’ಗಾಂಧಿ ಬೇರೆ, ಅಂಬೇಡ್ಕರ್ ಬೇರೆ’ … ನಿಜ. ಅಷ್ಟೇ ನಿಜ ’ಗಾಂಧಿ ಅಥವಾ ಅಂಬೇಡ್ಕರ್’ ಆಗಬೇಕಿಲ್ಲ ಎನ್ನುವುದು.
ಈ ಬಗ್ಗೆ ಇನ್ನಷ್ಟು ಚರ್ಚೆ ಆಗಿ. ಸ್ಪಷ್ಟತೆ ಸಿಗುವುದೆಂಬ ಆಶಯದೊಂದಿಗೆ ಮಹದೇವ್ ಹಡಪದ್ ಅವರು ಬರೆದ ಈ ಬರಹವನ್ನು ಚರ್ಚೆಗಿಡುತ್ತಿದ್ದೇವೆ.
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
***
ಮಹದೇವ ಹಡಪದ್
ಗಾಂಧಿ ಬೇರೆ ಅಂಬೇಡ್ಕರ್ ಬೇರೆ… ಅವರಿಬ್ಬರನ್ನು ಬೆಸೆಯುವ ಕೆಲಸ ನಿರಂತರ ನಡೆಯುತ್ತಿದೆ.
ಒಬ್ಬರನ್ನು ನೆನೆದಲ್ಲಿ ಇನ್ನೊಬ್ಬರ ಹೆಸರೂ ಇರುತ್ತದೆಂಬ ಮಾತನ್ನು ಅನೇಕ ವಿದ್ವಾಂಸ ಜೀವಗಳ್ಳರು ಸಭೆ ಸಮಾರಂಭಗಳಲ್ಲಿ ಹೇಳಿದ್ದಾರೆ. ಆದರೆ ಅಂಬೇಡ್ಕರ್ ಅವರಿಗೆ ಇದ್ದ ಸ್ಪಷ್ಟತೆ ಗಾಂಧಿಗಿರಲಿಲ್ಲ. ಗಾಂಧಿಗಿದ್ದ ತೋರಿಕೆಯ ಗುಣಗಳು ಅಂಬೇಡ್ಕರ್ ಅವರಲ್ಲಿ ಇರಲಿಲ್ಲ. ಅವರಿಬ್ಬರ ಬರಹಗಳನ್ನು ಓದುವಾಗ ಇದು ಸ್ಪಷ್ಟವಾಗುತ್ತದೆ.

ನೈತಿಕವಾಗಿ ಜಗತ್ತು ಋಜುಮಾರ್ಗದಲ್ಲಿ ಹೋಗಬೇಕೆಂಬ ಕಾರಣಕ್ಕಾಗಿ ಮೌಲ್ಯಗಳನ್ನು ರೂಪಿಸುವುದನ್ನು ಧರ್ಮದ ಕಟ್ಟಳೆಗೆ ಒಳಪಟ್ಟ ವ್ಯಕ್ತಿ ಮಾಡುತ್ತಲಿರುತ್ತಾನೆ. ಆತ ವ್ಯವಸ್ಥೆಯ ಲೋಪಗಳನ್ನು ತಿದ್ದುವುದಕ್ಕೆ ಮುಂದಾಗುವುದು ಆ ಕಾರಣಕ್ಕಾಗಿಯೇ… ಈ ದೇಶದ ಯಾವದೆ ಮೂಲೆಯಲ್ಲಿ ಹೋಗಿ ರಘುಪತಿ ರಾಘವ ರಾಜಾರಾಂ ಹಾಡಿದರೆ ಸಾಕು ಆ ಮೂಲೆಯ ಜನರ ಕಣ್ಣಮುಂದೆ ಗಾಂಧಿ ಬರುತ್ತಾನೆ. ಅದು ಈ ದೇಶದ ಜನಸಮೂಹದ ನಾಡಿಮಿಡಿತ ಎಂಬುದು ಗಾಂಧಿಗೆ ಅರ್ಥವಾಗಿತ್ತು. ಯಾಕೆಂದರೆ ನಮ್ಮಲ್ಲಿ ಆಗಿಹೋಗಿರುವ ಬಹಸಂಖ್ಯೆಯ ಸಮಾಜ ಸುಧಾರಕರು ಮಾಡಿದ್ದು ಇದನ್ನೆ.

ಆದರೆ ಅಂಬೇಡ್ಕರ್ ನಿಲುವು ನ್ಯಾಯ ಪಡೆಯುವುದಾಗಿತ್ತು. ಅದನ್ನು ಯಾರಾದರೂ ಕೊಡುತ್ತಾರೆ ನಾವು ಪಡೆಯಬೇಕೆಂಬುದು ಆಗಿರಲಿಲ್ಲ. ಅದು ನಮ್ಮ ಹಕ್ಕು. ನಮ್ಮ ಹಕ್ಕನ್ನು ನಾವುನಾವೇ ಸೃಷ್ಟಿಸಿಕೊಂಡು ಅನುಭವಿಸಬೇಕೆಂಬುದಾಗಿತ್ತು. ಚೌಕಾಮೇಳನಂತೆ ಯಾತ್ರೆಯಲ್ಲಿ ಹೊರಟಾಗ ಜಾತಿಬಿಟ್ಟು ಗುಡಿಯ ಪೌಳಿ ಮುಂದೆ ನಿಂತಾಗ ಅದೆ ಜಾತಿ ಧುತ್ತನೆ ಎದುರಾಗುವುದನ್ನು ಅವರು ಸಹಿಸದಾಗಿದ್ದರು. ಅಂಥ ದೇವರು, ದೇವಸ್ಥಾನಗಳು ಅಂಥ ಕ್ರಾಂತಿಕಾರಕ ಯಾತ್ರೆ(ದಿಂಡಿ)ಯ ಬದಲಾವಣೆಗಳು ಬೇಡವಾಗಿದ್ದವು. ಸಮಗ್ರ ಬದಲಾವಣೆಗಾಗಿ ಅವರು ಹೋರಾಟ ನಡೆಸಿದ್ದರು. ಸಮಾಜವಾದದ ನೆಪದಲ್ಲಿ ಅಂಬೇಡ್ಕರರನ್ನು ಎಲ್ಲೋ ಸೋರುವ ಮಾಳಿಗೆಯ ಕೆಳಗೆ ನಿಲ್ಲಿಸಿ ಮಾತನಾಡುವುದು ಸರಿಯಲ್ಲವೆನಿಸುತ್ತದೆ.






ಒಂದು ಅನುಮಾನ…
ಗಾಂಧೀ ಮತ್ತು ಅಂಬೇಡ್ಕರ್ ಇಬ್ಬರನ್ನೂ ನಾವು ‘ನಮ್ಮ-ನಮ್ಮದೇ ಇತಿಹಾಸ’ದ ನೆಲೆಗಟ್ಟಿನಲ್ಲಿ ನೋಡುವ ಅವಶ್ಯಕತೆಯಿದೆಯಾ? ಯಾರು ಹೆಚ್ಚು ಯಾರು ಕಮ್ಮಿ ಎನ್ನುವ ಯಾವ ವಿಮಶರ್ೆಯೂ ನಮ್ಮ ಈ ಹೊತ್ತಿನ ಬದುಕನ್ನು ಸುಧಾರಿಸಲು ಸಾಧ್ಯವಿದೆ ಅಂತ ಈ ವಾದ !! ಬಹುಶಃ ಇಂದು ಅಂಬೇಡ್ಕರ್ ಅಥವಾ ಗಾಂಧೀ ಯಾರೊಬ್ಬರೇ ಬದುಕಿದ್ದರೂ ನಮ್ಮ ಈ ಪೂವರ್ಾಗ್ರಹ ಅಥವಾ ಮತ್ಯಾವುದೋ ‘ಇಸಂ’ಗಳ ಲೆಕ್ಕಾಚಾರದಲ್ಲಿ ಸ್ವತಃ ಬಳಲಿ ತಲೆಮರೆಸಿಕೊಳ್ಳುತ್ತಿದ್ದರೇನೋ..
ಮಹಾದೇವಣ್ಣ, ನೀವು ಮಾತ್ರವಂತಲ್ಲ ನಾವೂ ಸೇರಿದಂತೆ ತೀರಾ ಖಾಲಿಯಾಗಿ, ಸಮಾ ಯೋಚನೆ ಮಾಡುವ ಬದಲು ಸುತ್ತು ಬರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದು ಯಾವಾಗ ಅಂತ ನೆನಪಿಸಿಕೊಳ್ಳುತ್ತಿದ್ದೇನೆ. ಫೇಸ್ಬುಕ್ಕಿನ ಪೇಜುಗಳಲ್ಲಿ ಅಂಬೇಡ್ಕರ್- ಗಾಂಧೀಯನ್ನು ನಿಲ್ಲಿಸಿ ಕಲ್ಲಿನ ಹಾಗೇ ಕಾಮೆಂಟ್ ಎಸೆಯುತ್ತಾ ಪರಸ್ಪರ ತಿಕ್ಕಾಡುವಾಗೆಲ್ಲ ನಾನು ಮೇಲಿನದ್ದನ್ನು ಮತ್ತು ಈಗಲೂ ಹೇಳಲಾಗದೇ ಉಳಿದಿರುವ ಅದೆಷ್ಟೊಂದನ್ನು ಕುರಿತು ದ್ವಂದ್ವದಲ್ಲಿರುತ್ತೇನೆ. ದಯಮಾಡಿ ತಿಳಿಸಿ ಸಮಾಜವಾದದ ನೆಪದಲ್ಲಾದರೂ ಸರಿ ಅಥವಾ ಅದನ್ನು ವಿರೋಧಿಸುವ ನಿಮ್ಮ ನೆಲೆಯಲ್ಲಾದರೂ ಸರಿ. ಅಂಬೇಡ್ಕರ್ / ಗಾಂಧೀಯನ್ನು ಅಷ್ಟು ಸುಲಭವಾಗಿ ದಕ್ಕಿಸಿಕೊಂಡು ಟೀಕೆ, ವಿಮಶರ್ೆ ಅಥವಾ ಸಮರ್ಥನೆ ಯಾವುದನ್ನಾದರೂ ಮಾಡುವಷ್ಟು ಗಟ್ಟಿತನ ನಾವು, ನೀವು ನಿಜಕ್ಕೂ ಬೆಳೆಸಿಕೊಂಡಿದ್ದೀವಾ… ಇದ್ದಿದ್ದರೂ ಉಳಿಸಿಕೊಂಡಿದ್ದೇವಾ?
1. ಅಂಬೇಡ್ಕರ್ನನ್ನು ಕೇವಲ ಒಂದು ವರ್ಗಕ್ಕೇ ಸೀಮಿತಗೊಳಿಸಿ, ಅವರ ಪ್ರಾಮಾಣಿಕ ಹೋರಾಟವನ್ನು ಮುಖ್ಯವಾಗಿ ಅದರ ಉದ್ದೇಶವನ್ನು ಇನ್ನೂ ಸಾಧಿಸದೇ ಅವರು ಅಗಲಿದ ಸುಮಾರು 58 ವರ್ಷಗಳ ನಂತರವೂ ಅದನ್ನೇ ಹಸಿ-ಹಸಿಯಾಗಿಟ್ಟುಕೊಂಡಿರುವುದರ ಬಗ್ಗೆ ಯಾಕೆ ಚಚರ್ಿಸುವುದಿಲ್ಲ. ಶಿಷ್ಯ ತನ್ನನ್ನು ಮೀರಿಸಲಿ ಅಂತ ಕಾಯುವ ಗುರುವಿನಂತಹ ಅಂಬೇಡ್ಕರ್ ಕುರಿತು ಅಂಬೇಡ್ಕರ್ನನ್ನು ಗುತ್ತಿಗೆ ಹಿಡಿದವರಂತೆ ಆಡುವ ಯಾರೊಬ್ಬರೂ ಅಂಬೇಡ್ಕರ್ ದೃಷ್ಟಿಕೋನದಲ್ಲಿ ನೋಡಲು ಸಾಧ್ಯವಾಗಿಲ್ಲ ಯಾಕೆ? ಅಂಥಹ ಧೀಮಂತ ಹೋರಾಟಗಾರನೊಬ್ಬನ ಹಾರೈಕೆ, ಎದುರಿಸಿದ ಸವಾಲುಗಳ ಪ್ರತಿಯಾಗಿ ಮತ್ತೊಬ್ಬ ಅಂಬೇಡ್ಕರ್ನನ್ನು ಹುಟ್ಟುಹಾಕಲಾಗದೇ ಉಳಿದಿದ್ದಕ್ಕೆ ಬಹುಶಃ ಅಂಬೇಡ್ಕರ್ ಈಗ ನೋಯುತ್ತಿರಲಾರರೇ?
2. ಮತ್ತು ಗಾಂಧೀ… ಬಹುಶಃ ಗೋಡ್ಸೆಯಷ್ಟೇ ಟೀಕೆಗೊಳಪಡುತ್ತಿರುವ ಮತ್ತೊಬ್ಬ ವ್ಯಕ್ತಿ ಗಾಂಧೀ ಅಂತ ಅಂದಾಜಿಸಲು ಒಂಥರಾ ಮುಜುಗರವಾಗುತ್ತಿದೆ. ಆದರೂ ಸತ್ಯ- ಸತ್ಯ ತಾನೇ. ಗಾಂಧಿಯಲ್ಲಿ ಇದ್ದಿರಬಹುದಾದ ರಾಜಕೀಯ ಮನಸ್ಥಿತಿಯಾಗಿರಬಹುದು, ಒಂದಷ್ಟು ತೋರಿಕೆ – ಮತ್ತಷ್ಟು ಸರಳತೆ, ಒಂದಷ್ಟು ಪಕ್ಷಪಾತ- ಮತ್ತಷ್ಟು ಉದಾರತೆ, ಒಂದಷ್ಟು ತಪ್ಪುಗಳು- ಮತ್ತಷ್ಟು ಪಶ್ಚಾತ್ತಾಪ… ಕೂಡಿ ಕಳೆದು ಒಂದು ಪಕ್ಕಾ ಮನುಷ್ಯ ಬದುಕನ್ನು ಬದುಕಿದವರ ಸುತ್ತ ನಾವು ನ್ಯಾಯಾಧೀಶರಾಗ ಹೊರಟಿದ್ದೇವೆ. ಇತ್ತ ಸಮಥರ್ಿಸುವವರೂ ಇನ್ನೂ ಗಾಂಧೀಯಾಗುವ ಹಾದಿಯಲ್ಲಿಲ್ಲ..ಸರಿಯಾ ಮಾರ್ರೇ ಇದು??
ಉಫ್..
ಮಾದೇವಣ್ಣ, ನಿಮ್ಮ ಲೇಖನಕ್ಕೇ ಇಷ್ಟೆಲ್ಲಾ ಬರೆದಿದ್ದಲ್ಲ.. ಆದರೆ ಇಷ್ಟೆಲ್ಲಾ ಹೇಳುವ ಅವಶ್ಯಕತೆಯಂತೂ ಯಾವತ್ತಿಂದಲೂ ಇತ್ತು. ಕ್ಷಮಿಸಿ..
ಆದರೆ ಪಾಪ, ಆದರ್ಶದ ಪಾಠ ಹೇಳಿಕೊಟ್ಟ ಇಬ್ಬರನ್ನೂ ಅವರವರ ಪಾಡಿಗೆ ಬಿಟ್ಟು ನಾವು ಮುಂದುವರೆಯಲಾಗುವುದಿಲ್ಲವಾ ಅನ್ನುವ ಪ್ರಶ್ನೆ ಹೊಟ್ಟೆಯೊಳಗಿಟ್ಟುಕೊಂಡು ಇನ್ನೂ ಉಳಿಯಲಾಗದ ಸಂಕಟಕ್ಕೆ ಹೇಳಿಕೊಳ್ಳುತ್ತಿದ್ದೇನೆ..
ಒಬ್ಬರಿಗೆ ಗುಂಡಿಟ್ಟರು, ಮತ್ತೊಬ್ಬರು ಬದುಕಿದ್ದಾಗಲೇ ಗಾಯಗೊಂಡವರು. ಈಗಲಾದರೂ ಅವರನ್ನು ತಣ್ಣಗೆ ಬಿಟ್ಟುಕೊಟ್ಟು, ಅವರ ನೆನಪಿನಲ್ಲಿ ನಾವೂ ಗಾಂಧೀಯಾಗಿ, ಅಂಬೇಡ್ಕರ್ ಆಗಿ….. ಸಾಧ್ಯವಿಲ್ಲವಾ?????
ನಮ್ಮೊಳಗೊಬ್ಬ ಅಂತಹವರಿದ್ದೇ ಇರುತ್ತಾರೆ, ಬಹುಶಃ ಅವರಿಬ್ಬರೂ !!
ಅಂತಂದುಕೊಂಡು ಮುಗಿಸುತ್ತೇನೆ..
🙂