ಜಯಶ್ರೀ ಮೇಡಂ ಗೆ ಒಂದು ಅನುಮಾನ..

ಜಯಶ್ರೀ ಕಾಸರವಳ್ಳಿ 

ನನಗೊಂದು ಅನುಮಾನ:

ಸಾಮಾನ್ಯವಾಗಿ ಕತೆಗಾರರು ಬರೆಯುವ ಕತೆಗಳಲ್ಲಿ ವೈಯಕ್ತಿಕ ವಿವರಗಳು ಇರುತ್ತವೆಯೇ ಅಥವಾ ಅದೊಂದು ಸಂಪೂರ್ಣ ಕಾಲ್ಪನಿಕವೇ?

ಒಂದು ವೇಳೆ ವೈಯಕ್ತಿಕ ವಿವರಗಳಿಂದ ತುಂಬಿದ ಕತೆ ಓದುಗರಿಗೆ ಇಷ್ಟವಾಗಬಾರದೆಂದೇನೂ ಇಲ್ಲವಲ್ಲ.

“ವೈಯಕ್ತಿಕ ವಿವರವಿರುವ ಚಂದದ ಕತೆ” ಎಂದು ಯಾರಾದರೂ ಪ್ರಶಂಸಿಸಿದರೆ, ಲೇಖಕರ ವೈಯಕ್ತಿಕ ಬದುಕಿನೊಳಗೆ “ಇಣುಕಿ ನೋಡಿದರು” ಎಂಬ ಅರ್ಥವನ್ನು ಕೊಡುತ್ತದೆಯೇ?

ನಮ್ಮ ಕತೆಗಾರರು ಅಷ್ಟು ಅಸೂಕ್ಷ್ಮರೆ?

ಕತೆಗಾರರು ಕೂಡ ನಮ್ಮ ನಿಮ್ಮ ಹಾಗೆ ಒಬ್ಬ ಸಾಮಾನ್ಯ ಮನುಷ್ಯರೇ ಅಲ್ಲವೇ? ಅವರ ಸುತ್ತಮುತ್ತಲ ಜಗತ್ತಿನಲ್ಲಿ ಕಂಡದ್ದು, ಕೇಳಿದ್ದು, ನೋಡಿದ್ದು, ಅನುಭವಿಸಿದ್ದು ನಮ್ಮ ಸುಪ್ತಪ್ರಜ್ಞೆಯಲ್ಲಿ ಆಳವಾಗಿ ಬೇರೂರಿದ್ದು, ಎಂದೋ, ಯಾವಾಗಲೋ ನಮಗೆ ಗೊತ್ತಿಲ್ಲದ ಹಾಗೆ ಆಕ್ಷರದ ರೂಪ ತಾಳಿ ಕತೆಯಾಗಿ ಮೂಡಿ ಬಂದಿದ್ದರೂ, ನಮ್ಮ ಆಂತರ್ಯದ ಒಳಗಿನಿಂದ ಆಕಾರ ಪಡೆಯುವಾಗ ನಮ್ಮರಿವಿಲ್ಲದಂತೆ ಒಂದಷ್ಟು ವೈಯಕ್ತಿಕ ತುಣುಕುಗಳೂ ಅದಕ್ಕೆ ಸೇರುತ್ತಿರುತ್ತದೆಯಲ್ಲವೇ?

ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಹೀಗೆ ಬಂದು ಸೇರುವ ಕೆಲ ವಿವರಗಳು ಕೆಲವೊಮ್ಮೆ ನೇರವಾಗಿ ನಮ್ಮ ಅಂತರಂಗ ಹೊಕ್ಕು ನಮ್ಮದೇ ಅನ್ನುವಷ್ಟು ಆಪ್ತವಾಗಿಬಿಡಬಹುದು. ಅಂತಹ ಸಂದರ್ಭದಲ್ಲಿ ವೈಯಕ್ತಿಕ ವಿವರಗಳು ನಗಣ್ಯವೆನ್ನಿಸುವುದಿಲ್ಲ.

ಆದರೆ ತಮ್ಮದು ಸಂಪೂರ್ಣ ಕಾಲ್ಪನಿಕ ಕತೆ (ಸಂಪೂರ್ಣ ಕಾಲ್ಪನಿಕವಾಗಲು ಅಸಾಧ್ಯ, ಅದು ಬೇರೆ ಮಾತು) ಎಂದು ಹೇಳಿ ಬರೆದ ಲೇಖಕರ ಕತೆಗಳನ್ನು ಓದಿದಾಗ ಲೇಖಕರ ವೈಯಕ್ತಿಕ ಬದುಕಿನ ಅಭಿಪ್ರಾಯವಷ್ಟೇ ಇದೆಯೇ ಹೊರತು ಸಾರ್ವತ್ರಿಕವಲ್ಲ ಅನ್ನಿಸಿದರೆ, ಅದು ಓದುಗನ ತಪ್ಪೇ ಅಥವಾ ಓದುಗನಿಗೆ ತಿಳಿಯಪಡಿಸುವಲ್ಲಿ ಸೋತ ಲೇಖಕರ ಮಿತಿಯೇ?..

ಮುಕ್ತ ಅಭಿಪ್ರಾಯಕ್ಕೆ ಸ್ವಾಗತ.

‍ಲೇಖಕರು avadhi

February 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: