ರಾಜ್ಯ ಸರ್ಕಾರ ಭಗವದ್ಗೀತೆ ಅಭಿಯಾನದ ಸಂರಕ್ಷಣೆಗೆ ನಿಂತಿದೆ. ಈ ಬಗ್ಗೆ ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯ ತಮ್ಮ ಅಂಕಣ ‘ಅನಾವರಣ’ದಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಅದು ಇಲ್ಲಿದೆ. ಬಾಗೇಶ್ರೀ ಬರೆದ ಲೇಖನ ಇಲ್ಲಿದೆ.
ಈ ಎರಡೂ ಲೇಖನಗಳನ್ನು ಇಟ್ಟುಕೊಂಡು ಅವಧಿ ‘ಜುಗಾರಿ ಕ್ರಾಸ್’ ಆರಂಭಿಸುತ್ತಿದೆ. ಭಗವದ್ಗೀತೆ ಅಭಿಯಾನದ ಎಲ್ಲಾ ಆಯಾಮಗಳನ್ನು ಚರ್ಚೆಯ ಅಂಗಳಕ್ಕೆ ತನ್ನಿ.
ಜುಗಾರಿ ಕ್ರಾಸ್ ಚರ್ಚೆ ನಡೆಸಲೆಂದೇ ಇರುವ ವೇದಿಕೆ. ನಿಮ್ಮ ಅನಿಸಿಕೆ ಬೇಕು
ಚಿತ್ರ: ಸುಧಾಕರ ದರ್ಬೆ/ ಕನ್ನಡಪ್ರಭ
ನಾ ದಿವಾಕರ್ ಅವರ ಅಭಿಪ್ರಾಯ ಇಲ್ಲಿದೆ. ಓದಿ-
ಭಗವದ್ಗೀತೆ ಧರ್ಮ ಗ್ರಂಥವೋ ಅಲ್ಲವೋ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಭಾಜಪ ಸರ್ಕಾರ ಭಗವದ್ಗೀತೆಯಂತಹ ಒಂದು ಗ್ರಂಥವನ್ನು ಹಿಂದೂ ಧರ್ಮದ ಪವಿತ್ರ ಗ್ರಂಥ ಎಂದು ಬಿಂಬಿಸಿ,ತನ್ಮೂಲಕ ಹಿಂದೂ ಧರ್ಮ ಜಾಗೃತಿ ಮೂಡಿಸಲು ಯತ್ನಿಸುತ್ತಿರುವುದು ಮಾತ್ರ ಸ್ಪಷ್ಟ. ಭಗವದ್ಗೀತೆಯಲ್ಲಿ ಸಮಕಾಲೀನ ಸಂದರ್ಭದ ಎಲ್ಲ ಸಮಸ್ನೆಗಳಿಗೂ ಉತ್ತರವಿದೆ ಎಂದು ವಾದಿಸುವುದು ಸರಳೀಕೃತ ವಾದವಾಗುತ್ತದೆ.
ಯಾರು ಹೇಗೇ ಬೇಕಾದರೂ ತಮ್ಮ ಇಚ್ಚಾನುಸಾರ ವ್ಯಾಖ್ಯಾನಿಸಬಹುದಾದ ಈ ಗ್ರಂಥವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಿದಾಗ ಭಾರತೀಯ ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮ ಧರ್ಮವನ್ನು ಸಂರಕ್ಷಿಸುವ ಹಾಗು ಕ್ಷಾತ್ರ ಧರ್ಮವನ್ನು ಎತ್ತಿಹಿಡಿಯುವ ಮೂಲಕ ಪ್ರಭುತ್ವವನ್ನು ಬಲಗೊಳಿಸುವ ಗ್ರಂಥವಾಗಿಯೂ ಕಾಣುತ್ತದೆ.
ಹಾಗಾಗಿ ಭಗವದ್ಗೀತೆಯನ್ನು ಎಲ್ಲರೂ ಪವಿತ್ರ ಧರ್ಮ ಗ್ರಂಥವೆಂದು ಭಾವಿಸಬೇಕಿಲ್ಲ. ಕಾಗೇರಿಯವರ ಅಭಿಪ್ರಾಯವನ್ನು ಅನುಮೋದಿಸಲೂ ಬೇಕಿಲ್ಲ. ವಿರೋಧಿಗಳನ್ನು ದೇಶ ಬಿಟ್ಟು ತೊಲಗಲು ಆಜ್ಞಾಪಿಸಿರುವ ಕಾಗೇರಿಯವರು, ಇದೇ ರೀತಿ ಮುಸ್ಲಿಮರನ್ನು ಸಮುದ್ರಕ್ಕೆ ಎಸೆಯಲು ಆಜ್ಞಾಪಿಸಿದ ಥಾಕರೆಯರ ಅಪರಾವತಾರವಾಗಿ ಕಾಣುತ್ತಾರೆ. ಭಾಜಪ ಸರ್ಕಾರ ಸ್ಥಾಪಿಸಿದ್ದಕ್ಕೂ ಸಾರ್ಥಕವಾಯಿತೆಂದು ಸಂಘ ಪರಿವಾರ ಹೆಮ್ಮೆಯಿಂದ ಬೀಗುತ್ತಿರಬಹುದು. ಆದರೆ ಇಂಥವರೆಲ್ಲಾ ನಮ್ಮ ಮಂತ್ರಿಗಳಾಗಿದ್ದಾರಲ್ಲಾ ಎಂದು ಕರ್ನಾಟಕದ ಜನತೆ ಪರಿತಪಿಸುತ್ತಲೂ ಇರಬಹುದು.








durnth endre jana pritpisdiruvudu.
ಮೊದಲೇ ಹಗರಣಗಳ ಸರಮಾಲೆ ಹೊತ್ತುಕೊಂಡಿರುವ ಸರ್ಕಾರಕ್ಕೆ ಈ ಹೊಸ ’ಬಾಂಬ್’ ಬೇಡವಾಗಿತ್ತು.ಅಂತೂ ಭಾಜಪ ಮುಂದಿನ ಚುನಾವಣೆಯಲ್ಲಿ ಮತ್ತೆ ಆರಿಸಿ ಬರುವುದು ಬೇಡ ಎಂದು ನಿರ್ಧರಿಸಿದಂತಿದೆ.
nalkaru dinagalinda bageshri, itharara brahakke aneka prathkriyegalu bandive.
“sankaracharyarige modalu geetheya asthithvave thilidiralilla.shankararu adakke bhashyavannu baredu thamma mayavadada, jagatthu sullu endu saaralu adannu balasikonda meleye pracharakke bandaddu.(nanthara madhva,ramanujaroo adannu thamma siddhanthagalannu mandisalu balake madida mele charchege banthu.)kelavaru adannu shankarare baredu mahabharathadolakke thurukiddare endoo abhiprayapattiddare.”idannu indu yaradaru baredare dodda dhaliyannu edurisabekagutthade.
idu swami vivekanandara mathu.1897ralli. ee mathugale geetheya bagge bahala vishayavannu thilisutthave.motthamodalu idu rhindugalallara pavithra granthavenoo alla.eradu ee jagatthu nashvara.mithye emba mithya kalpaneyannu moodisalu pracharakke tharalagide.buddhana vicharagalu thanda echharavannu mulugisalu balasida ayudha geethe.
mysooru v.v.yalli thathvashsthrada professararoo s.radhakrishnanravara senior ada prof. m.hiriyannanavaru spashtavagi , vivaravagi bareyutthare:geetheya pradhana uddhesha karma yogavannu saaruvudu.andare samajada prathi vyakthiyoo avanige vidhisida kelasavannu gonagadade nishteyinda maduvudu.adakkagi jathi paddhathi(chathurvarnyam mayasristam)yannu heruvudu,shoodraru,sthreeyaru papayonigalendu keelagi kanuvudu. ivarellaru prathipalavillde dudiyabekendu(nishkama karma)bhodisuvudu getheya paramoddhesha.
inthha bhrathada janara nnu keelumaduva grantha parama poojya!rashtriya grantha!idannu yaroo prashnisabaradu!
aha enthaha manaveeya adarshada bhavanegalu!!!
ಶ್ರೀ ಜಿ .ಎನ್.ನಾಗರಾಜ ಅವರಿಗೆ ,
ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳಬೇಕೆಂಬ ಆಸೆಗೆ ಇಂಗ್ಲಿಶ್ ಲಿಪಿಯ ಬರಹ ಅಡ್ಡಿಯಾಗಿದೆ . ನನಗೆ ಅದೇನೆಂದು ಓದಿ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ . ದಯವಿಟ್ಟು ನೀವು ಕನ್ನಡ ಲಿಪಿಯಲ್ಲಿ ಬರೆದರೆ ಹೆಚ್ಚು ಮಂದಿ ನಿಮ್ಮ ವಿಚಾರಗಳನ್ನು ತಿಳಿಯಲು ನೆರವಾಗುತ್ತದೆ . ಈ ಕೋರಿಕೆ ನಿಮಗೆ ಮಾತ್ರವಲ್ಲ , ಅವಧಿಯಲ್ಲಿ ಪ್ರಕಟವಾಗುವ ಎಲ್ಲ ಪ್ರತಿಕ್ರಿಯೆಗಳು ಕನ್ನಡ ಲಿಪಿಯಲ್ಲಿದ್ದರೆ ಸರಾಗವಾಗಿ ಓದಿ ತಿಳಿಯಲು ಸಾಧ್ಯವಾಗುತ್ತದೆ . ಇದರ ಬಗ್ಗೆ ಸಂಪಾದಕರು ಪ್ರತಿಕ್ರಿಯಿಸುವವರಿಗೆ ಏನಾದರೂ ತಾಂತ್ರಿಕವಾದ ಸಲಹೆಯನ್ನು ನೀಡಲು ಸಾಧ್ಯವೇ ?
i also love to write in kannada.as a semiliterate in computers at present i am unable to handle so many things reg computers
till i learn to use kannada script options are to express in english or stop responding.
i will try the first option.
swamy vivekananda says in 1897:before shankaracharya very few knew about geetha.by writing a bhashya on geetha and using it to popularise mayavada-one of the most reactionary thinking in india propounding jaganmithya theory-geetha was brought to notice of scholrs of that time.this lead to madhva, ramanuja also writing bhashyas ongeetha to defend their theory. vivekananda says that some scholars even think that shankara himself wrote geetha and added to mahabharatha.
this clearly shows that geetha was an instrument to fight the awakening that was bhuddhism and varous other radical schools of thought. history tells us that shankara did this not only in the feild of thought but also took lead in destroying buddhist monasteries.
why geetha was so usefull to shankara?,what is the pradhana bhodhe of geetha?
so many radical thinkers like ambedkar and marxist historians like kosambi have analised it deeply. but let us turn to a conservative but yet highly objective author like prof. m.hirianna-was reknowned prof. of philosophy in mys univ-
eh very emphatically says that principal objective of the author of geetha is to make evry one to work without questioning chathurvarnya. work hard in all menial job that society allots to you.they should not expect any prathiphala. that is nishkama karma.that is svadharma. nobody should aspire for any changeof work. that is svadharme nidhanam shreyam.
geetha also says :all shudras and women are papayonis.
now we can understand the poltics behind so called geetha abhiyan. it is not only to communalise society, to make hindus to fight mlechchas, it is also to do away with democratic ideals of our constitution
“ಭಗವದ್ಗೀತೆ ಒಪ್ಪದವರು ದೇಶ ಬಿಟ್ಟು ತೊಲಗಲಿ” ಎಂದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಹೇಳಿಕೆ ಅಪ್ರಭುದ್ದ ಮತ್ತು ಸಂವಿಧಾನ ವಿರೋಧಿಯಾಗಿದೆ. ಈ ಹೇಳಿಕೆಯನ್ನು ದೇಶಪ್ರೇಮಿಗಳು ತೀವ್ರವಾಗಿ ಖಂಡಿಸಬೇಕಾಗುತ್ತದೆ.
ಈ ರಾಷ್ಟ್ರದ ಗ್ರಂಥ ಸಂವಿಧಾನವೇ ಹೊರತು ಭಗವದ್ಗೀತೆಯಲ್ಲ. ಭಾರತ ಹಲವು ಧರ್ಮ, ಜಾತಿ, ಭಾಷೆ, ಪಂಗಡ, ಆಚರಣೆಯಿಂದ ಕೂಡಿದ ದೇಶವೆಂಬುದನ್ನು ಸಚಿವರು ಮರೆತಿದ್ದಾರೆ, ನಮ್ಮ ಸಂವಿಧಾನದ ಅನುಚ್ಚೇದ 19(1) ರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವುದನ್ನು ಸಚಿವರು ಅರಿತು ಮಾತನಾಡುವುದು ಒಳಿತು. ಪ್ರಭುತ್ವವನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದೆ. ಪ್ರಶ್ನಿಸಿದವರನ್ನು ದೇಶದಿಂದ ಹೊರ ಹಾಕಿ ಎನ್ನುವ ವಿವೇಕ ಇಲ್ಲದ ಈ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಹಿಟ್ಲರನ ಫ್ಯಾಸಿಸ್ಟ್ ದೋರಣೆಯ ಅನುಕರಣೆಯಾಗಿದೆ.
ಪ್ರಾಥಮಿಕ ಮತ್ತು ಫೌಢಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನ ನಡೆಸಲು ಶೀರಸಿಯ ಸೋಂದಸ್ವರ್ಣವಲ್ಲಿ ಸಂಸ್ಥಾನಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಶಿಕ್ಷಣ ಇಲಾಖೆ, ಸರ್ಕಾರಿ ಶಾಲೆ ಹಾಗು ಶಿಕ್ಷಕರಿಗೆ ಆದೇಶಿಸುವ ಮೂಲಕ ರಾಜ್ಯದ ಬಿ.ಜೆ.ಪಿ. ಸಕರ್ಾರ ತನ್ನ ಕೋಮುವಾದಿ ಅಜೆಂಡವನ್ನು ಮುಗ್ದ ಮನಸ್ಸಿನ ಶಾಲಾ ಮಕ್ಕಳ ಮೇಲೆ ಹೇರುತ್ತಿರುವುದು ಖಂಡನೀಯ. ಈ ಅಭಿಯಾನವನ್ನು ನಡೆಸಲು ಅವಕಾಶ ನೀಡಬಾರದು ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಪ್ರಚಾರ ಹಾಗು ಧಾಮರ್ಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಯಾವುದೇ ಧರ್ಮಪ್ರಚಾರಕ್ಕೆ ಸಕರ್ಾರಿ ಶಾಲೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು.
ಶಾಲೆಗಳು ಯಾವುದೇ ಒಂದು ಧರ್ಮದ ಆಸ್ತಿಯಲ್ಲ, ಅಲ್ಲಿ ಹಿಂದು, ಮುಸ್ಲಿಮ್, ಸಿಖ್, ಜೈನ ಹಾಗೂ ಇತರೆ ಧರ್ಮದಲ್ಲಿ ನಂಬಿಕೆ ಇರುವವರು ಅಥವ ಧರ್ಮದಲ್ಲಿ ನಂಬಿಕೆ ಇಲ್ಲದವರೂ ಕೂಡ ಅಭ್ಯಾಸ ಮಾಡುತ್ತಿದ್ದಾರೆ. ಯಾವುದೇ ಒಂದು ಧಾಮರ್ಿಕ ಗ್ರಂಥವನ್ನು ಶಾಲೆಗಳಲ್ಲಿ ಪ್ರಸಾರ ಮಾಡುವುದು ಭಾರತ ಸಂವಿಧಾನದ ಧರ್ಮ ನಿರಪೇಕ್ಷ ತತ್ವಕ್ಕೆ ವಿರುದ್ದವಾಗಿದೆ. ಶಾಲೆಗಳನ್ನು ಧರ್ಮದ ಪ್ರಸಾರ ಕೇಂದ್ರಗಳನ್ನಾಗಿಸಲು ಹೊರಟಿರುವ ರಾಜ್ಯ ಸಕರ್ಾರದ ಕ್ರಮ ಫ್ಯಾಸಿಸ್ಟ್ ಮನೋಭಾವದ್ದಾಗಿದೆ.
ಭಗವದ್ಗೀತೆ ಪ್ರಶ್ನಾತೀತ ಗ್ರಂಥವಲ್ಲ ಎಂದುಕೊಂಡರೆ ಅದು ಮೂರ್ಖತನವಾದೀತು. ಆರ್ಯರ ಆಗಮನದಿಂದಲೇ ಪುರೋಹಿತಶಾಹಿ ವ್ಯವಸ್ಥೆಯ ಹೇರಿಕೆಯ ವಿರುದ್ದ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ವೈಧಿಕ ಪರಂಪರೆಯನ್ನು ಧಿಕ್ಕರಿಸಿದ ಶಿವಶರಣ ಕ್ರಾಂತಿಕಾರಿ ಬಸವಣ್ಣನವರ ಹೋರಾಟವನ್ನು ಸಚಿವರು ನೆನಪಿಸಿಕೊಳ್ಳಲಿ,. ಹಿಂದೂ ಧರ್ಮದಲ್ಲಿನ ಜಾತಿ ಪದ್ದತಿಯನ್ನು ಪ್ರಶ್ನಿಸಿ ಕನಕದಾಸರು, ಕಭೀರ ದಾಸರು ಮತ್ತಿತರ ಶರಣರು ಹೋರಾಡಿದ ಇತಿಹಾಸವಿದೆ. ಭಗವದ್ಗೀತೆಯ ಕುರಿತಾಗಿ ಕೆಲವು ಪ್ರಶ್ನೆಗಳಿದ್ದು ಅವುಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಾಗಿದೆಯೆಂದು ಸ್ವಾಮಿ ವಿವೇಕಾನಂದರು ಹೇಳಿರುವುದನ್ನು ಈ ಸನಾತನಿಗಳು ಮರೆತಿದ್ದಾರೆ. ಮನುಷ್ಯ ಮನುಷ್ಯರ ನಡುವಿನ ಜಾತಿ ಭೇದವನ್ನು ಸಮರ್ಥಿಸುವ ಮನುಸ್ಪ್ರುತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ರವರು ಸುಟ್ಟು ಹಾಕಿ ತಿರಸ್ಕರಿಸಿದ್ದನ್ನು ಸಚಿವರು ಮನದಟ್ಟುಮಾಡಿಕೊಳ್ಳಬೇಕು.
ಭಗವದ್ಗೀತೆ ರಾಷ್ಟ್ರೀಯ ಗ್ರಂಥವೂ ಅಲ್ಲ, ಎಲ್ಲಾ ಹಿಂದುಗಳ ಪವಿತ್ರ ಗ್ರಂಥವೂ ಅಲ್ಲ. ಬದಲಾಗಿ ಕೆಲ ವೈದಿಕರ ಗ್ರಂಥವಷ್ಟೇ ಎಂದು ಸಚಿವರು ತಿಳಿಯಬೇಕಾಗಿದೆ. ಇದನ್ನು ಸಾರ್ವತ್ರೀಕರಣಗೊಳಿಸುವುದು ಸಂವಿಧಾನಕ್ಕೆ ತೋರಿದ ಅಪಚಾರ. ಪ್ರಜಾಪ್ರಭುತ್ವ, ಸಂವಿಧಾನ, ಶಾಸಕಾಂಗ ಇವುಗಳು ರಚಿತವಾಗಲು ವಿದೇಶಿ ತಜ್ಞರ ಕೊಡುಗೆಯನ್ನ ಯಾರೂ ಮರೆಯುವಂತಿಲ್ಲ. ಈ ನಾಡಿನಲ್ಲಿ ವೈಚಾರಿಕ ಕ್ರಾಂತಿಗೆ ಕರೆ ನೀಡಿದ ರಾಷ್ಟಕವಿ ಕುವೆಂಪುರವರ ಸಾಹಿತ್ಯವನ್ನು ಓದಿ ವಿಶ್ವ ಮಾನವನಾಗಲು ಕಾಗೇರಿಯವರು ಪ್ರಯತ್ನಿಸಿದರೆ ಅದು ಶಿಕ್ಷಣ ಸಚಿವರ ಸ್ಥಾನಕ್ಕೆ ಸಲ್ಲುವ ಗೌರವ.
ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ, ಜಾತಿವ್ಯವಸ್ಥಯನ್ನು ಸಮರ್ತಿಸಲಾಗಿದೆ. ಯಾವುದೇ ಪ್ರತಿಫಲ ನಿರೀಕ್ಷಿಸದೇ ಸುಮ್ಮನೇ ದುಡಿಯಬೇಕು ಪ್ರತಿಫಲ ನೀಡುವುದು ದೇವರಿಗೆ ಬಿಟ್ಟಿದ್ದು ಎನ್ನುವ ಗೀತೆಯಸಾರ ಗುಲಾಮಗಿರಿ ಮತ್ತು ಪಾಳೇಗಾರಿ ವ್ಯವಸ್ಥೆಯನ್ನು ಪ್ರೋಸ್ತಾಯಿಸುವಂತಿದೆ. ಎದು ಶ್ರಮಶಕ್ತಿಯನ್ನು ಕಡೆೆಗಣಿಸುತ್ತದೆ. ಪುನರ್ಜನ್ಮ, ಪಾಪ-ಪುಣ್ಯ, ಆಸ್ತಿಗಾಗಿ ಸಹೋದರನ್ನು ಕೊಲ್ಲು ಹೀಗೆ ಮೌಡ್ಯತೆಯನ್ನ ಸಾರುವ ಜೀವವಿರೋಧಿ ಸಂದೇಶಗಳು ಗೀತೆಯಲ್ಲಿವೆ. ಹೀಗಾಗಿ ಇದು ಸರ್ವಸಮ್ಮತವಲ್ಲ. ಇದನ್ನು ಅನುಸರಿಸುವುದು ಕೆಲವರ ಖಾಸಗೀ ವಿಚಾರ. ಸರ್ಕಾರಿಶಾಲೆಗಳಲ್ಲಿ ಅಭಿಯಾನದ ಮೂಲಕ ಅಧಿಕೃತಗೊಳಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.
ಸರ್ಕಾರಿ ಶಾಲೆಗಳು ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿವೆ, ಸುಮಾರು ಶೇ 58 ರಷ್ಟು ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಶಿಕ್ಷಣ ವ್ಯಾಪಾರೀಕಣ, ಡೊನೇಷನ್ ಹಾವಳಿಯನ್ನು ನಿಯಂತ್ರಿಸಲು ಸಕರ್ಾರ ಮುಂದಾಗುತ್ತಿಲ್ಲ. ಬದಲಾಗಿ ಈ ರೀತಿಯ ಕೋಮುವಾದಿ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ಸರ್ಕಾರದ ಹೊಣೆಗೇಡಿತನವಾಗಿದೆ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಒಪ್ಪದಿರುವ ಭಗವದ್ಗೀತೆಯನ್ನು ಶಾಲೆಗಳಲ್ಲಿ ಭೋಧಿಸುವ ಅಗತ್ಯವಿಲ್ಲ. ಸಂವಿಧಾನ ಬದ್ದ ಶಾಲೆಗಳು ಆರ್.ಎಸ್.ಎಸ್. ಕೇಂದ್ರಗಳಾಗಬೇಕಿಲ್ಲ. ಅಪ್ರಾಪ್ತ ಎಳೇ ಮಕ್ಕಳಲ್ಲಿ ಬಲವಂತದ ಮತ ಪ್ರಚಾರ ಮಾಡುತ್ತಿರುವ ತಾವು ಕಾನೂನು ಉಲ್ಲಂಘಿಸುತ್ತಿದೆ. ಇಂತಹ ಸಂವಿಧಾನ ವಿರೋಧಿ ಅಭಿಯಾನವನ್ನು ರಾಜ್ಯ ಸಕರ್ಾರ ಕೂಡಲೇ ಹಿಂಪಡೆಯಬೇಕು ಮತ್ತು ಶಿಕ್ಷಣ ಸಚಿವ ಕಾಗೇರಿ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು.
– ಹೆಚ್.ಆರ್.ನವೀನ್ ಕುಮಾರ್
ಬೆಂಗಳೂರು