ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾಣ ಕತ್ತೆ

ಡ್ಡ ಕತ್ತೆಯ ಕಥೆ ನಿಮಗೆ ಗೊತ್ತೇ ಇದೆ. ಹುಲಿಯ ಚರ್ಮ ಹೊದ್ದುಕೊಂಡು ರಾತ್ರಿಯಲ್ಲಿ ಕಂಡವರ ಕಬ್ಬಿನ ತೋಟಕ್ಕೆ ನುಗ್ಗಿ ಬೇಕಾದಷ್ಟು ತಿನ್ನುತ್ತಿದ್ದ ಆ ಕತ್ತೆ, ಹೊಟ್ಟೆ ತುಂಬಿದ ಖುಷಿಯಲ್ಲಿ ಕತ್ತೆಯಂತೆ ಕೂಗಿ ಸಿಕ್ಕಿ ಹಾಕಿಕೊಂಡಿತ್ತು.

chitra17.jpgಆದರೆ, ಈ ಜಾಣ ಕತ್ತೆಯ ಕಥೆ ಕೇಳಿ:

ಈ ಕತ್ತೆ ಇದ್ದ ಊರಿನಲ್ಲಿ ಪಟ್ಟದ ಕುದುರೆಯ ಲಾಯ ಇತ್ತು. ಲಾಯದ ಅಧಿಕಾರಿಗಳಿಗೆ ಕತ್ತೆ ಯಾವುದು, ಕುದುರೆ ಯಾವುದು ಗೊತ್ತಾಗುತ್ತಿರಲಿಲ್ಲ. “ಬಾಲ ಇದ್ದದ್ದು ಕುದುರೆ” ಎಂದು ಆ ಬುದ್ಧಿವಂತರು ತಿಳಿದಿದ್ದರು. ಅರಸ ಒಮ್ಮೊಮ್ಮೆ ಲಾಯಕ್ಕೆ ಬರುತ್ತಿದ್ದ. ಅಧಿಕಾರಿಗಳು ಯಾವುದನ್ನು ಕುದುರೆ ಎಂದರೂ ಕಣ್ಣುಮುಚ್ಚಿ ನಂಬಿಕೊಳ್ಳುತ್ತಿದ್ದ. ಅರಮನೆಯ ಕುದುರೆಗಳ ಜೊತೆಗೆ ಕೆಲವು ಕತ್ತೆಗಳೂ ಬಂದು ಸೇರಿಕೊಂಡಿವೆ ಎಂಬುದು ಊರಿನವರಿಗೆ ಗೊತ್ತಿತ್ತು. ಆದರೆ “ಅಧಿಕಾರಿಗಳಿಗೆ ಅಜ್ಞಾನ. ಅರಸನೋ ಅವಿವೇಕಿ. ನಾವು ಯಾಕೆ ಮಧ್ಯೆ ಪ್ರವೇಶಿಸಿ ರಗಳೆ ಮಾಡಿಕೊಳ್ಳಬೇಕು?” ಎಂದು ಅವರು ತಟಸ್ಥರಾಗಿದ್ದುಬಿಟ್ಟಿದ್ದರು.

ಜಾಣ ಕತ್ತೆಗೆ ಇದು ಗೊತ್ತಾಯಿತು. ಧೈರ್ಯವಾಗಿ ಅದು ಪಟ್ಟದ ಕುದುರೆಯ ಲಾಯಕ್ಕೆ ನುಗ್ಗಿ ಬಾಲ ತೋರಿಸಿತು. ಬೀದಿಯಲ್ಲಿ ಬಿದ್ದಿದ್ದ ಕಚಡ ತಿನ್ನುವ ಬದಲು ಕಡಲೆ ಗುಗ್ಗುರಿ ತಿಂದುಕೊಂಡು ಸುಖವಾಗಿ ಇದ್ದುಬಿಟ್ಟಿತು- ಖುಷಿಯಾದಾಗ ಕತ್ತೆಯ ಹಾಗೆ ಕೂಗದೆ.

‍ಲೇಖಕರು avadhi

9 July, 2007

2 Comments

  1. Dr. Sathyanarayana Bhat

    kathe hidisithu. olagina mamrmika vyangya indina samajakke kaigannadi.
    BHAT SN

  2. Dr. Sathyanarayana Bhat

    Nh avar ee goodha naama thiliditthu. Aadre adara hindina karana enu?
    SNBHAT

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading