ಜಾಗತೀಕರಣ ಮತ್ತು ಸಾಮಾಜಿಕ ಚಳುವಳಿಗಳು: ಕರ್ನಾಟಕದ ಅನುಭವಗಳ ಅವಲೋಕನ
ಕುರಿತ ಎರಡು ದಿನಗಳ ಕಾರ್ಯಾಗಾರ
ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಜಾಗತೀಕರಣ ಮತ್ತು ಸಾಮಾಜಿಕ ಚಳುವಳಿಗಳು: ಕರ್ನಾಟಕದ ಅನುಭವಗಳ ಅವಲೋಕನ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ದಿನಾಂಕ ೨೫ನೇ ಸೋಮವಾರ ಮತ್ತು ೨೬ರ ಮಂಗಳವಾರ ಜುಲೈ ೨೦೧೧ರಂದು ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಕಾರ್ಯಾಗಾರದ ಕುರಿತು ಅಧ್ಯಯನ ಕೇಂದ್ರವು ರೂಪಿಸಿರುವ ಪರಿಕಲ್ಪನಾ ಟಿಪ್ಪಣಿ ಮತ್ತು ಕಾರ್ಯಕ್ರಮದ ಸಂಭವನೀಯ ವಿವರಗಳನ್ನು ಈ ಪತ್ರದೊಟ್ಟಿಗೆ ನೀಡಲಾಗಿದೆ, ದಯವಿಟ್ಟು ಗಮನಿಸುವುದು.
ಕರ್ನಾಟಕದಾದ್ಯಂತ ಎಲ್ಲ ಭಾಗಗಳ ಒಟ್ಟು ೪೦ ಮಂದಿ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಾಗಾರದಲ್ಲಿ ದಲಿತ, ರೈತ, ಬುಡಕಟ್ಟು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಕಾರ್ಮಿಕ, ಮಹಿಳೆ, ಕೊಳಚೆ ನಿವಾಸಿಗಳು ಮತ್ತು ಮಾನವ ಹಕ್ಕುಗಳ ಹೋರಾಟಗಳಲ್ಲಿ ತೊಡಗಿಕೊಂಡಿರುವ ನಾಯಕರು ಹಾಗೂ ಈ ಚಳುವಳಿಗಳೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿರುವ ಹಾಗೂ ಅಧ್ಯಯನ ನಡೆಸಿರುವ ಚಿಂತಕರು, ಲೇಖಕರು ಭಾಗವಹಿಸಲಿದ್ದಾರೆ. ಕಾರ್ಯಾಗಾರದ ನಡಾವಳಿಗಳನ್ನು ಎಲ್ಲ ಪ್ರತಿನಿಧಿಗಳಿಗೆ ನೀಡಲಾಗುವುದು ಜೊತೆಗೆ ಕಾರ್ಯಾಗಾರಕ್ಕೆ ಸಂಬಂಧಿಸಿದ ಲೇಖನಗಳನ್ನು ತಮಗೆ ಮುಂಚಿತವಾಗಿ ಕಳುಹಿಸಿಕೊಡಲಾಗುವುದು.
ನಿಮ್ಮ ಭಾಗವಹಿಸುವಿಕೆಯ ಕುರಿತು ಈ ಪತ್ರ ಕಂಡ ೫ ದಿನಗಳೊಳಗೆ ಪತ್ರ/ಫೋನ್ ಮೂಲಕ ಖಚಿತ ಪಡಿಸಬೇಕಾಗಿ ಮನವಿ. ನಿಮ್ಮ ಮೂಲ ಸ್ಥಳದ ರೈಲು(೨ಎ.ಸಿ.)/ಬಸ್ ಮತ್ತು ಸ್ಥಳೀಯ ಪ್ರಯಾಣದ ವೆಚ್ಚವನ್ನು ಅಧ್ಯಯನ ಕೇಂದ್ರವು ಭರಿಸಲಿದೆ. ತಮಗೆ ಕಛೇರಿಕಾರ್ಯ ನಿಮಿತ್ತ ರಜೆಯ (ಔಔಆ) ಸೌಲಭ್ಯದ ಅಗತ್ಯವಿದ್ದರೆ ಅದನ್ನು ಅಧ್ಯಯನ ಕೇಂದ್ರವು ನೀಡಲಿದೆ. ಈ ವಿಚಾರ ಸಂಕಿರಣಕ್ಕೆ ಆಗಮಿಸುವ ತಮ್ಮ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಅಧ್ಯಯನ ಕೇಂದ್ರವು ಅಂತರರಾಷ್ಟ್ರೀಯ ತರಬೇತಿ ಕೇಂದ್ರ, ಎನ್.ಎಲ್.ಎಸ್.ಐ.ಯು, ಬೆಂಗಳೂರು ಇಲ್ಲಿ ಒದಗಿಸಲಿದೆ.
ಕಾರ್ಯಾಗಾರಕ್ಕೆ ಬೆಂಗಳೂರೇತರ ಜಿಲ್ಲೆಗಳಿಂದ ಆಗಮಿಸುವ ಪ್ರತಿನಿಧಿಗಳು ಜುಲೈ ೨೪ರ ಭಾನುವಾರ ಸಂಜೆ ಅಥವಾ ಜುಲೈ ೨೫ರ ಸೋಮವಾರ ಬೆಳಿಗ್ಗೆ ೮ ಗಂಟೆಗೆ ಹಾಜರಿದ್ದು ನಂತರ ಜುಲೈ ೨೬ರ ಮಂಗಳವಾರ ಸಂಜೆ ೬ ಗಂಟೆಗೆ ಹಿಂತಿರುಗುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು.
ಡಾ. ಎಸ್. ಜಾಫೆಟ್
ನಿರ್ದೇಶಕರು
ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ
ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್.ಎಲ್.ಎಸ್.ಐ.ಯು.),
ನಾಗರಬಾವಿ, ಬೆಂಗಳೂರು ೫೬೦ ೦೭೨
ದೂರವಾಣಿ: ೦೮೦-೨೩೧೬೦೫೩೧, ೨೩೧೬೦೫೩೨ ಫ್ಯಾಕ್ಸ್: ೦೮೦-೨೩೧೬೦೫೩೧
ಸಂಪರ್ಕ ಸಂಖ್ಯೆಗಳು : ಡಾ.ಎಸ್.ಜಾಫೆಟ್-೯೯೦೦೪ ೫೧೫೦೧ ಕೆ.ಎಲ್.ಚಂದ್ರಶೇಖರ್ ಐಜೂರ್ -೯೮೮೦೯ ೧೪೫೭೮, ೮೯೦೪೬ ೫೦೨೮೨ ಟಿ.ಕೆ.ದಯಾನಂದ-೯೫೩೫೧ ೫೮೧೦೨
chandrashekharaijoor@gmail.com, chandruaijoor@gmail.com, japhets@nls.ac.in, sjaphetnls@gmail.com, 7poemy@gmail.com ªÀÄvÀÄÛ buldojer@yahoo.in







ಕಾರ್ಯಾಗಾರ ಯಶಸ್ವಿಯಾಗಲಿ.
very good luck