ಬೆಂಗಳೂರಿನಲ್ಲಿ ಲಿಟರೇಚರ್ ಫೆಸ್ಟಿವಲ್ ಆರಂಭಗೊಂಡಿದೆ. ಅದು ಇಲ್ಲಿನ ನೆಲವನ್ನು, ಸಂಸ್ಕೃತಿಯನ್ನು, ಸಾಹಿತ್ಯವನ್ನು ಪ್ರತಿನಿಧಿಸುತ್ತಿದೆಯೆ ಎಂಬುದು ಜೋಗಿಯವರ ಪ್ರಶ್ನೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ.
ಜೋಗಿ
ಬೆಂಗಳೂರು ಲಿಟರೇಚರ್ ಫೆಸ್ಟಿವಲ್.. ಇದರಲ್ಲಿ ಬೆಂಗಳೂರು ಎಲ್ಲಿದೆ.. ಲಿಟರೇಚರ್ ಎಲ್ಲಿದೆ… ಫೆಸ್ಟಿವಲ್ ಎಲ್ಲಿದೆ…
ಕನ್ನಡದ ಮಾತು ಆಮೇಲೆ…







ಟಾರ್ಚು ಬಿಟ್ಟು ನೋಡಿದರೆ ನಾಲ್ಕು ಕನ್ನಡ ಸಾಹಿತಿಗಳು ಕಾಣಿಸ್ತಾರೆ….
ಕಳೆದ ಸಲ ಇದೇ ಕಾರ್ಯಕ್ರಮಕ್ಕೆ ಹೋದಾಗ ಹುಡುಗಿಯೊಬ್ಬಳು ಹೇಳುತ್ತಿದ್ಳು ಇಲ್ಲಿ ಮಾಮೂಲಿ ಜನ ಬರಲ್ಲ
ಇದು ನಾರ್ಮಲ್ ಪ್ರೋಗ್ರಾಮ್ ಅಲ್ಲ ಅಂತ
ಇದನ್ ಗಮನಿಸಿದ್ರೆ ಆಕೆ ಹೇಳಿದ್ದು ನಿಜವೇ ಅನ್ಸುತ್ತೆ
ಇದು ನಾರ್ಮಲ್ ಅಲ್ಲ ಅಂತ
ಜೋಗಿ, ಈ ಹಬ್ಬದ ಉದ್ಘಾಟನೆ ಮಾಡುತ್ತಿರೋದು ಕನ್ನಡಿಗ ಚಂದ್ರಶೇಖರ ಕಂಬಾರ. ಅಷ್ಟೇ ಅಲ್ಲ ಈ ಕೆಳಗಿನ ಕನ್ನಡ ಸಾಹಿತಿಗಳು ಮಾತನಾಡಲಿದ್ದಾರೆ:
Ashadevi
Bhagavan
C Naganna
C N Ramachandran
Chandrashekhara Kambara
Chinnappa Gowda
Giraddi Govindaraj
H S Venkatesh Murthy
Jayant Kodkani
Ramesh Halagali
M B Srinidhi
Mallepuram G Venkatesh
Mamta Sagar
M M Kalburgi
Narahalli Balasubrahmanya
Nissar Ahmed
Padekal Vishnu Bhat
Raghavendra M. K.
Rekha Vasanth
Rohini Nilekani
Roopa Pai
Siddalingaiah
U R Ananthamurthy
Usha K R
Vijayalakshmi Nagaraj
Viveka Rai
ನಾನು ನಿನ್ನೆ ಹೋಗಿದ್ದೆ.ಅನಂತಮೂರ್ತಿ ಸರ್ ಬಂದಿರಲಿಲ್ಲ. ಶ್ರೀಯುತ ಕಂಬಾರರು ಮಾತಾಡುವಾಗ ಇಪ್ಪತ್ತೆರಡು ಮಂದಿ ಇದ್ದರು. ಇರ್ಫಾನ್, ಪ್ರಸೂನ್ ಜೋಶಿ ಬಂದಾಗ ಕೋಟು ಹಾಕಿಕೊಂಡು ಸೂಟು ಹಾಕಿಕೊಂಡು ಡ್ರೆಸ್ಸು ಮಾಡಿಕೊಂಡು ಜನ ಬಂದು ಮುಗಿಬಿದ್ದರು. ರವಿಶಂಕರ್ ಗುರೂಜಿ ಕೂಡ ಇದ್ದರು.ಕನ್ನಡದ ಬಗ್ಗೆ ಅಲಕ್ಷ್ಯವಂತೂ ಎದ್ದು ಕಾಣಿಸಿತು. ಮುಜುಗರವಾಗಿ ಎದ್ದು ಬಂದೆ.
ಬೆಂಗಳೂರು == ಕನ್ನಡ ಎಂಬ ಸಮೀಕರಣವೇ ಸರಿ ಅಲ್ಲ. ಬೆಂಗಳೂರಿನಲ್ಲಿ ಕನ್ನಡಿಗರಷ್ಟೇ ಅಲ್ಲ ದೇಶದ ಬೇರೆ ಬೇರೆ ಕಡೆಯಿಂದ ಬಂದು ನೆಲಸಿರುವವರು ಇದ್ದಾರೆ. ಬೆಂಗಳೂರಿನ ಕನ್ನಡಿಗರೂ ಕನ್ನಡ ಸಾಹಿತ್ಯಕ್ಕಿಂತ ಆಂಗ್ಲ ಸಾಹಿತ್ಯವನ್ನೇ ಓದುವುದು. ಆದುದರಿಂದ ಬೆಂಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪು.
ದೇವಸ್ಥಾನಗಳಲ್ಲಿ ಇಸ್ಕೋನ್ ತರಹದ್ದು ಇದ್ದ ಹಾಗೆ ಇದೊ೦ದು ‘ನಾಟ್’ ಲಿಟರಲಿ ಫೆಸ್ಟಿವಲ್.
ಬೆಂಗಳೂರು ಲಿಟರೇಚರ್ ಫೆಸ್ಟಿವಲ್ನಲ್ಲಿ ಬೆಂಗಳೂರು, ಲಿಟರೇಚರ್ ಹಾಗೂ ಫೆಸ್ಟಿವಲ್ ಎಲ್ಲಿದೆ ಎನ್ನುವ ಕತೆಗಾರ ಜೋಗಿಯವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರಮ್ಮಿಗ ಎನ್ನುವವರು ಬೆಂಗಳೂರು ಕನ್ನಡ ಎನ್ನುವ ಸಮೀಕರಣವೇ ಸರಿಯಿಲ್ಲ, ಬೆಂಗಳೂರಿನಲ್ಲಿ ಬರೀ ಕನ್ನಡಿಗರು ಮಾತ್ರವಲ್ಲದೆ ಬೇರೆ ಭಾಷೆಯವರೂ ನೆಲಸಿದ್ದಾರೆ. ಅಷ್ಟಕ್ಕೂ ಬೆಂಗಳೂರಿನ ಕನ್ನಡಿಗರು ಕನ್ನಡ ಸಾಹಿತ್ಯಕ್ಕಿಂತ ಆಂಗ್ಲ ಸಾಹಿತ್ಯವನ್ನೇ ಹೆಚ್ಚಾಗಿ ಓದುವುದು. ಹಾಗಾಗಿ ಈ ಫೆಸ್ಟಿವಲ್ನಲ್ಲಿ ಕನ್ನಡಕ್ಕೆ ಹೆಚ್ಚನ ಪ್ರಾಮುಖ್ಯತೆ ನೀಡಬೇಕು ಎಂದು ನಿರೀಕ್ಷೆ ಇಟ್ಟುಕೊಳ್ಳುವುದು “ತಪ್ಪು” ಎಂದು ಹೇಳಿದ್ದಾರೆ. ಮತ್ತೊಂದು ಪ್ರತಿಕ್ರಿಯೆಯಲ್ಲಿ ಫೆಸ್ಟಿವಲ್ನಲ್ಲಿ ಭಾಗವಹಿಸುವ ಕನ್ನಡದ ಸಾಹಿತಿಗಳ ಪಟ್ಟಿಯನ್ನೂ ನೀಡಿದ್ದಾರೆ.
ರಮ್ಮಿಗರ ಇಡೀ ಪ್ರತಿಕ್ರಿಯೆ ಕೊಲವೇರಿ ತಲೆಮಾರಿನ ಯೋಚನೆಯ ಉತ್ಪನ್ನ. ಈ ತಲೆಮಾರಿಗೆ ಎಲ್ಲವೂ ಎಂಜಾಯ್ ಮಾಡುವಂತಹದ್ದೆ. ಹಾಗೇಯೇ ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ಕೂಡ. ಸಾಹಿತ್ಯಕ್ಕೆ ಆಧುನೀಕತೆಯ ಸ್ಪರ್ಶ ಸಿಕ್ಕಬೇಕು ನಿಜ. ಆದರೆ ಸಾಹಿತ್ಯದ ನಿಜವಾದ ಸ್ವಾದ ಇರುವುದು ಮೂಲಸತ್ವದಲ್ಲಿ ಎನ್ನುವುದನ್ನೇ ಮರೆತರೆ ಮರ ತನ್ನ ವಿಕಾಸಕ್ಕೆ ರೆಂಬೆಕೊಂಬೆಗಳು ಮಾತ್ರ ಸಾಕೆಂದು ತನ್ನ ಬೇರನ್ನು ನಿರ್ಲಕ್ಷಿಸಿದಂತಾಗುತ್ತದೆ.
ಬೆಂಗಳೂರು ಕನ್ನಡ ಎನ್ನುವ ಸಮೀಕರಣವೇ ಸರಿಯಿಲ್ಲ, ಬೆಂಗಳೂರಿನಲ್ಲಿ ಬರೀ ಕನ್ನಡಿಗರು ಮಾತ್ರವಲ್ಲದೆ ಬೇರೆ ಭಾಷೆಯವರೂ ನೆಲಸಿದ್ದಾರೆ, ಈ ಫೆಸ್ಟಿವಲ್ನಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ನಿರೀಕ್ಷೆ ಇಟ್ಟುಕೊಳ್ಳುವುದು “ತಪ್ಪು” ಎನ್ನುವುದು ಮುಂದೆ ಬೆಂಗಳೂರು ಕೇವಲ ಕನ್ನಡಿಗರದ್ದೆನ್ನುವುದನ್ನು, ಬೆಂಗಳೂರು ಕನರ್ಾಟಕಕ್ಕೆ ಸೇರಬೇಕು ಎನ್ನುವುದನ್ನು ಮುಂದೆ ಅಸಹನೆಯಿಂದ ನೋಡುವ ಮನಸ್ಥಿತಿಯ ಆರಂಭದಂತೆ ಕಾಣಿಸುತ್ತಿದೆ. ಬಹುಶಃ ಇದು ಮುಂದೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ರಮ್ಮಿಗರವರು ಇದನ್ನು ಬದಲಿಸಿಕೊಳ್ಳುವುದು ಒಳ್ಳೆಯದು ಹಾಗೂ ಮೂಲವನ್ನು ಪ್ರೀತಿಸುತ್ತಲೇ ನಿಂತ ಜಾಗವನ್ನು ಅಭಿಮಾನದಿಂದ ನೋಡುವುದನ್ನು ರೂಢಿಸಿಕೊಳ್ಳಬೇಕು.
ಜೋಗಿಯವರು ಓರ್ವ ಕತೆಗಾರರಾಗಿ ಬೆಂಗಳೂರು ಲಿಟರೇಚರ್ ಫೆಸ್ಟಿವಲ್ನ ಆಹ್ವಾನ ಪತ್ರಿಕೆ ನೋಡಿಯೇ ಇದು ಹೇಗಿರಬಹುದು ಎಂದು ಊಹಿಸಿದ್ದಾರೆನಿಸುತ್ತದೆ.ಬೆಂಗಳೂರು ಲಿಟರೇಚರ್ ಫೆಸ್ಟಿವಲ್ನಲ್ಲಿ ಕನ್ನಡ ಇರಬೇಕು ಎಂದು ನಿರೀಕ್ಷಿಸುವುದು ತಪ್ಪು, ಬೆಂಗಳೂರಿನ ಬಹುತೇಕರು ಕನ್ನಡ ಸಾಹಿತ್ಯವನ್ನು ಓದುವುದಿಲ್ಲ ಎನ್ನಲು ಕಾರಣ ಅದು ನಡೆಯುತ್ತಿರುವ ಎಲೆಕ್ಟ್ರಾನಿಕ್ ಸಿಟಿ ಎಂಬ ಜಾಗದ ಮಹಿಮೆ ಇರಬಹುದು. ಜನರಿಂದ ಆಯ್ಕೆಯಾದ ಆಡಳಿತದ ಬದಲು ತಮ್ಮದೇ ಆದ ಒಂದು ಸ್ವಾಯತ್ತ ಆಡಳಿತ ಬೇಕು ಒತ್ತಾಯಿಸುವ ಪ್ರದೇಶದ ಹಮ್ಮು ಇಲ್ಲಿನ ಬಹುತೇಕರದ್ದು. ಮಾಲ್, ಕಾಕ್ಟೇಲ್ ಸಂಸ್ಕೃತಿ ಬಯಸುವ ರಮ್ಮಿಗರಂತವರಿಗೆ ಸಾಹಿತ್ಯವೂ ಕೂಡ ಅಂತಹದ್ದೇ ಒಂದು ಎನಿಸುವುದು ಅಸಹಜವೇನಲ್ಲ. ಆದರೆ ಜೋಗಿಯಂತವರಿಗೆ ಬೆಂಗಳೂರಲ್ಲದೆ ಎಲ್ಲಿಯೇ ಆಗಲಿ ಸಾಹಿತ್ಯ ಜಾತ್ರೆ ಎಂದರೆ ಅಲ್ಲಿ ತಾನಾಗಲಿ ಅಥವಾ ತಾನು ಓದಿ ಬೆಳೆದ ಯಾವುದೇ ಬರಹಗಾರರು ಭಾಗವಹಿಸುತ್ತಾರೆಂದರೆ ಅಲ್ಲಿ ಕನ್ನಡ ಇರಬೇಕು ಎಂದು ಬಯಸುತ್ತಾರೆ. ಅದು ಅವರು ತನ್ನ ಮೂಲವನ್ನು ಪ್ರೀತಿಸುವ ಪರಿ. ಹಾಗಾಗಿಯೇ ಬೆಂಗಳೂರು ಲಿಟರೇಚರ್ ಫೆಸ್ಟಿವಲ್ನ ಆಹ್ವಾನ ಪತ್ರಿಕೆಯಲ್ಲಿ ಆ ಮೂರು ಪದಗಳೂ ತನ್ನ ಸ್ವಾದವನ್ನು ಕಳೆದುಕೊಂಡಿರುವುದನ್ನು ಕಂಡಿದ್ದಾರೆ. ಅದು ಒಬ್ಬ ಲೇಖಕನ ಶಕ್ತಿಯೂ ಕೂಡ.
ಮೊದಲ ದಿನದಲ್ಲಿ ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದರೆ ಬಗ್ಗೆ ಇನ್ನು ಕೆಲವರು ಆಕ್ಷೇಪ ಎತ್ತಿದ್ದಾರೆ. ಅವರು ಪ್ರೀತಿಯಿಂದಲೇ ಅಲ್ಲಿಗೆ ಹೋಗಿದ್ದವರು. ತನ್ನ ಮನೆಯಲ್ಲಿ ತಾನು ಅನಾಥನಾಗುವುದನ್ನು ಯಾರೂ ನಿರೀಕ್ಷಿಸುವುದೂ ಇಲ್ಲ ಹಾಗೂ ಸಹಿಸುವುದೂ ಇಲ್ಲ.
ಲಿಂಗರಾಗು ಅವರೇ, ನನ್ನ ಬಗ್ಗೆ ತಮಗೆ ಬಹಳ ತಿಳಿದಿದೆ ಎಂದು ಕಾಣುತ್ತದೆ. ನಾನು ಬೆಂಗಳೂರು ಸಾಹಿತ್ಯೋತ್ಸವ ನಡೆಯುತ್ತಿದ್ದ ವೇಳೆಯಲ್ಲೇ ವಾರ್ತಾಭಾರತಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಸಿದ್ದರಾಮಯ್ಯ, ಅನಂತಮೂರ್ತಿ ಮೊದಲಾದ ಕನ್ನಡ ಗಣ್ಯರ ಮಾತುಗಳು ಕೇಳಿ ಸಂತೋಷಪಟ್ಟೆ.
aamanthrana patrike kuuda kannadadalli illave?