ಜಯರಾಮಾಚಾರಿ ಓದಿದ ‘ತುಷಾರ ಹಾರ’

ಜಯರಾಮಾಚಾರಿ

‘ಬದುಕು ಅಲ್ಲಿಗೆ ಮುಗಿಯುವುದಿಲ್ಲ.. ಬದುಕು ಪ್ರೀತಿಯ ಕತೆ ಇದು, ಬದುಕು ಮುಂದುವರಿಯುವುದು.’

ಇದನ್ನು ಒಂದು ಕತೆ ಕಾದಂಬರಿ ಕವಿತಾ ಸಂಕಲನದಂತೆ ಓದಲು ಆಗುವುದಿಲ್ಲ. ಇದೊಂದು ತನ್ನ ಕಣ್ಮುಂದೆಯೇ ಆಡಿ ಬೆಳೆದು ಬದುಕಿ ಕೊನೆಗೆ ತತ್ತರಿಸಿ ಮಡಿದ ಮಗನ ಬಗ್ಗೆ ಅಮ್ಮ ನಮ್ಮೆದುರು ಕೂತು ಹೇಳಿದ ಜೀವನ ದರ್ಶನ. ತನ್ನ ಮಗನ ಬಗ್ಗೆ ಹೆಮ್ಮೆಯ ಮಾತುಗಳು ಹೇಳುತ್ತಲೇ, ಅಯ್ಯೋ ನನ್ನ ಕಂದ ಸೊರಗುತ್ತಿದೆ ಎಂದು ಒದ್ದಾಡುವ ಮಾತೃ ಹೃದಯದ ಕತನ ಇದು.

ಕ್ಯಾನ್ಸರ್ ಈ ಕಾಲದ ದೊಡ್ಡ ಶತ್ರು. ಅಂತ ಕ್ಯಾನ್ಸರಿಗೆ ತುತ್ತಾದ ಕೊನೇ ಸ್ಟೇಜಿನಲ್ಲಿ ಗೊತ್ತಾದ ಮಗನೂ ಅಮ್ಮಾ ಏನೋ ಹೋದಂತಾಯ್ತು ಎಂದಾಗ ಆ ತಾಯಿಗೆ ಅದು ಮಗನ ಸಾವು ಎಂದು ಗೊತ್ತಾಗಿರಲಿಲ್ಲ. ರಾತ್ರಿ ಮಲಗಿ ಎದ್ದರೆ ನಗುತ್ತಲೇ ಸಿಹಿ ಸಾವನ್ನಪ್ಪಿರೊ ಮಗ.

ಇದೊಂದು ಹೃದಯಕ್ಕೆ ಕೈ ಹಾಕಿ ಅಲ್ಲಾಡಿಸಿಬಿಡುವ ಕತನ, ಇಡೀ ಕತನದಲ್ಲಿ ನಾವೆಂದೂ ನೋಡಿರದ ತುಷಾರ್ ಎಂಬ ಒಂದು ಸಹೃದಯದ ಬದುಕು ಕೂಡ ನೋಡುತ್ತೇವೆ ಅದರಾಚೆಗೂ ನಮ್ಮನ್ನ ತಟ್ಟೊದು ತಾಯಿಯ ದುಃಖ !

ಈ ಪುಸ್ತಕ ಓದ್ಬೇಕು ನೀವು ಎಂದು ಬೇರೆಯವರಿಗೆ ಹೇಳಲೂ ಭಯವಾಗುವ ಪುಸ್ತಕ. ಒಬ್ಬ ಒಳ್ಳೆಯ ಮಗನಿಗೆ ಇದಕ್ಕಿಂತ ಒಂದು ನುಡಿನಮನ ಸಲ್ಲಿಸಲು ಸಾಧ್ಯವೇ?!

ಇನ್ಯಾವುದೋ ಮಲ್ಟಿವರ್ಸಿನಲ್ಲಿ ತುಷಾರ್ ಒಂದು ಸಾದಾ ಟೀಶರ್ಟ್ ಜೀನ್ಸ್ ಹಾಕಿ ಟ್ರೆಕ್ಕಿಂಗ್ ಮಾಡುತ್ತಿರಲಿ, ಅವರ ಹೃದಯದಲ್ಲಿ ವಾಪಾಸು ಮನೆಗೆ ಹೋಗಿ ಕಿಚಡಿ ತಿನ್ನುವ ಆಸೆಯೊಂದೊ ಉಳಿದಿರಲಿ.

ಕೃತಿ: ‘ತುಷಾರಹಾರ’
ಪ್ರಕಾಶನ : ಬಹುರೂಪಿ
ಪುಟಗಳು : 154
ಬೆಲೆ : ರೂ 175
ಪ್ರತಿಗಳಿಗಾಗಿ ಸಂಪರ್ಕಿಸಿ : 70191 82729

ಅಥವಾ ಇಲ್ಲಿ ಭೇಟಿ ಕೊಡಿ : https://bit.ly/3Nfm4pQ

‍ಲೇಖಕರು avadhi

May 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: