'ಜುಗಾರಿ ಕ್ರಾಸ್' ನಲ್ಲಿ ಗೋಧ್ರಾ ತೀರ್ಪು

‘ಜುಗಾರಿ ಕ್ರಾಸ್’ ಚರ್ಚೆಗಾಗಿ ಇರುವ ತಾಣ. ಈಗಾಗಲೇ ಹಲಾವಾರು ಮೌಲಿಕ ಚರ್ಚೆಗಳನ್ನು ಹುಟ್ಟುಹಾಕಿರುವ ನಾ ದಿವಾಕರ ಅವರು ಈ ಬಾರಿ ಗೋಧ್ರಾ ಪ್ರಕರಣದ ತೀರ್ಪನ್ನು ಚರ್ಚೆಗೆ ಎತ್ತಿಕೊಂಡಿದ್ದಾರೆ. ನಿಮ್ಮ ಅಭಿಪ್ರಾಯ ಮುಖ್ಯ. ಬನ್ನಿ ಚರ್ಚೆಯಲ್ಲಿ ಭಾಗವಹಿಸಿ ನ್ಯಾಯ ಬೇಕು ! ಯಾರಿಗೆ ? ಯಾರಿಂದ ? -ನಾ ದಿವಾಕರ್ ಮಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 20ಕ್ಕೂ ಹೆಚ್ಚು ಅಮಾಯಕರು ವಿಮೋಚನೆಯ ಕನಸು ಕಾಣುತ್ತಿದ್ದಾರೆ. ಹೈದರಾಬಾದ್ ಮಕ್ಕಾ ಮಸೀದಿಯ ಪ್ರಕರಣದಲ್ಲಿ ಬಂಧಿತರಾದ ಅನೇಕ ಯುವಕರು ಬಂಧಮುಕ್ತರಾಗಲು ಹಪಹಪಿಸುತ್ತಿದ್ದಾರೆ. ಸಂಜೋತ ಎಕ್ಸ್ಪ್ರೆಸ್ ದುರಂತದ ನಂತರ ಬಂಧಿತರಾದ ‘ ಶಂಕಿತ ‘ ಉಗ್ರರು ಈಗ ಬಿಡುಗಡೆಯ ಹಾದಿ ಎದುರುನೋಡುತ್ತಿದ್ದಾರೆ. ಕಾರಣ, ಈ ಪ್ರಕರಣಗಳಲ್ಲಿ ಇವರಾರೂ ಭಾಗಿಯಾಗಿರಲಿಲ್ಲ ಎಂಬ ಪುರಾವೆಗಳು ಈಗ ದೊರೆಯುತ್ತಿವೆ. ಅಪರಾಧಿಗಳು ಮತ್ತೆಲ್ಲೋ ಅಡಗಿದ್ದಾರೆ. ಈ ಪ್ರಕರಣಗಳ ಬೆನ್ನಲ್ಲೇ ಈಗ ಗೋದ್ರ ಘಟನೆಯೂ ಕುತೂಹಲ ಘಟ್ಟ ತಲುಪಿದೆ. 9 ವರ್ಷಗಳ ನಂತರ, ಎರಡು ತನಿಖಾ ಆಯೋಗಗಳ ನಂತರ, ಗುಜರಾತ್ ಉಚ್ಚ ನ್ಯಾಯಾಲಯ ಅಂತಿಮ ತೀಪರ್ು ನೀಡಿದ್ದು ಗೋದ್ರಾ ರೈಲು ದುರಂತವನ್ನು ವ್ಯವಸ್ಥಿತ ಪಿತೂರಿ ಎಂದು ಹೇಳುತ್ತಲೇ, ಬಂಧಿಸಲಾಗಿದ್ದ 94 ಶಂಕಿತರಲ್ಲಿ 63. ಜನರನ್ನು ಖುಲಾಸೆಗೊಳಿಸಿದೆ. ಕಾರಣ ಇವರ ವಿರುದ್ಧ ಯಾವುದೇ ಸಾಕ್ಷಿ ಪುರಾವೆಗಳಿಲ್ಲ. ವಿಮೋಚನೆಗೊಂಡವರಲ್ಲಿ ವ್ಯವಸ್ಥಿತ ಪಿತೂರಿಯ ಪ್ರಮುಖ ರೂವಾರಿ ಎನ್ನಲಾಗುವ ಮೌಲಾನ ಉಮರ್ಜಿ ಸಹ ಒಬ್ಬರು. ಇವರ ವಿರುದ್ಧ ಪ್ರಾಸಿಕ್ಯೂಷನ್ ಒಂದು ತುಣುಕು ಪುರಾವೆಯನ್ನೂ ಒದಗಿಸಿಲ್ಲ ಎಂದು ನ್ಯಾಯಾಲಯ ಹೇಳಿರುವುದು ಅಚ್ಚರಿ ಮೂಡಿಸುತ್ತದೆ. ಈ ಮುನ್ನ ಗೋದ್ರಾ ಘಟನೆಯನ್ನು ಕುರಿತು ತನಿಖೆ ನಡೆಸಲು ಎರಡು ಆಯೋಗಗಳನ್ನು ರಚಿಸಲಾಗಿತ್ತು. ಕೇಂದ್ರ ಸಕರ್ಾರ ನೇಮಿಸಿದ ನ್ಯಾ. ಬ್ಯಾನಜರ್ಿ ತನಿಖಾ ಆಯೋಗ ಗೋದ್ರಾ ರೈಲು ದುರಂತವನ್ನು ಆಕಸ್ಮಿಕ ಘಟನೆ ಎಂದೂ, ಯಾವುದೇ ಪಿತೂರಿ ಅಲ್ಲವೆಂದೂ ಪರಿಗಣಿಸಿದರೆ, ಗುಜರಾತ್ ಸಕರ್ಾರ ನೇಮಿಸಿದ ನಾನಾವತಿ ಆಯೋಗ ಘಟನೆಯನ್ನು ವ್ಯವಸ್ಥಿತ ಪಿತೂರಿ ಎಂದೇ ಪ್ರತಿಪಾದಿಸಿತ್ತು. ಈ ಎರಡೂ ಆಯೋಗಗಳ ವರದಿಯ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ತೀಪರ್ು ವಿಷಯವನ್ನು ಮತ್ತಷ್ಟು ಕ್ಲಿಷ್ಟಕರವಾಗಿಸಿದೆ. ಅಷ್ಟೇ ಅಲ್ಲ ಇಲ್ಲಿ ಕೆಲವು ಗಂಭೀರ ಪ್ರಶ್ನೆಗಳೂ ಉದ್ಭವಿಸುತ್ತವೆ. ಅಂತಿಮ ತೀಪರ್ಿನಲ್ಲಿ ಹೇಳಿರುವಂತೆ ಗೋದ್ರಾ ಘಟನೆ ವ್ಯವಸ್ಥಿತ ಪಿತೂರಿಯೇ ಆಗಿದ್ದಲ್ಲಿ, ಪ್ರಮುಖ ರೂವಾರಿಯ ವಿರುದ್ಧ ಸಾಕ್ಷಿಗಳೇಕೆ ದೊರೆತಿಲ್ಲ ? ಒಂದು ತುಣುಕು ಸಾಕ್ಷಿಯೂ ಇಲ್ಲದೆ 9 ವರ್ಷಗಳ ಕಾಲ ಬಂಧನದಲ್ಲಿರಿಸಿದ್ದೇಕೆ ? ಈಗ ನಿರಪರಾಧಿಗಳೆಂದು ಸಾಬೀತಾಗಿರುವ 63 ಜನರ ಜೀವನದ ಅಮೂಲ್ಯ ಒಂದು ದಶಕ ಜೈಲಿನಲ್ಲೇ ಕಳೆದಿರುವುದಕ್ಕೆ ಹೊಣೆ ಯಾರು ? ಇದಕ್ಕೆ ನ್ಯಾಯ ವಿಳಂಬನೆ ಕಾರಣವೋ ಅಥವಾ ನ್ಯಾಯ ಪರಾಮಶರ್ೆಯ ವಿಧಾನವೇ ಕಾರಣವೋ ? ನ್ಯಾಯಾಲಯದ ತೀಪರ್ಿಗೆ ಮನ್ನಣೆ ನೀಡುತ್ತಲೇ ಪ್ರಜ್ಞಾವಂತ ಹೃದಯಗಳಲ್ಲಿ ಪುಟಿದೇಳುವ ಪ್ರಶ್ನೆಗಳಿವು. ಮತ್ತೊಂದೆಡೆ ಗೋದ್ರಾ ದುರಂತದಲ್ಲಿ ಮಡಿದ ಕರಸೇವಕರ ವಿಚಾರ. 2002ರ ಫೆಬ್ರವರಿ 27ರಂದು ಸಾಬರಮತಿ ಎಕ್ಸ್ಪ್ರೆಸ್ನಲ್ಲಿ ಪಯಣಿಸುತ್ತಿದ್ದ 59 ಕರಸೇವಕರು ಅಗ್ನಿಗೆ ಆಹುತಿಯಾದರು. ಈ ಕರಸೇವಕರ ಪಯಣದ ಉದ್ದೇಶ ಏನೇ ಇರಲಿ, ಈ ಕಳೆದು ಹೋದ ಅಮೂಲ್ಯ ಜೀವಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. 1992ರ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಆಮಿಷಗಳಿಗೆ ಬಲಿಯಾಗಿ ಜೀವ ತೆತ್ತ ಸಾವಿರಾರು ಅಮಾಯಕರ ಮತ್ತೊಂದು ಸ್ವರೂಪವನ್ನು ಈ 59 ಕರಸೇವಕರಲ್ಲಿ ಕಾಣಬಹುದು. ಹಾಗಾಗಿ ರೈಲು ದುರಂತ ಹೇಗೆ ಸಂಭವಿಸಿತು ಎನ್ನುವುದಕ್ಕಿಂತಲೂ ಏಕೆ ಸಂಭವಿಸಿತು ಎಂಬ ಪ್ರಶ್ನೆ ಹೆಚ್ಚು ಮಹತ್ವ ಪಡೆಯುತ್ತದೆ. ಘಟನೆ ಆಕಸ್ಮಿಕ ಆಗಿರಲಿ, ವ್ಯವಸ್ಥಿತ ಪಿತೂರಿ ಆಗಿರಲಿ, ಘಟನೆಗೆ ಬಲಿಯಾದವರಿಗೆ ಅಥವಾ ಅವರ ಕುಟುಂಬದವರಿಗೆ ಅನಗತ್ಯವಾದ ವಿಚಾರ. ಒಂದು ವೇಳೆ ವ್ಯವಸ್ಥಿತ ಪಿತೂರಿಯೇ ಆಗಿದ್ದರೆ ಅಪರಾಧಿಗಳು ಶಿಕ್ಷಾರ್ಹರಾಗುತ್ತಾರೆ. ಆಕಸ್ಮಿಕವೇ ಆಗಿದ್ದರೆ ರೈಲ್ವೆ ಇಲಾಖೆ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಈ ಕರಸೇವಕರನ್ನು ಪೆಟ್ರೋಲ್ನೊಡನೆ ರೈಲಿನಲ್ಲಿ ಕಳುಹಿಸಿದ ಸಂಘಟನೆ ಅಪರಾಧಿಯಾಗುತ್ತದೆ. ಅಥವಾ ಎರಡು ರಾಜಕೀಯ ಧೋರಣೆಗಳ ಸಂಘರ್ಷದ ಬಲಿಪೀಠದಲ್ಲಿ ಈ 59 ಜೀವಗಳು ಹರಕೆಯ ಕುರಿಗಳಾಗಿ ಪರಿಣಮಿಸಿದ್ದರೆ ಭಾರತದ ರಾಜಕೀಯ ವ್ಯವಸ್ಥೆಯೇ ಶಿಕ್ಷಾರ್ಹವಾಗುತ್ತದೆ. ಇಲ್ಲಿ ಉದ್ಭವಿಸುವ ಮೂರ್ತ ಪ್ರಶ್ನೆ ನ್ಯಾಯ ಮತ್ತು ನ್ಯಾಯ ವಿತರಣೆಯನ್ನು ಕುರಿತಾದದ್ದು. ಒಂದು ವೇಳೆ ಗೋದ್ರಾ ದುರಂತ ವ್ಯವಸ್ಥಿತ ಪಿತೂರಿಯೇ ಆಗಿದ್ದಲ್ಲಿ ಅಪರಾಧಿಗಳು ಯಾರೇ ಆಗಿದ್ದರೂ ಶಿಕ್ಷಾರ್ಹರೇ. ಆದರೆ ವ್ಯವಸ್ಥಿತ ಪಿತೂರಿ ಗೋದ್ರಾ ನಂತರದ ಹತ್ಯಾಕಾಂಡವನ್ನಾಗಲೀ, ಗುಜರಾತ್ ಸಕರ್ಾರದ ನಿರ್ಲಕ್ಷ್ಯವನ್ನಾಗಲೀ, ರಾಜಕೀಯ ಪಕ್ಷಗಳ ಅಮಾನವೀಯ ನಿಲುವುಗಳನ್ನಾಗಲೀ ಸಮಥರ್ಿಸುವುದಿಲ್ಲ. ವ್ಯವಸ್ಥಿತ ಪಿತೂರಿಯು ವಾಜಪೇಯಿಯವರ ನ್ಯೂಟನ್ ಪ್ರಮೇಯವನ್ನಾಗಲೀ, ನರೇಂದ್ರ ಮೋದಿಯ ಕ್ರಿಯೆ-ಪ್ರತಿಕ್ರಿಯೆ ಸಿದ್ಧಾಂತವನ್ನಾಗಲೀ ಸಮಥರ್ಿಸುವುದಿಲ್ಲ. ಗೋದ್ರಾ ಘಟನೆಯಲ್ಲಿ ಮಡಿದ ಕರಸೇವಕರ ಜೀವಗಳಷ್ಟೇ ಅಮೂಲ್ಯ ಗುಜರಾತ್ ಹತ್ಯಾಕಾಂಡದಲ್ಲಿ ಮಡಿದ ಸಾವಿರಾರು ಅಮಾಯಕರ ಜೀವಗಳು. ವಿಪಯರ್ಾಸವೆಂದರೆ ಭಾರತದ ಅವಕಾಶವಾದಿ ರಾಜಕಾರಣದಲ್ಲಿ ಗೋದ್ರಾ ಮತ್ತು ನಂತರದ ಹತ್ಯಾಕಾಂಡಗಳಂತಹ ಮಾನವ ನಿಮರ್ಿತ ದುರಂತಗಳೂ ಸಹ ರಾಜಕೀಯ ಸಂಘರ್ಷದ ಕೇಂದ್ರ ಬಿಂದುಗಳಾಗಿ ಪರಿಣಮಿಸಿರುವುದು. ಗೋದ್ರಾ ದುರಂತ ವ್ಯವಸ್ಥಿತ ಪಿತೂರಿಯೇ ಆಗಿದ್ದಲ್ಲಿ ಈ ಪಿತೂರಿಗೆ ಕಾರಣವಾದ ಸಂದರ್ಭಗಳನ್ನು ಪರಾಮಶರ್ೆಗೊಳಪಡಿಸುವುದೂ ಅಷ್ಟೇ ಅಗತ್ಯ. ಭಾರತದಲ್ಲಿ ಮಲೆಗಾಂವ್, ಹೈದರಾಬಾದ್, ಗೋದ್ರಾ, ಸಂಜೋತ, 26/11, ಗುಜರಾತ್ ಹತ್ಯಾಕಾಂಡ ಇವೆಲ್ಲವೂ ಹಠಾತ್ತನೆ ಶೂನ್ಯದಿಂದ ಉದಯಿಸಿದ ವಿದ್ಯಮಾನಗಳಲ್ಲ. ಇತಿಹಾಸದ ರಥ ಚಕ್ರಗಳೊಡನೆ ಬೆರೆತ ಯಾತ್ರೆಗಳ ಪರಂಪರೆ ಸೃಷ್ಟಿಸಿದ ಭೀಕರ ಪರಿಣಾಮವನ್ನು ಈ ಘಟನೆಗಳಲ್ಲಿ ಕಾಣಬಹುದು. ಸ್ವಾತಂತ್ರ್ಯ ಬಂದ ದಿನದಿಂದಲೂ ದೇಶದ ರಾಜಕಾರಣಕ್ಕೆ ಅಮಾಯಕರ ಬಲಿ ಆಗುತ್ತಲೇ ಇದೆ. ಪ್ರಭುತ್ವವನ್ನು ಪ್ರತಿನಿಧಿಸುವ ವ್ಯಕ್ತಿ, ಸಂಘಟನೆ ಮತ್ತು ಪಕ್ಷಗಳು ತಮ್ಮ ಅಧಿಕಾರಕ್ಕಾಗಿ, ಐಷಾರಾಮಿ ಬದುಕಿಗಾಗಿ, ಭೋಗ ವಿಲಾಸಗಳಿಗಾಗಿ, ಅಸ್ತಿತ್ವಗಳ ರಕ್ಷಣೆಗಾಗಿ ಜನಸಮುದಾಯಗಳ ನಡುವೆ ಬಿತ್ತಿರುವ ದ್ವೇಷದ ಬೀಜಗಳು ಈಗ ಫಸಲು ನೀಡುತ್ತಿರುವುದು ಸ್ಪಷ್ಟ. ಇದಕ್ಕೆ ಹೊಣೆಗಾರರು ಯಾರು. ಸಾರ್ವಭೌಮ ಪ್ರಜೆಗಳೋ ಅಥವಾ ಪ್ರಜಾ ಪ್ರತಿನಿಧಿಗಳೋ ? ಗೋದ್ರಾ ಬೇಡುವುದು ನ್ಯಾಯವನ್ನು ಮಾತ್ರ. ದುರಂತದಲ್ಲಿ ಮಡಿದವರಿಗಾಗಿ ಮಾತ್ರವಲ್ಲ, ಮುಂಬರುವ ಪೀಳಿಗೆಗೂ ಗೋದ್ರಾ ಮತ್ತು ಸುತ್ತಲಿನ ಘಟನೆಗಳು ಸದಾ ನ್ಯಾಯವನ್ನು ಬೇಡುವ ದುರಂತ ಪ್ರಕ್ರಿಯೆಯಾಗಿಯೇ ಉಳಿಯುತ್ತದೆ. ಅಂತಿಮ ನ್ಯಾಯ ಒದಗುವವರೆಗೂ. ನಾ ದಿವಾಕರ]]>

‍ಲೇಖಕರು G

March 1, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Hanmantha

    ದೇವ್ರು-ಧರ್ಮಗಳೆ ಇದಕ್ಕೆಲ್ಲ ಕಾರಣ
    ¸ಸಾವಿರಾರು ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡ ಗೋದ್ರಾ ಪ್ರಕರಣವು ಹೇಗೆ ಸಂಭವಿಸತು ಎನ್ನುವದಕ್ಕಿಂತಲೂ ಏಕೆ ಸಂಭವಿಸಿತು ಎನ್ನುವ ದಿವಾಕರರ ಅಭಿಮತಕ್ಕೆ ನನ್ನ ಬೆಂಬಲವಿದೆ. ಸಾಬರಮತಿ ಎಕ್ಸ್ಪ್ರೆಸ್ನ `ಎಸ್-6′ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಕರಸೇವಕರ ದುರ್ನಡತೆಯೆ ಈ ಅಗ್ನಿ ದುರಂತಕ್ಕೆ ಕಾರಣವಾಯಿತು ಎಂಬ ಸತ್ಯವನ್ನು ತೆಹಲ್ಕಾ ಪತ್ರಿಕೆ ಬಯಲಿಗೆಳೆದಿದೆ.
    ಹಾಗೆ ನೋಡಿದರೆ ರೈಲಿನ ಎಲ್ಲ ಬೋಗಿಗಳಿಲ್ಲಿಯೂ ಕರ ಸೇವಕರು ಪ್ರಯಾಣಿಸುತ್ತಿದ್ದರು. ಆದರೆ `ಎಸ್-6′ ಬೋಗಿಯಲ್ಲಿನ ಕರಸೇವಕರಿಗೂ ಹಾಗೂ ಪ್ಲಾಟ್ಪಾರಂನಲ್ಲಿ ವ್ಯಾಪಾರಿಗಳಾದ ಮುಸ್ಲಿಂರಿಗೂ ಜಗಳಗಳಾಗಿರುವ ಬಗ್ಗೆ ಸುಪ್ರೀಂ ಕೋಟರ್್ನಲ್ಲಿ ಚಚರ್ೆಗೆ ಬಂದಿದೆ. ಜೊತೆಗೆ ಸಫಿಯಾ ಎಂಬ ಮುಸ್ಲಿಂ ಯುವತಿಯನ್ನು ಅಪಹರಿಸಲು ಕರಸೇವಕರು ಯತ್ನಿಸಿದ್ದರು ಎಂಬ ಆರೋಪಗಳಿವೆ. ಇಷ್ಟೆ ಅಲ್ಲದೆ ಕರಸೇವಕರು ಪ್ರತಿ ರೈಲು ನಿಲ್ದಾಣಗಳಲ್ಲಿಯೂ ಕೆಳಗಿಳಿದು ಜೈ ಶ್ರೀರಾಮ್ ಎನ್ನುವುದು, ಮುಸ್ಲಿಂರನ್ನು ದೇಶ ಬಿಟ್ಟು ಅಟ್ಟಿ ಎಂಬರ್ಥ ಬರುವ ಘೋಷಣೆಗಳನ್ನು ಕೂಗುವುದು ಅಂದಿನ ಬೆಂಕಿ ಅನಾಹುತಕ್ಕೆ ಕಾರಣ ಎನ್ನುವುದು ನನ್ನ ಸ್ಪಷ್ಟ ಅಭಿಮತವಾಗಿದೆ.
    ಅದೆ ಏನೆ ಇದ್ದರೂ ರೈಲು ದುರಂತದಲ್ಲಿ ಕೇವಲ 59 ಜನ ಮಾತ್ರ ಸತ್ತರೆ, ಆನಂತರದಲ್ಲಿ ಬೆಳವಣಿಗೆಗಳಲ್ಲಿ ಮೋದಿ ಕೃಪಾಕಟಾಕ್ಷದಿಂದಾಗಿ ಗುಜರಾತ್ನಲ್ಲಿ 1200ಜನ ಅಮಾಯಕರು (ಹೆಚ್ಚಾಗಿ ಮುಸ್ಲಿಂ ಸಮುದಾಯದವರು)ಬಲಿಗೆ ರಾಜಕೀಯ ಪ್ರೇರಿತ ದುರುದ್ದೇಶವೆ ಕಾರಣ ಎಂಬುದು ಜಗಜ್ಜಾಹಿರಾಗಿದೆ. ಆದಷ್ಟು ಬೇಗ ರೈಲು ದುರಂತದ ನಂತರದ ಹತ್ಯಾಕಾಂಡಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಜೊತೆಗೆ 9ವರ್ಷಗಳವರೆಗೆ ಜೈಲಿನಲ್ಲಿ ನರಕ ಅನುಭವಿಸಿ ಹೊರಬಂದಿರುವ ನಿರಪರಾಧಿಗಳಿಗೆ ಸೂಕ್ತ ಪರಿಹಾರ ನೀಡುವುದರತ್ತ ಸುಪ್ರೀಂ ಕೋಟರ್್ ಬೆಳಕು ಚೆಲ್ಲಬೇಕಿದೆ. (ಎನೆ ಪರಿಹಾರ ನೀಡಿದರೂ ಅದು ನಿರಪರಾಧಿಗಳೂ ಅನುಭವಿಸಿದ ಮಾನಸಿಕ ವ್ಯಥೆಗೆ ಸಮನಲ್ಲ)
    ಜಗತ್ತಿನಲ್ಲಿನ ಇಂದಿನ ಬಹಳಷ್ಟು ದುರಂತಗಳಿಗೆ ನಾವೆ ಗಂಟು ಹಾಕಿಕೊಂಡಿರುವ ದೇವರು, ಧರ್ಮ, ಮತಾಚರಣೆಗಳೆ ಕಾರಣವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಕಹಿಸತ್ಯ. ಇಷ್ಟೆಲ್ಲ ದುರಂತಗಳಿಗೆ ಕಾರಣವಾಗುವ ಹಾಗೂ ಇಲ್ಲದ ಈ ದೇವರು ಮತ್ತು ಧರ್ಮ ರಹಿತ ಪಯರ್ಾಯ ಸಮಾಜವನ್ನು ಕಟ್ಟುವುದು ಇಂದಿನ ತುತರ್ು ಅಗತ್ಯವಾಗಿದೆ. ಜನರ ಅಪನಂಬಿಕೆಗಳನ್ನೆ ಪೋಷಿಸಿಕೊಂಡು ಬರುತ್ತಿರುವ ರಾಜಕಾರಣಿಗಳಿಂದ ಇದು ಸಾಧ್ಯವಾಗದ ಕೆಲಸ. ಜಗತ್ತಿನ ಎಲ್ಲ ವಿಚಾರವಾದಿಗಳು, ನಿರೀಶ್ವರವಾದಿಗಳು ಪ್ರಯತ್ನಿಸಬೇಕಷ್ಟೆ. ಆದರೆ ಇದು ಮತ್ತೊಂದು ಪಯರ್ಾಯ ಧರ್ಮವಾಗದಂತೆ ಎಚ್ಚರಿಕೆ ವಹಿಸುವುದು ಬಹಳ ಅಗತ್ಯ

    ಪ್ರತಿಕ್ರಿಯೆ
  2. ಡಾ.ಬಿ.ಆರ್.ಸತ್ಯನಾರಾಯಣ

    ಇತ್ತೀಚಿಗೆ ವಾರ್ತಾಭಾರತಿ ಎಂಬ ಕನ್ನಡ ಪತ್ರಿಕೆಯಲ್ಲಿ ಈ ವಿವರಗಳನ್ನು ನಾನೂ ಓದಿದೆ. ಬೆಂಕಿಯ ಅವಘಡದಿಂದ ಬದುಕುಳಿದ ಒಬ್ಬರು ಹೇಳಿರವಂತೆ, ಬೆಂಕಿ ಹಚ್ಚಲು ಬಂದವರಲ್ಲಿ ಕೆಲವರು, ‘ತಮ್ಮ ಹುಡುಗಿಯನ್ನು ಬಿಟ್ಟು ಬಿಡಿ’ ಎಂದು ಕೂಗುತ್ತಿದ್ದರಂತೆ. ಇದನ್ನು ಕೋರ್ಟು ಕೂಡಾ ಗಮನಿಸಿದೆ. ಯುವತಿಯೊಬ್ಬಳನ್ನು ಬಲವಂತವಾಗಿ ಎಳೆದೊಯ್ಯುತ್ತಿದ್ದರು ಎಂಬ ಸಾಕ್ಷಿಗಳನ್ನು ಕೋರ್ಟ್ ಗಮನಿಸಿದೆ. ಗುಜರಾತ್ ಹಿಂಸೆಗೆ ಕಾರಣವಾದ ಗೋದ್ರಾ ದುರಂತವನ್ನು ಗಮನಿಸುವಷ್ಟೇ ಅಸ್ಥೆಯಿಂದ ಗೋದ್ರಾ ದುರಂತಕ್ಕೆ ಪೂರ್ವದಲ್ಲಿ ನಡೆದ ಘಟನೆಗಳನ್ನು ಗಮನಿಸಬೇಕಾಗುತ್ತದೆ. ಒಂದಂತೂ ನಿಜ. ಹಿಂಸೆಗೆ ಹಿಂಸೆಯೇ ಉತ್ತರವಲ್ಲ. ಹಿಂಸೆಗೆ ಹಿಂಸೆಯೇ ಪರಿಹಾರ ಎಂದುಕೊಂಡರೆ ಇಂತಹ ಅವಘಡಗಳಿಗೆ ಕೊನೆಯೇ ಇರುವುದಿಲ್ಲ.
    ‘ಗೋದ್ರಾ ಬೇಡುವುದು ನ್ಯಾಯವನ್ನು ಮಾತ್ರ. ದುರಂತದಲ್ಲಿ ಮಡಿದವರಿಗಾಗಿ ಮಾತ್ರವಲ್ಲ, ಮುಂಬರುವ ಪೀಳಿಗೆಗೂ’ ಎಂಬ ಕಳಕಳಿ ಎಲ್ಲರದ್ದೂ ಆಗಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: