ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್: ಮಾನ್ಯ ಜಿ ಎನ್ ನಾಗರಾಜ್‌ರವರೆ..

ವಚನ ಚಳುವಳಿಯ ಬಗ್ಗೆ, ಜಾತಿ ಪದ್ಧತಿಯನ್ನು ಅವು ವಿರೋಧಿಸಿದ್ದರ ಬಗ್ಗೆ ಜಿ ಎನ್ ನಾಗರಾಜ್‌ರವರ ಲೇಖನ ಸರಣಿ ಅವಧಿಯಲ್ಲಿ ಪ್ರಕಟವಾಗಿತ್ತು. ಅದರ ಒಂದು ಕೊಂಡಿ ಇಲ್ಲಿದೆ. ಆ ಲೇಖನಕ್ಕೆ ಕಿರಣ್ ಅವರು ಬರೆದಿರುವ ಪ್ರತಿಕ್ರಿಯೆ ಇದು. ಹೇಳಿ ಕೇಳಿ ಇದು ಜುಗಾರಿ ಕ್ರಾಸ್, ಚರ್ಚಾ ಚಾವಡಿ. ಪ್ರಶ್ನೆ-ಉತ್ತರ ಇಲ್ಲಿ ಇದ್ದದ್ದೇ.

ಜಿ ಎನ್ ನಾಗರಾಜ್‌ರವರ ಲೇಖನ ನೀವು ಓದಿದ್ದೀರಿ. ಅದರ ಬಗ್ಗೆ ಕಿರಣ್ ಇಲ್ಲಿ ಬರೆದಿದ್ದಾರೆ. ಅವರ ಲೇಖನವನ್ನೂ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.

ಡಾ ಕಿರಣ್ ಎಂ ಗಾಜನೂರು

“ಕನ್ನಡದ ಜನಪ್ರಿಯ ದಿನ ಪತ್ರಿಕೆ ಪ್ರಜಾವಾಣಿಯಲ್ಲಿ ವಚನ ಚಳುವಳಿಯ ಬಗ್ಗೆ ಒಂದು ದೀರ್ಘ ಚರ್ಚೆ ನಡೆಯುತ್ತಿದೆ. ಅದರಲ್ಲಿ ಬಾಲ ಗಂಗಾಧರ್ ಎಂಬ ಜರ್ಮನಿಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಜೊತೆಗೂಡಿರುವ ಬುದ್ಧಿಜೀವಿಗಳ ತಂಡವೊಂದು ಭಾರತದಲ್ಲಿ ಜಾತಿ ವ್ಯವಸ್ಥೆ ಎಂಬುದೇ ಇಲ್ಲ. ಅದೆಲ್ಲವೂ ಬ್ರಿಟಿಷರ ಸೃಷ್ಠಿ. ವಚನ ಚಳುವಳಿ ಜಾತಿ ವ್ಯವಸ್ಥೆಯ ವಿರುದ್ಧ ದನಿಯೆತ್ತಿದೆ ಎಂಬುದು ಕೂಡ ಬ್ರಿಟಿಷರ ಹಾಗೂ ಅವರ ತೀರ್ಮಾನಗಳನ್ನು ಕುರುಡಾಗಿ ಅನುಸರಿಸುತ್ತಿರುವ ಕನ್ನಡ ವಿದ್ವಾಂಸರ ತಪ್ಪು ತಿಳುವಳಿಕೆ ಎಂದು ಬಲವಾಗಿ ವಾದಿಸುತ್ತಿದ್ದಾರೆ”
ಮಾನ್ಯ ಜಿ.ಎನ್ ನಾಗರಾಜ್ ರವರೆ ಮೇಲಿನ ತಮ್ಮ ಸಾಲುಗಳು ಯಾರ ಸಂಶೋಧನೆಯೋ ಗೊತ್ತಿಲ್ಲ ಆದರೆ ಅದು ಬಾಲು ಮತ್ತು ಅವರ ತಂಡದ ಸಂಶೋಧನಾ ಹೇಳಿಕೆಗಳು ಮಾತ್ರ ಖಂಡಿತಾ ಅಲ್ಲ.  ಅದಕ್ಕೆ ನಾನು ೧೦೦% ಗ್ಯಾರೆಂಟಿ ಕೊಡುತ್ತೇನೆ. ತಾನು ವಾದಕ್ಕಿಳಿಯುವ ವಿಚಾರಗಳ ಕುರಿತು ಸ್ವಲ್ಪವು ಓದದೆ ಅವರಿವರು ಹೇಳಿದ್ದನ್ನೆ ಕೇಳಿ ಮಾತನಾಡುವವರು ಮಾತ್ರ ತಮ್ಮ ಮಾದರಿಯಲ್ಲಿ ಮಾತನಾಡಲು ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ. (ತಾವು ಓದಿದ್ದರೆ ದಯಮಾಡಿ ಬಾಲು ಮತ್ತು ಅವರ ತಂಡದ ಯಾವ ಯಾವ ಲೇಖನಗಳ ಆಧಾರದ ಮೇಲೆ ಮೇಲಿನ ತಮ್ಮ ಹೇಳಿಕೆ ನಿಂತಿದೆ ಎಂಬುದನ್ನು ಮುಂದಿನ ಕಂತಿನಲ್ಲಿ ಬರೆಯಿರಿ). ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂದು ಬಾಲು ವಾದಿಸುತ್ತಾರೆ ಎಂಬುದನ್ನು ಒಪ್ಪಿದರೂ ನನಗೆ ಅರ್ಥವಾದಂತೆ ಅವರ ಪೂರ್ಣವಾದ ಇಂದಿನ ಜಾತಿಯ ಕುರಿತಾದ ಸಮಾಜ ಶಾಸ್ತ್ರೀಯ ವಿವರಣೆ ನಿಜವಾದ ಅರ್ಥದಲ್ಲಿ ಇಲ್ಲಿನ ಜಾತಿಗಳನ್ನು ಮತ್ತು ಅದರ ಸಮಾಜಿಕ ನಡವಳಿಕೆಗಳನ್ನು ಪ್ರತಿನಿಧಿಸುತ್ತಿಲ್ಲ. ಹಾಗಂತ ಭಾರತದಲ್ಲಿ ಜಾತಿಗಳೇ ಇಲ್ಲ, ಜಾತಿ ಆಧಾರದಲ್ಲಿ ಅವಮಾನ, ಅಪಮಾನ ಮತ್ತು ಶೋಷಣೆಗಳು ನಡೆದೆ ಇಲ್ಲ ಅಂತಲ್ಲ! ಅವೆಲ್ಲವೂ ಅಂದು ಇದ್ದವು. ಬದಲಾದ ಇಂದಿನ ಸಮಾಜದಲ್ಲಿಯು ಬೇರೆ ಬೇರೆ ರೂಪದಲ್ಲಿ ಇವೆ.
ಜಾತಿಗಳ ಆಧಾರದಲ್ಲಿ ನಡೆಯುವ ಅವಮಾನ ಮತ್ತು ಅಪಮಾನಗಳನ್ನು ನಿಜವಾದ ಅರ್ಥದಲ್ಲಿ ಗ್ರಹಿಸಿ ಪರಿಹರಿಸಲು ಈಗಿರುವ ಜಾತಿಯ ಸಿದ್ದಾಂತ ತೊಡಕನ್ನು ಉಂಟುಮಾಡುತ್ತಿದೆ. ಮುಂದುವರಿದು ನಮ್ಮ ಸಮಾಜದಲ್ಲಿನ ಜಾತಿಗಳನ್ನು ಅರ್ಥಮಾಡಿಕೊಳ್ಳಲು ಜಾತಿಗಳ ಕುರಿತಾದ ಇಂದಿನ ಸಮಾಜ ಶಾಸ್ತ್ರೀಯ (ಜಾತಿಯ ಕುರಿತಾದ ಸಮಾಜ ಶಾಸ್ತ್ರೀಯ ವಿವರಣೆಯನ್ನು ಸರಿಯಾಗಿ ಓದಿ) ವಿವರಣೆ ತಡೆಯನ್ನು ಒಡ್ಡುತ್ತಿದೆ ಎಂದು ವಿವರಿಸುತ್ತಾರೆ. ಈ ಪ್ರಕ್ರಿಯೆಯನ್ನು ತಮ್ಮ ಒಂದು ಬರಹದಲ್ಲಿ ಪ್ರೊ ಜೆ.ಎಸ್ ಸದಾನಂದ ರವರು ಕೆಳಗಿನಂತೆ ವಿವರಿಸುತ್ತಾರೆ “ಬಾಲುರವರ ಪ್ರಕಾರ ಜಾತಿವ್ಯವಸ್ಥೆ ಇದೆ ಎನ್ನುವ ನಂಬಿಕೆಯನ್ನು ಆಧರಿಸಿರುವ ಚಿಂತನೆಗಳು ಹಾಗೂ ಚಳುವಳಿಗಳು ನಾವು ತಲುಪಬೇಕಾದ ಗುರಿಯನ್ನು ಅಂದರೆ ಶೋಷಣಾರಹಿತ, ಪರಸ್ಪರ ಸಹಬಾಳ್ವೆಗೆ ಪೂರಕವಾದ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅಡ್ಡಿಯಾಗಿವೆ. ನಮ್ಮ ಸಮಾಜದಲ್ಲಿ ಹತ್ತು ಹಲವು ವಿಧದ ಶೋಷಣೆಗಳು, ಸಂಘರ್ಷಗಳು ಪ್ರಕಟಗೊಳ್ಳುತ್ತಲೇ ಇವೆ. ಜಾತಿ ಶೋಷಣೆ ಎಂದು ನಾವು ಗುರುತಿಸುವ ವಿದ್ಯಮಾನದಲ್ಲಿ ಜಾತಿ ಒಂದು ಸಾಧನವಾಗಿ ಬಳಕೆಯಾಗುತ್ತಿದೆಯೇ ಹೊರತು ಜಾತಿಯಿಂದಾಗಿಯೇ ಅಂತಹ ಶೋಷಣೆ ಹುಟ್ಟಿಸುತ್ತದೆ ಎಂದು ನಮಗೆ ತೋರಿಸಲಾಗುವುದಿಲ್ಲ. ಜಾತಿ ವ್ಯವಸ್ಥೆಯ ಸಿದ್ಧಾಂತದ ಚೌಕಟ್ಟಿನಲ್ಲಿ ನೋಡಿದಾಗ ಜಾತಿಗಳು ಇದ್ದದ್ದರಿಂದಾಗಿಯೇ ಅಂತಹ ಸಂಘರ್ಷ ಉಂಟಾಯಿತೆಂಬಂತೆ ಕಾಣುತ್ತದೆ ಎನ್ನುವುದು ಅವರ ವಾದ.
ಉದಾಹರಣೆಗೆ, ಒಂದು ಹಾಸ್ಟೆಲ್ನಲ್ಲಿರುವ ವಿವಿಧ ಜಾತಿಯ ವಿದ್ಯಾರ್ಥಿಗಳ ನಡುವೆ ಸಂಘರ್ಷ ಉಂಟಾದಾಗ ಜಾತಿಯೇ ಕಾರಣವೆಂಬಂತೆ ನಾವು ಪರಿಗಣಿಸುತ್ತೇವೆ. ಆದರೆ ಅದೇ ವಿದ್ಯಾರ್ಥಿಗಳು ವಿವಿಧ ಭಾಷೆಯವರಾಗಿದ್ದರೆ ಅಥವಾ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದರೆ ಮತ್ತು ಅವರ ನಡುವೆ ಜಗಳ ನಡೆದರೆ ಆಗ ಭಾಷೆ ಅಥವಾ ಜಿಲ್ಲೆಗಳು ಇರುವುದರಿಂದಲೇ ಸಮಸ್ಯೆ ಉದ್ಭವಿಸಿತು ಎನ್ನು ತೀರ್ಮಾನಕ್ಕೆ ನಾವು ಬರುವುದಿಲ್ಲ ಮತ್ತು ಆ ಕಾರಣಕ್ಕಾಗಿ ಭಾಷೆಗಳನ್ನೇ ಅಥವಾ ಜಿಲ್ಲೆಗಳನ್ನೇ ನಿರ್ಮೂಲನೆ ಮಾಡಬೇಕೆಂದು ನಮಗನಿಸುವುದಿಲ್ಲ. ತಮ್ಮ ನಡುವಿನ ವೈಮನಸ್ಯಕ್ಕೆ ಭಾಷೆ ಅಥವಾ ಜಿಲ್ಲೆಗಳನ್ನು ಸಾಧನವಾಗಿ ಬಳಸಿಕೊಂಡರು ಎಂದಷ್ಟೇ ನಾವು ನೋಡುತ್ತೇವೆ. ಆದರೆ ಜಾತಿ ಘರ್ಷಣೆಗಳ ವಿಷಯಕ್ಕೆ ಬಂದಾಗ ಜಾತಿ ನಿರ್ಮೂಲನವೊಂದೇ ಪರಿಹಾರವಾಗಿ ನಮಗೆ ಕಾಣತೊಡಗುತ್ತದೆ.” ಎಂದು ವಿವರಿಸುತ್ತಾರೆ.
ಅದು ಅಲ್ಲದೆ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮತ್ತು ನಡೆದಿರುವ ಶೋಷಣೆಗಳ ಕುರಿತು ಅವುಗಳ ನಿವಾರಣೆಯಗಳ ಕುರಿತು ಬಾಲುವಿನ ಸಂಶೋಧನೆಯ ಕಾರಣದಿಂದಲಾದರೂ ಚರ್ಚಿಸುತ್ತಿರುವ ಎಲ್ಲರ ಪ್ರಯತ್ನ ಮತ್ತು ಭಾವನೆ. ಎಲ್ಲವೂ ತುಂಬಾ ಗೌರವಿಸುವ ವಿಚಾರಗಳೆ ಅಂದರೆ ನಮ್ಮೇಲ್ಲರ ಹಾನೆಸ್ಟ್ ಗುರಿ ಒಂದೇ. ಅದು ನಮ್ಮ ಸಮಕಾಲಿನ ಸಮಾಜದ ಶೋಷಣೆಗಳನ್ನು ಹೊಗಲಾಡಿಸಬೇಕು. ಆದರೆ ನಮ್ಮ ದಾರಿ ಬೇರೆ ಬೇರೆ. ಉದಾಹರಣೆಗೆ ಆಧುನಿಕ ಭಾರತದ ಜಾತಿ ಶೋಷಣೆಗಳನ್ನು ಹೋಗಲಾಡಿಸಲು ರಾಜರಾಮರ ಕಾಲದಿಂದಲೂ ಪ್ರಯತ್ನಗಳು ನಡೆಯುತ್ತಿವೆ. ಅವರು ಒಂದು ದಾರಿ ಬಳಸಿದರೆ ಗಾಂಧಿ ಒಂದು ಮಾರ್ಗ ಅನುಸರಿಸಿದ್ದಾರೆ ಅಂಬೇಡ್ಕರ್ ಮತ್ತೊಂದು ದಾರಿ ಅನುಸರಿಸಿದ್ದಾರೆ. ಇವೆನ್ ಸೊ ಕಾಲ್ಡ್ ಬಲಪಂಥಿಯರೂ ಅವರದೇ ಅದ ದಾರಿಯನ್ನು ಅನುಸರಿಸಿದ್ದಾರೆ. ಆದರೆ ಪಲಿತಾಂಶ ಮಾತ್ರ ಅಂದುಕೊಂಡಷ್ಟು ದೊರಕಿಲ್ಲ. ಇಂದಿಗೂ ಶೋಷಣೆಗಳು ಅವಮಾನಗಳು ನಡೆಯುತ್ತಲೇ ಇವೆ.  ಇವತ್ತು ಆ ಶೋಷಣೆಗಳನ್ನು ಅರ್ಥ ಮಾಡಿಕೊಳ್ಳಲು ಬಾಲು ಹೊಸ ಒಂದೂ ಮಾರ್ಗ ತೋರುತ್ತಿದ್ದಾರೆ ಅಷ್ಟೆ. ಅದರೆ ನಮ್ಮಲ್ಲಿ ಬಹಳ ಜನರಿಗೆ ಬಾಲು ಅವರು ಶೋಷಣೆಯನ್ನು ಅರ್ಥಮಾಡಿಕೊಳ್ಳಲು ಎಲ್ಲರಂತೆ ಒಂದೂ ಮಾರ್ಗವನ್ನು ತೋರಿಸುತ್ತಿದ್ದಾರೆ ಎಂದೂ ತಿಳಿಯುತ್ತಿಲ್ಲ. ಬದಲಾಗಿ ಬಾಲು ಶೋಷಣೇಗಳೇ ಇಲ್ಲ ಎನ್ನುತ್ತಿದ್ದಾರೆ ಎಂದೂ ಅರ್ಥಮಾಡಿಕೊಂಡಿದ್ದಾರೆ (ಅದೂ ಸತ್ಯವಾಗಿದ್ದರೆ ನಾನೇ ಅವರನ್ನು ಒಪ್ಪುವುದಿಲ್ಲ).

ಇದು ಸಮಸ್ಯೆಯ ಮೂಲ. ಒಂದು ವೇಳೆ ಬಾಲು ತೋರಿಸುತ್ತಿರುವ ಮಾರ್ಗವೂ ಶೋಷಣೆಯನ್ನು ಅರ್ಥಮಾಡಿಸಲೂ ವಿಪಲವಾದರೆ ಮತ್ತೊಬ್ಬರು ಮತ್ತೊದು ದಾರಿ ತೋರಿಸುತ್ತಾರೆ. ಅದರೆ ಅದಕ್ಕಿಂತ ಮುಂಚೆ ಬಾಲು ತೋರಿರುವ ದಾರಿಯ ಸಮಸ್ಯಗಳೇನು ಅದು ಹೇಗೆ ಸಮಾಜದ ಶೋಷನೆಗಳನ್ನು ಅರ್ಥಮಾಡಿಕೊಳ್ಳಲು ತಡೆಯಾಗಿದೆ ಎಂದು ಯಾರದರೂ ತೋರಿಸಬೇಕಿದೆ. ಆದರೆ ಇದುವರೆಗಿನ ನಮ್ಮ ವಿದ್ವತ್ ವಲಯದ ಚರ್ಚೆ ನಿಜ ಅರ್ಥದಲ್ಲಿ ಬಾಲುರ ಸೈದ್ದಾಂತಿಕ ಮಟ್ಟದ ಸಂಶೋಧನೆಯ ಕುರಿತು ಯಾವುದೆ ಆಸಕ್ತಿದಾಯಕ ಮತ್ತು ಅಗತ್ಯ ಪ್ರಶ್ನೆಯನ್ನೆ ಎತ್ತದೆ ತಾನೇ ತಾನಾಗಿ ಬಾಲು ಅವರಿಗೆ ವಿಜಯವನ್ನು ಒದಗಿಸಿದೆ. ಅದ್ದರಿಂದ ಸಮಾಜಿಕ ಸಮಸ್ಯಗಳ ಕುರಿತು ಸಮಾನ ಆಸಕ್ತಿ ಹೊಂದಿರುವ ನಾವು ಬಾಲು ಅವರನ್ನು ಒದಿ ಅಥವಾ ಮಾತನಾಡಿ ಅವರ ತಪ್ಪಿದ್ದರೆ ಇದು ನಿಮ್ಮ ಸಮಸ್ಯ ಎಂದೂ ತೋರಿಸಬೇಕಿದೆ.  ಈ ನೆಲೆಯಲ್ಲಿ ಈ ನೆಲೆಯಲ್ಲಿ ಪ್ರಜ್ಞಾವಂತರಾದ ತಾವು ಒಮ್ಮೆ ಸಿ.ಎಸ್.ಎಲ್.ಸಿ ಗೆ ಬೇಟಿಕೊಟ್ಟು (ನಾನೂ ಇರುತ್ತೇನೆ) ನಾವು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತದ್ದೇವೆ ನಿಮ್ಮ ವಾದಗಳು ನಮ್ಮಲ್ಲಿ ಕೆಲವೂ ಗೊಂದಲಗಳನ್ನು ಹುಟ್ಟಿಹಾಕಿವೆ ಸೋ ನಿಮ್ಮ ಸಂಶೋಧನೆ ಎನೂ? ಹೇಗೆ ಮಾಡುತ್ತಿದ್ದಿರ? ಇದರ ಉದ್ದೇಶ ಎನೂ? ಒಬ್ಬ ಪ್ರಜ್ಞಾವಂತನಾಗಿ ನನಗೆ ತಿಳಿಯುವ ಹಕ್ಕಿದೆ ವಿವರಿಸಿ ಎಂದೂ ಅವರೂಡನೆಯೆ ನೆರವಾಗಿ ಚರ್ಚಿಸಿ ಅ ನಂತರ ಅವರ ವಾದಗಳನ್ನು ವಿಮರ್ಶಿಸಿದರೆ ಖಂಡಿತ ಕರ್ನಾಟಕದ ಮಟ್ಟಿಗಿನ ಪ್ರಮುಖ ಚರ್ಚೆಗೆ ನಾವೂ ಮುಖಾಮುಖಿಯಾದಂತೆ ಆಗುತ್ತದೆ. ಮತ್ತು ಇತರರಿಗೆ ನಾವು ಒಂದೂ ಒಳ್ಳೆ ಮಾದರಿಯನ್ನು ಹಾಕಿಕೊಟ್ಟಂತೆ ಆಗುತ್ತದೆ. ಇಲ್ಲವಾದರೆ ೨ದಿನ ಸಮಾನ ಮನಸ್ಸಿನ ಎಲ್ಲರೂ ಒಟ್ಟಿಗೆ ಎಲ್ಲಾದರೂ ಕುಳಿತು ಬಾಲುವಿನ ವಾದಗಳನ್ನು ಒದಿ ಚರ್ಚಿಸಿ ಮುಖ್ಯವಾದ ಪ್ರಶ್ನೆಗಳನ್ನು ಪಟ್ಟಿಮಾಡಿ ಒಂದೂ ಲೇಖನ ಮಾಡಿ ಪ್ರಕಟಿಸಿದರೆ ಅದೂ ಇನ್ನೂ ಉತ್ತಮ ಪ್ರಯತ್ನವಾಗುತ್ತದೆ? ಈ ನಿಟ್ಟಿನಲ್ಲಿ ನಾವೂ ಯೋಚಿಸಬೇಕಿದೆ.
ಇದ್ಯಾವುದನ್ನು ಮಾಡದ ನಾವು ಕೇವಲ ನಮಗೆ ದೂರೆತ ಸೆಕೆಂಡರಿ ಸೋರ್ಸ್‌ಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯ ೪೫ ವರ್ಷದ ಸಂಶೋಧನೆಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ಮತ್ತು ಇದರಿಂದ ಸಮಾಜದ ಶೋಷನೆಗಳನ್ನು ಅರ್ಥಮಾಡಿಕೊಂಡು ಪರಿಹರಿಸಬೇಕು ಎಂಬ ನಮ್ಮಗಳ ಮೂಲ ಉದ್ದೇಶಗಳೂ ಈಡೇರುವುದಿಲ್ಲ.  ಸೋ ನಾವೂ ಬದಲಾಗಬೇಕಿದೆ. ಪ್ರಶ್ನೆ ಮಾಡುವ ನಮ್ಮ ಮಾದರಿಗಳೂ ಬದಲಾಗಬೇಕಿದೆ.  ಹಾಗೆ ನೋಡುವುದಾದರೆ ನಿಮ್ಮನ್ನು ಒಳಗೊಂಡಂತೆ ನಮ್ಮ ಗೆಳೆಯರಲ್ಲಿ ಹಲವರು ಬಾಲು ಅವರ ಸಂಶೋಧನಾ ಲೇಖನಗಳನ್ನು ಓದುತ್ತಿದ್ದಾರೆ. ಅದರೆ ಬಾಲುವನ್ನು ಏಕೆ ಓದುತ್ತಿದ್ದಿರ ಎಂಬುದು ಓದುವವರಿಗೆ ತಿಳಿದಿದ್ದರೆ ಚೆನ್ನ. ಅಂದರೆ ಅವರನ್ನು ಟೀಕೆ ಮಾಡುವ ಉದ್ದೇಶದಿಂದಲೇ ಅವರ ಸಂಶೋಧನೆ ಕುರಿತ ನಿಮ್ಮ ಓದು ಪ್ರಾರಂಭವಾಗಿದ್ದರೆ ಖಂಡಿತಾ ಅದರಿಂದ ಪ್ರಯೋಜನವಿಲ್ಲ. ಅದು ಒಂದು ಮಾದರಿಯ ಸೆಲೆಕ್ಟಿವ್ ಒದಾಗಿ ಮಾರ್ಪಟ್ಟು ಮತ್ತೆ ಕೊನೆಗೆ ಬಾಲು ಟೀಕೆಯೊಂದಿಗೆ ಕೊನೆಯಾಗುತ್ತದೆ. ಇದರ ಅರ್ಥ ನೀವು ಎಲ್ಲಿಂದ ಪ್ರಾರಂಭಿಸಿದ್ದಿರೂ ಅಲ್ಲಿಗೆ ಬಂದು ನಿಲ್ಲುತ್ತದೆ (ಬಾಲುವನ್ನು ಟೀಕಿಸುವುದು). ಇಂದಿನ ಬಹಳ ಜನ ಕನ್ನಡದ ಚಿಂತನಾವಲಯ ಈ ನೆಲೆಯಲ್ಲಿಯೇ ಬಾಲು ಅವರ ಸಂಶೋಧನೆಯನ್ನು ಓದುತ್ತಿದ್ದಾರೆ ಮತ್ತು ತಪ್ಪಾಗಿ ಗ್ರಹಿಸುತ್ತಿದ್ದಾರೆ.
ಬಾಲುವನ್ನು ಓದಲು ಇರುವ ಇನ್ನೂಂದು ಮಾದರಿ ಅಂದರೆ ಸಮಾಜ ವಿಜ್ಞಾನಗಳ ಸಂಶೋಧನೆ. ಇದುವರೆಗು ಸೈಧಾಂತಿಕವಾಗಿ ಎದುರಿಸಿಕೊಂಡು ಬಂದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಾಲು ಏನಾದರೂ ಹೊಸದನ್ನು ಹೇಳುತ್ತಿದ್ದಾರೆಯೇ ಅಥವಾ ಹೊಸ ಮಾದರಿಯನ್ನು ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆಯೊಂಧಿಗೆ ಅವರನ್ನು ಮುಖಾಮುಖಿಯಾಗುವುದು. ಈ ಮಾದರಿ ನಿಮಗೆ ನಿಜಕ್ಕೂ ನಿಮಗೆ ಉತ್ತಮ ಒಳನೋಟ ನೀಡಿಯೇ ನೀಡುತ್ತದೆ. ಇದು ನನ್ನ ನಂಬಿಕೆ. ಈ ಪ್ರಯತ್ನಕ್ಕೆ ಮೊದಲು ನೀವು ಇದುವರೆಗೂ ನಂಬಿರುವ ಸಿದ್ದಾಂತಗಳೊಂದಿಗೆ ಒಂದು ಅಬ್ಜೆಕ್ಟಿವಿಟಿ ಇಟ್ಟುಕೊಂಡು ಓದಬೇಕಾಗುತ್ತದೆ.  ತುಂಬಾ ಜನಕ್ಕೆ ಅದು ಸಾಧ್ಯವೇ ಆಗುವುದಿಲ್ಲ. . . ಅವರು ನಂಬಿರುವ ಸಿದ್ದಾಂತಗಳ ಒಳಗೆ ಬಾಲು ಅವರ ವಿಚಾರಗಳನ್ನು ನೋಡುವುದರಿಂದ ಮೊದಲ ಓದಿಗೆ/ನೊಟಕ್ಕೆ ಬಾಲು ವಿರೋಧಿಯಂತೆ ಭಾಸವಾಗುತ್ತಾರೆ. . ಅದಕ್ಕೆ ಬಾಲು ಕಾರಣ ಅಲ್ಲವೇ ಅಲ್ಲ ಅದಕ್ಕೆ ಕಾರಣ ನೀವು ಅವರನ್ನು ಮುಖಾಮುಖಿಯಾಗುತ್ತಿರುವ ವಿಧಾನ. .
ಮಾನ್ಯ ಜಿ.ಎನ್ ನಾಗರಾಜ್ ರವರೆ ಇಷ್ಟೆಲ್ಲಾ ಹೇಳಿ ಆದ ಮೇಲೆ ನನ್ನದೊಂದು ಪ್ರಶ್ನೆ,
ತಾವು ಸುಮ್ಮನೆ ಯೋಚಿಸಿ, ಜಾತಿವ್ಯವಸ್ಥೆ ಇದೆ ಎಂದು ಒಪ್ಪಿಕೊಂಡರೆ ಅದರ ಆಧಾರದ ಮೇಲೆ ದಲಿತರ ಕುರಿತು ಎನೆಲ್ಲಾ ಅಸಹ್ಯ ಹೇಳಿಕೆಗಳು ನೀಡಲ್ಪಟ್ಟಿವೆಯೋ ಅವೆಲ್ಲ ಸತ್ಯವೆ ಆಗಿ ಬಿಡುತ್ತವೆ. . . ಅಲ್ಲವೆ ಅಂದರೆ ದಲಿತರು ಕುಲಹೀನರು, ಕೊಳಕರು, ಸಂಸ್ಕಾರ ಹಿನರು ಚಂಡಾಲರು.  ಒಂದೇ ಮಾತಿನಲ್ಲಿ ಹೇಳುವುದಾರೆ ಮನುಷ್ಯಾಗಿ ಬದುಕುತ್ತಿರುವ ಪ್ರಾಣಿಗಳು ನಾಗರಿಕ ಸಮಾಜದಲ್ಲಿ ನಾಗರಿಕರಂತೆ ಬದುಕಲು ಅರ್ಹತೆ ಇಲ್ಲದವರು. ಸ್ವಂತ ಬುದ್ದಿ ಇಲ್ಲದವರು ಪರಾವಲಂಬಿಗಳು ಅದ್ದರಿಂದಲೇ ಅವರು ಈ ಸಮಾಜದ ಮುಖ್ಯವಾಹಿನಿಯಿಂದ ದೂರವಿರಬೇಕು ಇತ್ಯಾದಿ ಇತ್ಯಾದಿ. . . ವಿವರಣೆಗಳೇ ಜಾತಿ ಶ್ರೇಣಿಕರಣದ ಕೊನೆಗೆ ಅವರನ್ನು ತಳ್ಳಲ್ಪಟ್ಟಿವೆ ಎಂಬ ವಿವರಣೆಗಳೂ ಸರಿಯೇ? ಸೊ ಕಾಲ್ಢ್ ಜಾತಿ ವ್ಯವಸ್ಥೆಯ ಸಿದ್ದಾಂತ ಇವೇ ಕಾರಣಗಳಿಗಾಗಿಯೇ ಅವರನ್ನು ತನ್ನ ಶ್ರೇಣಿಕರಣದ ಕೊನೆಯಲ್ಲಿ ಇಟ್ಟಿದೆ ಅಥವಾ ಹೊರಗೆ ಇಟ್ಟಿದೆ(ಇದಕ್ಕೆ ಸಾವಿರ ಆಧಾರಗಳು ಸಿಗುತ್ತವೆ). . ಜಾತಿ ವ್ಯವಸ್ಥೆ ಇದೆ ಮತ್ತು ಅದರಲ್ಲಿ ದಲಿತರೂ ಕೊನೆಯಲ್ಲಿ ಇದ್ದಾರೆ ಎಂದೂ ಸಾರಿ ಸಾರಿ ಹೇಳುವ ನೀವು ದಲಿತರೂ ಏಕೆ ಅಲ್ಲಿದ್ದಾರೆ ಎಂಬ ಜಾತಿ ಸಿದ್ದಾಂತದ ಮೇಲಿನ ಹೇಳಿಕೆಗಳನ್ನು ಒಪ್ಪಿದಂತೆಯೇ ಅಲ್ಲವೆ. . . . ಅದ್ದರಿಂದ ಇಂದೂ ದಲಿತ ಶೋಷಣೆಗೆ ತಮ್ಮಗಳ (ಜಾತಿ ಸಿದ್ದಾಂತ ಇದೆ ದಲಿತರು ಅಲ್ಲಿ ಕೆಳಗಿದ್ದಾರೆ ) ನಿಲುವು ಸಮರ್ಥನೆ ಒದಗಿಸುತ್ತಿಲ್ಲವೆ. . . .ನನ್ನ ಪ್ರಕಾರ ಜಾತಿ ವ್ಯವಸ್ಥೆ ಇದೆ ಅಂತ ವಾದಿಸುತ್ತಿರುವವರು ಹಾಗೆ ಅಂದುಕೊಳ್ಳಲೇ ಬೇಕು. ಜಾತಿ ವ್ಯವಸ್ಥೆ ಅಂದರೆನೇ “ಶ್ರೇಣೀಕರಣ ಇತ್ತು” ಮತ್ತು “ಅದರಲ್ಲಿ ದಲಿತರು ಕೆಳಗಿದ್ದರು” ಎಂಬ ವೈಜ್ಞಾನಿಕ ವಿವರಣೆ ಇದನ್ನೂ ಅಲ್ಲಗಳೆಯಲೂ ಸಾಧ್ಯವೇ ಆಧಾರ ಸಮೇತ ವಿವರಿಸಿ.
 
 

‍ಲೇಖಕರು avadhi

22 July, 2013

12 Comments

  1. vasanth

    Kiran
    Yes Dalits were at the bottom, Why don’t you people try to help them to move. You think that whatever Balu and his team writes and say, has scientific basis. if others contradicts that you people says that it has no scientific value. Overcome the duplicity and listen and respect what others say. Research is a open medium, don’t attack others simply they don’t tie up with you people.
    And, whenever some of us raised some questions pertaining to the book”Is there a caste system in India” You people don’t answer for that but lull about research. I don’t it seems that you people think like you only do research others have not. At least to write something on the topic we must have the information. You don’t respect that even.

  2. yash

    prasaktha sanniveshadalli jati pidugu vishleshanege neevu helidanthe saMshodhana prabhandhagala tulane,mukhamukhi astondu agattya enisadu. g.n.n ottinalli prathipadisuvudannu aritukollalu nannannu nanu samshodhanege oddikondru saku.

  3. Aravind

    Ooops… What a crap this one.

  4. DR. KIRAN .M GAJANUR

    vasanth
    Yes Dalits were at the bottom, Why don’t you people try to help them to move.
    ನಾವು ಖಂಡಿತಾ ಅದನ್ನೆ ಮಾಡುತ್ತಿರುವುದು ನಿಜ ಅರ್ಥದಲ್ಲಿ ಈ ನೆಲೆದ ಕಡೆಯ ವ್ಯಕ್ತಿಯನ್ನು ಶೋಷಿಸುತ್ತಿರುವುದು ಇಲ್ಲದ ಜಾತಿ ವ್ಯವಸ್ಥೆಯ ಸಿದ್ದಾಂತವನ್ನು ಇದೆ ಎಂಬುದಾಗಿ ನಂಬಿಸಿ ಬೆಳೆ ಬೆಯಿಸಿಕೊಳ್ಳುತ್ತಿರುವ ಮಂದಿ ಎಂಬುದನ್ನು ಮೂದಲು ಅರ್ಥಮಾಡಿಕೊಳ್ಳಿ ನಮ್ಮ ಸಂಶೋಧನೆಯ ಮುಖ್ಯ ಉದ್ದೇಶವೇ ತಾರತಮ್ಯಗಳನ್ನು ಅವು ಇರುವಂತೆ ಅರ್ಥಮಾಡಿಕೊಳ್ಳುವುದು ಪರಿಹಾರದ ಮಾತು ನಂತರ ಬರುತ್ತದೆ ನಮಗೆ ಇಗ ಲಭ್ಯವಿರುವ ಸಮಾಜ ಶಾಸ್ತ್ರಿಯ ಸಿದ್ದಾಂತಗಳಿಂದ ಅದು ಸಾಧ್ಯವಿಲ್ಲ (ಇದನ್ನು ಬಹಳಷ್ಟು ಮಂದಿ ಹೇಳಿದ್ದಾರೆ) ಎಕೆಂದರೆ ಆ ಸಿದ್ದಾಂತಗಳಲ್ಲಿ ಬೆಸಿಕ್ ಆಗಿ ಕೆಲವು ಮಿತಿಗಳಿವೆ ಅದನ್ನು ಬಾಲು ವಿವರಿಸಿದ್ದಾರೆ. . .ನಿಮ್ಮ ಮುಂದಿರುವ ಕೆಲಸ ಬಾಲು ತೋರಿಸಿದ ಮಿತಿಗಳು ನಿಜವಾದ ಮಿತಿಗಳಲ್ಲ ಎಂಬುದನ್ನು ತೋರಿಸಬೇಕು ಅದನ್ನು ಸಾಧಿಸಿ ತೋರಿಸಿ ಅಸ್ಟೆ ಅದು ಬಿಟ್ಟು ನಾಗರಾಜ್ ರಂತೆ ಯಾವುದೆ ಮಾಹಿತಿ ಇಲ್ಲದೆ ಮಾತನಾಡಬೇಡಿ. . . ಸಂಶೋಧನೆಯನ್ನು ಯಾರು ಬೇಕಾದರು ಪ್ರಶ್ನಿಸಬಹದು ಆದರೆ ಅದಕ್ಕೆ ಮುಖ್ಯವಾಗಿ ಆ ಮಾತುಗಳು ಪ್ರಸ್ಥುತ ಸಂಶೋಧನೆ ಆಧಾರವಾಗಬೇಕು ವಯಕ್ತಿಕ ಅಂಶಗಳಲ್ಲ ಎಂಬುದು ತಮಗೂ ತಿಳಿದಿದೆ ಎಂದುಕೊಳ್ಳುತ್ತೇನೆ. ನಮ್ಮ ಕುರಿತು ಇಷ್ಟೆಲ್ಲಾ ಟೀಕಿಸುತ್ತಿರುವ ನಿಮಗೆ facebook ಮತ್ತು ಸಮಾಜಿಕ ತಾಣಗಳಲ್ಲಿ ನಮ್ಮ ಚರ್ಚೆಯನ್ನು ಬೌದ್ದಿಕ ಮಾದರಿಯಲ್ಲಿ ಕೊಂಡೊಯ್ಯಲಾಗದೆ ವಯಕ್ತಿಕ ನಿಂದನೆಗಳನ್ನು ಮಾಡಿ ಚರ್ಚೆಯನ್ನೆ ಹಾದಿ ತಪ್ಪಿಸುತ್ತಿರುವ ಸಾವಿರಾರು ಮಂದಿ ಕಾಣದಿರುವುದು ನಿಜವಾದ ದುರದೃಷ್ಟಕರ ನಾನು ನಿಮ್ಮನ್ನೆ ಕೇಳುತ್ತೇನೆ ನಾವಿಬ್ಬರು ಬೌದ್ದಿಕವಾಗಿಯೇ ಚರ್ಚಿಸುವ ಹೇಳಿ ಬಾಲುವಿನ ವಾದದಲ್ಲಿ ನಿಮಗೆ ಕಾಣಿಸಿದ ತೊಂದರೆಗಳೇನು ಅವರ ಯಾವ ಬರಹಗಳ ಆಧಾರದಲ್ಲಿ ನಿವು ಆ ತೊಂದರೆಗಳನ್ನು ಗುರುತಿಸಿದ್ದಿರಿ. . .ಆರಂಭ ನಮ್ಮಿಂದಲೇ ಆಗಲಿ

    • ಗುರುಶಾಂತ್ ಎಸ್.ವೈ

      ವಾದ ಅಂದ್ರೆ ಹೀಂಗೆನಾ!ಪ್ರಶ್ನೆಗಳಿಗೆ ಉತ್ತರ ಕೊಡೋದು ಒಂದು ವಿಧಾನ. ಆದರೆ ಕಿರಣ್ ಅವರು ಪ್ರಶ್ನೆಗೆ ಪ್ರಶ್ನೆ ಕೇಳಿ ಉತ್ತರ ಅಂತಾರಲ್ಲಾ

  5. ಉದಯಕುಮಾರ್ ಹಬ್ಬು

    ಪ್ರೀತಿಯ ಬಾಲು ಅಭಿಮಾನಿಗಳೆ, ಭಾರತದಲ್ಲಿ ಜಾತಿಪದ್ಧತಿ ಇಲ್ಲವೆಂದೂ,ಶೋಷಣೆಗೆ ಬೇರೆ ಬಗೆಯ ಆಯಾಮವಿದೆಯೆಂದು , ಬಾಲು ಕೊಡುವ ಸಲಹೆಗಳು (ಸಂಶೋಧನೆಗಳು)ಸೂಚನೆಗಳು ಹೊಸಬಗೆಯ ದಾರಿಯನ್ನು ತೋರಿಸಬಹುದೆಂದೂ ಹೇಳುತ್ತಿರುವ ತಾವು ದಯವಿಟ್ಟು ಜಾತಿಪದ್ಧತಿ ಎಂದರೇನು, ದಯವಿಟ್ಟು ತಿಳಿಸುವಿರಾ? ಬ್ರಿಟಿಷ್ ವಸಾಹತುಶಾಹಿಯು ಜಾತಿಪದ್ಧತಿಯನ್ನು ನಮಗೆ ಬಳುವಳಿಯಾಗಿ ಕೊಟ್ಟಿತೆ?ಅದು ಹೇಗೆ?

  6. C P NAGARAJA

    ” ನಾವು ಖಂಡಿತಾ ಅದನ್ನೆ ಮಾಡುತ್ತಿರುವುದು ನಿಜ ಅರ್ಥದಲ್ಲಿ ಈ ನೆಲೆದ ಕಡೆಯ ವ್ಯಕ್ತಿಯನ್ನು ಶೋಷಿಸುತ್ತಿರುವುದು ಇಲ್ಲದ ಜಾತಿ ವ್ಯವಸ್ಥೆಯ ಸಿದ್ದಾಂತವನ್ನು ಇದೆ ಎಂಬುದಾಗಿ ನಂಬಿಸಿ ಬೆಳೆ ಬೆಯಿಸಿಕೊಳ್ಳುತ್ತಿರುವ ಮಂದಿ ಎಂಬುದನ್ನು ಮೂದಲು ಅರ್ಥಮಾಡಿಕೊಳ್ಳಿ . “—-
    ಡಾ . ಕಿರಣ್ ಗಾಜನೂರ್ ಅವರ ಬರಹದ ಈ ಸಾಲುಗಳನ್ನು ಓದುತ್ತಿದ್ದಂತೆಯೇ , ನಾನು ಹಿಂದೆ ಎಲ್ಲೋ ಯಾರಿಂದಲೋ ಕೇಳಿದ್ದ ಕತೆಯೊಂದು ನೆನಪಾಯಿತು .
    ಇಬ್ಬರು ಗೆಳೆಯರು ಜತೆಗೂಡಿ ನಡೆದುಕೊಂಡು ಹೋಗುತ್ತಿದ್ದಾಗ , ದೂರದ ಬಯಲಿನ ಅಂಚಿನಲ್ಲಿ ಜೊತೆಗೂಡಿದಂತೆ ಕಂಡು ಬರುವ ಆಕಾಶ ಮತ್ತು ಭೂಮಿಯನ್ನು ನೋಡಿ , ಒಬ್ಬ ಗೆಳೆಯ ಮತ್ತೊಬ್ಬನಿಗೆ ” ನೋಡಲ್ಲಿ , ಆಕಾಶ ಮತ್ತು ಭೂಮಿಯನ್ನು ಎಷ್ಟು ಚೆನ್ನಾಗಿ ಹೊಲಿದಿದ್ದಾರೆ ” ಎಂದಾಗ , ಗೆಳೆಯ ಅವನ ಮಾತನ್ನು ತೆಗೆದುಹಾಕದೆ , ಕೇಳಿದನಂತೆ ” ಯಾವ ದಾರದಲ್ಲಿ ಹೊಲಿದಿದ್ದಾರೆ ? ” .
    ಸಿ ಪಿ ನಾಗರಾಜ , ಬೆಂಗಳೂರು

  7. DR. KIRAN .M GAJANUR

    ಉದಯಕುಮಾರ್ ಹಬ್ಬು ನನ್ನ ಗುರುಗಳು ಮತ್ತು ಗೆಳೆಯ ಬರೆದ ಕೆಳಗಿನ ಲೇಖನ ನಿಮಗೆ ನಮ್ಮ ವಾದವನ್ನು ಅರ್ಥಮಾಡಿಸುತ್ತದೆ ಎಂದುಕೊಳ್ಳುತ್ತೇನೆ
    ಜಾತಿವ್ಯವಸ್ಥೆ ಇಲ್ಲ ಎಂದರೆ. . .
    * ಡಾ. ಷಣ್ಮುಖ ಮತ್ತು ಡಾ. ಪ್ರವೀಣ
    ಜಾತಿಗಳಿವೆ ಜಾತಿವ್ಯವಸ್ಥೆ ಇಲ್ಲ ಎಂದರೆ ಏನು? ಹಾಗಾದರೆ ಈ ಮೇಲು-ಕೀಳು, ತಾರತಮ್ಯ, ಶೋಷಣೆಗಳು ಇಲ್ಲ ಅಂತ ಹೇಳ್ತಾ ಇದೀರಾ? ಪದೇ ಪದೇ ನಮಗೆ ಇದುವರೆಗೂ ಎದುರಾಗಿರುವ (ಅಂತರ್ಜಾಲದ ಚರ್ಚೆಗಳಲ್ಲಿರಬಹುದು, ಸೆಮಿನಾರ್, ಕಾರ್ಯಾಗಾರಗಳಲ್ಲಿರಬಹುದು) ಕೆಲವೇ ಒಳ್ಳೆಯ ಪ್ರಶ್ನೆಗಳಲ್ಲಿ ಇವೂ ಕೂಡ. ಅವುಗಳ ಸುತ್ತ ಈ ಬರಹ ಚರ್ಚಿಸುವ ಪ್ರಯತ್ನ ಮಾಡುತ್ತದೆ.
    ಜಾತಿಗಳಿಲ್ಲ ಎಂದು ವಾದಿಸುತ್ತಿರುವ ಮೂರ್ಖರ ಗುಂಪೊಂದು ಇದೆ ಎಂದು ಹೇಳುತ್ತಾ ಬಂದಿರುವುದನ್ನು ನೀವು ಕೇಳಿರುವ ಸಾಧ್ಯತೆ ಇದೆ. ಆಗ ನಿಮಗೂ ಅನಿಸಿರಬಹುದು -ಇವರೆಂಥ ಮೂರ್ಖರಯ್ಯ.! ಕಣ್ಮುಂದೆ ಕಾಣುವ ಸಂಗತಿಗಳನ್ನು ನಿರಾಕರಿಸುತ್ತಿರುವರಲ್ಲ! ಇದೆಂಥಾ ಸಂಶೋಧನೆ, ಇದರ ಹಿಂದೆ ಯಾವುದೋ ಹುನ್ನಾರ/ ಕುಯುಕ್ತಿ ಇದ್ದಿರಬಹುದು! ಅಂತಹ ಯಾವುದೇ ಪ್ರಮೇಯಗಳನ್ನು, ಹೇಳಿಕೆಗಳನ್ನು ಮಾಡಿರುವ ಒಂದೇ ಒಂದು ಉದಾಹರಣೆ ಕೂಡ ನಮ್ಮ ಗುಂಪಿನ ಬರಹಗಳಿಂದ ತೆಗೆದು ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೂ ಈ ರೀತಿಯ ಆರೋಪಗಳು ಎಲ್ಲಿಂದ ಹೊರಟಿತು? ಹಾಗಾದರೆ ಜಾತಿಗಳ ಕುರಿತು ನಮ್ಮ ವಾದವೇನು? ಎಂಬ ಪ್ರಶ್ನೆಗಳು ಏಳುವುದು ಸಹಜ.
    ಜಾತಿಯ ಕುರಿತ ನಮ್ಮ ವಾದವನ್ನು ಸರಳವಾಗಿ ಸಾರಾಂಶೀಕರಿಸುವುದಾದರೆ, ಭಾರತದಲ್ಲಿ ವಸಾಹತು ಪೂರ್ವದಿಂದಲೂ ಜಾತಿಗಳಿದ್ದವು, ಈಗಲೂ ಇವೆ.. ಇವುಗಳನ್ನು ಯೂರೋಪಿಯನ್ನರು ತೆಗೆದುಕೊಂಡು ಬಂದರು, ಇಲ್ಲಿ ಸೃಷ್ಟಿ ಮಾಡಿದರು ಎಂಬುದು ಸರಿಯಾದ ವಿವರಣೆಯಲ್ಲ. ಆದರೆ ಭಾರತೀಯ ಸಮಾಜವನ್ನು ನೋಡುವ ಒಂದು ನಿರ್ದಿಷ್ಟ ಚೌಕಟ್ಟನ್ನು ಯೂರೋಪಿಯನ್ನರು ನಿರ್ಮಿಸಿದರು. ಅದುವೇ “ಜಾತಿವ್ಯವಸ್ಥೆ”.
    ಹಾಗಾದರೆ, ’ವ್ಯವಸ್ಥೆ’ಎಂದರೇನು? ಅವುಗಳ ಲಕ್ಷಣಗಳಾವುವು ?
    ವ್ಯವಸ್ಥೆ ಎಂದರೆ ಒಂದು ವ್ಯಾಖ್ಯಾನ ನೀಡುವುದರಿಂದ ಏನೂ ಲಾಭ ಇಲ್ಲ. ಬದಲಾಗಿ ವಿಜ್ಞಾನದ ಮಾದರಿಯಂತೆ ವ್ಯವಸ್ಥೆಯ property ಗಳನ್ನು ಗುರುತಿಸುವುದು. ಉದಾಹರಣೆಗೆ ನೀರಿನ property H2, O1, ಹೀಗೆ. ಈ property ಗಳಲ್ಲಿ ಒಂದು ವ್ಯತ್ಯಾಸ ಮಾಡಿ ಅರ್ಥಮಾಡಿಕೊಂಡರೂ ಆ ವಸ್ತುವನ್ನು ಗುರುತಿಸಲಾಗದು. ಅಂದರೆ ಯಾವುದು ಇದ್ದರೆ ಆ ವಸ್ತು ಇರುತ್ತದೆ ಯಾವುದು ಇಲ್ಲದಿದ್ದರೆ ಅದು ಇರಲಿಕ್ಕೆ ಸಾಧ್ಯವಿಲ್ಲ ಎನ್ನುವಂತೆ ನಾವು system ನ property ಗಳನ್ನು ಗುರುತಿಸಿಕೊಳ್ಳುವುದು ಸೂಕ್ತ. ಈಗ ನಮ್ಮ ಮುಂದೆ ಮೂರ್ತವಾಗಿರುವ system ಎನಿಸಿಕೊಳ್ಳುವ ಸಂಗತಿಗಳನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು (ಉದಾ: ಬ್ಯಾಂಕ್, ವಿಶ್ವವಿದ್ಯಾನಿಲಯ, ರಾಜಕೀಯ ವ್ಯವಸ್ಥೆ (ಪ್ರಭುತ್ವ) etc.,). ಮೂಲತಃ ಜೀವಶಾಸ್ತ್ರದಲ್ಲಿ ರಚನೆಯಾದ ಈಗ ರಾಜ್ಯಶಾಸ್ತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಸಿಸ್ಟಂ ಥಿಯರಿಯೇ ಇದೆ. ಅದರಂತೆ ನೋಡಿದರೆ, system ಎನಿಸಿಕೊಳ್ಳಬೇಕಾದರೆ ಅದರಲ್ಲಿ ಘಟಕ (unit) ಗಳಿರಬೇಕು, ಆ ಘಟಕಗಳ ನಡುವೆ ನಿರ್ಧಿಷ್ಟ ರೀತಿಯ (ಸಾಮಾನ್ಯವಾಗಿ hierarchical ಆದ) ನಿರಂತರ interaction ಮತ್ತು interrelation ಇರಬೇಕು. ಈ ಪ್ರತಿಯೊಂದು ಘಟಕಗಳಿಗೆ ಮತ್ತು ಈ ಘಟಕಗಳೆಲ್ಲವನ್ನೂ ಒಳಗೊಂಡ ಒಂದು ಎಲ್ಲೆ (Boundary) ಇರಬೇಕು. ಇವೆಲ್ಲವನ್ನೂ ಸೂಕ್ತವಾಗಿ ರಚಿಸಿ, ನಿರ್ದೇಶಿಸಿ ನಿಯಂತ್ರಿಸುವ ನಿಯಮಗಳು (Rules) ಇರಬೇಕು, ಈ ನಿಯಮಗಳನ್ನು ರೂಪಿಸಿ, ಅರ್ಥೈಸಿ, ಜಾರಿಗೊಳಿಸುವ ಅಧಿಕಾರವ್ಯವಸ್ಥೆಗಳಿರ ಬೇಕು. ಇವೆಷ್ಟು ಒಂದು system ನ ಪ್ರಾಪರ್ಟಿಗಳು.
    ಇದರಂತೆ ಯಾವುದನ್ನೇ ಆದರೂ ನಾವು ಸಿಸ್ಟಂ ಎಂದು ಹೇಳಬೇಕಾದರೆ ಈ ಎಲ್ಲಾ ಪ್ರಾಪರ್ಟಿಗಳೂ ಅದರಲ್ಲಿ ಇರಲೇಬೇಕು. ಇವುಗಳಲ್ಲೆ ಯಾವುದೋ ಒಂದು ಇದ್ದರೆ ಆಗದು; ಇವೆಲ್ಲವೂ ಇರಲೇ ಬೇಕು. ಉಧಾ H2 ಮಾತ್ರ ಅಥವಾ O1 ಮಾತ್ರ ಇದ್ದರೆ, ಅಥವಾ ಅಂದರೆ H1, O1 ಮಾತ್ರ ಇದ್ದರೆ ಹೇಗೆ ನೀರಾಗಲಾರದೋ ಹಾಗೆ.
    ಈಗ ಜಾತಿಗಳಿಗೆ ಸಂಬಂಧಿಸಿದಂತೆ ನೋಡುವುದಾದರೆ, ಘಟಕ (unit), ನಿರಂತರ interaction ಮತ್ತು interrelation (ಸಾಮಾನ್ಯವಾಗಿ hierarchical ಆದ) , ಘಟಕಗಳೆಲ್ಲವನ್ನೂ ಒಳಗೊಂಡ ಒಂದು ಎಲ್ಲೆ (Boundary), ನಿಯಮಗಳು (Rules) , ಆ ನಿಯಮಗಳನ್ನು ರೂಪಿಸಿ, ಅರ್ಥೈಸಿ, ಜಾರಿಗೊಳಿಸುವ ಅಧಿಕಾರವ್ಯವಸ್ಥೆಗಳಿವೆಯೇ? ನಮ್ಮ ಉತ್ತರ ನಕಾರಾತ್ಮಕವಾಗಿದೆ. ಹಾಗಿದ್ದರೂ ಇದುವರೆಗಿನ ಚಿಂತಕರು “ಕಾಸ್ಟ್ ಸಿಸ್ಟಂ” ಎಂದು ಹೇಳಿರುವ ಕಲ್ಪಿತ system ಗೆ ಏನೇನು (ಕಲ್ಪಿತ) ಪ್ರಾಪರ್ಟಿಗಳಿವೆ ಹಾಗೂ ಆರೋಪಿಸಲಾದ ಪ್ರಾಪರ್ಟಿಗಳು ಸರಿಯಾದ ವಿವರಣೆಯೇ? ಎಂಬುದನ್ನು ಈ ಕೆಳಗಿನಂತೆ ಗುರುತಿಸೋಣ.
    1) ಘಟಕಗಳು = ಜಾತಿಗಳು ಎನ್ನಬಹುದಾದರೂ ಅದರಲ್ಲಿ ತಾರ್ಕಿಕ ಸಮಸ್ಯೆ ಇದೆ. ಅದೇನೆಂದರೆ, ಉಪಜಾತಿಗಳು ಈ ಘಟಕಗಳ ಉಪಘಟಕಗಳಾಗುತ್ತವೆ. ಆದರೆ ಜಾತಿಗೆ ಯಾವ ಪ್ರಾಪರ್ಟಿಗಳನ್ನು ಗುರ್ತಿಸುತ್ತಾರೋ ಅದೇ ಪ್ರಾಪರ್ಟಿಗಳನ್ನೇ ಉಪಜಾತಿಗಳಿಗೂ ಗುರುತಿಸುತ್ತಾರೆ. ಹಾಗಾಗಿ ಜಾತಿ ಮತ್ತು ಉಪಜಾತಿಗಳ ಕುರಿತ ವಿವರಣೆಯಲ್ಲಿ ಸ್ಪಷ್ಟತೆ ಇಲ್ಲ. ಹೇಳಬೇಕೆಂದರೆ ಜಾತಿಗಳ ಪ್ರಾಪರ್ಟಿ ಎಂದು ಗುರುತಿಸುವ ಪ್ರಾಪರ್ಟಿಗಳೆಲ್ಲವೂ ಉಪಜಾತಿಗಳೆಂದು ಗುರುತಿಸುವ ಘಟಕಗಳಿಗೆ ಮಾತ್ರವೇ ಅನ್ವಯವಾಗುತ್ತವೆ.
    2) interaction and Inter-relation = ಶ್ರೇಣೀಕೃತ ಸಂಬಂಧ ಎನ್ನುತ್ತಾರೆ. ಒಂದು ವ್ಯವಸ್ಥೆಯಲ್ಲಿ ಒಂದು ಘಟಕದ ಸ್ಥಾನ ಅಲ್ಲಿಯ ನಿಯಮಗಳಿಂದ ನಿರ್ಧಿಷ್ಟ ಪಡಿಸಲಾಗಿರುತ್ತದೆ. ಆ ಸ್ಥಾನಮಾನಕ್ಕೆ ತಕ್ಕ ಹಾಗೆ ಉಳಿದ ಘಟಕಗಳೊಂದಿಗಿನ ಈ ಘಟಕದ ಸಂಬಂಧದ ಸ್ವರೂಪ ನಿರ್ಣಯವಾಗುತ್ತದೆ. ಜಾತಿಗಳ ಸಂಧರ್ಭದಲ್ಲಿ ಈ ರೀತಿಯ ನಿಯಮಗಳು ಎಲ್ಲಿವೆ ಇದನ್ನು ಜಾತಿಗಳು ಹೇಗೆ ಅರಿತು ನಿರ್ಣಯಿಸಿಕೊಂಡು ವ್ಯವಹರಿಸುತ್ತವೆ? ಸ್ಪಷ್ಟವಿಲ್ಲ. ಶ್ರೇಣೀಕೃತವಾಗಿ ಜೋಡಣೆ ಗೊಂಡಿವೆಯೇ ಜಾತಿಗಳು?ಉತ್ತರಗಳು ವ್ಯತಿರಿಕ್ತ: ಒಬ್ಬೊಬ್ಬರು ಒಂದೊಂದು ರೀತಿ ಜೋಡಿಸುತ್ತಾರೆ; ಕೆಲವರು ಪ್ರಶ್ನೆಯೇ ತಪ್ಪಾದುದು ಎಂಬಂತೆ ಪ್ರತಿಕ್ರಿಯಿಸುತ್ತಾರೆ; ಒಂದೊಮ್ಮೆ ವ್ಯವಸ್ಥೆಯಾಗಿದ್ದರೆ ಗೊಂದಲಗಳಿಲ್ಲದೇ ಹೇಳಲು ಸಾಧ್ಯವಾಗಬೇಕಿತ್ತು. ನಮ್ಮ ಯಾವುದೇ ವ್ಯವಸ್ಥೆಯಲ್ಲಿ ಈ ರೀತಿಯ ಗೊಂದಲಗಳಿರುವುದನ್ನು ಕಾಣಲು ಸಾಧ್ಯವಿಲ್ಲ. ಪೋಲೀಸ್ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಇತ್ಯಾದಿ..
    3) ಎಲ್ಲೆ= ಹಿಂದೂ ರಿಲಿಜನ್. ಅಸ್ಪಷ್ಟವಾಗಿ ಘಟಕಗಳಾದ ಜಾತಿ/ಉಪಜಾತಿಗಳಿಗೆ ಎಲ್ಲೆಗಳಿವೆ ಎನ್ನಬಹುದು(ಆಯಾ ಜಾತಿ/ಉಪಜಾತಿಗಳಿಗೆ ಸೇರಿರುವ ಜನರನ್ನು ಮಾತ್ರ ಈ ಎಲ್ಲೆ ಒಳಗೊಂಡಿರುತ್ತದೆ) ಎಂದಾದರೂ ಈ ಎಲ್ಲಾ ಘಟಕಳನ್ನೂ ಒಳಗೊಂಡ Boundary ಯಾವುದು? ಚಿಂತಕರ ವಿವರಣೆಯನ್ನು ನೋಡಿದರೆ ಹಿಂದೂ ರಿಲಿಜನ್ ಆ Boundary ಎನ್ನುವ ಹಾಗೆ ಕಾಣುತ್ತದೆ. ಅಂದರೆ ಹಿಂದೂ ರಿಲಿಜನ್ ಇದ್ದರೆ ಮಾತ್ರ ಈ ಜಾತಿಗಳೆಲ್ಲ ಸೇರಿ ಒಂದು system ಆಗುತ್ತದೆ. ವಿಪರ್ಯಾಸವೆಂದರೆ ಹಿಂದೂ ರಿಲಿಜನ್ (ಹಿಂದೂಯಿಸಂ ಎಂಬ ರಿಲಿಜನ್‌ ಇದೆ ಎಂಬ ನಂಬಿಕೆಯನ್ನು ಎಲ್ಲಾ ವಲಯಗಳಲ್ಲಿ ಹರಡಲಾಗಿದೆ) ಇಲ್ಲದೇ ಹೋದರೆ ಈ ಎಲ್ಲಾ ಜಾತಿಗಳು ಸೇರಿ ಒಂದು ಸಿಸ್ಟಂ ಆಗುವುದಿಲ್ಲ ಮಾತ್ರವಲ್ಲ; ಈ ಜಾತಿಗಳೂ ಘಟಕಗಳಾಗಿರಲು ಸಾಧ್ಯವಿಲ್ಲ. ಅಂದರೆ ಯಾವುದಕ್ಕೆ ಇವು ಘಟಕಗಳು ಎನ್ನುವ ಪ್ರಶ್ನೆ ಉಳಿಯುತ್ತದೆ.
    4)ನಿಯಮಗಳು= ಹಿಂದೂ ರಿಲಿಜನ್ ನ ಶಾಸ್ತ್ರಗಳು ಎನ್ನಲಾಗುತ್ತದೆ. ಸಾಮಾನ್ಯವಾಗಿ ಮನುಧರ್ಮಶಾಸ್ತ್ರ; ಪುರುಷಸೂಕ್ತ, ಭಗವಧ್ಗೀತೆ ಮುಂತಾದುವುಗಳನ್ನು ಉಲ್ಲೇಖಿಸಲಾಗುತ್ತದೆ. ಈ ಶಾಸ್ತ್ರಗಳಲ್ಲಿ ಇಂತಿತಹ ಜಾತಿಯವರು (ಸದ್ಯಕ್ಕೆ ವರ್ಣ ಮತ್ತು ಜಾತಿ ಒಂದೇ ಅಲ್ಲದಿದ್ದರೂ ಒಂದೇ ಎಂದು ಭಾವಿಸಿಕೊಳ್ಳುವ) ಹೀಗೆ ಹೀಗೆ ನಡೆದುಕೊಳ್ಳಬೇಕು ಎಂದಿವೆ ಎಂದಿಟ್ಟುಕೊಳ್ಳೋಣ. ಜಾತಿ ಎನ್ನುವ ಘಟಕಗಳಿಗೆ ನಿಯಮಗಳಾಗ ಬಲ್ಲವೇ? ಆಗದು ಏಕೆಂದರೆ ಯಾವುದೇ ನಿರ್ದೇಶನ ನಿಯಮವಾಗ ಬೇಕೆಂದರೆ ಅದಕ್ಕೆ ಮೂರು ಪ್ರಾಪರ್ಟಿಗಳಿರಲೇಬೇಕು:
    1. ನಿಯಮಗಳನ್ನು ರೂಪಿಸುವ ಅಧಿಕಾರ ಇರುವ ಸಂಸ್ಥೆ
    2. ಜಾರಿಗೊಳಿಸುವ ಸಂಸ್ಥೆ.
    3. ಉಲ್ಲಂಘಿಸುವವರನ್ನು ಶಿಕ್ಷಿಸುವ ಸಂಸ್ಥೆ ಇರಬೇಕು.
    ಈ ಮೂರರಲ್ಲಿ ಒಂದಿಲ್ಲವೆಂದರೂ ಅದಕ್ಕೆ ನಿಯಮದ ಸ್ವರೂಪ ಬರುವುದಿಲ್ಲ (ಆಟದ ನಿಯಮಗಳಿಂದ ಚರ್ಚಿನ ನಿಯಮಗಳವರೆಗೂ ನೀವು ಉಧಾ. ತೆಗೆದು ಕೊಂಡು ಪರೀಕ್ಷಿಸಬಹುದು). ಆದರೆ ಧರ್ಮಶಾಸ್ತ್ರಗಳಲ್ಲಿ ಯಾರೋ ಒಬ್ಬ ಅವರು ಹೀಗೆ ಇರಬೇಕು; ಇವರು ಹಾಗೆ ಇರಬೇಕು ಎನ್ನುವಂತೆ ಬರೆದು ಬಿಟ್ಟರೆ ಅದು ನಿಯಮವಾಗುತ್ತದೆಯೇ? ಜನರ ಜೀವನದಲ್ಲಿ ಜಾತಿ ಜಾತಿ ಗಳೊಟ್ಟಿಗೆ ಮತ್ತು ಜಾತಿಗಳೊಳಗೆ ವ್ಯವಹರಿಸುವಾಗ ಯಾರು ಈ ನಿಯಮಗಳನ್ನು ಪಾಲಿಸುತ್ತಾರೆ/ಪಾಲಿಸುತ್ತಿದ್ದಾರೆ; ಅದನ್ನು ಜಾರಿಗೊಳಿಸುವವರು ಯಾರು? ಉಲ್ಲಂಘಿಸುವವರಿಗೆ ಶಿಕ್ಷೆ ಕೊಡುವವರು ಯಾರು? ಇದು ವಾಸ್ತವ ಜಗತ್ತಿನಲ್ಲಿ ಸಹಜವಾಗಿ ಕಾಣುವುದಿಲ್ಲ. ಸಾಮಾನ್ಯವಾಗಿ ಕೆಲವು ಚಿಂತಕರು ಬ್ರಾಹ್ಮಣ ಪುರೋಹಿತಶಾಹಿ ಎನ್ನುತ್ತಾರೆ. ವಾಸ್ತವದಲ್ಲಿ (ನಿಮ್ಮ ಅನುಭವದಲ್ಲಿ) ಬ್ರಾಹ್ಮಣರಿಗೆ ಅಂತಹ ಅಧಿಕಾರ (ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ) ಇದೆಯೇ? ಸಾಧ್ಯವೇ ಇಲ್ಲ. ಆದರೆ ಮುಸ್ಲೀಂ ಸಮುದಾಯ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಈ ರೀತಿಯ ನಿಯಮಗಳಿರುವುದನ್ನು, ಪಾಲಿಸುವುದನ್ನು, ಮತ್ತು ಉಲ್ಲಂಘಿಸಿದವರಿಗೆ ಶಿಕ್ಷಿಸುವ ವ್ಯವಸ್ಥೆಯನ್ನು ನೋಡಬಹುದು.
    ಈ ನೆಲೆಯಲ್ಲಿ ಜಾತಿ ವ್ಯವಸ್ಥೆಯ ಪ್ರಾಪರ್ಟಿಯನ್ನು ಸಮಾಜದಲ್ಲಿ ಗುರುತಿಸಲು ಸಾಧ್ಯವೇ ಆಗುವುದಿಲ್ಲ!!! ಅಂದಮೇಲೆ “ಜಾತಿ ವ್ಯವಸ್ಥೆ” ಭಾರತದಲ್ಲಿ ಅಸ್ತಿತ್ವದಲ್ಲಿ ಇದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಿದ್ದರೂ ಏಕೆ ಇದುವರೆಗೂ ಅದನ್ನೇ ಪುನರುಚ್ಛರಿಸಲಾಗುತ್ತಿದೆ. ಅಥವಾ ಪ್ರಶ್ನೆಯನ್ನು ಬೇರೆ ರೀತಿ ಇಡುವುದಾದರೆ, “ಜಾತಿವ್ಯವಸ್ಥೆ“ಯ ಸೃಷ್ಟಿಯಲ್ಲಿ ಪಾಶ್ಚಾತ್ಯರ ಪಾತ್ರವೇನು?
    ಈ ಪ್ರಶ್ನೆಗೆ ಸರಳವಾಗಿ ಉತ್ತರಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಎಲ್ಲಾ ಸಂಸ್ಕೃತಿಗಳಲ್ಲಿಯೂ ರಿಲಿಜನ್ಇರುತ್ತದೆ; ರಿಲಿಜನ್ನಿನ ಸ್ಕ್ರಿಪ್ಚರ್ಗಳಲ್ಲಿ ಆ ಸಂಸ್ಕೃತಿಯ ಜನರು ಹೇಗೆ ಜೀವಿಸಬೇಕು, ಹೇಗೆ ಜೀವಿಸಬಾರದು ಎಂಬುದರ ಕುರಿತು ಹೇಳಲಾಗಿರುತ್ತದೆ; ಅದನ್ನು ರಿಲಿಜನ್ನಿನಲ್ಲಿರುವ ಪ್ರೀಸ್ಟ್ವರ್ಗದವರು ಅರ್ಥೈಸುವ, ಜನರಿಗೆ ತಲುಪಿಸುವ (ಜಾರಿಗೊಳಿಸುವ) ಅಧಿಕಾರವನ್ನು ಮತ್ತು ತಪ್ಪಿನಡೆಯುವವರಿಗೆ ಶಿಕ್ಷೆ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ ಎಂಬುದನ್ನು ಯೂರೋಪಿಯನ್ನರು ಮೂಲತಃ ನಂಬಿಕೊಂಡಿದ್ದರು. ಅಲ್ಲದೇ ಅಲ್ಲಿಯ/ಯೂರೋಪಿನ ಸಾಮಾಜಿಕ ರಚನೆ ಕೂಡ ಹಾಗೆಯೇ ಇತ್ತು. ಪ್ರೀಸ್ಟ್ ವರ್ಗವು ಸಮಾಜದ ಉನ್ನತ ಸ್ಥಾನವನ್ನು ಅಲಂಕರಿಸಿದರೆ, ಪ್ರಭುತ್ವ/ರಾಜ ಆತನ ಕೆಳಗಿನ ಸ್ಥಾನವನ್ನು, ನಂತರ ಉಳಿದ ವರ್ಗದವರು, ಕೊನೆಯಲ್ಲಿ ಗುಲಾಮರು. ಇಂತಹ ನಂಬಿಕೆ, ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ ಯೂರೋಪಿಯನ್ನರು ಭಾರತದಲ್ಲಿ ಹಿಂದೂಯಿಸಂ ಮತ್ತು ಜಾತಿವ್ಯವಸ್ಥೆಯ ಸೃಷ್ಟಿಗೆ ಕಾರಣರಾದರು. ಹಾಗೆಂದ ಮಾತ್ರಕ್ಕೆ ಅವುಗಳನ್ನು ಅಲ್ಲಿಂದ ಹಿಡ್ಕೊಂಡು ಬಂದರು ಎಂದಾಗಲೀ, ಇಲ್ಲಿ ಮಣ್ಣಿನ ಗೊಂಬೆಯನ್ನು ಸೃಷ್ಟಿಸಿದಂತೆ ಸೃಷ್ಟಿಸಿದರೂ ಎಂದಾಗಲೀ ಅರ್ಥವಲ್ಲ. ಭಾರತೀಯ ಸಮಾಜವನ್ನು ನಿರ್ಧಿಷ್ಟವಾಗಿ ಹಾಗೆಯೇ/ಅವರದೇ ಸಾಂಸ್ಕೃತಿಕ ಚೌಕಟ್ಟುನಲ್ಲಿ ಅರ್ಥಮಾಡಿಕೊಂಡರು(ಗಮನಿಸಬೇಕಾದ ಅಂಶವೆಂದರೆ ಉದ್ದೇಶಪೂರ್ವಕವಾಗಿ ಯೂರೋಪಿಯನ್ನರು ಈ ರೀತಿ ಮಾಡಿರುವುದಲ್ಲ). ಆ ಚೌಕಟ್ಟೇ ಹಿಂದೂಯಿಸಂ ಮತ್ತು ಜಾತಿವ್ಯವಸ್ಥೆ. ಹೇಗಿರಬಹುದು?
    ಭಾರತಕ್ಕೆ ಬೇಟಿನೀಡಿದ ಯೂರೋಪಿಯನ್ನರಿಗೆ ಇಲ್ಲಿನ ಸಂಸ್ಕೃತಿ ಆರಂಭದಲ್ಲಿ ವಿಚಿತ್ರವೆನಿಸಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಲ್ಲಿನ ಜನರ ಆಚರಣೆ, ಜೀವನ ವಿಧಾನಗಳು ನಿಜವಾದ ರಿಲಿಜನ್ನಿನ ತತ್ವಗಳಿಂದ ಪ್ರೇರಿತವಾದಂತೆ ಕಾಣಿಸಲಿಲ್ಲ. ಆಗ ಅವರು ಇಲ್ಲಿನ ರಿಲಿಜನ್ನು ಭ್ರಷ್ಟಗೊಂಡಿದೆ ಎಂಬ ತೀರ್ಮಾನಕ್ಕೆ ಬಂದರು ಮಾತ್ರವಲ್ಲ ಅವರನ್ನು ಸರಿಮಾರ್ಗಕ್ಕೆ ಕೊಂಡೊಯ್ಯುವುದು ನಾವು ಇವರಿಗೆ ಮಾಡುವ ಉಪಕಾರವೆಂದು ಭಾವಿಸಿದರು. ಅದೇ ಸಂದರ್ಭದಲ್ಲಿ ಅವರ ಗಮನಕ್ಕೆ ಬಂದುದೆಂದರೆ, ಇಲ್ಲಿ ಹಲವು ಜಾತಿಗಳು, ಪಂಗಡಗಳು ಅಸ್ತಿತ್ವದಲ್ಲಿದ್ದುದು, ಹಾಗೆಯೇ ಕ್ರೈಸ್ತ ಮಿಶನರಿಗಳು ಕನ್ವರ್ಶನ್ ಮಾಡಲು ಯಶಸ್ವಿಯಾದ ಕೆಲವು ಜಾತಿಯ ಜನರು ಕನ್ವರ್ಶನ್ ನಂತರವೂ ತಮ್ಮ ಹಳೆಯ ಜಾತಿಯ ಆಚರಣೆಗಳನ್ನು ಮುಂದುವರೆಸುತ್ತಿದ್ದುದು. ಆಗ ಅವರು ಜಾತಿಯ ಕಟ್ಟುಪಾಡುಗಳು/ನಿಯಮಗಳು ತುಂಬಾ ರಿಜಿಡ್ ಆಗಿದ್ದು, ಅದನ್ನು ಮುರಿದರೆ ಶಿಕ್ಷೆ ವಿಧಿಸುವ ಅಧಿಕಾರಶಾಹಿ ಇರಬೇಕು, ಜಾತಿಗಳೆಲ್ಲ ವ್ಯವಸ್ಥಿತ ವಾಗಿ ಜೋಡಣೆಯಾಗಿದ್ದು, ನಿರ್ದಿಷ್ಟ ನಿಯಮಗಳನ್ನು ರೂಪಿಸಲಾಗಿದೆ ಎಂದು ಭಾವಿಸಿದರು. ಆಗ ಅಂತಹ ನಿಯಮಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿದರು. ಅದರ ಪ್ರತಿಫಲವಾಗಿ ಮನುಧರ್ಮಶಾಸ್ತ್ರವೇ ಹಿಂದೂ ಭ್ರಷ್ಟ ಕಾನೂನುಗಳೆಂದೂ, ಮನು ಜಾತಿ ವ್ಯವಸ್ಥೆಯ ನಿರ್ಮಾತೃ ಎಂದು ಅರ್ಥೈಸಿ ವಿವರಿಸಿದರು. ಈ ರೀತಿಯ ವಿವರಣೆಯೇ, ಮುಂದಿನ ಸಮಾಜ ಶಾಸ್ತ್ರೀಯ ಚಿಂತಕರು ಸಿದ್ಧಾಂತಗಳೆಂದು ಮಂಡಿಸಿದರು, ಸುಧಾರಣಾ ಚಳುವಳಿಕಾರರು ಇಂತಹ ವ್ಯವಸ್ಥೆಯನ್ನು ನಾಶಪಡಿಸಬೇಕೆಂದು ಹೊರಟರು. ಅಲ್ಲದೇ ಈ ವ್ಯವಸ್ಥೆಯೇ ಭಾರತೀಯ ಸಾಮಾಜಿಕ ರಚನೆಯೆಂದು ನಿರೂಪಿಸಲ್ಪಟ್ಟಿತು. ಇದರ ಪರಿಣಾಮವಾಗಿ ಸಮಾಜದ ಎಲ್ಲಾ ಅನಿಷ್ಟಗಳಿಗೂ ಈ ಇಲ್ಲದ ವ್ಯವಸ್ಥೆಯನ್ನೇ ಕಾರಣವೆಂದು ಕೈ ಮಾಡಿ ತೋರಿಸಿದರು. “ಜಾತಿವ್ಯವಸ್ಥೆ”ಯ ಸೃಷ್ಟಿಯಲ್ಲಿ ಪಾಶ್ಚಾತ್ಯರು ಇಂತಹ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಜಾತಿಗಳ ನಡುವೆ ತಾರತಮ್ಯ(ಮೇಲು-ಕೀಳು) ಇಲ್ಲವೇ/ಇರಲಿಲ್ಲವೇ? ಸಮಾಜದಲ್ಲಿ ಶೋಷಣೆ ಇಲ್ಲವೇ/ಇರಲಿಲ್ಲವೇ? ಅಸ್ಪೃಶ್ಯತೆ ಇಲ್ಲವೇ/ಇರಲಿಲ್ಲವೇ? ಎಂಬ ಪ್ರಶ್ನೆಗಳು ಎದುರಾಗುತ್ತವೆ.
    ಇವುಗಳು ಈಗಲೂ ಇಲ್ಲ ಹಿಂದೆಯೂ ಇರಲಿಲ್ಲ ಎಂಬ ಕುರುಡುತನವನ್ನು ಪ್ರದರ್ಶಿಸುವುದಿಲ್ಲ. ಆದರೆ ಇವುಗಳಿಗೂ ಇಲ್ಲದ “ಜಾತಿವ್ಯವಸ್ಥೆ”ಗೂ ಸಂಬಂಧವಿಲ್ಲ. ಇದುವರೆಗಿನ ಚಿಂತಕರು ಮೇಲಿನ ಸಂಗತಿಗಳಿಗೆಲ್ಲಾ ಜಾತಿವ್ಯವಸ್ಥೆಯೇ ಕಾರಣ, ಅದನ್ನು ನಾಶಮಾಡದ ಹೊರತು ಈ ಸಮಸ್ಯೆಗಳಿಗೆ ಪರಿಹಾರವಿಲ್ಲ ಎಂದು ಹೇಳುತ್ತಾ ಬರುತ್ತಿದ್ದಾರೆ. ಹಾಗಾಗಿ ಈ ಸಂಗತಿಗಳನ್ನು/ಸಮಸ್ಯೆಗಳನ್ನು ಬೇರೆ ರೀತಿಯಲ್ಲಿ ಅಧ್ಯಯನಕ್ಕೆ ಒಳಪಡಿಸುವ ಅವಶ್ಯಕತೆ ಇದೆ ಎಂಬುದನ್ನಷ್ಟೆ ನಮ್ಮ ಸಂಶೋಧನೆ ಗುರುತಿಸುತ್ತಿರುವುದು. ಈ ಯಾವ ಸಂಗತಿಗಳೂ ಯೂರೋಪಿನಿಂದ ಬಂದ ಸರಕುಗಳೆಂದು ಹೇಳುತ್ತಿಲ್ಲ, ಹಾಗೂ ಸಮಾಜದಲ್ಲಿಲ್ಲದ ಸಂಗತಿಗಳೆಂದು ನಿರಾಕರಿಸುತ್ತಿಲ್ಲ.
    ಕೆಲವೊಬ್ಬರು ಪ್ರಾಮಾಣಿಕವಾಗಿ ಪ್ರಶ್ನೆಗಳನ್ನು ಎತ್ತುತ್ತಿರುವವರನ್ನು ಗಮನದಲ್ಲಿಟ್ಟುಕೊಂಡಿದ್ದು, ಅವರ ಪ್ರಶ್ನೆಗಳನ್ನು/ ಗೊಂದಲಗಳನ್ನು ಬಿಡಿಸುವ ಸಣ್ಣ ಪ್ರಯತ್ನವಾಗಿದೆ. ಬಾಲುರವರ ಪುಸ್ತಕಗಳಲ್ಲಿ ವಿಸ್ತ್ರತವಾಗಿರುವುದನ್ನು ಈ ರೀತಿಯಾಗಿ ಸರಳೀಕರಿಸಿ ಇಡಲಾಗಿದೆ. ಆ ಪುಸ್ತಕಗಳನ್ನು ಓದುವ ಮೂಲಕ ಸಂಪೂರ್ಣ ವಿಚಾರವನ್ನು ತಿಳಿಯುವುದು ಉತ್ತಮ. ಈ ಕುರಿತು ಪ್ರಶ್ನೆಗಳಿದ್ದರೆ, ಚರ್ಚೆಯನ್ನು ಮುಂದುವರೆಸಲು ಸದಾ ಸಿದ್ಧರಾಗಿದ್ದೇವೆ.

    • NAGESHA B

      ನಿಮ್ಮ ಪ್ರಶ್ನೆಯೇ ಸರಿಯಿಲ್ಲ ನೀವು ನಮ್ಮ ರೀತಿ ಯೋಚನೆ ಮಾಡಿ ಅಂತಾರೆ ಸರ್, ಮುಂದೇನು ವಾದ ಮಾಡೋದು?

  8. DR. KIRAN .M GAJANUR

    ಸಿ ಪಿ ನಾಗರಾಜ
    ಕಥೆಗಳು ನಮಗೂ ನೆನಪಾಗುತ್ತವೆ ಅದಕ್ಕೆ ಕಾರಣವು ಇದೆ ನಮ್ಮ ಕಾಲದ ಪ್ರಗತಿಪರ ಚಿಂತಕರು ಸಿಧ್ದಾಂತಗಳನ್ನು ರಚಿಸದೆ ಕಥೆಗಳನ್ನು ರಚಿಸಿ ಅವೇ ಸಿದ್ದಾಂತ ಎಂದು ನಮ್ಮನ್ನು ನಂಬಿಸಿದ್ದಾರೆ ಮತ್ತು ನುರಾರು ವರ್ಷಗಳಿಂದ ನಾವು ಅದನ್ನೆ ನಂಬಿದ್ದೇವೆ ಈಗ ಒಬ್ಬ ಚಿಂತಕ ಬಂದು ನೊಡಿ ಸಿದ್ದಾಂತ ಹೀಗಿರುತ್ತದೆ ಇದರ ಮೂಲಕ ನಾವು ಸತ್ಯವನ್ನು ವಾಸ್ತವವನ್ನು ಗ್ರಹಿಸಬೇಕು ಎಂದರೆ. . ? ನುರಾರು ವರ್ಷ ಕಥೆಗಳನ್ನೆ ಸಿದ್ದಾಂತಗಳೆಂದು ನಂಬಿಸಿ ಬೆಳೆ ಬೆಯಿಸಿಕೊಂಡ ಮತ್ತು ನೂರಾರು ಪ್ರಶಸ್ಥಿಗೆ ಭಾಜಕರಾದವರ ಪರಿಸ್ಥತಿ ಹೇಗಾಗಬೇಡ ಅವರಿಗೆ ಸಿದ್ದಾಂತ ಬೇಡ ತಾವು ಹೇಳಿರುವ ಕಥೆಗಳೇ ಸತ್ಯ ಎಂದು ಸಾಧಿಸುವ ಕ್ಷಣಿಕ ಸುಖ ಬೇಕು. . .ಹಾಗಾಗಿ ತಾವು ಮತ್ತೆ ಕಥೆಯನ್ನೆ ಹೇಳಿ ನಮ್ಮನ್ನು ನಂಬಿಸಲು ಪ್ರಯತ್ನಿಸಬೇಡಿ ೨೫ ವರ್ಷಗಳಿಂದ ಕೇಳಿ ಕೇಳಿ ಸಾಕಾಗಿದೆ… ನಮ್ಮ ಸಿದ್ದಾಂತವನ್ನು ಪ್ರಶ್ನಿಸುವ ಮೂಲಕ ಅದನ್ನು ವಿಮರ್ಶಿಸುವ ಮೂಲಕ ಒಂದು ಆರೋಗ್ಯಕರ ಚರ್ಚೆಯನ್ನು ಮಾಡಲು ಪ್ರಯತ್ನಸಿ. . .

  9. C P NAGARAJA

    ” ಧರ್ಮಶಾಸ್ತ್ರಗಳಲ್ಲಿ ಯಾರೋ ಒಬ್ಬ ಅವರು ಹೀಗೆ ಇರಬೇಕು; ಇವರು ಹಾಗೆ ಇರಬೇಕು ಎನ್ನುವಂತೆ ಬರೆದು ಬಿಟ್ಟರೆ ಅದು ನಿಯಮವಾಗುತ್ತದೆಯೇ? ಜನರ ಜೀವನದಲ್ಲಿ ಜಾತಿ ಜಾತಿ ಗಳೊಟ್ಟಿಗೆ ಮತ್ತು ಜಾತಿಗಳೊಳಗೆ ವ್ಯವಹರಿಸುವಾಗ ಯಾರು ಈ ನಿಯಮಗಳನ್ನು ಪಾಲಿಸುತ್ತಾರೆ/ಪಾಲಿಸುತ್ತಿದ್ದಾರೆ; ಅದನ್ನು ಜಾರಿಗೊಳಿಸುವವರು ಯಾರು? ಉಲ್ಲಂಘಿಸುವವರಿಗೆ ಶಿಕ್ಷೆ ಕೊಡುವವರು ಯಾರು? ಇದು ವಾಸ್ತವ ಜಗತ್ತಿನಲ್ಲಿ ಸಹಜವಾಗಿ ಕಾಣುವುದಿಲ್ಲ. ………………… ಈ ನೆಲೆಯಲ್ಲಿ ಜಾತಿ ವ್ಯವಸ್ಥೆಯ ಪ್ರಾಪರ್ಟಿಯನ್ನು ಸಮಾಜದಲ್ಲಿ ಗುರುತಿಸಲು ಸಾಧ್ಯವೇ ಆಗುವುದಿಲ್ಲ!!! ಅಂದಮೇಲೆ “ಜಾತಿ ವ್ಯವಸ್ಥೆ” ಭಾರತದಲ್ಲಿ ಅಸ್ತಿತ್ವದಲ್ಲಿ ಇದೆ ಎಂದು ಹೇಳಲು ಸಾಧ್ಯವಿಲ್ಲ. ” ಈ ರೀತಿಯಲ್ಲಿ ತಮ್ಮ ವಾದವನ್ನು ಮಂಡಿಸುವವರು ಭಾರತೀಯ ಸಮಾಜದ ರಚನೆಯಲ್ಲಿ ಜಾತಿ ಮತ್ತು ಉಪಜಾತಿಗಳು ತಮ್ಮ ತಮ್ಮ ಪರಿಧಿಯೊಳಗೆ ಎಷ್ಟೊಂದು ಬಗೆಯ ಅಲಿಖಿತ ನಿಯಮಗಳನ್ನು ಪ್ರತಿ ಗಳಿಗೆಯಲ್ಲೂ ಆಚರಿಸುತ್ತಿವೆ ಎಂಬುದನ್ನು ಅಧ್ಯಯನ ಮಾಡಲಿ . ಜಾತಿ-ಉಪಜಾತಿ ಸಮುದಾಯಗಳ ಜನರ ನಿತ್ಯ ಜೀವನದ ಆಗುಹೋಗುಗಳಲ್ಲಿ ಕುಡಿಯುವ ನೀರಿನಿಂದ ಹಿಡಿದು ಬೆಂದ ಅನ್ನದವರೆಗೆ ಹಬ್ಬಿರುವ ನಿಯಮಗಳ ಕಡೆಗೆ ಒಮ್ಮೆ ನೋಡಿದರೆ ಸಾಕು ಪಾಲಿಸುವವರು ಯಾರು ? ಉಲ್ಲಘಿಸುವವರು ಯಾರು ? ಶಿಕ್ಷೆ ಕೊಡುವವರು ಯಾರು ಎಂಬುದು ನಮ್ಮೆಲ್ಲರಿಗೂ ತಿಳಿಯುತ್ತದೆ .
    ಸಿ ಪಿ ನಾಗರಾಜ ಬೆಂಗಳೂರು

  10. DR. KIRAN .M GAJANUR

    C P NAGARAJA ಈ ರೀತಿಯಲ್ಲಿ ತಮ್ಮ ವಾದವನ್ನು ಮಂಡಿಸುವವರು ಭಾರತೀಯ ಸಮಾಜದ ರಚನೆಯಲ್ಲಿ ಜಾತಿ ಮತ್ತು ಉಪಜಾತಿಗಳು ತಮ್ಮ ತಮ್ಮ ಪರಿಧಿಯೊಳಗೆ ಎಷ್ಟೊಂದು ಬಗೆಯ ಅಲಿಖಿತ ನಿಯಮಗಳನ್ನು ಪ್ರತಿ ಗಳಿಗೆಯಲ್ಲೂ ಆಚರಿಸುತ್ತಿವೆ ಎಂಬುದನ್ನು ಅಧ್ಯಯನ ಮಾಡಲಿ
    ನಾವು ಮಾಡುತ್ತಿರುವುದು ಅದನ್ನೆ ಜಾತಿಗಳ ಕುರಿತಾದ ಇದುವರೆಗಿನ ಸೈಂಧಾಂತಿಕ ನಿಲುವುಗಳಲ್ಲಿನ ಸಮಸ್ಯೆಗಳೇನು ಮತ್ತು ಭಾರತ ಸಮಾಜದ ಜಾತಿಗಳನ್ನು ಇಗಿರುವ ಸೈಂಧಾಂತಿಕ ಚೌಕಟ್ಟಿನ ಹೊರಗೆ ಹೇಗೆ ಅರ್ಥಮಾಡಿಕೊಂಡು ವಿವರಿಸಬೇಕು ಎಂಬುದೆ ನಮ್ಮ ಸಂಶೋಧನೆಯ ಮುಖ್ಯ ಗುರಿ ಈ ಕುರಿತಂತೆ ಈಗಾಗಲೇ ನನ್ನನ್ನು ಸೇರಿದಂತೆ ೪ ಜನರ ಪಿಹೆಚ್.ಡಿ ಅಧ್ಯಯನಗಳು ಆಗಿವೆ ದಯಮಾಡಿ ತಾವು ನಮ್ಮ ವಾದಗಳನ್ನು ನಮ್ಮ ವಾದಗಳ ಮೂಲಕವೆ ಗ್ರಹಿಸಲು ಪ್ರಯತ್ನಿಸಿ ಖಂಡಿತಾ ನಿಮಗೂ ಒಂದು ಹಂತದಲ್ಲಿ ಜಾತಿಯ ಕುರಿತಾದ ನಮ್ಮ ಇಗಿನ ಚಿಂತಕರ ರಾಜಕೀಯ ಸರಿತನದ ವಿವರಣೆಗಳ ಜಾಳುತನ ಅರ್ಥವಾಗುತ್ತದೆ.
    ಧನ್ಯವಾದಗಳು

Trackbacks/Pingbacks

  1. ಜುಗಾರಿ ಕ್ರಾಸ್ : ಜಿ ಎನ್ ನಾಗರಾಜ್ ಉತ್ತರಿಸುತ್ತಾರೆ « ಅವಧಿ / avadhi - [...] ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದರು ಹಾಗು ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಚರ್ಚೆಯ ಮುಂದಿನ ಭಾಗವಾಗಿ ಜಿ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading