ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿಗೂ ಭಯ..ಇಟಗಿಗೂ ಭಯ

ಜೋಗಿಗೂ ಭಯ , ಪ್ರತಿಭನ್ನ ಹೊಗಳಿದರೆ ಇತರ ಕವಿಗಳ ದ್ವೇಷ ಕಟ್ಟಿಕೊಂಡು ಬಿಡ್ತೀನಿ ಅಂತ. ಈ ಉದಯ ಇಟಗಿಗೂ ಭಯ , ಬೇರೆ ಮಹಿಳಾ ಕವಿಗಳು ಅವರನ್ನು ದ್ವೇಷಿಸಿಬಿಡ್ತಾರೆ ಪ್ರತಿಭಾ ಬಗ್ಗೆ ಹೊಸತನ ತರುವ ಕವಿ ಅಂತ ಅಂದ್ರೆ ….. ಅಯ್ಯೊ ಮಾರಾಯ್ರೆ ಇರೋದನ್ನ ಹೇಳೊಕೆ ಇಷ್ಟೊಂದು ನಿರೀಕ್ಷಣಾ ಜಾಮೀನಿನ ಅಗತ್ಯ ಇಲ್ಲ ದೇವ್ರೆ. ಪ್ರತಿಭಾ ಪ್ರತಿಭಾನೇ . ಅಪ್ಪಟ ರಾಗಭರ್ತಿ, ಭರಪೂರ ಜೀವನ ಪ್ರೀತಿ, ವಿಶಿಷ್ಟ ಧೈರ್ಯ, ಒಳ್ಳೆ ಇಡುಗಂಟು ಇಟ್ಟಂಥ ಭಾಷೆ ,ಮಿದ್ದು ಅದನ್ನು ಒಳ್ಳೆ ಬನಿಯಾದ ರೊಟ್ಟಿ ತಟ್ಟುವ ಕೌಶಲ್ಯ , ಇವೆಲ್ಲ ಸೊಗಸಾಗಿ ಮೇಳೈಸಿದ ನಮ್ಮ ಪ್ರತಿಭಾ ಬಗ್ಗೆ ನೀವೆಲ್ಲ ಮೆಚ್ಚಿ ಮಾತಾಡಿದರೆ ನಾವೆಲ್ಲ – ಅಂದರೆ ಇತರೆ ಕವಿಯಿತ್ರಿಯರೆಲ್ಲ – ಏನೇನೋ ಅಂದ್ಕೊಂಡ್ ಬಿಡ್ತೀವೀ ಅಂತಂದು ನಮ್ಮನ್ನ ಕಾಲೆಳೆಯುತ್ತಲೆ ನೀವು ಮುಗ್ಗರಿಸಿ ಬೀಳಬೇಡಿ. ಅಹ್ಹ ಅಹ್ಹ ಅಹ್ಹ ಅಹ್ಹ -ಲಲಿತಾ ಸಿದ್ಧಬಸವಯ್ಯ ]]>

‍ಲೇಖಕರು G

6 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading