ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ and ಕುಂ ವೀ

ಪ್ರೀತಿಪಾತ್ರರ ಜತೆ ಒಂದು ಕ್ಲಿಕ್….

ವೇಣುಗೋಪಾಲ್ ಶೆಟ್ಟಿ

’ದೇವರ ಹೆಣ’ ನಾನು ವಿನಾಕಾರಣ ಮತ್ತೆ ಮತ್ತೆ ಓದಿದ ಮೊತ್ತ ಮೊದಲ ಕಥೆ. ಹನ್ನೆರಡನೇ ಕ್ಲಾಸಿನ ಕನ್ನಡ ಪಠ್ಯದಲ್ಲಿ ಇದೆ ಅನ್ನೋ ಕಾರಣಕ್ಕೆ ಮೊದಲು ಅನಿವಾರ್ಯವಾಗಿ ಓದಿದ ಕಥೆ ಅದು. ಆದ್ರೆ ಕನ್ನಡ ಮೇಷ್ಟ್ರು ಆ ಕಥೆಯನ್ನ ಓದಿ ಮುಗಿಸುವ ಹೊತ್ತಿಗೆ ಇಡೀ ತರಗತಿಯನ್ನ ಆ ಕಥೆ ಆವರಿಸಿಕೊಂಡು ಬಿಟ್ಟಿತ್ತು.

ಆ ಕಥೆಯಲ್ಲಿ ಬರುವ ಒಂದು ಪಾತ್ರದ ಠೊಣ್ಣಿ ಅನ್ನೋ ಹೆಸರನ್ನು ಗೆಳೆಯರಿಗೆಲ್ಲ ಇಟ್ಟು ಕರಿತಾ ಇದ್ವಿ. ಜತೆಗೆ ಆ ಕಥೆ ಓದಿದ ನಂತರ ನನ್ನಲ್ಲಿ ಕಥೆ – ಕಾದಂಬರಿಯೆಡೆಗೆ ಒಂದು ವಿಚಿತ್ರ ಆಸಕ್ತಿ ಹುಟ್ಟಿಕೊಂಡಿತ್ತು. ಹಾಗಾಗಿ ನನ್ನ ಓದಿಗೆ ಪರೋಕ್ಷ ಕಾರಣವಾದ್ದು ದೇವರ ಹೆಣ ಕಥೆ ಬರೆದ ಕುಂ.ವೀ.

ಮುಂದೆ ಕಾಸರಗೋಡು ಬಿಟ್ಟು ಉಜಿರೆಗೆ ಬಂದ ಮೇಲೆ ಕೇಳಿದ ಹೆಸರು ಜೋಗಿ.

‘ಜೋಗಿ ಕಥೆಗಳು’ ಕೃತಿಯ ಅರ್ಧ ಕಾಫಿ ತರಹದ ಚಿಕ್ಕ ಚಿಕ್ಕ ಕಥೆಗಳನ್ನು ಓದಿ ಜೋಗಿ ಬರವಣಿಗೆ ಬಗ್ಗೆ ವಿಚಿತ್ರ ಆಸಕ್ತಿ ಹುಟ್ಟಿಕೊಂಡಿತ್ತು. ಒಂದು ರೀತಿಲಿ ಓದಿನ ಹುಚ್ಚು ಹತ್ತಿಸಿದ್ದು ಜೋಗಿ ಬರವಣಿಗೆ. ಅವತ್ತು ಗೆಳೆಯ ಕಾರ್ತಿಕ್ ಉಜಿರೆ ಕಾಲೇಜಿನ ಕಾರಿಡಾರಿನಲ್ಲಿ ನಿಂತು ‘ಹೇ.. ವೇಣು ಹಾಯ್ ಬೆಂಗಳೂರಿ’ನ ಜಾನಕಿ ಕಾಲಂ ಬರೆಯುತ್ತಿರುವುದು ಜೋಗಿ’ ಅಂತ ಹೇಳಿದಾಗ ನಿಜಕ್ಕೂ ಅಚ್ಚರಿಯಾಗಿತ್ತು.

‘ಕಾಡಬೆಳದಿಂಗಳು’ ಸಿನಿಮಾ ಜೋಗಿ ಕಥೆ ಆದರಿಸಿದ್ದು ಅನ್ನೋ ಕಾರಣಕ್ಕೆ ಮೂಡಬಿದ್ರೆಗೆ ಹೋಗಿ ಅದನ್ನ ನೋಡಿ ಬಂದಿದ್ದೆ. ಅಲ್ಲಿಂದ ಮೊನ್ನೆ ಮೊನ್ನೆ ಬಿಡುಗಡೆಯಾದ ‘ಗುರುವಾಯನಕರೆ’ಯವರೆಗೆ ಆದಷ್ಟು ಜೋಗಿನ ಓದಿದ್ದೀನಿ. ಕಳೆದ 2 ವರ್ಷದ ನನ್ನ ಜೋಗಿ ಒಡನಾಟ ಜತೆಗೆ ಕೂತು ಹರಟೆ ಹೊಡೆಯುತ್ತ ಊಟ ಮಾಡುವವರೆಗೆ ಬಂದಿದೆ. ಪತ್ರಿಕೋದ್ಯಮ, ಸಿನಿಮಾ, ಸೀರಿಯಲ್, ಕಥೆ, ಕಾದಂಬರಿ, ಲೇಖನ ಅಂತ ಹಾಸಿ ಹೊದ್ದು ಮಲಗುವಷ್ಟು ಹೊರೆಯ ಕೆಲಸದ ನಡುವೆಯೂ ಜೋಗಿ ಒಂದಿಷ್ಟು ಹೊತ್ತು ಮಾತನಾಡೋದಕ್ಕೆ ಸಿಗುತ್ತಾರೆ.

ಇನ್ನು, ಪದೇ ಪದೇ ಕೇಳಿಸಿಕೊಳ್ಳುವ ಭಾವಗೀತೆ, ಯಾವುದೋ ದೇಶದ ಸಿನಿಮಾ, ಜಯಂತ ಕಾಯ್ಕಿಣಿ ಕಥೆಯ ಟ್ರಕ್ಕು, ಲಾರಿ ಹೀಗೆ ಬೆಳಕು ಹರಿಯುವವರಗೆ ಕೂತು ಮಾತನಾಡೋದಕ್ಕೆ ಸಿಕ್ಕಿದವನು ಗೆಳೆಯ ರಾಘವೇಂದ್ರ… ಈ ಎಲ್ಲ ಪ್ರೀತಿಪಾತ್ರರ ಜತೆಯಲ್ಲಿ ಒಂದು ಕ್ಲಿಕ್….

‍ಲೇಖಕರು G

4 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading