ಬೆಳಕು ಬೆತ್ತಲೆ ಮಾಡಿಬಿಡುತ್ತದೆ.. ದುಃಖತಪ್ತ ಮನಸ್ಸು ಕತ್ತಲೆಯನ್ನು ಬಯಸುತ್ತದೆ… ಕತ್ತಲು ಕೊಡುವ ಸಮಾಧಾನ, ಸಾಂತ್ವನ ಬೆಳಕು ಕೊಡಲಾರದು… ಎಂದು ನೋವಿನಲ್ಲಿರುವ ಮನಸಿನ ಬೇಗುದಿಯನ್ನು ಹೇಳುತ್ತಾ, ಬೆಳಕಿನೆಡೆ ಮುಖ ಮಾಡಿರುವ ಪ್ರಕಾಶ್ ಹೆಗಡೆಯವರ ಎರಡನೆಯ ಕೃತಿ ಇದು.
ಬ್ಲಾಗ್ ಲೋಕದ ಮುಖಾಂತರ ಕನ್ನಡ ಸಾಹಿತ್ಯಕ್ಕೆ ಧಿಡೀರ್ ಅಂತ ಕಾಲಿಟ್ಟ ಪ್ರಕಾಶ್ ಹೆಗಡೆಯವರ ಬರಹಗಳು ಇಷ್ಟವಾಗುವುದು ಅವುಗಳಲ್ಲಿನ ಸಹಜತೆಯಿಂದಾಗಿ, ಸರಳತೆಯೊಂದಿಗೆನೇ ಬದುಕಿನ ಸೂಕ್ಷ್ಮಗಳನ್ನು ಹಗುರವಾದ ಧಾಟಿಯಲ್ಲಿ ಹೇಳುತ್ತಾ, ನಗಿಸುತ್ತಲೇ ಮನಸನ್ನು ಆರ್ಧ್ರಗೊಳಿಸುತ್ತಾ, ಕೆಲವೊಮ್ಮೆ ಚುರುಕು ಮುಟ್ಟಿಸುವ ಗುಣಗಳಿಂದಾಗಿ. ಪ್ರಕಾಶ್ ಅವರ ಬರಹದ `ಶಾರಿ’ಯ ಮುಗ್ಧತೆ ನನಗೆ ತುಂಬಾ ಇಷ್ಟ.
ಪುಸ್ತಕ ಓದಿದ ಮೇಲೆ ನಾಗು, ರಾಜಿ, ಗಪ್ಪತಿ, ಕುಷ್ಟ, ಶಾರಿ ನಿಮಗೆ ತುಂಬಾ ಪರಿಚಿತ ಹೆಸರುಗಳೆನಿಸಿಬಿಡುತ್ತವೆ. ಇಲ್ಲಿನ ಬರಹಗಳನ್ನು ಓದುತ್ತಾ ಓದುತ್ತಾ ನೀವು ಮುಗುಳ್ನಗುತ್ತೀರಿ, ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಿ, ಸುಮ್ಮನಾಗುತ್ತೀರಿ, ಭಾವಪರವಶರಾಗುತ್ತೀರಿ, ಆ ಮೂಲಕ ಬದುಕಿನ ಹಲವು ಮುಖಗಳನ್ನು ಕಾಣುತ್ತೀರಿ… ಹೀಗೆ ಈ ಪುಸ್ತಕ ನಿಮಗೆ ಆಪ್ತವಾಗುತ್ತದೆ. ಒಬ್ಬ ವ್ಯಕ್ತಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬರೆದು ಗೆಲ್ಲಬೇಕೆಂದೇನೂ ಇಲ್ಲ. ಹಾಗಂತ ಹಾಗಿರಬಾರದು, ಹಾಗಾಗುವುದಿಲ್ಲ ಅಂತಲೂ ಅಲ್ಲ.
ಸಾಹಿತ್ಯದ ಯಾವುದೇ ಪ್ರಕಾರವನ್ನು ಅಥವಾ ಪ್ರಕಾರಗಳನ್ನು ಆಯ್ದುಕೊಂಡರೂ ಅಲ್ಲಿ ಗಟ್ಟಿತನವಿರಬೇಕು. ಅಂಥ ಯಶಸ್ಸು ಪ್ರಕಾಶ್ ಅವರಿಗೆ ದೊರೆಯಲಿ, ಒಬ್ಬ ಉತ್ತಮ ಲೇಖಕನೆಂದೆನಿಸಿಕೊಳ್ಳಲು ಆ ಲೇಖಕನಿಂದ ನೂರಾರು ಪುಸ್ತಕಗಳು ಬರಬೇಕೆಂದೇನೂ ಇಲ್ಲ. ಕೆಲವೇ ಸತ್ವಪೂರ್ಣ ಪುಸ್ತಕಗಳು ಪ್ರಕಟಗೊಂಡರೂ ಸಾಕು. ಪ್ರಕಾಶ್ ಅವರಿಂದ ಅಂಥ ಸತ್ವಪೂರ್ಣ ಪುಸ್ತಕಗಳು ನಮಗೆಲ್ಲ ಓದಲು ದೊರೆಯಲಿ. ಪ್ರಕಾಶ್ ಹೆಗಡೆ ಅವರ ಬರವಣಿಗೆಯಲ್ಲಿ ಆ ಸಾಮಥ್ರ್ಯವಿದೆ.








ಜಯಲಕ್ಷ್ಮಿ, ಪುಸ್ತಕದ ಬಗೆಗಿನ ನಿಮ್ಮ ಪರಿಚಯಾತ್ಮಕ ಬರಹ ಓದಿದ ಮೆಲೆ ಪುಸ್ತಕವನ್ನು ಓದಬೇಕೆನಿಸಿದೆ. ಕೊಂಡು ಓದುತ್ತೇನೆ.
prakashanna pustaka andamele nagu tadeyakoe agolla. husaragi odi.