ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾಗ್ವಾರ್ ನಲ್ಲಿ 'ರಮ್ಯಕೃಷ್ಣ'

ಬಹುಭಾಷಾ ನಟಿ ರಮ್ಯಕೃಷ್ಣ ‘ನಿಖಿಲ್ ಕುಮಾರ್’ ಅಭಿನಯದ ಚೊಚ್ಚಲ ಚಿತ್ರ ‘ಜಾಗ್ವಾರ್’ ಚಿತ್ರದಲ್ಲಿ ಖಳನಟಿಯಾಗಿ ಕಾಣಿಸಿಕೊಂಡಿದ್ದಾಳೆ ಎಂದು ಸುದ್ದಿಯೊಂದು ಹೊರಬಿದ್ದಿದೆ. ರಮ್ಯಕೃಷ್ಣ ಬಾಹುಬಲಿ ಚಿತ್ರದಲ್ಲಿ ಶಿವಗಾಮಿಯಾಗಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸು ಗೆದ್ದಿದ್ದರು.
Ramya-Krishnaಜಾಗ್ವಾರ್ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ವಿದೇಶಗಳಲ್ಲಿಯೂ ಚಿತ್ರತಂಡ ಶೂಟಿಂಗ್ ಮಾಡಿ ಮುಗಿಸಿದೆ. ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಜಾಗ್ವಾರ್ ತಂಡ ಆಡಿಯೋ ಬಿಡುಗಡೆ ಮಾಡಲು ಸಜ್ಜಾಗಿದೆ. ನಿಖಿಲ್ ಕುಮಾರ್ ರ ಚೊಚ್ಚಲ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.
ಎ ಮಹದೇವ್ ಅವರು ನಿರ್ದೇಶಿಸಿದ್ದಾರೆ. ನಿಖಿಲ್ ಅವರಿಗೆ ನಾಯಕಿಯಾಗಿ ಮಲಯಾಳಿ ನಟಿ ದೀಪ್ತಿ ಸತಿ ಅವರು ಕಾಣಿಸಿಕೊಂಡಿದ್ದಾರೆ. ತೆಲಗು ಚಿತ್ರರಂಗದ ಕಾಮಿಡಿ ಕಿಂಗ್ ಬ್ರಹ್ಮಾನಂದ, ಸಂಪತ್ ಮತ್ತು ಸೌರವ್ ಲೋಕೇಶ್  ಜಾಗ್ವಾರ್ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ನಟಿ ರಮ್ಯಕೃಷ್ಣ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಎಲ್ಲರೂ ಹುಬ್ಬೆರಿಸುವಂತಾಗಿದೆ. ನಟ ಜಗಪತಿ ಬಾಬು, ಸಂಪತ್ ಮತ್ತು ಸೌರವ್ ಲೋಕೇಶ್

‍ಲೇಖಕರು avadhi

19 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading