ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಜಾಡಮಾಲಿ ಜಗತ್ತು : ಜಗತ್ತಿನೊಳಗೊಂದು ಜಗತ್ತು’ – ಸುವರ್ಣ

ಸುವರ್ಣ ಸಿ

ಲೇಖಕ , ದಲಿತ ಪರಚಿಂತಕ ನಾಗರಾಜ್ ಹೆತ್ತೂರ್ ಅವರ ಜಾಡಮಾಲಿ ಜಗತ್ತು ಕೃತಿಯೂ ಭಾನುವಾರವಷ್ಟೇ ಹಾಸನದ ದಲಿತ ಸಾಹಿತ್ಯ ಪರಿಷತ್ , ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಾಡ್ಲಹಳ್ಳಿ ಪಬ್ಲಿಕೇಷ್ ವತಿಯಿಂದ ಹಾಸನದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸರಳವಾಗಿ ಅರ್ಥಪೂರ್ಣವಾಗಿ ಪೌರಕಾಮರ್ಿಕರಿಂದಲೇ ಬಿಡುಗಡೆಯಾಗಿದ್ದು ಇದು ನಾಡಿನಲ್ಲಿ ಒಂದು ಹೊಸ ಚಿಂತನೆಗೆ ನಾಂದಿಯಾಗಿದೆ.
ಕಳೆದ ತಿಂಗಳು ಕೃತಿಕಾರರಾದ ನಾಗರಾಜ್ ಹೆತ್ತೂರು ನನಗೆ ಫೋನ್ ಮಾಡಿ ಸುವರ್ಣ ಮೇಡಂ ನಾನು ಈ ಜಗತ್ತಿಗೆ ಜಾಡಮಾಲಿಗಳ ಜಗತ್ತನ್ನು ತೋರಿಸಬೇಕು ಅವರ ಬದುಕು-ಭವಣೆ ಕುರಿತು ಕೆಲವು ಲೇಖನಗಳನ್ನು ಬರೆದಿದ್ದೇನೆ ನೀವು ಓದಿ ತಪ್ಪಿದ್ದರೇ ತಿದ್ದಿ ಕೊಡಿ ಎಂದು ಹೇಳಿದರು. ನಾನು ಆಶ್ಚರ್ಯ ಚಕಿತಳಾಗಿ ಏನ್ರಿ ನಾಗರಾಜ್ ಅವರೇ ಜಾಡಮಾಲಿಗಳ ಬಗ್ಗೆ ಬರೆದಿದ್ದೀರ ಪರವಾಗಿಲ್ಲ ರಾಷ್ಟ್ರಕವಿ ಕುವೆಂಪು ಅವರು ಜಲಗಾರ ನಾಟಕ ಬರೆದು ಎಂಬತ್ತೈದು ವರ್ಷವಾಗಿದೆ ಈಗ ನೀವು ಜಾಡಮಾಲಿ ಜಗತ್ತು ಬರೆಯುತ್ತಿದ್ದೀರ ಪರವಾಗಿ ಇಷ್ಟು ದಿನವಾದ ಮೇಲೆ ನೀವಾದರೂ ಪೌರಕಾಮರ್ಿಕರ ಬಗ್ಗೆ ಕಾಳಜಿ ಇಟ್ಟು ಅವರ ಒಡಲೊಳಗಿನ ಬೆಂಕಿಯ ಕಿಚ್ಚನ್ನು ಕೃತಿಯ ರೂಪದಲ್ಲಿ ಸಮಾಜಕ್ಕೆ ತೋರಿಸಲು ಉತ್ಸಹಿಯಾಗಿದ್ದಿರಲ್ಲ ಬೇಷ್ . .! ಕೃತಿಯನ್ನು ಹೊರತರಲು ನಿಮಗೆ ಹಾಡ್ಲಹಳ್ಳಿ ಪಬ್ಲಿಕೇಷನ್ ಚಲಂ ಸಾಥ್ ನೀಡಿದ್ದಾರಲ್ಲ ನಿಜಕ್ಕೂ ಸಾಂಸ್ಕೃತಿಕ , ಸಾಹಿತ್ಯಲೋಕ ಪವಾನವಾಯಿತು ಕಣ್ರಿ ತುಂಬಾ ಸಂತೋಷವಾಗುತ್ತಿದೆ ದಯವಿಟ್ಟು ಕೊಡಿ ನನಗೆ ತಿಳಿದಷ್ಟು ತಿದ್ದಿ ಕೊಡುತ್ತೇನೆ ಎಂದು ಸಂತೋಷದಿಂದ ಒಪ್ಪಿಕೊಂಡು ತಿದ್ದಿದ್ದೆ. ನಾಗರಾಜ್ ಅವರು ಜಾಡಮಾಲಿ ಜಗತ್ತಿನ ಕೃತಿಯಲ್ಲಿ ದಾಖಲಿಸಿರುವ ಒಂದೊಂದು ಲೇಖನಗಳನ್ನು ಓದುತ್ತಿದ್ದರೇ ಜಗತ್ತಿನೊಳಗೆ ಮತ್ತೊಂದು ಜಗತ್ತಿದೆ ಎಂಬುದು ಅರಿವಾಗುತ್ತದೆ ,
ಜಾಡಮಾಲಿ ಜಗತ್ತು ಕೃತಿಯಲ್ಲಿ ಕೃತಿಕಾರರು ಸಮಾಜದ ಈ ಜಾತಿವ್ಯವಸ್ಥೆಯಿಂದಾಗಿ ಶತಶತಮಾನಗಳಿಂದಲೂ ಮನುಷ್ಯನ ಅಂತಃಕರಣದಿಂದ ಹೊರದೂಡಲ್ಪಟ್ಟಿರುವ ದಲಿತರು , ದಲಿತರಲ್ಲಿ ದಲಿತರಾಗಿ ಶೋಷಣೆ , ದೌರ್ಜನ್ಯ , ತಾರತಮ್ಯ , ಅಮಾನವೀಯ ಹಿಂಸೆ ,ಅವಮಾನ ಅನುಭವಿಸುತ್ತಿರುವ ಜಾಡಮಾಲಿಗಳ ಸಂಕಟಗಳನ್ನು ಬರಹದ ಮೂಲಕ ದಾಖಲಿಸಿ ತಮ್ಮ ಆಕ್ರೋಶವನ್ನು ಸಮಾಜದ ಮುಂದೆ ಕನ್ನಡಿ ಹಿಡಿದಿದ್ದಾರೆ.
ಆಧುನಿಕ ಸಮಾಜದಲ್ಲಿಯೂ ಜಾಡಮಾಲಿ ಎಂದರೆ ಅವನೊಬ್ಬ ಚರಂಡಿ, ಕಕ್ಕಸ್ಸು ಸ್ವಚ್ಚ ಮಾಡುವವನು ಅಷ್ಟೇ ಅವನಿಗೆ ನಾವು ಏಕೆ ಗೌರವ ಕೊಡಬೇಕು , ಅವನ ಕೆಲಸ ಒಂದು ಪ್ರತಿಷ್ಟಿತ ಕೆಲಸವೇ ಅಲ್ಲ ಎಂದು ಕೇವಲವಾಗಿ ಕಾಣುತ್ತಾ ಅವನ ಮೇಲೆ ದರ್ಪದಲ್ಲಿ ಗೌಡಕಿ ತೋರಿಸುತ್ತಿರುವ ಈ ನಾಗರಿಕ ಸಮಾಜಕ್ಕೆ ಜಾಡಮಾಲಿಗಳು ಒಬ್ಬರು ಮನುಷ್ಯರು ಅವರ ಕೆಲಸಕ್ಕೂ ಗೌರವವಿದೆ ಅವರನ್ನು ಮನುಷ್ಯರಂತೆ ಕಾಣಿ ಎಂದು ಸಮಾಜಕ್ಕೆ ವಾಸ್ತವವಾಗಿ ತಿಳಿಸಲು ನಾಡಿನ ಖ್ಯಾತ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಪೌರಕಾಮರ್ಿಕ ನಲ್ಲಪ್ಪನ ಜೊತೆ ಸ್ನೇಹ ಬೆಳೆಸಿ ಅವರ ಮನೆಯಲ್ಲಿ ಕೊರೆಬಾಡು ಊಟ ಮಾಡುವ ಮೂಲಕ ಮನುಷ್ಯನ ದೇಹಕ್ಕೆ ಯಾವುದು ಪುಷ್ಠಿ ಕೊಡುತ್ತದೆಯೋ ಅದೆಲ್ಲಾ ಆಹಾರ . ಆಹಾರದಲ್ಲಿ ಮೇಲು ಕೀಳುಗಳಿಲ್ಲ ಎಂದು ಜಗತ್ತಿಗೆ ತಿಳಿಸುತ್ತಾ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಮಾನವೀಯತೆ ಮನುಷ್ಯತ್ವ ಮೇರೆದಿರುವುದನ್ನು ಲೇಖಕ ನಾಗರಾಜ್ ವಾಸ್ತವವಾಗಿ ಬರಹದಲ್ಲಿ ಬಿಂಬಿಸಿರುವುದು ಮಾನವೀಯತೆ ಇರುವ ಮನಸ್ಸುಗಳ ಹೃದಯಮಿಡಿಸುತ್ತದೆ.

ನಮ್ಮ ಮಕ್ಕಳು ಯಾವುದೇ ಕಾರಣಕ್ಕೂ ಜಾಡಮಾಲಿ ಆಗಬಾರದು ಎಂದು ಪೌರಕಾರ್ಮಿಕ ಮುನಿಯಪ್ಪ ತಾನು ಅನುಭವಿಸಿದ ಅವಮಾನ , ಸಂಕಟ ನನ್ನ ಮಕ್ಕಳು ಅನುಭವಿಸಬಾರದು ಎನ್ನುವ ಕಾರಣಕ್ಕೆ ಅವನು ಅನಕ್ಷರಸ್ಥನಾದರೂ ಅವರ ಮಕ್ಕಳನ್ನೆಲ್ಲಾ ಪದವೀಧರರನ್ನಾಗಿ ಮಾಡಿ ಬೇರೆ ಕೆಲಸಕ್ಕೆ ಸೇರಿಸಿರುವುದು ನಿಜಕ್ಕೂ ಒಂದು ಪರಿವರ್ತನೆಯೆ.
ಲಾಯರ್ , ಡಾಕ್ಟರ್ , ಇಂಜಿನಿಯರ್ , ಶಿಕ್ಷಕರ ಮಕ್ಕಳ ಜೊತೆಯಲ್ಲಿ ಪೌರಕಾಮರ್ಿಕನ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿರುವುದು ಸರಿಯೇ ಆದರೆ ಸಮಾಜದಲ್ಲಿ ಜೀವಂತವಿರುವ ಈ ಜಾತಿವ್ಯವಸ್ಥೆಯಲ್ಲಿ ವೃತ್ತಿಗೌರವವಿದೆಯಲ್ಲಾ ಅಬ್ಬಾ ಭಯಾನಕ ಕೃತಿಯಲ್ಲಿ ಜಾಡಮಾಲಿ ಜಯಮ್ಮ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಎಲ್ಲಿ ಅವಮಾನವಾಗುತ್ತದೋ, ಬೇರೆ ಮಕ್ಕಳು ನಮ್ಮ ಮಕ್ಕಳಿಗೆ ಎಲ್ಲಿ ಕೀಳಾಗಿ ಕಾಣುತ್ತಾರೋ ಎನ್ನುವ ಭಯ, ಆತಂಕ ದಿಂದ ಶಾಲೆಯ ಬಳಿ ಕಸಗುಡಿಸುವಾಗ ಎದುರಿಗೆ ಮಕ್ಕಳು ಇದ್ದರೂ ಅಪರಿಚಿತರಂತೆ ನಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ನೋಡಿದರೆ ನಿಜಕ್ಕೂ ಕಣ್ಣುತೇವವಾಗುತ್ತದೆ.
ಕೆ,ಟಿ.ಶಿವಪ್ರಸಾದ್ ಅವರು ಹೇಳುವಂತೆ ಭಾರತದ ಜಾತಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗಿನವರು ಪೌರಕಾರ್ಮಿಕರು. ವಿದ್ಯೆ, ಶಿಕ್ಷಣ ಯಾವುದೊಂದು ಸಿಗದೆ ವಂಚಿತರಾಗಿರುವವರು , ಕನಿಷ್ಠ ಜನರಿಂದ ಗೌರರವನ್ನು ನಿರೀಕ್ಷಿಸದ ಐಕೈಕ ಜನ ಇವರು ಡಾಕ್ಟರ್ ಗಿಂತ ದೊಡ್ಡವರು ಇವರು ಸರಿ ಇದ್ದರೆ ನಾವೆಲ್ಲಾ ಆರೋಗ್ಯದಿಂದ ಇರುತ್ತೇವೆ ಆದರೆ ನಮ್ಮ ದೇಶದ ಜನ ಇವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಈ ಜಾತಿವ್ಯವಸ್ಥೆ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಕೃತಿಯಲ್ಲಿ ಹೇಳಿರುವುದು ಅಕ್ಷರಶಃ ಸತ್ಯವಾದುದು.
ಕಸದೊಳಗೆ ಕಸವಾಗಿ ತನ್ನ ಆರೋಗ್ಯವನ್ನು ಲೆಕ್ಕಿಸದೆ ಬೇರೆಯವರ ಆರೋಗ್ಯವನ್ನು ರಕ್ಷಿಸುತ್ತಿರುವ ಜಾಡಮಾಲಿಗಳಿಗೆ ಸಕರ್ಾರವಾಗಲಿ , ನಾಗರಿಕರಾಗಲಿ ಅವರಿಗೆ ಯಾವ ಸೌಲಭ್ಯ , ರಕ್ಷಣೆ , ಗೌರವ ಕೊಡುತ್ತಿದೆ, ಅವರು ಸಮಾಜದಲ್ಲಿ ಯಾವ ರೀತಿ ಬದುಕು ನಡೆಸುತ್ತಿದ್ದಾರೆ , ಜಾಡಮಾಲಿಗಳು ಕೂಡ ಮನುಷ್ಯರು ಅವರ ವೃತ್ತಿಯೂ ಒಂದು ಗೌರವಯುತವಾದ ವೃತಿ ಎನ್ನುವುದನ್ನು ಈ ಕೃತಿಯಲ್ಲಿ ದಾಖಲಾಗಿರುವ ಲೇಖನಗಳ ಮೂಲಕ ಅರಿಯಬಹುದು.
ಜೀತಗಾರರನ್ನು ಇಟ್ಟುಕೊಳ್ಳುವವರೂ ನಮ್ಮ ಧಣಿಗೆ ಅಥವಾ ಗೌಡರಿಗೆ ತೊಂದರೆ ಮಾಡಬೇಡಿ ಎಂದು ಜೀತಗಾರರೇ ಆಗ್ರಹಿಸಿ ತನ್ನ ಬದುಕನ್ನೇ ಧಣಿಯ ಮನೆಯ ಉದ್ದಾರಕ್ಕಾಗಿ ಮುಡುಪಿಟ್ಟು ತನ್ನ ಬದುಕನ್ನೇ ಮೂರಬಟ್ಟೆ ಮಾಡಿಕೊಂಡಿದ್ದರು ಅದರ ಪರಿವೇ ಇಲ್ಲದೇ ಅಮಾಯಕನಾಗಿ ತನ್ನ ಒಳಿತಿಗಿಂತ ಧಣಿಯ ಒಳಿತೆ ಮುಖ್ಯ ಎನ್ನುವ ಈ ಸ್ಥಿತಿ ನಮ್ಮ ಪ್ರಜಾಪ್ರಭುತ್ವದ ಗುಣದ ಬಗ್ಗೆ ಕೂಡ ಹಲವು ಸಂಗತಿಗಳ ಯಶೋಗಾಥೆಯನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.
ಸಾಮಾಜಿಕ ಬಹಿಷ್ಕಾರದ ವಿಷಯವನ್ನೇ ತೆಗೆದುಕೊಂಡರೆ ಮನುಷ್ಯರಂತೆ ತಮ್ಮನ್ನು ಕಾಣದ ಸಮಾಜದ ಬಗ್ಗೆ ದಲಿತರಲ್ಲಿ ಅಪಾರ ನೋವಿದೆ, ಸಿಟ್ಟಿದೆ , ಶಿಕ್ಷಣದ ಮೂಲಕ ಅಕ್ಷರದ ಅರಿವು ಅಂಬೇಡ್ಕರ್ ರವರ ವಿಚಾರಗಳು ಮೂಡಿಸಿದ ಎಚ್ಚರ , ದಲಿತ ಸಾಹಿತ್ಯ ಮತ್ತು ಚಳವಳಿಗಳು ದಲಿತ ಯುವ ಚೇತನಗಳನ್ನು ಬಡಿದೆಚ್ಚರಿಸಿ ಸಮಾಜದಲ್ಲಿ ಇರುವ ತಾರತಮ್ಯವನ್ನು ಅಸಮಾನತೆಯನ್ನು ಬೇರುಸಹಿತ ಕಿತ್ತೋಗೆಯುವಂತೆ ಎಚ್ಚರಿಸಿದೆ.
ಸಾಹಿತ್ಯ ಮತ್ತು ಚಳವಳ ಒಂದಕ್ಕೊಂದು ಪೂರಕವಾಗಿದ್ದು ಸಾಮಾಜಿಕ ಜಾಗತೀಕರಣದ ಇಂದಿನ ಆಧುನಿಕ ಯುಗದಲ್ಲಿಯೂ ಸಾಮಾಜಿಕ ಅನಿಷ್ಟ ಪದ್ದತಿ ಜೀವಂತವಾಗಿರುವುದೇ ಇಡೀ ಮಾನವ ಕುಲ ತಲೆತಗ್ಗಿಸುವಂತಹದ್ದು, ಜಾತಿಪದ್ದತಿ ಮನುಷ್ಯನ ಮೌಢ್ಯತೆಯನ್ನು ತಿಳಿಸುತ್ತದ್ದರೆ ಈ ಮೌಡ್ಯತೆ ತಳಸಮುದಾಯದವರಲ್ಲಿ ಕ್ರೌರ್ಯ ಹೆಚ್ಚಿಸಿದೆ. ಜೀವಂತವಾಗಿರುವ ಅನಿಷ್ಟಗಳನ್ನ ಬೇರುಸಹಿತ ಕಿತ್ತೂಗೆಯಬೇಕಾದರೆ ದಲಿತರು ಸಂಘಟನಾತ್ಮಕ ಶಕ್ತಿಯ ಜೊತೆಗೆ ಸಾಮಾಜಿಕ ಎಚ್ಚರವನ್ನು ಮೂಡಿಸಲು ಅಕ್ಷರಲೋಕಕ್ಕೆ ತೆರೆದುಕೊಳ್ಳುತ್ತಿರುವುದು ದಲಿತರ ಚಲನೆಗೆ ಸಾಕ್ಷಿಯಾಗಿದೆ, ಇದೊಂದು ಇತಿಹಾಸದ ದಾಖಲೆ, ದಲಿ ಇಲ್ಲದವರಿಗೆ ದನಿಯಗಿರುವುದು ಚಳವಳಿ ಮತ್ತು ಸಾಹಿತ್ಯ ಇವೆರಡು ದಲಿತರ ಪ್ರೇರಕ ಶಕ್ತಿ ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ.
ಸಾಮಾಜಿಕ ಬದಲಾವಣೆಗೆ ಈ ಸಾಹಿತ್ಯ ಪೂರಕವಾಗಿದೆ. ಇದಕ್ಕೆ ಸಾಕ್ಷಿಯಂತೆ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ ಪಂಪನ ಕಾವ್ಯಗಳಿಂದಿಡಿದು ಕನಕದಾಸರ ರಾಮಧ್ಯಾನ ಚರಿತೆ , ಕಾರಂತರ ಚೋಮನದುಡಿ, ಕುವೆಂಪು ಅವರ ಜಲಗರ ದಲಿತ ಸಂವೇದನೆಯ ಅಂಶಗಳು ಅರ್ಥಪೈಣೃವಾಗಿ ಅಭಿವ್ಯಕ್ತಗೊಂಡಿದ್ದು ಈಗ ನಾಗರಾಜ್ ಹೆತ್ತೂರ್ ತಮ್ಮ ಜಾಡಮಾಲಿ ಜಗತ್ತಿನ ಕೃತಿ ಮೂಲಕ ನಿದ್ರೆಯಲ್ಲಿದ್ದವರನ್ನು ಮತ್ತೆ ಎಚ್ಚರಿಸಿದ್ದಂತೆ ಆಗಿದೆ.
ಕೃತಿಯ ಮುಖಪುಟ ತುಂಬಾ ಆಕರ್ಷಕವಾಗಿದ್ದು ಜಾಡಮಾಲಿಗಳಲ್ಲಿಯೂ ಕೌಶಲ್ಯವಿದ್ದು ಹೊಸದನ್ನು ಅಲೋಚಿಸುವ ಗುಣವಿದೆ ಎನ್ನುವುದನ್ನು ತಿಳಿಸುತ್ತದೆ. ಕೃತಿಯಲ್ಲಿ ಮುದ್ರಣ ಅಚ್ಚುಕಟ್ಟಾಗಿದೆ ಆದರೆ ಪುಸ್ತಕವನ್ನು ಬೆಡ್ಡಿಂಗ್ ಮಾಡುವಲ್ಲಿ ದೋಷವಾಗಿದೆ. ಒಟ್ಟಾರೆಯ ಈ ಕೃತಿ ಜಾಡಮಾಲಿಗಳ ಬದುಕು ಬವಣೆಯ ವಾಸ್ತವತೆಯನ್ನು ಕೃತಿಗಾರ ನಾಗರಾಜ್ ಹೆತ್ತೂರ್ ಎಳೆಎಳೆಯಾಗಿ ಸಮಾಜದ ಮುಂದೆ ಕನ್ನಡಿಯಂತೆ ಚಿತ್ರಿಸಿದ್ದಾರೆ.
 

‍ಲೇಖಕರು G

14 November, 2014

1 Comment

  1. Malathesh Urs Harthikote

    ಗೆಳೆಯ ನಾಗರಾಜ್ ಕೃತಿಯನ್ನು ಉತ್ತಮವಾಗಿ ವಿಮಷೆF ಮಾಡಿರುವ ಸುವರ್ಣ ಅವರಿಗೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading