಲ್ಲ ಸಾಧಿಸಿದವರು, ಗೆದ್ದವರು, ಬೀಗಿದವರು, ಅಹಂಕಾರಿಗಳು ಹೆಂಡತಿಯನ್ನು ಏನು ಬೇಕಾದರೂ ಮಾಡಬಹುದು ಅಂದುಕೊಂಡೇ ಬದುಕಿಕೊಂಡು ಬಂದಿದ್ದಾರೆ. ಹಾಗೆ ನಂಬಿಕೊಂಡ ಅಹಂಕಾರಿಗಳ ಪಾಲಿಗೆ ಇದು ಕೆಟ್ಟ ಕಾಲ ಎಂದು ಕವಿತೆ ಹೇಳುತ್ತೆ. ಹೆಣ್ಣನ್ನು ಸೊತ್ತು ಎಂದು ಭಾವಿಸಿದವರಿಗೆ ಇದು ಕೆಟ್ಟ ಕಾಲ ಎಂದು ಸೂಚಿಸುವ ಕವಿತೆ. ಇದನ್ನು ಬರೆದಾದ ಮೇಲೆ ಒಂದು ಅರ್ಥವಾಯಿತು. ನೇರವಾಗಿಯೇ ಹೇಳಬೇಕು. ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಎಂಬ ಕವಿತೆಯಲ್ಲಿರುವ ಭಾವವನ್ನೇ ಇಲ್ಲಿ ತರಲು ಯತ್ನಿಸಿದೆ. ಅದು ಯಶಸ್ವಿಯಾಗಲಿಲ್ಲವೇನೋ.

    • Laxminarasimha

      KHANDITA YASHWAYAGALILLA.

  12. ashok shettar

    “ಅಷ್ಟೆಲ್ಲ ಸಾಧಿಸಿದವರು, ಗೆದ್ದವರು, ಬೀಗಿದವರು, ಅಹಂಕಾರಿಗಳು ಹೆಂಡತಿಯನ್ನು ಏನು ಬೇಕಾದರೂ ಮಾಡಬಹುದು ಅಂದುಕೊಂಡೇ ಬದುಕಿಕೊಂಡು ಬಂದಿದ್ದಾರೆ. ಹಾಗೆ ನಂಬಿಕೊಂಡ ಅಹಂಕಾರಿಗಳ ಪಾಲಿಗೆ ಇದು ಕೆಟ್ಟ ಕಾಲ ಎಂದು ಕವಿತೆ ಹೇಳುತ್ತೆ” ಎಂದು ನೀವು ಹೇಳುತ್ತೀರಿ. ಆದರೆ ಕವಿತೆ ಓದಿದಾಗ ಅದರ ಆಶಯ ಹಾಗಿದೆ ಅನ್ನಿಸಲಿಲ್ಲ. ಕವಿತೆಯೋ, ಪ್ರತಿಕ್ರಿಯೆಯೋ, ಒಟ್ಟಿನಲ್ಲಿ ಇದು ಇಷ್ಟವಾಗಲಿಲ್ಲ.

  13. jogimane

    ಶೆಟ್ಟರ್ ಸಾರ್, ಅದಕ್ಕೇ ನಾನಂದದ್ದು ಈ ಬರಹ ಸೋತಿದೆ ಅಂತ. ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲೆಮ್ಮ…

  14. lalitha siddabasavaiah

    ನೀವು ಏನೇ ಹೇಳಿದರೂ ಇದು ಜೋಗಿ ಬರಹವೇ ಎಂಬ ಆಶ್ಚರ್ಯ ಹೋಗೋಲ್ಲ.

  15. Sarala

    ಮತ್ತದೇ ಸಂಜೆ

    ಹಸುಳೆಗಳಿಬ್ಬರು ಆಡಿಕೊಂಡಿರುವ ಗುಡಿಲು
    ಎರಡೂ ಹೊತ್ತು ಉಣ್ಣಲಿಕ್ಕೆ ಇರದ ನೆಳಲು
    ಸಂಜೆಗೆ ಅಮ್ಮ ಮಾಡುತ್ತಿಹಳು ಗಂಜಿ
    ಕುಡಿದು ಬಂದ ಅಪ್ಪ ಮತ್ತೆ ಮತ್ತೆ ಬಾರಿಸಿದ

    ಬೆಳಗೆದ್ದು ನೀ ಎನ್ನ ಚಿನ್ನ, ನನ್ನ ಬಂಗಾರಿ
    ಇನ್ನೊಮ್ಮೆ ಹೊಡಿಯುವುದಿಲ್ಲ ನಿನಗೆ
    ನೀ ನಕ್ಕರೆ ಹಾಲು ಸಕ್ಕರೆ ಎಂದೆಲ್ಲ ಅಂದ…
    ಅವಳಿಗೆ ಗೊತ್ತು ಬರುವುದು ಮತ್ತದೇ ಸಂಜೆ ಮುಂದ

    ಮುದ್ದಾದ ಹಸುಗೂಸು ಆಡಿಕೊಂಡಿರುವ ಮನೆ
    ಕೊರತೆಯಿಲ್ಲದ ಜೀವನ ಚೊಕ್ಕಟ ಸದನ
    ಸಂಜೆಗೆ ಅಮ್ಮ ಮಾಡುತಿಹಳು ಸಿಹಿ ತಿಂಡಿ
    ಕುಡಿದು ಬಂದ ಅಪ್ಪ ಮತ್ತೆ ಮತ್ತೆ ಬಾರಿಸಿದ

    ಬೆಳೆಗೆದ್ದು, ಸಾರಿ ಡಿಯರ್
    ಇಂದು ಸಂಜೆಗೆ ಹೊರಗೆ ಡಿನ್ನರ್
    ಹಾಕಿಕೋ ಕೆಂಪು ಚುಡಿದಾರ ನಿನಗೆ ಚೆನ್ನು…
    ಅವಳಿಗನಿಸಿತ್ತು ಬಾರದಿದ್ದರೆ ಮತ್ತದೇ ಸಂಜೆ ಎಷ್ಟು ಚೆನ್ನು

    ಮನೆಯಂಗಳದಲ್ಲಿ ಮಕ್ಕಳ ಆಟ
    ಆ ಮನೆಯ ಸುಂದರ ಕೈತೋಟ
    ಅಮ್ಮ ಮಾಡುತಿಹಳು ಔತಣಕ್ಕೆ ತಯಾರಿ
    ಕುಡಿದು ಬಂದ ಅಪ್ಪ ಮತ್ತೆ ಮತ್ತೆ ಬಾರಿಸಿದ

    ಬೆಳೆಗೆದ್ದು ಕ್ಷಮಿಸಿ ಬಿಡು ಡಾರ್ಲಿಂಗ್
    ಇನ್ನು ಮುಂದೆ ಆಗುವುದಿಲ್ಲ ರಾಂಗ್
    ನಿನ್ನ ನೆಕ್ಲೆಸ್ ಬರುವುದು ಇಂದು…
    ಗೊತ್ತವಳಿಗೆ ಮತ್ತದೇ ಸಂಜೆ ಬರುವುದು ಎಂದು

  16. arun kumar

    kaala kettaddu anno padaane idi kaviteya dikku tappisuttade i mean ur response…
    ene aagli padagalaatadalli geddiddiri sir!
    eno missing anta yak ansutte andre we are so called respected persons ..na !?

  17. ಶ್ರೀಧರ ಬೇವೂರು

    ಮಾರಾಯರೆ,

    ಇಂಥ ಸರಳ ವ್ಯಂಗ್ಯ ಇಷ್ಟೊಂದು ಜನಕ್ಕೆ ಅರ್ಥವಾಗದೆ ಹೋದದ್ದು ಮೊದಲ ಅಚ್ಚರಿ, ಅವರ ಆಕ್ಷೇಪಣೆಗಳಿಗೆಲ್ಲ ಅಹುದಹುದೆನ್ನುತ್ತಾ ನೀವು ಕವಿತೆ ಸೋತಿದೆ ಅಂದದ್ದು ಇನ್ನೂ ದೊಡ್ಡ ಅಚ್ಚರಿ!

    ಚರಣಗಳ ಕೊನೇ ಎರಡು ಸಾಲುಗಳನ್ನು ‘ಕಾಲ ಬದಲಾಗಿದೆ, ನೀವೇನೇ ಆಗಿದ್ದರೂ ನಿಮ್ಮ ಕೈ ಹಿಡಿದವಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವಂತಿಲ್ಲ’ ಅಂತ ನೇರವಾಗಿ ಬರೆಯಲು ಪ್ರಯತ್ನಿಸಿ ನೋಡಿ; ಅಮೇಲೂ ಅದು ಕವಿತೆಯಾಗಿ ಉಳಿದುಕೊಂಡರೆ, ದಯವಿಟ್ಟು ತಿಳಿಸಿ!

    ಬೈ ದ ವೇ, ನನ್ನ ಮಟ್ಟಿಗಂತೂ ಇದು ಇತ್ತೀಚಿನ ದಿನಗಳಲ್ಲಿ ಓದಿದ ಒಳ್ಳೆಯ ಕವಿತೆ, ಥ್ಯಾಂಕ್ಸ್ ಮಾರಾಯರೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading