ಜೋಗಿ ಸಂತೋಷದಲ್ಲಿದ್ದಾರೆ. ಕಥೆ, ಕಾದಂಬರಿ, ಲೇಖನ, ಅಂಕಣ, ಪತ್ರಿಕೆ, ಚಿತ್ರೋದ್ಯಮ….ಎಲ್ಲವನ್ನೂ ಹೇಗೆಲ್ಲಾ ಸಂಬಾಳಿಸುತ್ತಾರಪ್ಪ ಎಂದು ಆಶ್ಚರ್ಯ ಪಡುತ್ತಿರುವಾಗಲೇ ನದಿಯ ನೆನಪಿನ ಹಂಗು ಕಾದಂಬರಿ ಕೈಗಿತ್ತು ಅವರ ಯಥಾಪ್ರಕಾರದ ಮುಗುಳ್ನಗೆ (ಅವರ ಬ್ಲಾಗ್ನಲ್ಲಿರುವ ಅವರ ಫೋಟೋದಂತೆ ) ಬೀರುತ್ತಿದ್ದಾರೆ.
ಎಳ್ಳು ಬೀರುವುದು ಬಿಟ್ಟು ನಾಕು ತಂತಿ ಪ್ರಕಟಿಸಿದ ಅವರ ಪುಸ್ತಕ ಕೈಗಿಟ್ಟು ಮುಗುಳ್ನಗು ಬೀರಿದ್ದಾರೆ. ಬಿ ಸುರೇಶ್ ಸಹಾ ಅಷ್ಟೆ. ಸದಾ ಮುಗುಳ್ನಗುವ ಆಸಾಮಿಯೇ. ಹಾಗಾಗಿ ಈ ಇಬ್ಬರ ಜೋಡಿ ಚೆನ್ನಾಗಿದೆ. ನದಿಯ ನೆನಪಿನ ಹಂಗು ಪುಸ್ತಕ ಬಿಡುಗಡೆ ಸಮಾರಂಭದ ಈ ಫೋಟೋ ನಿಮಗಾಗಿ. ಸಮಾರಂಭದ ವರದಿ ಬೇಕಿದ್ದರೆ ನೇರ ಜೋಗಿಗೆ ಮೈಲ್ ಮಾಡಿ. hatwar@gmail.com






0 Comments