ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ : ’ಸಲಿಂಗ ಕಾಮ’ ಅನ್ನುವುದೇ ಪೂರ್ವಾಗ್ರಹ…

ನಿನ್ನೆ ಅವಧಿಯಲ್ಲಿ ಎಸ್ ಎಮ್ ನಟರಾಜು ಅವರ ಅಂಕಣದಲ್ಲಿ ’ಹೆಚ್ ಐ ವೀ, ಸಲಿಂಗ ಕಾಮ ಇತ್ಯಾದಿ..’ ಲೇಖನ ಪ್ರಕಟವಾಗಿತ್ತು. ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.. ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಈ ವಿಷಯವನ್ನು ಜುಗಾರಿ ಕ್ರಾಸಿನಲ್ಲಿಡಲು ಪ್ರೇರೇಪಿಸಿದವು.  ಜುಗಾರಿ ಕ್ರಾಸ್ ಅಂದ್ರೇನೇ ಚರ್ಚೆಯ ವೇದಿಕೆ, ಇಲ್ಲಿ ನಿಮ್ಮ ಮುಕ್ತ ಅಭಿಪ್ರಾಯಗಳಿಗೆ ಸ್ವಾಗತ. ಚರ್ಚೆ ಆರೋಗ್ಯಕರವಾಗಿರಲಿ ಎನ್ನುವುದು ನಮ್ಮ ವಿನಂತಿ.

ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ :

ಬಿ ಎಮ್ ಬಶೀರ್ :

ನಮ್ಮ ದುರಂತ ಎಂದರೆ ಸಲಿಂಗ ಪ್ರೇಮ(ಕಾಮ ಎನ್ನುವ ಶಬ್ದ ತೀರ ಪೂರ್ವಾಗ್ರಹ ಪೀಡಿತ ಬಳಕೆ ಅನ್ನಿಸುತ್ತದೆ)ವನ್ನು ನಾವು ಎಚ್ ಐ ವಿ ಸಮಸ್ಯೆಯ ಒಂದು ಭಾಗವಾಗಿ ಮಾತ್ರ ಚರ್ಚಿಸುತ್ತೇವೆ. ಇತ್ತೀಚಿಗೆ ವಿದ್ಯಾ ಸ್ಮೈಲ್ ಆತ್ಮ ಕತೆ “ನಾನು ಅವನಲ್ಲ ಅವಳು” ಓದಿದ್ದೆ. ಅದು ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಒಬ್ಬ ಸಲಿಂಗ ಪ್ರೇಮಿಯ ಅಥವಾ ಇನ್ನೊಂದು ಸಮುದಾಯವಾದ ಹಿಜಡಾ ಎಂದು ಕರೆಯುವ ಗಂದಾಗಿಯೂ ಹೆಣ್ಣಾಗಿರುವ ವ್ಯಕ್ತಿಯ ಒಳ ಸಂಘರ್ಷಗಳನ್ನು ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಪ್ರಕೃತಿಯ ಬಲಿಪಶುಗಳು ಅವರು ಎನ್ನುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಿ ಎಂ ಟಿ ಸಿ ಬಸ್ಸಲ್ಲಿ ಒಂಟಿ ಹೆಣ್ಣು ಸಿಕ್ಕಿದಾಗ ಗಂಡು ಒಬ್ಬ ಏನು ಮಾಡಬಹುದೋ, ಅದನ್ನೇ ತನ್ನದೇ ಭಾವನೆಗಳುಳ್ಳ ಇನ್ನೊಬ್ಬ ಗಂಡು ಸಿಕ್ಕಿದಾಗ ಸಲಿಂಗ ಪ್ರೇಮಿಯು ಮಾಡಬಹುದು. ಅದು ಸಲಿಂಗ ಪ್ರೆಮಿಗಳಲ್ಲಿರುವ ದೋಷ ಮಾತ್ರ ಅಲ್ಲ.

ಸಲಿಂಗ ಪ್ರೇಮಿ ಬೇರೆ, ಹಿಜದಗಳು ಬೇರೆ. ಇದನ್ನು ನಾವು ಮೊದಲು ನೆನಪಿಟ್ಟು ಕೊಳ್ಳಬೇಕು. ಸ. ಪ್ರೇಮಿ ಯಾರು ಎನ್ನುದನ್ನು ಗುರುತಿಸುದು ನಮ್ಮ ಸಮಾಜದಲ್ಲಿ ಅಷ್ಟು ಸುಲಭವಲ್ಲ. ಹೆಚ್ಚಿನ ಸ. ಪ್ರೇಮಿಗಳು ಹುಡುಗಿಯರನ್ನು ಕಣ್ಣೆತ್ತಿಯೂ ನೋದುದಿಲ್ಲ. ಹಾಗೆಯೇ ತನ್ನದೇ ಭಾವಾನೆಗಳು ಹೊಂದಿದ ಹುಡುಗನಾಗಿರಬಹುದು ಎಂಬ ಅನುಮಾನ ಬಂದ ಬಳಿಕವೇ ಸ. ಪ್ರೇಮಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಮುಂದಾಗುತ್ತಾನೆ ಎನ್ನೋದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಇಬ್ಬರು ಸ.ಪ್ರೇಮಿಗಳು ಜೀವನದುದ್ದಕ್ಕೂ ಒಬ್ಬರಿಗೊಬ್ಬರು ಆಸರೆಯಾಗಬಲ್ಲರು. ಇದನ್ನು ಹಿಂದಿ ಚಿತ್ರ “ಮೈ ಬ್ರದರ್ ನಿಖಿಲ್” ಚಿತ್ರದಲ್ಲಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ದುರದೃಷ್ಟವಶಾತ್ ಅದು ಕೂಡ ಎಡ್ಸ್ನ ಒಂದು ಭಾಗವಾಗಿಯೇ ತೋರಿಸಲ್ಪಡುತ್ತದೆ. ಸ. ಪ್ರೇಮಿಗಳನ್ನು ಬೇರೆ ಮಾಡುವ ಯಾವ ಅಧಿಕಾರವು ಮನುಷ್ಯ ಮಾತ್ರ ರಾದ ನಮಗೆ ಇಲ್ಲ. ಯಾಕೆಂದರೆ ಯಾರನ್ನು ನೀನು ಪ್ರೀತಿಸಬೇಕು ಎನ್ನುದನ್ನು ಅವರಿಗೆ ಪ್ರಕೃತಿಯೇ ಆದೇಶಿಸಿದೆ. ಅದು ಅವರ ದೌರ್ಭಾಗ್ಯ ಆಗಿರಬಹುದು. ಆದರೆ ಆ ಆದೇಶಕ್ಕೆ ತಲೆ ಭಾಗದೇ ಅವರಿಗೆ ಬೇರೆ ದಾರಿಯೇ ಇಲ್ಲ. ಸ. ಪ್ರೇಮ ಪ್ರಕೃತಿ ವಿರೋಧಿಯೇ ಆಗಿರಬಹುದು. ಆದರೆ ಅವರ ಪಾಲಿಗೆ ಆ ವಿರೋಧವು ಪ್ರಕ್ರುತಿಯಿಂದಲೇ ದಕ್ಕಿದ್ದು. ಅದು ಅವರ ಆಯ್ಕೆ ಅಲ್ಲ ಎನ್ನುದನ್ನು ನಾವೆಲ್ಲಾ ನೆನಪಿಟ್ಟುಕೊಲ್ಲಬೇಕಾಗಿದೆ.

ಚಾಂದಿನಿ

ಸಲಿಂಗಕಾಮಿಗಳ ಬಗ್ಗೆ ನೀವು ಬರೆದಿರುವ ಅಂಕಣ ಓದಿ ನನಗೆ ನಿಮ್ಮ ಬಗ್ಗೆ ಅಭಿಮಾನವಿದೆ. ಹಾಗೆಯೇ ಸಲಿಂಗಕಾಮಿಗಳಿಂದ ಹೆಚ್ ಐ ವಿ ಬರುವುದು ಎನ್ನುವುದು ಎಷ್ಟರ ಮಟ್ಟಿಗೆ ನಿಜ ಕಾರಣ ಕಳೆದ ಕೆಲವು ವರ್ಷಗಳಿಂದ ಇದೇ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಇದು ಸರಿ ಅಲ್ಲ ಈ ರೀತಿಯ ಬರಹದಿಂದ ಸಮಾಜದಲ್ಲಿ ಈ ಸಮುದಾಯದ ಮೇಲೆ ಕೆಟ್ಟ ಅಭಿಪ್ರಾಯಗಳು ಬರಬಹುದು ಈಗಲೇ ಇವರನ್ನು ಹಲವು ರೀತಿಯ ಕೆಟ್ಟ ದೃಷ್ಟಿಗಳಿಂದ ನೋಡುತ್ತಾರೆ ಪ್ರಕೃತಿಯ ವಿರುದ್ದ ಲೈಂಗಿಕ ಕ್ರಿಯೆ ಮಾಡುವವರು ಅಂತಾ ಅದರ ಜೊತೆಯಲ್ಲಿ ನಮ್ಮ ದೇಶದ ದೆಲ್ಲಿ ಹೈ ಕೋರ್ಟ್ ಹೇಳಿದೆ ವಯಸ್ಕರ ನಡುವೆ ಒಪ್ಪಿಗೆ ಇದ್ದು ನೆಡೆಯುವ ಲೈಂಗಿಕ ಕ್ರಿಯೆ ಅಪರಾಧವಲ್ಲ ಅಂತಾ ಹೀಗಿರುವಾಗ ಒಬ್ಬರ ನಡುವೆ ಇನ್ನೊಬ್ಬರಿಗೆ ಆಕರ್ಷಣೆ ಬರುವುದು ಸಹಜ ಹೀಗಿರುವಾಗ ನಿಮ್ಮ ಬರಹದಲ್ಲಿ ಒಳ್ಳೆಯ ವಿಚಾರದ ಜೊತೆಯಲ್ಲಿ ಸಮುದಾಯದ ಮೇಲೆ ತಪ್ಪಾಗಿ ಬರೆಯುವುದು ಸರಿ ಅಲ್ಲ ಇನ್ನು ಮುಂದೆ ಬರೆಯುವಾಗ ಯೋಚಿಸಿ ಈ ಸಮುದಾಯದ ಬಗ್ಗೆ ಬರೆದರೆ ಸಮಾಜ ಬದಲಾವಣೆಯಲ್ಲಿ ನಿಮ್ಮ ಪಾತ್ರ ಮುಖ್ಯವಾಗಿರುತ್ತದೆ ಅಂತಾ ನನಗನಿಸುತ್ತದೆ.

 

ಕಡೆಯಲ್ಲಿ ನನಗನಿಸಿದ ಅನಿಸಿಕೆ ಸಲಿಂಗಕಾಮಿಗಳನ್ನು ಗೇಲಿ ಮಾಡುವ ರೀತಿಯಾಗಿದೆ ಅಂತಾ ಅನ್ನಿಸುತ್ತದೆ

ಉಮೇಶ್ :

ಸಲಿಂಗಕಾಮದ ವಿಷಯವಾಗಿ ನಿಮ್ಮ ಅವಧಿಯಲ್ಲಿ ನಟರಾಜ್ ರವರ ಅಂಕಣವನ್ನು ಬರೆದಿರುವುದಕ್ಕೆ ಧನ್ಯವಾದಗಳು.

ನಿಮ್ಮಗೆ ತಿಳಿಸಲು ಬಯಸುವುದೇನೆಂದರೆ. ನಿಮ್ಮ ಸ್ನೇಹಿತನಿಗೆ ಈ ರೀತಿಯ ಅನುಭವ ಆಗಿರುವುದು ನಿಜ ಇರಬಹುದು. ಹಾಗೆಯೇ ಆಗಿದೆ ಎಂದರೆ ಒಬ್ಬ ಸಲಿಗಕಾಮಿ ಆ ತರಹ ಮಾಡಿರಬಹುವದು. ಅವರು ಮಾಡಿರುವುದುಕ್ಕೆ ಇಡೀ ಸಲಿಂಗಕಾಮಿ ಸಮುದಾಯವನ್ನು ಈ ತರಹ ಮಾಡುತಾರೆ ಎಂದು ಹೇಳುವುದು ಸರಿಯಲ್ಲ. ಹಾಗೆ ನೀವು ನಿಮ್ಮ ಸ್ನೇಹಿತರ ಅನುಭವವನ್ನು ಜನರ ಮುಂದೆ ಇಡುವ ಮುನ್ನ ನಿಮಗೆ ಒಬ್ಬ ಸಲಿಂಗಕಾಮಿಯ ಜೊತೆ ಮಾತಾಡಿ ಅವರ ಅನುಭವಗಳು ಹಾಗು ಇರುವ ಸಮಸ್ಯೆಗಳ ಬಗ್ಗೆ ತಿಳಿದು ಕೋಳ್ಳಬೇಕು ಎಂದು ಅನ್ನಿಸಲಿಲ್ಲವೇ??

ಇನ್ನು ಹೆಚ್.ಐ.ವಿ ವಿಷಯವಾಗಿ ಹೇಳುವುದಾದರೆ ನಮ್ಮ ಸರ್ಕಾರ ಒಂದು ಕಡೆ ಹೆಚ್.ಐ.ವಿ ತಡಗಟ್ಟುವ ಕೆಲಸವನ್ನು ಮಾಡುತ್ತಾ ಬಂದಿದೆ. ಅದೆ ಸಮಯದಲ್ಲಿ ಐಪಿಸಿ ೩೭೭ ಎಂಬ ಕಾಯ್ದೆಯನ್ನು ನಮ್ಮ ಕಾನುನಿನಲ್ಲಿ (ಬ್ರಿಟಿಸರ ಕಾಲದಲ್ಲಿ ಜಾರಿಗೆ ತದ ಕಾಯ್ದೆಯನ್ನು) ಇನ್ನು ಇಟ್ಟಿಕೊಂಡಿದೆ. ಹಾಗು ಸಲಿಂಗಕಾಮಿಗಳ ಹೆಚ್.ಐ.ವಿ ತಡಗಟ್ಟುವ ಕಾರ್ಯಕ್ರಮದಲ್ಲಿ ಬರೀ ಹೆಚ್.ಐ.ವಿ ತಡಗಟುವುದಲ್ಲದೆ ಸಲಿಂಗಕಾಮಿಗಳ ಸಮಸ್ಯೆಗಳನ್ನು ನೋಡಬೇಕಾಗಿದೆ. ಯಾವುದೇ ಸಲಿಂಗಕಾಮಿಯಾಗಲಿ ನನ್ನಗೆ ಹೆಚ್.ಐ.ವಿ ಬರಲಿಎಂದು ಬಯಸುವುದಿಲ್ಲಾ. ನಾವು ಸಲಿಂಗಕಾಮಿಗಳಲ್ಲಿ ಹೆಚ್.ಐ.ವಿ ಜಾಸ್ತಿ ಇದೆ ಎಂದು ಹೇಳುವಾಗ ಜಾಸ್ತಿಯಾಗಲು ಕಾರಣಗಳು ಏನು. ಅದಕ್ಕೆ ಯಾರು ಕಾರಣ ಎಂದು ನಾವೇಲ್ಲಾರು ಯೋಚಿಸ ಬೇಕು.!!

ಇವತ್ತಿನ ದಿನಗಳಲ್ಲಿ ಹೆಚ್.ಐವಿಯಿಂದ ಬದುಕುತ್ತಿರುವವರ ಸಮಸ್ಯೆಗಳು ತುಂಬ ಚಿಂತಾಜನಕವಾಗಿದೆ. ನೀವು ನೋಡಿರುವ ನ್ಯಾಕೋ ಅಂಕಿ ಅಂಶಗಳ ಪ್ರಕಾರ ಅದು ೨೦೦೭ರ ಅಂಕಿ ಅಂಶ, ನಾವು ಮಾತನಾಡುವಾಗ ಸಲಿಂಗಕಾಮಿಗಳಿಂದ ಜಾಸ್ತಿ ಹೆ.ಐವಿ ಹರಡುತ್ತಿದ್ದೆ ಎಂಬ ಬಾವನೆ ಬರುತ್ತದೆ. ಅಂತಾ ಬರೆದಿದ್ದೀರಿ ಇದು ನಿಮ್ಮ ಮತ್ತು ಸಮಾಜದವರ ತಪ್ಪು ಕಲ್ಪನೆ ಹಲವು ವರ್ಷಗಳಿಂದ ಹೆಚ್ ಐ ವಿ ಯ ಕಾರ್ಯಕ್ರಮದಲ್ಲಿ ಕೆಲವು ಸಂಘ ಸಂಸ್ಥೆಗಳು ಕೆಲಸಮಾಡಿ ಅದನ್ನು ತಡೆಗಟ್ಟುತ್ತಿದ್ದಾರೆ ಈಗ ನಿಮ್ಮ ಬರಹದಿಂದ ಸಮಾಜದ ಜನರು ಸಲಿಂಗಕಾಮಿಗಳ ಬಗ್ಗೆ ಯಾವ ರೀತಿಯಾ ಕೀಳರಿಮೆ ಉಂಟಾಗಬಹುದು ಎಂದು ಯೋಚಿಸಬೆಕು.

ಹಾಗೇ ಲೈಂಗಿಕ ಆಕರ್ಷಣೆ ಯಾವುದೇ ರೀತಿಯ ಅನುವಂಶೀಯತೆಯಿಂದ ವರ್ಣತಂತುಗಳಲ್ಲಿ ಉಂಟಾಗುವ ಬದಲಾವಣೆಗಳಲ್ಲಾ ಅವರು ಬೆಳೆದ ಬೆಳವಣಿಗೆಯ ಜಾಗಗಳ ಪ್ರಭಾವಗಳು ಜನಗಳನ್ನು ಸಲಿಂಗ ಕಾಮಿಗಳನ್ನಾಗಿ ಮಾಡಿಬಿಡುತ್ತದೆ ಎಂದು ಹೇಳಲು ಸಾದ್ಯವಿಲ್ಲಾ. ಇದು ನಿಜವಾಗಿಯೋ ವಾಸ್ತವವಲ್ಲ ಹಲವು ಜನ ಸಲಿಂಗಕಾಮಿಗಳ ಮತ್ತು ಲಿಂಗಪರಿವರ್ತನೆ ಆಗಿರುವವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರೆಲ್ಲ ಯಾಕೆ ಸಲಿಂಗಕಾಮಿಗಳಾಗಿಲ್ಲ ನೀವು ಇದರ ಬಗ್ಗೆ ಸ್ವಲ್ಪ ಚಿಂತಿಸಿ.!!

ಹಾಗೇ ನಿಮ್ಮಗೆ ಇನೊಂದು ವಿಷಯವನ್ನು ತಿಳಿಸಲು ಇಷ್ಟಪಡುತ್ತಿನಿ ವಲ್ಡ್ ಹೆಲ್ತ್ ಸಂಸ್ಥೆಯು ಸಂಶೋದನೆಯ ಪ್ರಕಾರ ಸಲಿಂಗಕಾಮ ಪ್ರಕೃತಿದತವಾಗಿ ಬಂದಿರುವುದು ಎಂದು ಹೇಳುತ್ತದೆ.

ನಿಮ್ಮ ಬರಹದ ಬಗ್ಗೆ ನಾವು ತಪ್ಪು ಅಂತಾ ಹೇಳುತ್ತಿಲ್ಲ ಆದರೆ ಒಬ್ಬ ಜವಾಬ್ದಾರಿಯ ಬರಹಗಾರರಾಗಿ ಈ ವಿಷಯದ ಬಗ್ಗೆ ಸಂಪೋರ್ಣವಾಗಿ ತಿಳಿದು ಸಮಾಜದ ಮುಖ್ಯವಾಹಿನಿಗೆ ಸಲಿಂಕಕಾಮಿಗಳ ಬಗ್ಗೆ ಉತ್ತಮ ಬರಹ ಬರೆದರೆ ನಿಜವಾಗಿ ಅದು ಸಾರ್ಥಕವಾಗುತ್ತದೆ ಹೆಚ್ಚಿನ ಮಾಹಿತಿಗಳನ್ನು ಅದರಲ್ಲಿ ಪರಿಣಿತಿ ಹೊಂದಿರುವ (ಸಂಘ ಸಂಸ್ಥೆಗಳು) ಜನರಿಂದ ಪಡೆಯುವುದು ಸೂಕ್ತ

ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ..

 

‍ಲೇಖಕರು G

11 October, 2012

1 Comment

  1. Prakash

    ನಾವು ಯಾಕೆ ಸಲಿಂಗ ಕಾಮಿಗಳನ್ನು ಒಪ್ಪಲು ಮನಸು ಮಾಡುತ್ತಿಲ್ಲ ಅಮ್ಡರೆ ನಮಗೆ ಇಡು ಹೊಸಡು ಅಂತ ಕಾನುತ್ತೆ ಆದರೆ ಅಡನ್ನು ಪ್ರಕೃತಿ ನೀಡಿದೆ ಅನ್ನುವುದನ್ನು ನಾವು ಙ್ಞಾಪಿಸಿಕೊಳ್ಳಬೆಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading