ತುಮಕೂರಿನಲ್ಲಿ ನಾಟಕದ ಮನೆ ಏರ್ಪಡಿಸಿದ್ದ ಸಂಕಿರಣವೊಂದರಲ್ಲಿ ರು ಖ್ಯಾತ ನಾಟಕಕಾರ ಎಚ್ ಎಸ್ ಶಿವಪ್ರಕಾಶ್ ‘ಪ್ರಾದೇಶಿಕ ರಂಗಭೂಮಿ ಸಬಲಗೊಳಿಸುವ ಸಲುವಾಗಿ ಹುಟ್ಟಿಕೊಂಡ ರಂಗ ಮಂಡಲಗಳು ರಮ್ ಮಂಡಲಗಳಾಗಿವೆ. ನೀನಾಸಂ ನಾನೀಸಂ ಆಗಿದೆ’ ಎಂದು ಕಿಡಿ ಕಾರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ನೀನಾಸಂ ಹಣ ಎತ್ತುವ ಸಂಘಟನೆಯಾಗಿದೆ ಎಂದು ಸಂಕಿರಣದಲ್ಲಿ ಆರೋಪಿಸಿರುವ ಅವರು ಸ್ಥಳೀಯ ಸಂಸ್ಕೃತಿ, ರಂಗ ಚಟುವಟಿಕೆ ಉಳಿಸಲು ಫೋರ್ಡ್ ಸಂಸ್ಥೆಯಿಂದ ಉದಾರ ನೆರವು ಪಡೆದ ನೀನಾಸಂ ವರ್ಷಕ್ಕೆ ಒಂದು ಮಕ್ಕಳ ನಾಟಕ ಸೇರಿ ಮೂರು ನಾಟಕಗಳನ್ನಾಡಿಸುತ್ತಾ ಹಣ ಎತ್ತುವ ಕೆಲಸಕ್ಕಷ್ಟೇ ಸೀಮಿತವಾಗಿದೆ. ‘ಒಂದು ಅಕಾಡೆಮಿಗೆ ಕೊಡುವಷ್ಟು ಹಣವನ್ನು ಸರ್ಕಾರವು ನೀನಾಸಂಗೆ ನೀಡುತ್ತಿದೆಯಾದರೂ ಮುಂಬೈ ಸಂಸ್ಥೆಯೊಂದರ ಜೊತೆ ಸೇರಿ ವಿದೇಶಿ ಸಂಸ್ಥೆಗಳಿಂದ ಹಣ ಎತ್ತುವಳಿ ಬಗ್ಗೆ ತಲೆ ಕೆಡೆಸಿಕೊಂಡಿದೆಯೆ ಹೊರತು ಸ್ಥಳೀಯ ರಂಗಭೂಮಿ ಸಬಲೀಕರಣ ಅದರ ಆದ್ಯತೆಯಾಗಿಲ್ಲ’ ಎಂದಿದ್ದಾರೆ ಎಂದು ವರದಿಯಾಗಿದೆ.
ಶಿವಪ್ರಕಾಶ್ ಅವರ ನೋಟದ ಬಗ್ಗೆ ಈ ಬಾರಿಯ ಜುಗಾರಿ ಕ್ರಾಸ್. ಜುಗಾರಿ ಕ್ರಾಸ್ ಹೇಳಿ ಕೇಳಿ ಚರ್ಚೆಗಾಗಿ ಇರುವ ಅಂಗಳ.
ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಸ್ವಾಗತ. ಬನ್ನಿ ಭಾಗವಹಿಸಿ






ನನಗೆ ತಿಳಿದಂತೆ ನೀನಾಸಂ ಸಂಸ್ಥೆಯ ಎಲ್ಲ ಲೆಕ್ಕಪತ್ರಗಳು ಸಾರ್ವಜನಿಕರಿಗೆ ಲಭ್ಯವಿವೆ. ಸಂಪನ್ಮೂಲ ವಿವರಗಳನ್ನು ವೆಚ್ಚಗಳನ್ನು ಅವರು ಪ್ರಕಟಿಸುತ್ತಾರೆ. ಇದನ್ನು ನಾನು ನೋಡಿದ್ದೇನೆ. ಶಿವಪ್ರಕಾಶರ ಪೂರ್ವಾಗ್ರಹ ದೃಷ್ಟಿಗೆ ಅದು ಗೋಚರಿಸಿಲ್ಲ ಅಷ್ಟೆ. ಅದನ್ನು ಒಮ್ಮೆ ಅವರು ನೋಡುವುದು ಒಳ್ಳೆಯದು.
ಸ್ಥಳೀಯ ರಂಗಭೂಮಿಯಿಂದ ಬಹಳಷ್ಟು ಪಡೆದಿರುವ ಶಿವಪ್ರಕಾಶ್ ಅದಕ್ಕಾಗಿ ಏನು ಮಾಡಿದ್ದಾರೆ? ಅವರಿಗೆ ಸ್ಥಳೀಯ ಸಂಸ್ಕೃತಿಯನ್ನು ಪೋಷಿಸಲಿಕ್ಕೆ ಇಷ್ಟು ವರ್ಷ ದೆಹಲಿ ಮತ್ತು ಈಗ ಜರ್ಮನಿ ಸೂಕ್ತ ಸ್ಥಳವಾಗಿ ಕಂಡಿದೆಯೇ? ಬಾಯಿಹರುಕುತನ ಗೌರವವನ್ನೂ ಶೋಭೆಯನ್ನೂ ತರುವುದಿಲ್ಲ.
ಈ ವಿವಾದಕ್ಕೆ ಪ್ರತಿಕ್ರಿಯೆಯಾಗಿ ಇಂದಿನ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ನಟರಾಜ ಹೊನ್ನವಳ್ಳಿಯವರ ಲೇಖನವನ್ನು ನೀವು ಪ್ರಕಟಿಸಬೇಕು.
ರಮ್ ಬಗ್ಗೆ ಶಿವಪ್ರಕಾಶರಿಗಿಂತ ಯಾರಿಗೆ ಹೆಚ್ಚು ಗೊತ್ತು? ಅವರ ಅವಾಂತರಗಳು ದಂತಕತೆಯಾಗಿವೆ. ಇಂತಹ ಒಂದು ಅಸಹ್ಯ ಸಂದರ್ಭಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಪ್ರತಿನಿತ್ಯ ಕುಡಿದು ಮಾನ ಕಳೆಯುವ ಈ ಥರಾ ಜನ ನಮ್ಮನ್ನು ವಿದೇಶಗಳಲ್ಲಿ ಪ್ರತಿನಿಧಿಸುತ್ತಾರೆಂಬುದು ವಿಷಾದಕರ.
ಕೆ. ಎಲ್. ಗೋಪಾಲ್
bahusha, shivaprakashara yavudo natakavannu ninasam avaru iga maduvudakke oppikondilla endu kanuttade!-raju
ಹೆಗ್ಗೋಡಿನಂತಹ ಒಂದು ಪುಟ್ಟ ಹಳ್ಳಿಯಲ್ಲಿ ತಮ್ಮ ಕೃಷಿಯ ಮಧ್ಯೆ ಕನ್ನಡ ರಂಗಭೂಮಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ನೀನಾಸಂಗೆ ಅದರಲ್ಲೂ ಕೆ.ವಿ. ಸುಬ್ಬಣ್ಣ ಅವರಿಗೆ ಸಲ್ಲಬೇಕು. ಈ ಮಾತನ್ನು ಯಾರೂ ಅಲ್ಲಗಳೆಯಲಾರರು. ಶಿವಪ್ರಕಾಶ್ ಅವರು ಕೇವಲ ನೀನಾಸಂ ಅನ್ನು ಗುರಿಯಾಗಿಟ್ಟುಕೊಂಡು ಮಾತನಾಡಿರುವುದು ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಡುತ್ತದೆ. ನೀನಾಸಂ ದಂತೆ ಸರ್ಕಾರದಿಮ್ದ ಹಣ ಮಡೆದು ಉಳಿದ ರಿಪರ್ಟಿಗಳು ಈವರೆಗೆ ಏನನ್ನು ಸಾಧಿಸಿವೆ? ಅದನ್ನು ಶೆವಪ್ರಕಾಶ್ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಲತಾಯಿ ಧೋರಣೆಯನ್ನ ಅವರು ಎಂದಾದರೂ ಪ್ರಶ್ನಿಸಿದ್ದಾರೆಯೇ? ಖಮ್ಡಿತವಾಗಿಯೂ ಅಂತಹ ಸಾಹಸಕ್ಕೆ ಅವರು ಕೈಹಾಕುವುದಿಲ್ಲ. ಏಕೆಂದರೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸರ್ಕಾರದಿಂದ ಸಹಕಾರವನ್ನು ಪಡೆಯುತ್ತಿರುವ ಅವರು ಇಂತಹ ಧೈರ್ಯಕ್ಕೆ ಕೈಹಾಕುವುದಿಲ್ಲ. ಅವರ ಇಂತಹ ಹೇಳಿಕೆಗಳು ಕೇವಲ ಸಮುದಾಯದಲ್ಲಿ ಒಂದು ಸ್ಥಾನವನ್ನು ಕಲ್ಪಿಸಿಕೊಳ್ಳಲೇ ಹೊರತು ಮತ್ತೇನೂ ಅಲ್ಲ. ಇದು ಪಕ್ಕಾ ಅವಕಾಶವಾದಿತನದ ಮತ್ತೊಂದು ಮುಖದರ್ಶನ. ಇಂತಹ “ಬುದ್ಧಿ ಜೀವಿಗಳನ್ನು” ಸುಮ್ಮನೇ ಇಗ್ನೋರ್ ಮಾಡುವುದೇ ಉಚಿತ. ಹೀಗೆ ಮಾತನಾಡುವುದರ ಬದಲು ಇನ್ನೂ ಹೊಸ ಹೊಸ ನಾಟಕಗಳನ್ನು ಬರೆದು ಕೊಡಲಿ, ಅದರಿಂದ ಕನ್ನಡ ರಂಗಭೂಮಿ ಹೊಸ ಹೊಸ ಪ್ರಯೋಗಗಳನ್ನು ನೀಡಿ ತನ್ನ ಮೆರಗನ್ನು ಹೆಚ್ಚಿಸಲಿ.
ಈ ತನಕ ಶಿವಪ್ರಕಾಶರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದೆ. ಆದರೆ ಈಗ….. ! ನೀನಾಸಂ ಸಂಸ್ಥೆಯವರು ಅವರ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆದರೂ ಅವರು ಈ ರೀತಿ ರೂಕ್ಷವಾಗಿ ಮಾತನಾಡುತ್ತಿದ್ದಾರೆಂದರೆ ಬಹುಷಃ ಅವರ ಯಾವುದೋ ಬೇಡಿಕೆಯನ್ನು ನೀನಾಸಂ ಸಂಸ್ಥೆಯವರು ನಿರಾಕರಿಸಿರಬೇಕು. ಕೆ.ಎಲ್.ಗೋಪಾಲ್ ಅವರು ಹೇಳಿರುವ ” ಸ್ಥಳೀಯ ರಂಗಭೂಮಿಯಿಂದ ಬಹಳಷ್ಟು ಪಡೆದಿರುವ ಶಿವಪ್ರಕಾಶ್ ಅದಕ್ಕಾಗಿ ಏನು ಮಾಡಿದ್ದಾರೆ? ಅವರಿಗೆ ಸ್ಥಳೀಯ ಸಂಸ್ಕೃತಿಯನ್ನು ಪೋಷಿಸಲಿಕ್ಕೆ ಇಷ್ಟು ವರ್ಷ ದೆಹಲಿ ಮತ್ತು ಈಗ ಜರ್ಮನಿ ಸೂಕ್ತ ಸ್ಥಳವಾಗಿ ಕಂಡಿದೆಯೇ?” ಬಹಳ ಸೂಕ್ತ ಅನಿಸುತ್ತದೆ. ಅಥವಾ ಚಿಮೂ, ಭೈರಪ್ಪ ಅವರಿಗೆ ಆದಂತೆ ಶಿವಪ್ರಕಾಶರಿಗೂ ಅರಳುಮರುಳೇ ?
ರವೀಂದ್ರ ಮಾವಖಂಡ
ಎಚ್.ಎಸ್.ಶಿವಪ್ರಕಾಶ್ ಅವರಿಗೆ ಗೆಳೆಯ ನಟರಾಜ್ ಹೊನ್ನವಳ್ಳಿ ಇಂದಿನ ಕನ್ನಡ ಪ್ರಭದಲ್ಲಿ ಸರಿಯಾಗಿ ಉತ್ತರ ನೀಡಿದ್ದಾರೆ. -ರಜನಿ ಗರುಡ
ಅವಧಿ,
ಹಿಂದೊಮ್ಮೆ ಅಕ್ಷರ ಹಾಗೂ ವೈದೇಹಿಯವರ ಕುರಿತು ಕೆಲವರು ಇದೇ ವೇದಿಕೆಯಲ್ಲಿ ಕೀಳಾಗಿ ಮಾತಾಡಿದ್ದರು. ಈಗ ಶಿವಪ್ರಕಾಶ್ ಅವರ ಸರದಿ. ಬಹುಶಃ ನಿನಾಸಂ ತೇಜೋವಧೆಗೆ ಕೆಲವರು ಕಂಕಣ ಕಟ್ಟಿ ನಿಂತಂತಿದೆ. ಹಾಗೆ ನೋಡುತ್ತಾ ಹೋದರೆ ಎಲ್ಲರ ಮನೆಯ ದೋಸೆಯೂ ತೂತು. ಪ್ರಾಧಿಕಾರ, ಪರಿಷತ್ತುಗಳಿಗಾಗಿಯೇ ಪುಸ್ತಕ ಬರೆಯುವ ಅನೇಕ ಮಹಾನುಭವರಿದ್ದಾರೆ. ಆ ಕುರಿತು ಮಾತಾಡಲು ಇದು ಸೂಕ್ತ ವೇದಿಕೆಯಲ್ಲ. ಈ ವಿಚಾರವನ್ನು ಚರ್ಚೆಗೆ ತಂದಿದ್ದು ಉತ್ತಮ ಸಂಗತಿ. ಆದರೆ ಚರ್ಚೆ ಹಾದಿ ತಪ್ಪದಿರಲಿ. ಯಾರ ಕುರಿತು ಕೀಳು ಮಟ್ಟದ ಪ್ರತಿಕ್ರಿಯೆಗಳು ಬಾರದಿರಲಿ ಎಂಬುದಷ್ಟೆ ನಮ್ಮ ಆಶಯ…ಯಾಕೊ ದೊಡ್ಡವರೆನಿಸಿಕೊಂಡವರ ಈ ವರ್ತನೆಗಳು ನಮ್ಮಂಥ ಹೊಸ ಹುಡುಗರಲ್ಲಿ ಬೇಸರ ಮೂಡಿಸುತ್ತದೆ…
ಒಳ್ಳೆಯ ಕೆಲಸಗಳ ಬಗ್ಗೆ ಕ್ಯಾತೆ ತೆಗೆಯುವುದು ’ಖ್ಯಾತ’ನಾಮರ ’ಹವ್ಯಾಸ’ವಾಗಿದೆ. ತಮ್ಮ ಹೆಸರು ಚಲಾವಣೆಯಲ್ಲಿರಲಿ ಎಂಬ ದುರುದ್ದೇಶ ಕೂಡ ಇಲ್ಲಿರುತ್ತದೆ. ನಟರಾಜ್ ಹೊನ್ನವಳ್ಳಿಯವರ ಕನ್ನಡಪ್ರಭದ ಲೇಖನ ಸಂಪೂರ್ಣವಾಗಿ ಪ್ರಕಟಿಸಿ. ಆ ಲೇಖನವೇ ಶಿವಪ್ರಕಾಶರ ಆರೋಪಗಳಿಗೆ ಉತ್ತರ ನೀಡಿದೆ.
ಯಾವುದೇ ಹವ್ಯಾಸ ಉದ್ಯೋಗವಾಗಿ ಪರಿವರ್ತನೆಯಾದರೆ ಹಣಕಾಸಿನ ವಿಷಯ ಜಟಿಲವೂ ಸಂಕೀರ್ಣವೂ ಆಗುತ್ತದೆ. ಸ್ವಾಯತ್ತತೆ ಮತ್ತು ಅನುದಾನ ಮೂಲ ಉದ್ದೇಶವನ್ನೇ ಬದಲಿಸಿಬಿಡುವುದೂ ಸತ್ಯದ ಮಾತೇ ತಾನೆ?
ವಿನಾಯಕ ಅವರು ಹೇಳಿದ್ದು ಸರಿಯಾಗಿದೆ..ಹಾಗೆ ನೋಡುತ್ತಾ ಹೋದರೆ ಎಲ್ಲರ ಮನೆಯ ದೋಸೆಯೂ ತೂತು. ಆ ಕುರಿತು ಮಾತಾಡಲು ಇದು ಸೂಕ್ತ ವೇದಿಕೆಯಲ್ಲ.ದೊಡ್ಡವರೆನಿಸಿಕೊಂಡವರ ಈ ವರ್ತನೆಗಳು ನಮ್ಮಂಥ ಹೊಸ ಹುಡುಗರಲ್ಲಿ ಬೇಸರ ಮೂಡಿಸುತ್ತದೆ…ಶಿವಪ್ರಕಾಶ್ ಅವರು ಸರ್ಕಾರದ ಬಗ್ಗೆ ಹೇಳಿರೋದು ಸರಿಯಾಗಿದೆ…ಆದರೆ ನಿನಾಸಂ ಬಗ್ಗೆ ಹೇಳಿದ್ದು ಸರಿ ಇಲ್ಲ.. ಇದೇನು ಗಣಿಗಾರಿಕೆಯಂತಹ ಭ್ರಷ್ಟಾಚಾರಕ್ಕಿಂತ ದೊಡ್ಡದೇನಲ್ಲ..
ಒಂದು ಅಭಿಪ್ರಾಯಕ್ಕೆ ಇಷ್ಟೆಲ್ಲ ಪ್ರತಿಕ್ರಿಯೆ ಬಂದಿದ್ದು ಸ್ವಾಗತಾರ್ಹ. (edited) ಶಿವಪ್ರಕಾಶರ ನಾಟಕಗಳು ಈಗಾಗಲೇ ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ವಿವಿದೆಡೆ ಪ್ರಯೋಗ ಕಂಡಿವೆ. ಅದಕ್ಕೆನೀ-ನಾ-ಸ್ಲಮ್ಮಿನ ಅಗತ್ಯವಿಲ್ಲ. ಅಲ್ಲದೆ ಈಗೀಗ ಕುಂಬಳಕಾಯಿ ಬಳ್ಳಿ ಅಂದರೆ ಕೊಳ್ಳಗಿನ ದಾರ ನೋಡಿಕೊಳ್ಳೋರ ಸಂಖ್ಯೆ ಗುಲ್ಬರ್ಗ ಮತ್ತು ಬಿಸಿಲಿನ ಕಲ್ಲು-ಬಳ್ಳಿ ಆದಂತಾಗಿದೆ.
ವೆಂಕಟ್, ರಾಯಚೂರು.
neenasum illadiddare nimma naatakagalannaduvvru siguvudilla.
laabhavella tagondu eega tirugi biddare adu manushyatvave.d.s.ramaswamy avaru heliddu nija.
nimage khyatiya huchu.
ಶಿವಪ್ರಕಾಶ್ ರ ದಾಟಿ ಹೇಗಿದೆ ಅಂದ್ರೆ…ತಮ್ಮ ಮನೆ ಮುಂದೆ, ಕಾಲ ಬುಡದಲ್ಲೇ ಇರೋ ಹೊಲಸನ್ನ ತೊಳಕೊಳ್ಳದೆ, ಬೇರೆಯವರ ಮನೆ ಮುಂದೆ ಇರೋ ಹೊಲಸು ತೋರಿಸಿದ ಹಾಗೆ? ಕನ್ನಡದ ಒಳ್ಳೆ ಕೆಲಸ ಯಾರಿನ್ದಾದ್ರು ಆಗಲಿ…ಸಹಕಾರ ಕೊಡೋಣ. ಎನಂತೀರ?