ಮೂಲ ಕನ್ನಡ ಕೃತಿಗಳಿಂದ ಮಾತ್ರ ಕನ್ನಡದ ಉಳಿವು;
ಎರವಲು(ಎಂಜಲು) ಕೃತಿಗಳಿಂದ ಅಲ್ಲ
ಮಾನ್ಯರೆ,
ಕನ್ನಡದ ಉಳಿವಿಗಾಗಿ ಕನ್ನಡದಲ್ಲಿ ಸೃಜನಶೀಲ ಕೃತಿಗಳು ಹೆಚ್ಚು ಹೆಚ್ಚು ಬರಬೇಕು ಎನ್ನುವುದು ಸರಿಯಾದ ಚಿಂತನೆ;ಬೇರೆಯವರ ಸೃಜನಶೀಲತೆಯನ್ನು ತಮ್ಮದೆಂಬಂತೆ ಆತ್ಮವಂಚನೆಯಲ್ಲದೆ ಅರ್ಥಯುತವಾದ ಚಿಂತನೆಯಲ್ಲವೆಂದು ನನ್ನ ಅನಿಸಿಕೆ. ಈಗ ಜನಶ್ರೀ ವಾಹಿನಿಯವರು ಆರ್ ಕೆ ನಾರಾಯಣ್ ಅವರ ಇಂಗ್ಲಿಷ್ ಕಥೆಗಳ ಸರಣಿಯನ್ನು ಆಧರಿಸಿ ಹಿಂದಿಯಲ್ಲಿ ತಯಾರಿಸಿದ್ದ ‘ಮಾಲ್ಗುಡಿ ಡೇಸ್’ ಅನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಗತ್ಯವಾದಷ್ಟು ಸಂಭಾಷಣೆಗಳನ್ನು ಮಾತ್ರ ಅಡಿಬರಹದಲ್ಲಿ ಕನ್ನಡದಲ್ಲಿ ಕೊಟ್ಟು ಮೂಲ ಚಿತ್ರ ಸರಣಿಯ ಭಾಷೆಯಲ್ಲಿಯೇ ಕೃತಿಯನ್ನು ಕೇಳಿಸಿಕೊಳ್ಳಲು ಅವಕಾಶ ಒದಗಿಸಿರುವುದು ಕನ್ನಡದ ಪ್ರಬುದ್ಧ ಪ್ರೇಕ್ಷಕರ ವಿವೇಕಕ್ಕೆ ತೋರಿದ ಗೌರವವಾಗಿದೆ. ಆಮೀರ್ ಖಾನ್ ಅವರು ಕೂಡ ಸತ್ಯಮೇವ ಜಯತೆಯ ಇಂಗ್ಲಿಷ್ ಆವೃತ್ತಿಯನ್ನು ಮೂಲ ಹಿಂದಿಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಉಳಿಸಿ ಇಂಗ್ಲಿಷ್ ಬಲ್ಲವರು ಅರ್ಥಮಾಡಿಕೊಳ್ಳಲು ನೆರವಾಗುವಷ್ಟು ಇಂಗ್ಲಿಷಿನಲ್ಲಿ ಸಂಭಾಷಣೆಗಳನ್ನು ಅಡಿ ಬರಹದಲ್ಲಿ ನೀಡುತ್ತಿರುವುದನ್ನೂ ಗಮನಿಸಬೇಕು.
ದೂರದರ್ಶನದಲ್ಲಿ ಭಾನುವಾರಗಳಂದು ಪ್ರಸಾರವಾಗುವ ವಿವಿಧ ಭಾರತೀಯ ಭಾಷೆಗಳ ಚಿತ್ರಗಳಲ್ಲಿಯೂ ಸಂಭಾಷಣೆಗಳು ಭಾರತೀಯ ಭಾಷೆಗಳ ಅಡಿ ಬರಹದಲ್ಲಿ ಲಭ್ಯವಿರುವುದರಿಂದ ಪ್ರೇಕ್ಷಕರು ಮೂಲ ಭಾಷೆಯನ್ನು ಕೇಳುವುದರೊಂದಿಗೆ ತಮಗೆ ಬೇಕಾದ ಭಾಷೆಯಲ್ಲಿ ಅಡಿ ಬರಹಗಳ ಸಂಭಾಷಣೆಯನ್ನು ಓದಿ ಅರ್ಥಮಾಡಿಕೊಳ್ಳುತ್ತಾರೆ. ಅನೇಕ ಭಾರತೀಯ ಭಾಷೆಗಳ ಚಿತ್ರಗಳ ಅಡಕತಟ್ಟೆಗಳು ಇತರ ಭಾರತೀಯ ಭಾಷೆಗಳ ಸಂಭಾಷಣೆಗಳ ಅಡಿಬರಹದಲ್ಲಿ ಲಭ್ವಯವಿವೆ. ಇದರಿಂದ ಈ ಚಿತ್ರಗಳಿಗೆ ಮೂಲಭಾಷೆಯಲ್ಲಿ ತಯಾರಾದ ಕೃತಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿ ತಮ್ಮ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.
ಇತ್ತೀಚೆಗೆ ರಾಷ್ಟ್ರಪತಿಗಳ ಚಿನ್ನದ ಕಮಲ ಪ್ರಶಸ್ತಿ ಪಡೆದ ಕನ್ನಡದ ಪ್ರತಿಭಾವಂತ ಯುವ ನಿರ್ದೇಶಕ ಶ್ರೀ ಅಭಯ ಸಿಂಹ ಅವರು ಸ್ವತಂತ್ರವಾಗಿ, ಪ್ರತ್ಯೇಕವಾಗಿಯೇ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ತಯಾರಿಸಿದ್ದ ಶಿಕಾರಿ ಚಿತ್ರವು ಮಲಯಾಳಂ ಮತ್ತು ಕನ್ನಡ ಪ್ರೇಕ್ಷಕರನ್ನು ನಿರೀಕ್ಷಿಸಿದ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ. ಕಂಠದಾನದ ನೆರವು ಪಡೆಯದೆ ಮಮ್ಮೂಟಿಯವರೇ ಕನ್ನಡದಲ್ಲಿ ಸಂಭಾಷಣೆಗಳನ್ನು ಹೇಳಿದ್ದರೂ ಅದು ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿಲ್ಲ. ಮಲೆಯಾಳಂ ಪ್ರೇಕ್ಷಕರೂ ಇದು ಕನ್ನಡದಿಂದ ಧ್ವನಿವಾಹಿನಿ ಮಾತ್ರ ಬದಲಿಸಿದ (ಡಬ್ ಮಾಡಿದ) ಚಿತ್ರವೆಂಬಂತೆ ದೂರವಿರಿಸಿದರು. ಅಂದರೆ ಒಂದು ಭಾಷೆಯ ನಿಜ ಬಳಕೆಯ ಸಂರ್ಭವನ್ನು ಇನ್ನೊಂದು ಭಾಷೆಯ ನಿಜಬಳಕೆಯ ಸಂದರ್ಭವಾಗಿಸುವುದು ಕಷ್ಟ. ಆದರೆ ಅಡಿಬರಹದ ಸಂಭಾಷಣೆಯಿದ್ದಾಗ ಚಿತ್ರವನ್ನು ಮೂಲಭಾಷೆಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಒಪ್ಪಿ ಸ್ವೀಕರಿಸಿ ಅನುವಾದಿಸಿರುವ ಸಂಭಾಷಣೆಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರೆ.
ಆದ್ದರಿಂದ ಸತ್ಯಮೇವ ಜಯತೆಯನ್ನೂ ಅದರ ಇಂಗ್ಲಿಷ್ ಅವತರಣಿಕೆಯ ಹಾಗೆ ಎಲ್ಲ ಭಾರತೀಯ ಭಾಷೆಗಳಲ್ಲಿ ಅಡಿ ಬರಹದ ಸಂಭಾಷಣೆಗಳೊಂದಿಗೆ ಪ್ರಸಾರಮಾಡುವಂತೆ ಅಮೀರ್ ಖಾನ್ ಅವರನ್ನೂ ನಾನು ಕೋರಿದ್ದೇನೆ. ಈಗ ಅವರು ವಿವಿಧ ಭಾಷಾ ಪತ್ರಿಕೆಗಳಲ್ಲಿ ಆಯಾ ವಾರ ಪ್ರಸಾರವಾದ ಕಂತಿನ ಅನುವಾದವನ್ನು ಲೇಖನ ರೂಪದಲ್ಲಿ ನೀಡುತ್ತಿರುವುದು ಸ್ವಾಗತಾರ್ಹ. ಇದನ್ನು ದೂರದರ್ಶನ ವಾಹಿನಿ ನೋಡಲಾರದ, ಪತ್ರಿಕೆ ಓದಲಾರದ ದೃಷ್ಟಿಹೀನತೆಯುಳ್ಳವರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಧ್ವನಿರೂಪದಲ್ಲಿಯೂ ನೀಡಬಹುದು. ಅವನ್ನು ವಿವಿಧ ಎಫ್ ಎಂ ವಾಹಿನಿಗಳಲ್ಲಿ ಪ್ರಸಾರಮಾಡಬಹುದು.
ಭಾರತದ ಮಾತ್ರವಲ್ಲ, ಜಗತ್ತಿನ ಯಾವ ಭಾಷೆಯ ಚಿತ್ರವನ್ನೂ ಈ ರೀತಿ ಅಡಿ ಬರಹದಲ್ಲಿರುವ ಅನುವಾದಿತ ಸಂಭಾಷಣೆಯ ಸರಳ ವಿಧಾನದ ಮೂಲಕ ಇತರ ಭಾಷೆಗಳವರು ಅರ್ಥಮಾಡಿಕೊಳ್ಳುತ್ತಾರೆ.
ಈ ವಿಷಯದಲ್ಲಿ ದಯವಿಟ್ಟು ಎಲ್ಲರೂ ನಿರುದ್ವಿಗ್ನವಾಗಿ ಯೋಚಿಸಬೇಕೆಂದು ಕೋರುತ್ತೇನೆ.
ಪ್ರೀತಿಯಿಂದ
ಪಂಡಿತಾರಾಧ್ಯ
ಮೈಸೂರು
]]>





i oppose this thought process.ok subtitles are important and may be used at national level..but this “malgudi Days” is from our soil and our own actors acted in it.. and it would have been nice if it was dubbed to kannada so that we could understand it more clearly. i think channel has lost a golden chance in this pro and anti DUBBING era.
kannada Sub title ero bekadastu picture nodidini. Adralu sakastu kagunita tapirate. Mate navu odo astrali bere sambhashane band hogirrate. Nav odutirovaga actors kodo expression atva yeno photography kai chalak gamanisade hogbitivi. Dubb madidre yen tondre nimge?
kannada meshtrugalu kannadada pratama vairigalu. ivaru adannu bere bere vruttirangada anubhavagala sahaja abhivyakti maadhyama aagalu bidade keshi darpanana shabda maargada shuddakke taralu mattu ade coukattinolage ellavannu arta maadikollalu saadya emba maha bhrameyolagiddaare. kocchiyalli mohanlal sainyada apapracarakke malayala shikari baliyaddakke naane saakshi
ಪಂಡಿತಾರಾಧ್ಯರೇ, ಇದು ಉದ್ವಿಗ್ನತೆ ನಿರುದ್ವಿಗ್ನತೆಯ ಪ್ರಶ್ನೆಯಲ್ಲ.ಪ್ರಜಾಸತ್ತಾತ್ಮಕ ರಚನೆಯಲ್ಲಿ ಜ್ಞಾನ-ಮನರಂಜನೆಯ ಕಂಟೆಂಟ್ ಅನ್ನು ತಮ್ಮ ಮಾತೃಭಾಷೆಯಲ್ಲಿ ಪಡೆಯುವ ಹಕ್ಕು ಜನರಿಗೆ ಇರುತ್ತದಾ ಇಲ್ಲವಾ ಎಂಬ ಪ್ರಶ್ನೆ.ನಿಮ್ಮ ವಾದ ಸರಣಿಯನ್ನು ನೋಡಿದರೆ “ಮಾಲ್ಗುಡಿ ಡೇಸ್” ನಂಥ ನಿರ್ಮಾಣಗಳನ್ನು ನೋಡಿ ಆನಂದಿಸುವ ಹಕ್ಕು ಸೌಲಭ್ಯ ಕೇವಲ ಕನ್ನಡ ಸಬ್ ಟೈಟಲ್ ಓದಬಲ್ಲ ಅಕ್ಷರ ಜ್ಞಾನವಿರುವವರದು. ಸಣ್ಣ ಪುಟ್ಟ ಊರುಗಳಲ್ಲಿ,ಗ್ರಾಮಾಂತರ ಪ್ರದೇಶಗಳಲ್ಲಿ ಓದು ಅರಿಯದ, ಹಿಂದಿ ಭಾಷೆಯೂ ಗೊತ್ತಿಲ್ಲದ ಲಕ್ಷಾವಧಿ ಜನರಿಗೆ ಅದೆಲ್ಲ ಏಕೆ? ಎಂಬ ಗ್ರಹಿಕೆ ಇದ್ದಂತಿದೆ.ಯಾರ ಯಾವ ಕನ್ನಡದ ಉಳಿವಿನ ಬಗ್ಗೆ ನೀವು ಮಾತಾಡುತ್ತಿದ್ದೀರಿ? ಪರೋಕ್ಷವಾಗಿ ಸಿನಿಮ ರಂಗದ ಉಳಿವಿನ ಕುರಿತು ಅನಗತ್ಯವಾಗಿ ಭಯಬಿದ್ದಿರುವ ಕೆಲ ಕಮರ್ಶಿಯಲ್ ಹಿತಾಸಕ್ತಿಗಳ ಕನ್ನಡ ಕಾಳಜಿಯನ್ನು ನೀವು ನಿಜವಾದ ಕನ್ನಡ ಕಾಳಜಿ ಎಂದು ತಪ್ಪು ಭಾವಿಸಿದಂತಿದೆ, ನಿರುದ್ವಿಗ್ನವಾಗಿ ಯೋಚಿಸಿ ನೋಡಿ.
Sir,
There are problem with subtitles,We will not be able to see the photography,the expressions of the faces, Also the Subtitles move fast. You wont enjoy the movie/serial to the core.
ಆದ್ದರಿಂದ ಸತ್ಯಮೇವ ಜಯತೆಯನ್ನೂ ಅದರ ಇಂಗ್ಲಿಷ್ ಅವತರಣಿಕೆಯ ಹಾಗೆ ಎಲ್ಲ ಭಾರತೀಯ ಭಾಷೆಗಳಲ್ಲಿ ಅಡಿ ಬರಹದ ಸಂಭಾಷಣೆಗಳೊಂದಿಗೆ ಪ್ರಸಾರಮಾಡುವಂತೆ ಅಮೀರ್ ಖಾನ್ ಅವರನ್ನೂ ನಾನು ಕೋರಿದ್ದೇನೆ. ಈಗ ಅವರು ವಿವಿಧ ಭಾಷಾ ಪತ್ರಿಕೆಗಳಲ್ಲಿ ಆಯಾ ವಾರ ಪ್ರಸಾರವಾದ ಕಂತಿನ ಅನುವಾದವನ್ನು ಲೇಖನ ರೂಪದಲ್ಲಿ ನೀಡುತ್ತಿರುವುದು ಸ್ವಾಗತಾರ್ಹ. ಇದನ್ನು ದೂರದರ್ಶನ ವಾಹಿನಿ ನೋಡಲಾರದ, ಪತ್ರಿಕೆ ಓದಲಾರದ ದೃಷ್ಟಿಹೀನತೆಯುಳ್ಳವರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಧ್ವನಿರೂಪದಲ್ಲಿಯೂ ನೀಡಬಹುದು. ಅವನ್ನು ವಿವಿಧ ಎಫ್ ಎಂ ವಾಹಿನಿಗಳಲ್ಲಿ ಪ್ರಸಾರಮಾಡಬಹುದು.
How does the writer expects a visually impaired monolingual Kannadiga to understand the audio version of Satyamev Jayate???
Or is he asking for the special Kannada dub, sorry, audio version only for the visually impaired in Kannada, or is he appealing to the monolingual visual impaired to learn Hindi, so that the Satyameva Jayate’s originality and sanctity remains unharmed. Is this what you want Sir? I’m still trying to make some sense.
And appreciations for your concern towards the visually impaired, please try to look at the monolingual Kannadigas and non-readers with some extra concern. Thank You.
Why shouldn’t we call monolingual Kannadigas and non-readers Linguistically Impaired or linguistically challenged? For some it may sound obnoxious, but this is what monolinguals and non-readers are made to feel and believe by the film industry and its ban on dubbing.
ವಿವಿಧ ಬಗೆಯಲ್ಲಿ ಪ್ರಾಕೃತಿಕವಾಗಿ ವಂಚಿತರಾಗಿರುವವರ, ಎಲ್ಲ ಸಮರ್ಪಕವಾಗಿದ್ದೂ ಅನಕ್ಷರಸ್ಥರಾಗಿರುವವರು ಮೊದಲಾದ ಎಲ್ಲರ ಅಗತ್ಯಗಳನ್ನು ಪೂರೈಸಲು ಇಂದು ತಂತ್ರಜ್ಞಾನದ ಸಮರ್ಥವಾಗಿದೆ. ಬೇರೆಭಾಷೆಯ ಚಲನಚಿತ್ರವನ್ನು ಅರ್ಥಮಾಡಿಕೊಳ್ಳಲು ಸಂಭಾಷಣೆಗಳ ವಿವಿಧ ಭಾಷೆಗಳ ಅನುವಾದಗಳನ್ನು ಅಡಿಬರಹಗಳ ರೂಪದಲ್ಲಿ ಕೊಡುವಂತೆ ಸಂಭಾಷಣೆಗಳ ಅನುವಾದಗಳನ್ನು ಧ್ವನಿರೂಪದಲ್ಲಿಯೂ ಕೊಡಬೇಕು. ಜೊತೆಯಲ್ಲಿ ವೀಕ್ಷಕರು ತಮ್ಮ ಅಗತ್ಯಕ್ಕೆ ಅನುಗುಣವಾದ ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನೂ ಒದಗಿಸಬೇಕು. ಸಾರ್ವತ್ರಿಕವಾಗಿ ಪ್ರಸಾರವಾಗುವ ದೂರದರ್ಶನ ವಾಹಿನಿಗಳಲ್ಲಿಯೂ ಈ ಬಗೆಯ ಆಯ್ಕೆಗೆ ಅವಕಾಶಗಳರಬೇಕು. ಇಂದು ತಂತ್ರಜ್ಞಾನ ಎಲ್ಲರ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಬಹುಮಾಧ್ಯಮ ತಂತ್ರಜ್ಞಾನ ಪಡೆದಿದೆ.
ಬೇರೆಭಾಷೆಯ ಚಲನಚಿತ್ರವನ್ನು ಅರ್ಥಮಾಡಿಕೊಳ್ಳಲು ಸಂಭಾಷಣೆಗಳ ವಿವಿಧ ಭಾಷೆಗಳ ಅನುವಾದಗಳನ್ನು ಅಡಿಬರಹಗಳ ರೂಪದಲ್ಲಿ ಕೊಡುವಂತೆ ಸಂಭಾಷಣೆಗಳ ಅನುವಾದಗಳನ್ನು ಧ್ವನಿರೂಪದಲ್ಲಿಯೂ ಕೊಡಬೇಕು. ಜೊತೆಯಲ್ಲಿ ವೀಕ್ಷಕರು ತಮ್ಮ ಅಗತ್ಯಕ್ಕೆ ಅನುಗುಣವಾದ ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನೂ ಒದಗಿಸಬೇಕು.
You’re spot on, this is why many are demanding for dubbed content in Kannada. But if you’re asking for only the essence of the foreign cinema or the content to be captured and presented in the native audio format without being dubbed then that cinema or the content can only be called as a documentary or something else that which will be lacking its originality and its originality metrics will be worse in comparison with the dubbed content.
ದೂರದರ್ಶನ ನೋಡುವ,ಪತ್ರಿಕೆಯ ಬರಹವನ್ನು ಓದುವ ಸಾಮರ್ಥ್ಯವಿಲ್ಲದ ದೃಷ್ಟಿಹೀನರು ಕನ್ನಡವನ್ನು ಗಣಕದಿಂದ ಓದಿಸಿ ಕೇಳಿಸಿಕೊಳ್ಳುವ ಸೌಲಭ್ಯವಿದೆ. ಅದನ್ನು ಬಳಸಿ ಬೇರೆಯವರ ನೆರವಿಲ್ಲದೆ ದೃಷ್ಟಿಹೀನರು ಕಿವಿಯಾರೆ ಓದವ ಸೌಲಭ್ಯವನ್ನು ಒದಗಿಸಬೇಕು ಇಂದು ಈ ಸೌಲಭ್ಯವನ್ನು ಬಳಸಿಕೊಂಡು ದೃಷ್ಟಿ ವಂಚಿತ ವಿದ್ಯಾರ್ಥಿಗಳು ಸಹಾಯಕ ಬರಹಗಾರರ ನೆರವು ಪಡೆಯದೆ ವಿಶ್ವವಿದ್ಯಾನಿಲಯದ ಪರೀಕ್ಷೆಯನ್ನು ತಾವೇ ಗಣಕದಲ್ಲಿ ಉತ್ತರ ಬರೆದು ಸ್ವಾವಲಂಬನೆಯನ್ನು ಯಶಸ್ವಿಯಾಗಿ ಮೆರೆದ್ದಾರೆ. ಸತ್ಯಮೇವಜಯತೆ ಪ್ರಸಾರವಾದ ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನವನ್ನು ಗಣಕದಲ್ಲಿ ಓದಿಸಿ ಕೇಳಬಹುದಾಗಿರುವಂತೆ ಧ್ವನಿರೂಪವನ್ನು ಆಕಾಶವಾಣಿಯ ವಾಹಿನಿಗಳಲ್ಲಿಯೂ ದೃಷ್ಟಿವಂಚಿತರು ಆಲಿಸಲಿ ಎನ್ನುವುದು ನನ್ನ ಉದ್ದೇಶ.
This view of yours is really likable and appealing.
ನಿಮಗೆ ಧನ್ಯವಾದಗಳು
ನಮಸ್ಕಾರ. ಅಡಿ ಬರಹವನ್ನು ಕೊಡುವುದರಲ್ಲಿ ಒಂದು ಸಣ್ಣ ತೊಂದರೆ ಇದೆ ಎಂದು ನನ್ನ ಭಾವನೆ. ದೃಶ್ಯ ಮತ್ತು ಧ್ವನಿಯ ಮಾಧ್ಯಮವಾದ ಸಿನೆಮಾ ಅಥವಾ ಟಿ.ವಿ ಶೋಗಳನ್ನು ಅಕ್ಷರ ಅಭ್ಯಾಸವಿದ್ದವರು ಮಾತ್ರವಲ್ಲ ನೋಡುತ್ತಿರುವುದು. ಹಾಗೆ ನೋಡಿದರೆ, ಅನಕ್ಷರತೆ ಇನ್ನೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಇರುವ ನಮ್ಮ ದೇಶದಲ್ಲಿ ನಾವು ಕೇವಲ ಅಡಿ ಬರದಲ್ಲಿ ಚಿತ್ರಗಳನ್ನು ತೋರಿಸಿದರೆ, ಕೇವಲ ಒಂದು ವರ್ಗದ, ಶಿಕ್ಷಿತ ಸಮುದಾಯಕ್ಕೆ ಮಾತ್ರ ವಿಷಯ ಮಂಡನೆ ಮಾಡಿದಂತಾಗುತ್ತದೆಯಲ್ಲಾ? ಸತ್ಯಮೇವ ಜಯತೆ ರೀತಿಯ ಕಾರ್ಯಕ್ರಮ ಇರಬಹುದು ಇಲ್ಲಾ ಮಾಲ್ಗುಡಿ ಡೇಸ್ ಇರಬಹುದು ಇದು ಕೇವಲ ಶಿಕ್ಷಿತ ವರ್ಗದ ಸೊತ್ತಾಗಬೇಕೇ? ಇದು ದೃಶ್ಯ ಮಾಧ್ಯಮದಲ್ಲಿ ಬ್ರಾಹ್ಮಣತಿಕೆಯೇ?
ಅನಕ್ಷರತೆಯನ್ನು ಹೋಗಲಾಡಿಸಲು ಇದೂ ಒಂದು ಪ್ರೇರಣೆಯಾಗುವುದಾದರೆ ಒಳ್ಳೆಯದೇ ಅಲ್ಲವೆ?
(‘ಕಲೆಯಾಗುವುದಾದರೆ ಒಳ್ಳೆಯದೇ ಅಲ್ಲವೆ?’-ಸೋಪಿನ ಪುಡಿಯ ಜಾಹೀರಾತು!)
ಸಾಕ್ಷರತೆ ಬ್ರಾಹ್ಮಣಿಕೆ ಹೇಗಾಗುತ್ತದೆ?
ಪ್ರಿಯರೆ,
ಕನ್ನಡದಲ್ಲಿಯೇ ಹಲವು ಬಗೆಯ ಟಿವಿ ಶೋಗಳು ಬೇಕಾದಷ್ಟು ಬರುತ್ತಿವೆ. ಸತ್ಯಮೇವಜಯತೆ ರೀತಿಯ ಪ್ರದರ್ಶನಗಳನ್ನು ಪ್ರಸಿದ್ಧ ಚಿತ್ರ ನಟಿಯರಾದ ಶ್ರೀಮತಿ ಮಾಳವಿಕಾ ಶ್ರೀಮತಿ ಲಕ್ಷ್ಮಿ ಶ್ರೀ ಪುನೀತ್ ರಾಜಕುಮಾರ್ ಮೊದಲಾದವರು ಕನ್ನಡದಲ್ಲಿಯೇ ಯಶಸ್ವಿಯಾಗಿ ಸಿದ್ಧಪಡಿಸಿದ್ದಾರೆ. ಅಂಥ ಕನ್ನಡ ಕಾರ್ಯಕ್ರಮಗಳಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಾಗಬೇಕು. ಬೇರೊಂದು ಭಾಷೆಯವರು ತಮ್ಮವರಿಗಾಗಿ ತಮ್ಮ ಭಾಷೆಯಲ್ಲಿ ನಿರ್ಮಿಸಿದ ಕಾರ್ಯಕ್ರಮದ ಧ್ವನಿ ನಕಲನ್ನು ನೋಡಿ ತೃಪ್ತಿಪಡುವುದಲ್ಲ.
ಬೇರೆ ಭಾಷೆಗಳಲ್ಲಿ ಈ ಬಗೆಯ ಕಾರ್ಯಕ್ರಮಗಳನ್ನು ತಮ್ಮ ಭಾಷೆಯವರಿಗಾಗಿ ಸಿದ್ಧಪಡಿಸಿ ಆಮೇಲೆ ಅವುಗಳ ಧ್ವನಿವಾಹಿನಿ ಬದಲಿಸಿ ಬೇರೆ ಭಾಷೆಗಳಲ್ಲಿ ಪ್ರಸಾರ ಮಾಡಿ ಆ ಪ್ರೇಕ್ಷಕರಿಂದ ತಮ್ಮ ಆಯ್ಕೆಯ ಸೇವಾ ಸಂಸ್ಥೆಗಳಿಗೆ ಸಹಾಯಧನ ಸಂಗ್ರಹಿಸುತ್ತಿರುವುದರ ಬಗ್ಗೆಯೂ ಹಲವರು ಆಕ್ಷೇಪಿಸಿದ್ದಾರೆ.
ತಮ್ಮ ಕಾರ್ಯಕ್ರಮ ನೋಡಿ ಪ್ರಭಾವಿತರಾದವರು ಅವರ ಸುತ್ತ ನಿಃಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೇವಾ ಸಂಸ್ಥೆಗಳನ್ನು ಗುರುತಿಸಿ ಅವಕ್ಕೆ ಧನ ಸಹಾಯ ಮಾಡಿ ಎಂದು ಅವರು ಯಾರೂ ಹೇಳುತ್ತಿಲ್ಲ. ಆ ಕಾರ್ಯಕ್ರಮಗಳ ಪ್ರಾಯೋಜಕರೂ ದೂರ ಪ್ರದೇಶದ ಪ್ರೇಕ್ಷಕರು ಕರೆಮಾಡಿ ತಮ್ಮ ದೂರವಾಣಿ ಸಂಸ್ಥೆಯ ವ್ಯಾಪಾರ ಹೆಚ್ಚಿಸಿದ ಪ್ರಮಾಣಕ್ಕೆ ಸಮನಾದ ಸಹಾಯಧನವನ್ನು ನೀಡುವುದೂ ತಮ್ಮ ಆಯ್ಕೆಯ ಸಂಸ್ಥೆಗಳಿಗೇ. ಈ ಬಗ್ಗೆಯೂ ಆಕ್ಷೇಪಗಳು ಕೇಳಿಬಂದಿವೆ.
ಅದಕ್ಕೆ ಇಂಥ ಕಾರ್ಯಕ್ರಮಗಳು ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡದಲ್ಲಿಯೇ ತಯಾರಾಗಬೇಕು. ಈ ಬಗ್ಗೆ ಎಲ್ಲರೂ ಯೋಚಿಸುತ್ತಿರುವುದು ಒಳ್ಳೆಯ ಸೂಚನೆ
ಪಂಡಿತಾರಾದ್ಯರೇ, ನಿಮ್ಮ ಆಶಯ ನಿಜಕ್ಕೂ ಅದ್ಭುತವಾದದ್ದು. ಕನ್ನಡಿಗರೇ ಜಗತ್ತಿನಲ್ಲ ಎಲ್ಲಾ ಅತ್ಯುತ್ತಮ ಸಿನಿಮಾಗಳನ್ನೂ, ನ್ಯಾಷನಲ್ ಜಿಯಾಗ್ರಾಫಿಕ್ ನಲ್ಲಿ ಬರುವಂತಹ ಕಾರ್ಯಕ್ರಮಗಳನ್ನೂ ರೂಪಿಸುವಂತಾದರೆ ಯಾರೂ ಡಬ್ಬಿಂಗ್ ಬಗ್ಗೆ ಗೋಳು ಹೊಯ್ಕೊಳ್ತಾನೇ ಇರಲಿಲ್ಲ. ಆದರೆ ಅಂತಹ ಒಂದು ಕಾಲ ಬರುವವರೆಗೆ ಬರೀ ಅಕ್ಷರವಂತರು ಮಾತ್ರ ಒಳ್ಳೇ ಕಾರ್ಯಕ್ರಮಗಳನ್ನು ನೋಡಿಕೊಮಡಿರಲಿ ಅಂತೀರಾ? ಸತ್ಯಮೇವ ಜಯತೆ, ಝೀ ಕನ್ನಡದ ರಿಯಾಲಿಟಿ ಶೋಗಳು ಇವೆಲ್ಲದರ ಬಗ್ಗೆ ಈಗಾಗಲೇ ಅವಧಿ ಮತ್ತಿತರ ತಾಣಗಳಲ್ಲಿ ಉದ್ದುದ್ದ ಚರ್ಚೆಯಾಗಿದೆ. ಒಮ್ಮೆ ಗಮನಿಸಿ. ಸತ್ಯ ಮೇವ ಜಯತೆ ದೇಶದ, ರಾಜ್ಯಗಳ ಸರ್ಕಾರಗಳ ನೀತಿ ನಿರೂಪಣೆಗಳ ಮೇಲೆ ಪರಿಣಾಮ ಬೀರುತ್ತಿರುವುದನ್ನು ಕೊಂಚ ಗಮನಿಸಿ. ನೆನ್ನೆಯಷ್ಟೆ ನಮ್ಮ ಆರೋಗ್ಯ ಸಚಿವರು ಜನತಾ ಬಜಾರ್ ಜನರೆಕಿಕ್ ಮೆಡಿಕಲ್ ಸ್ಟೋರ್ ಗಳನ್ನು ಉದ್ಗಾಟಿಸಿರುವುದಕ್ಕೆ ಸತ್ಯಮೇವ ಜಯತೆ ನೇರವಾಗಿ ಕಾರಣ ಅನ್ನುವುದಾದರೂ ಗಮನಿಸಿ. ಅಷ್ಟಕ್ಕೂ ನೀವು ಒಂದೊಂದು ಸರಿ ಒಂದೊಂದು ತರ ಹೇಳ್ತಿದೀರಿ. ನಿಮ್ಮ ನಿಲುವುಗಳೂ ಕೊಂಚ ಗೊಂದಲ ಮೂಡಿಸುತ್ತಿವೆ.
ಹರ್ಷ ಅವರೆ,
ತಂತ್ರಜ್ಞಾನದ ಪ್ರಗತಿಯಿಂದ ಇಂದು ಸಾಧ್ಯವಾಗಿರುವ ಅನುಕೂಲಗಳ ಬಗ್ಗೆ ಹೇಳಿದ್ದೇನೆ. ಅವಿದ್ಯಾವಂತರು, ಅನಕ್ಷರಸ್ಥರು, ಶ್ರವಣ ವಿಕಲರು, ದೃಶ್ಯ ವಿಕಲರು, ಒಂದು ಭಾಷೆ ಮಾತ್ರ ಬಲ್ಲವರು – ಇತ್ಯಾದಿ ಕೊರತೆಗಳಿರುವ ಎಲ್ಲರಿಗೂ ಒಂದೇ ಚಿತ್ರದಲ್ಲಿ ಪರಿಹಾರ ಸಾಧ್ಯವಿಲ್ಲ. ಒಬ್ಬೊಬ್ಬರಿಗೂ ಪ್ರತ್ಯೇಕ ಚಿತ್ರ, ವಾಹಿನಿಯಲ್ಲದಿದ್ದರೂ ಪ್ರತ್ಯೇಕ ಕಾರ್ಯಕ್ರಮ, ಅಡಕ ತಟ್ಟೆ ನೀಡಲು ಸದ್ಯಕ್ಕೆ ಸಾಧ್ಯವಿದೆ. ದೆಹಲಿಯ ದೂರದರ್ಶನದಲ್ಲಿ ಭಾನುವಾರ ಶ್ರವಣ ವಿಕಲರಿಗೆ ಕೈ ಸನ್ನೆಗಳ ಮೂಲಕ ಸುದ್ದಿ ಪ್ರಸಾರ ಮಾಡುವ ಕ್ರಮವಿದೆ. ಶ್ರವಣ ವಿಕಲರಿಗೆ ಸುದ್ದಿ ವಾಚನವಾಗುತ್ತಿರುವಾಗ ಅದರ ಅನುವಾದ ಅಕ್ಷರ ರೂಪದಲ್ಲಿ ಕೆಳಗೆ ಬರುತ್ತಿರುತ್ತದೆ. ದೃಶ್ಯ ವಿಕಲರಿಗೆ ಚಿತ್ರದ ಧ್ವನಿವಾಹಿನಿಯ ಅನುವಾದ ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ವಿವರಗಳ ಅಗತ್ಯವಿದೆ. ಅವರಿಗೆ ಆಕಾಶವಾಣಿಗಾಗಿ ಸಿದ್ಧಪಡಿಸಿದಂಥ ಕಾತ್ಯಕ್ರಮಗಳನ್ನು ಪ್ರತ್ಯೇಕವಾಗಿ ತಯಾರಿಸಿದಾಗ ಮಾತ್ರ ಪ್ರಯೋಜನವಾಗುತ್ತದೆ. ಸಾಮಾನ್ಯ ವಿಕ್ಷಕರಿಗಾಗಿ ತಯಾರಿಸಿದ ಚಿತ್ರವನ್ನೇ ಎಲ್ಲರೂ ನೋಡಲು ಸಾಧ್ಯವಿಲ್ಲ. ಸಾಮಾನ್ಯ ಪ್ರೇಕ್ಷಕರು ನೋಡುವ ಪರಭಾಷಾ ಚಿತ್ರಗಳಿಗೆ ಅವರವರ ಭಾಷೆಯಲ್ಲಿ ಸಂಭಾಷಣೆಗಳ ಅನುವಾದವನ್ನು ಒದಗಿಸುವುದು ಸದ್ಯಕ್ಕೆ ವಿಶ್ವಾದ್ಯಂತ ಇರುವ ಕ್ರಮ. ಇದಕ್ಕೆ ಹೆಚ್ಚುನ ತಯಾರಿಕಾ ವೆಚ್ವೇನೂ ಬೇಕಾಗುವುದಿಲ್ಲ. ಇದರಿಂದ ಮೂಲ ಚಿತ್ರವನ್ನೇ ತಮ್ಮ ಭಾಷೆಯಲ್ಲಿ ಗ್ರಹಿಸಲು ಅಗತ್ಯವಾದಟು ವಿವರಗಳನ್ನು ಒದಗಿಸಲು ಸಾಧ್ಯ. ಇನ್ನೊಂದು ಆಯ್ಕೆ ಸತ್ಯ ಹರಿಶ್ಚಂದ್ರ, ಶಿಕಾರಿ ಮೊದಲಾದ ಚಿತ್ರಗಳಂತೆ ತಯಾರಿಸುವಾಗಲೇ ಚಿತ್ರದ ಪ್ರತಿಯೊಂದು ಚೌಕಟ್ಟನ್ನೂ ಹಲವು ಭಾಷೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಮತ್ತೆ ತಯಾರಿಸುವುದು. ಭಾಷೆ ಸಾಂಸ್ಕೃತಿಕವಾದುದೂ ಆಗಿರುವುದರಿಂದ ಇಂಥ ಪ್ರಯತ್ನಗಳಿಗೆ ಸೀಮಿತ ಯಶಸ್ಸು ದೊರೆಯುತ್ತಿದೆ. ಹಂಸಗೀತೆಯನ್ನು ಹಿಂದಿಯಲ್ಲಿ ಬೈಜೂ ಬಾವರಾ ಎಂದು ತೆಗೆದಾಗ ಕಥೆ, ಪರಿಸರ, ಪಾತ್ರಗಳ ಹೆಸರು ಸಂಪೂರ್ಣವಾಗಿ ಕನ್ನಡದ್ದಾಗಿತ್ತು. ಹಿಂದೂಸ್ಥಾನಿ ಸಂಗೀತದಿಂದ ಅದು ಯಶಸ್ವಿಯಾಯಿತು. ಶಿಕಾರಿಯ ಬಗ್ಗೆಯೂ ಇದೇ ವಿವರಣೆ ಕೇಳಿಬಂದಿದೆ.
ಆದ್ದರಿಂದ ಒಂದು ಭಾಷೆಯ ಕತೆಯನ್ನು ಇನ್ನೊಂದು ಭಾಷೆಗೆ ಅನುವಾದಿಸುವಂತೆ ಚಲನಚಿತ್ರವನ್ನೂ ಸಂಪೂರ್ಣವಾಗಿ ಅನುವಾದಿಸಲು ಸಾಧ್ಯವಿಲ್ಲ. ಮಾಲ್ಗುಡಿ ಡೇಸ್ ಕನ್ನಡದ ಕತೆಯಲ್ಲ. ಅದು ಇಂಗ್ಲಿಷಿನಲ್ಲಿ ಬರೆದ ಕತೆಯನ್ನು ಅಖಿಲ ಭಾರತ ವ್ಯಾಪ್ತಿಯ ವಿಕ್ಷಕರಿಗಾಗಿ ಹಿಂದಿಯಲ್ಲಿ ಪ್ರಸಾರ ಮಾಡಲೆಂದೇ ತೆಗೆದ ಚಿತ್ರ. ಅದನ್ನು ತೆಗೆದವರಲ್ಲಿ ಕನ್ನಡಿಗರು ಹೆಚ್ಚು ಇದ್ದರೇ ಹೊರತು ಅದು ಕನ್ನಡಿಗರ ಕತೆ, ಚಿತ್ರವಲ್ಲ. ಕನ್ನಡ ಕಲಾವಿದರು ಬೇರೆ ಭಾಷಾ ಚಿತ್ರಗಳಲ್ಲಿಯೂ ಕೆಲಸಮಾಡಿದ್ದಾರೆ ಎಂಬ ಅಭಿಮಾನದಿಂದ ಅವನ್ನು ನೋಡಬಹುದೇ ಹೊರತು, ಅವರು ಕನ್ನಡ ಕಲಾವಿದರಾಗಿ ಕೆಲಸಮಾಡಿದ್ದಾರೆ ಎಂದು ನೋಡಲಾಗುವುದಿಲ್ಲ.ಬೇರೆ ಭಾಷೆಯ ಚಿತ್ರಗಳನ್ನು ಧ್ವನಿವಾಹಿನಿ ಬದಲಿಸಿ ಅದನ್ನು ಕನ್ನಡ ಚಿತ್ರವೆಂದು ಭ್ರಮಿಸಿ ನೋಡಲು ಸಾಧ್ಯವಾಗದಿರುವುದಕ್ಕೆ ಇದೇ ಕಾರಣ. ಅದನ್ನೇ ಹಿಂದಿನಿಂದಲೂ ವಿರೋಧಿಸುತ್ತಿರುವುದು.
(ತಾಣದ ನಿರ್ವಾಹಕರಲ್ಲಿ ಮನವಿ: ಇದರ ಪ್ರತಿ ಹರ್ಷ ಅವರಿಗೆ ರಿಪ್ಲೆ ಎಂಬ ವಿಭಾಗದಲ್ಲಿದೆ. ಅದನ್ನು ಎಲ್ಲರೂ ಗಮನಿಸದಿರಬಹುದು ಎಂದು ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ್ದೇನೆ. ದಯವಿಟ್ಟು ಹರ್ಷ ಅವರ ಬರವಣಿಗೆಯ ಕೆಳಗೇ ನೀಡಿರುವ ಉತ್ತರವನ್ನು ಅಳಿಸಿ. ಪುನರುಕ್ತಿ ತಪ್ಪಿಸಿ)
ಹರ್ಷ ಅವರೆ,
ತಂತ್ರಜ್ಞಾನದ ಪ್ರಗತಿಯಿಂದ ಇಂದು ಸಾಧ್ಯವಾಗಿರುವ ಅನುಕೂಲಗಳ ಬಗ್ಗೆ ಹೇಳಿದ್ದೇನೆ. ಅವಿದ್ಯಾವಂತರು, ಅನಕ್ಷರಸ್ಥರು, ಶ್ರವಣ ವಿಕಲರು, ದೃಶ್ಯ ವಿಕಲರು, ಒಂದು ಭಾಷೆ ಮಾತ್ರ ಬಲ್ಲವರು – ಇತ್ಯಾದಿ ಹಲವು ಕೊರತೆಗಳಿರುವ ಎಲ್ಲರಿಗೂ ಒಂದೇ ಚಿತ್ರದಲ್ಲಿ ಪರಿಹಾರ ಸಾಧ್ಯವಿಲ್ಲ. ಒಬ್ಬೊಬ್ಬರಿಗೂ ಪ್ರತ್ಯೇಕ ಚಿತ್ರ, ವಾಹಿನಿಯಲ್ಲದಿದ್ದರೂ ಪ್ರತ್ಯೇಕ ಕಾರ್ಯಕ್ರಮ, ಅಡಕ ತಟ್ಟೆ ನೀಡಲು ಸದ್ಯಕ್ಕೆ ಸಾಧ್ಯವಿದೆ. ದೆಹಲಿಯ ದೂರದರ್ಶನದಲ್ಲಿ ಭಾನುವಾರ ಶ್ರವಣ ವಿಕಲರಿಗೆ ಕೈ ಸನ್ನೆಗಳ ಮೂಲಕ ಸುದ್ದಿ ಪ್ರಸಾರ ಮಾಡುವ ಕ್ರಮವಿದೆ. ಸುದ್ದಿ ವಾಚನವಾಗುತ್ತಿರುವಾಗ ಇಂಗ್ಲಿಷ್ ಭಾಷೆಯ ಅನುವಾದ ಮಾತ್ರ ಅಕ್ಷರ ರೂಪದಲ್ಲಿ ಕೆಳಗೆ ಬರುತ್ತಿರುತ್ತದೆ. ಇದನ್ನು ಎಲ್ಲ ಬಾರತೀಯ ಭಾಷೆಗಳಲ್ಲಿ ಬರುವಂತೆ ಮಾಡಬಹುದು. ದೃಶ್ಯ ವಿಕಲರಿಗೆ ಚಿತ್ರದ ಧ್ವನಿವಾಹಿನಿಯ ಅನುವಾದ ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ವಿವರಗಳ ಅಗತ್ಯವಿದೆ. ಅವರಿಗೆ ಆಕಾಶವಾಣಿಗಾಗಿ ಸಿದ್ಧಪಡಿಸಿದಂಥ ಕಾತ್ಯಕ್ರಮಗಳನ್ನು ಪ್ರತ್ಯೇಕವಾಗಿ ತಯಾರಿಸಿದಾಗ ಮಾತ್ರ ಪ್ರಯೋಜನವಾಗುತ್ತದೆ. ಸಾಮಾನ್ಯ ವಿಕ್ಷಕರಿಗಾಗಿ ತಯಾರಿಸಿದ ಚಿತ್ರವನ್ನೇ ಎಲ್ಲರೂ ನೋಡಲು ಸಾಧ್ಯವಿಲ್ಲ. ಸಾಮಾನ್ಯ ಪ್ರೇಕ್ಷಕರು ನೋಡುವ ಪರಭಾಷಾ ಚಿತ್ರಗಳಿಗೆ ಅವರವರ ಭಾಷೆಯಲ್ಲಿ ಸಂಭಾಷಣೆಗಳ ಅನುವಾದವನ್ನು ಒದಗಿಸುವುದು ಸದ್ಯಕ್ಕೆ ವಿಶ್ವಾದ್ಯಂತ ಇರುವ ಕ್ರಮ. ಇದಕ್ಕೆ ಹೆಚ್ಚುನ ತಯಾರಿಕಾ ವೆಚ್ವೇನೂ ಬೇಕಾಗುವುದಿಲ್ಲ. ಇದರಿಂದ ಮೂಲ ಚಿತ್ರವನ್ನೇ ತಮ್ಮ ಭಾಷೆಯಲ್ಲಿ ಗ್ರಹಿಸಲು ಅಗತ್ಯವಾದಟು ವಿವರಗಳನ್ನು ಒದಗಿಸಲು ಸಾಧ್ಯ.
ಇನ್ನೊಂದು ಆಯ್ಕೆ ಸತ್ಯ ಹರಿಶ್ಚಂದ್ರ, ಶಿಕಾರಿ ಮೊದಲಾದ ಚಿತ್ರಗಳಂತೆ ತಯಾರಿಸುವಾಗಲೇ ಚಿತ್ರದ ಪ್ರತಿಯೊಂದು ಚೌಕಟ್ಟನ್ನೂ ಹಲವು ಭಾಷೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಮತ್ತೆ ತಯಾರಿಸುವುದು. ಭಾಷೆ ಸಾಂಸ್ಕೃತಿಕವಾದುದೂ ಆಗಿರುವುದರಿಂದ ಇಂಥ ಪ್ರಯತ್ನಗಳಿಗೆ ಸೀಮಿತ ಯಶಸ್ಸು ದೊರೆಯುತ್ತಿದೆ. ತರಾಸು ಅವರ ಹಂಸಗೀತೆಯನ್ನು ಹಿಂದಿಯಲ್ಲಿ ಬಸಂತ್ ಬಹಾರ ಎಂದು ತೆಗೆದಾಗ ಕಥೆ, ಪರಿಸರ, ಪಾತ್ರಗಳ ಹೆಸರು ಸಂಪೂರ್ಣವಾಗಿ ಕನ್ನಡದ್ದಾಗಿತ್ತು. ಹಿಂದೂಸ್ಥಾನಿ ಸಂಗೀತದಿಂದ ಅದು ಯಶಸ್ವಿಯಾಯಿತು. ಶಿಕಾರಿಯ ಬಗ್ಗೆಯೂ ಇದೇ ವಿವರಣೆ ಕೇಳಿಬಂದಿದೆ.
ಆದ್ದರಿಂದ ಒಂದು ಭಾಷೆಯ ಕತೆಯನ್ನು ಇನ್ನೊಂದು ಭಾಷೆಗೆ ಅನುವಾದಿಸುವಂತೆ ಚಲನಚಿತ್ರವನ್ನೂ ಸಂಪೂರ್ಣವಾಗಿ ಅನುವಾದಿಸಲು ಸಾಧ್ಯವಿಲ್ಲ. ಅನುವಾದದಿಂದ ಓದುಗ/ಕೇಳುಗ ಕತೆಯನ್ನು ಅರ್ಥಮಾಡಿಕೊಂಡರೂ ತನ್ನ ಕಲ್ಪನೆಗೆ ಅನುಗುಣವಾಗಿ ತಮ್ಮಲ್ಲಿ ಭಾಷಿಕ ಪರಿಸರದಲ್ಲಿ ಅದನ್ನು ಕಲ್ಪಿಸಿಕೊಂಡು ಹಾಗೆ ತಾವು ಕಲ್ಪಿಸಿಕೊಂಡದ್ದನ್ನು ಆಸ್ವಾದಿಸುತ್ತಾರೆ. ಮಾಲ್ಗುಡಿ ಡೇಸ್ ಕನ್ನಡದ ಕತೆಯಲ್ಲ. ಅದು ಇಂಗ್ಲಿಷಿನಲ್ಲಿ ಬರೆದ ಕತೆಯನ್ನು ಅಖಿಲ ಭಾರತ ವ್ಯಾಪ್ತಿಯ ವಿಕ್ಷಕರಿಗಾಗಿ ಹಿಂದಿಯಲ್ಲಿ ಪ್ರಸಾರ ಮಾಡಲೆಂದೇ ತೆಗೆದ ಚಿತ್ರ. ಅದನ್ನು ತೆಗೆದವರಲ್ಲಿ ಕನ್ನಡಿಗರು ಹೆಚ್ಚು ಇದ್ದರೇ ಹೊರತು ಅದು ಕನ್ನಡಿಗರ ಕತೆ, ಚಿತ್ರವಲ್ಲ. ಹಿಂದಿಯಲ್ಲಿ ತೆಗೆಯುತ್ತಿರುವಾಗಲೇ ಒಮದು ಕನ್ನಡ ಅವತರಣಿಕೆಯನ್ನು ತೆಗೆಯಬಹುದಾಗಿತ್ತಾದರೂ ಅವರು ಹಾಗೆ ಮಾಡಿಲ್ಲ. ಕನ್ನಡ ಕಲಾವಿದರು ಬೇರೆ ಭಾಷಾ ಚಿತ್ರಗಳಲ್ಲಿಯೂ ಕೆಲಸಮಾಡಿದ್ದಾರೆ ಎಂಬ ಅಭಿಮಾನದಿಂದ ಅವನ್ನು ನೋಡಬಹುದೇ ಹೊರತು, ಅವರು ಕನ್ನಡ ಕಲಾವಿದರಾಗಿ ಕೆಲಸಮಾಡಿದ್ದಾರೆ ಎಂದು ನೋಡಲಾಗುವುದಿಲ್ಲ.ಬೇರೆ ಭಾಷೆಯ ಚಿತ್ರಗಳನ್ನು ಧ್ವನಿವಾಹಿನಿ ಬದಲಿಸಿ ಅದನ್ನು ಕನ್ನಡ ಚಿತ್ರವೆಂದೇ ಭಾವಿಸಿ ನೋಡಲು ಸಾಧ್ಯವಾಗದಿರುವುದಕ್ಕೆ ಇದೇ ಕಾರಣ. ಅದನ್ನೇ ಹಿಂದಿನಿಂದಲೂ ವಿರೋಧಿಸುತ್ತಿರುವುದು.