‘ಕರ್ನಾಟಕ ಜನಸಾಹಿತ್ಯ ಸಮಾವೇಶ’ ಸಂಭ್ರಮದ ಪರ್ಯಾಯವಲ್ಲ.
ಸಮಕಾಲಿನ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭಗಳಲ್ಲಿ ಸಹಜವಾಗಿ ನಡೆಯಬಹುದಾದ ಉತ್ಸವಗಳು, ಸಂಭ್ರಮಗಳು ಬಹುತೇಕವಾಗಿ ವಾದಗ್ರಸ್ಥ ವಿಷಯಗಳಾಗಿ ಪರಿಣಮಿಸುವ ಜೊತೆಗೆ ಬೆಳಕಾಗದೇ, ಬಯಲಾಗದೇ ಬರೀ ಕಿಡಿ ಇಲ್ಲವೆ ಹೊಗೆ ಎಬ್ಬಿಸುವ ಸನ್ನಿವೇಶಕ್ಕೆ ನಾಂದಿಯಾಗಿ ಬಿಡುವ ಸಂದರ್ಭಗಳೇ ಹೆಚ್ಚು. ಅದಕ್ಕೆ ಕಾರಣವಾಗಿ ಅವು ಹುಟ್ಟು ಹಾಕಬಹುದಾದ ಅನೇಕ ಬಗೆಯ ತಾತ್ವಿಕ ಭಿನ್ನಾಭಿಪ್ರಾಯಗಳು ಮತ್ತು ವಾಗ್ವಾದದ ಟಿಸಿಳುಗಳನ್ನು ಮರೆಯಲಾಗುವದಿಲ್ಲ. ಸಮಾಜವೇ ಸಾಹಿತ್ಯದ ಮೂಲ ಸಾಮಗ್ರಿ ಎನ್ನುವ ನಗ್ನ ಸತ್ಯವನ್ನು ಮರೆಮಾಚಿಯೂ ಒಂದು ಸಾಹಿತ್ಯ ಸಂಭ್ರಮವನ್ನು ಸಂಘಟಿಸಿ, ಅದನ್ನೇ ಸರಿ ಎಂದು ಸಮಥರ್ಿಸಿಕೊಂಡಾಗ, ತಾತ್ವಿಕವಾದ ಭಿನ್ನತೆಗಳು ಹುಟ್ಟುವುದು ಸಹಜವೇ.
ಧಾರವಾಡದ ಸಾಹಿತ್ಯ ಸಂಭ್ರಮದ ಸಂದರ್ಭದಲ್ಲಿ ಅಲ್ಲಿದ್ದ ತರಾವರಿ ಹೇರಿಕೆಗಳು ವಸಹಾತುಶಾಹಿ ವ್ಯವಸ್ಥೆಯನ್ನು ನೆನಪಿಸುವಂತೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಣುಕಿಸುವಂತೆ ವ್ಯಕ್ತಿಯ ಆಯ್ಕೆ, ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ, ಸಾಮಾನ್ಯ ಓದುಗನೆಡೆಗೆ ಬೆನ್ನು ಮಾಡಿ ನಿಂತು, ಜೈಪುರದ ಅನುಕರಣೆಯನ್ನು ಧಾರವಾಡದ ಸರಳ, ಸಾಂಸ್ಕೃತಿಕ ಸಜ್ಜನಿಕೆಯ ನೆಲದಲ್ಲಿ ಮಾಡಿ ಮುಗಿಸುವಾಗಲೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ಕಸಿವಿಸಿಕೊಂಡ ಪ್ರಗತಿಪರ ಮನಸುಗಳು, ಬರಹಗಾರರು ಸಂಭ್ರಮಕ್ಕೆ ತಮ್ಮದೇಯಾದ ರೀತಿಯಲ್ಲಿ ತಾಕರ್ಿಕ, ತಾತ್ವಿಕ ಭಿನಾಭಿಪ್ರಾಯಗಳನ್ನು ಎತ್ತುವ ಮೂಲಕ ಜನರಿಂದ ದೂರ ಸರಿಯುವ, ವಿಮುಖವಾಗುವ ಮೂಲಕ ಸಂಘಟಿಸಬಹುದಾದ ಸಂಭ್ರಮಗಳ ಸಾರ್ಥಕತೆಯನ್ನು ಕುರಿತು ನಾಡಿನ ಅನೇಕ ಜಾಗೃತ ಮನಸುಗಳು ಪ್ರತಿಕ್ರಿಯಿಸಿದ್ದೂ ಆಯಿತು.

ಸಾಹಿತ್ಯವನ್ನು ಸಾಧ್ಯವಾದಷ್ಟು ವ್ಯವಹಾರಿಕವಾದ ಕಕ್ಷೆಗೆ ಒಳಪಡಿಸಬಾರದು ಎನ್ನುವ ಹಂಬಲವಿರುವವರಿಗೆ ಈ ಸಂಭ್ರಮದಂಥಾ ಕಟ್ಟಳೆಗಳ ಬಿಗಿಬಂಧನದ ಹಬ್ಬಗಳು ಹುಟ್ಟು ಹಾಕಬಹುದಾದ ಸಾಹಿತ್ಯಕ, ಸಾಂಸ್ಕೃತಿಕ ಪರಿಸರದ ಪೂವರ್ಾಪರಗಳ ಬಗ್ಗೆ ಒಂದು ಬಗೆಯ ದುಗುಡ ಇದ್ದೇ ಇತ್ತು. ಆ ಹಿನ್ನೆಲೆಯಲ್ಲಿ ಒಂದು ತಾತ್ವಿಕವಾದ ಭಿನ್ನಾಭಿಪ್ರಾಯದ ಬರಹಗಾರರ ಸಮೂಹವೊಂದು ಅತ್ಯಂತ ಮುಕ್ತವಾಗಿ ಒಂದು ಜನಪರವಾದ ಸಾಹಿತ್ಯ ವೇದಿಕೆಯನ್ನು ಹುಟ್ಟುಹಾಕಬೇಕು ಎಂದು ಹಂಬಲಿಸಿದ ಪರಿಣಾಮವೇ ಈಗ ಧಾರವಾದದಲ್ಲಿ ಇದೇ ಮಾಚರ್್ 23-24 ರಂದು ಜರುಗಲಿರುವ ಕನರ್ಾಟಕ ಜನಸಾಹಿತ್ಯ ಸಮಾವೇಶ. ಈ ಸಮಾವೇಶ ಖಂಡಿತ ಸಂಭ್ರಮಕ್ಕೆ ಪಯರ್ಾಯವಲ್ಲ. ಎರಡರ ದಾರಿಗಳು ಬೇರೆ ಬೇರೆ.. ಧೋರಣೆ, ತಾತ್ವಿಕತೆಗಳು ಕೂಡಾ ಸಂಪೂರ್ಣವಾಗಿ ಭಿನ್ನ. ಅನೇಕರು ಇದು ಅದಕ್ಕೆ ಪಯರ್ಾಯವೇ..? ಎಂದು ಕೇಳುವಾಗ ಖಂಡಿತ ಅಲ್ಲ. ಸಂಭ್ರಮದ ತಾತ್ವಿಕತೆಯೇ ಬೇರೆ.. ಜನಸಾಹಿತ್ಯ ಸಮಾವೇಶದ್ದೇ ಬೇರೆ. ಹಾಗಾಗಿ ಇದು ಅದಕ್ಕೆ ಪಯರ್ಾಯವಲ್ಲ ಎನ್ನುವದಂತೂ ಖಚಿತ.
ಸಾಹಿತ್ಯಕ ಚಟುವಟಿಕೆಯಲ್ಲಿ ಒಂದೇ ಒಂದು ನಿರ್ಬಂಧವೂ ಇರಕೂಡದು ಎನ್ನುವ ಜಾಗೃತಿಯಿಂದ, ಪಕ್ಕಾ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಹುಟ್ಟಿಕೊಂಡ ವೇದಿಕೆ ಈ ಕನರ್ಾಟಕ ಜನಸಾಹಿತ್ಯ ಸಮಾವೇಶ. ಇದು ಯಾವುದೋ ಒಂದು ಸಂಸ್ಥೆಯ ಕೃಪಾಪೋಷಿತ ಮಂಡಳಿ ಅಲ್ಲ. ಸರಕಾರದಿಂದ ಯಾವುದೇ ಅನುದಾನವನ್ನೂ ಇದು ಪಡೆದಿಲ್ಲ.ಪಡೆಯುವದೂ ಇಲ್ಲ. ಇಲ್ಲಿರುವ ಪದಾಧಿಕಾರಿಗಳೇ ಪ್ರತಿಯೊಬ್ಬರೂ ಐದೈದು ಸಾವಿರ ರೂಪಾಯಿ ಕೂಡಿಸುವ ಮೂಲಕ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ ಈ ವೇದಿಕೆ ನಾಡಿನ ಎಲ್ಲ ಪ್ರಗತಿಪರ ಮನಸುಗಳ ಬೆಂಬಲದೊಂದಿಗೆ ಒಂದು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ರೂಪಿಸಿದೆ. ಇದು ತೀರಾ ಸರಳವಾದ ಸಮಾವೇಶ. ಇಲ್ಲಿ ಗಂಭೀರವಾದ ಚಚರ್ೆಗಳು, ಸಂವಾದಗಳಿವೆಯೇ ಹೊರತು ಊಟದಲ್ಲಿ ಪಟ್ಟಿ ಮಾಡಬಹುದಾದ ವಗೈರೆ..ವಗೈರೆ ಗಳಿಲ್ಲ. ಇದ್ದದ್ದು ತೀರಾ ಸೀದಾ ಸಾದಾ ಅನ್ನ ಸಾರು ಮಾತ್ರ.
ಧಾರವಾಡದ ಕನರ್ಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜರುಗುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 500 ರಷ್ಟು ಪ್ರಗತಿಪರ ಬರಹಗಾರರು, ಹೊಸ ತಲೆಮಾರಿನ ಲೇಖಕರು ಒಂದೆಡೆ ಸೇರುವ ಸಾಧ್ಯತೆಗಳಿವೆ. ಹೊಸ ತಲೆಮಾರಿನ ಬರಹಗಾರರನ್ನು ಒಳಗೊಂಡು ರೂಪಿತವಾದ ಈ ಕನರ್ಾಟಕ ಜನ ಸಾಹಿತ್ಯ ಸಮಾವೇಶದಲ್ಲಿ ಬೀದರ, ಮಂಗಳೂರು, ಬೆಂಗಳೂರು, ಮೈಸೂರು ಹೀಗೆ ಇಡೀ ರಾಜ್ಯದ ಮೂಲೆ ಮೂಲೆಯಿಂದಲೂ ಬರುವವರಿದ್ದಾರೆ. ಇವರೆಲ್ಲರೂ ಬಹುತೇಕವಾಗಿ ಟಿ.ಎ.ಡಿ.ಎ. ಖಯಾಲಿಯಿಂದ ದೂರ ನಿಂತವರು. ಬಹುತೇಕರು ತಮ್ಮದೇ ಖಚರ್ು ವೆಚ್ಚದಲ್ಲಿ ಬಂದು ಹೋಗಲು ಒಪ್ಪಿಕೊಂಡವರು. ‘ಉಚಲ್ಯಾ’ ಕೃತಿಯ ಖ್ಯಾತಿಯ ಲಕ್ಷ್ಮಣ ಗಾಯಕವಾಡ ಉದ್ಘಾಟನೆ ಮಾಡುವರು. ನಾಡಿನ ಸಾಂಸ್ಕೃತಿಕ ಚಿಂತಕರಾದ ರಹಮತ್ ತರೀಕೆರೆ, ಬಾನು ಮುಸ್ತಾಕ, ನಾಗೇಶ ಹೆಗಡೆ, ಕುಂ.ವಿ. ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ, ಇಂದೂಧರ ಹೊನ್ನಾಪುರ, ಜಿ.ಪಿ.ಬಸವರಾಜು, ನಟರಾಜು ಬೂದಾಳ, ತಾರಿಣಿ ಶುಭದಾಯಿನಿ ಹೀಗೆ ಇನ್ನೂ ನೂರಾರು ಸಾಹಿತಿ ಚಿಂತಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವರು.
ಇಲ್ಲಿ ಸಾಹಿತ್ಯ ಆಸಕ್ತರಿರುವ ಯಾರು ಬೇಕಾದರೂ ಭಾಗವಹಿಸಬಹುದು. ಯಾವುದೇ ರೀತಿಯ ಪ್ರವೇಶ ಶುಲ್ಕವಾಗಲೀ.. ಕಟ್ಟಳೆಗಳಾಗಲೀ ಇಲ್ಲ. ಮುಕ್ತವಾದ ಪ್ರವೇಶ..ಮುಕ್ತವಾದ ಆಲೋಚನೆ. ಸಾಹಿತ್ಯ ಎನ್ನುವುದು ಪಾರಿಜಾತ ಪುಷ್ಪವಲ್ಲ, ಸಾಹಿತಿಯಾದವನು ಯಕ್ಷ ಲೋಕದ ಕಿನ್ನರನಲ್ಲ. ಜನರ ಬದುಕು-ಭಾವನೆಗಳನ್ನು ಬಟ್ಟಿ ಇಳಿಸಿ, ಸೃಜನಶೀಲ ಎಂದು ಕರೆದುಕೊಂಡು ಜನರಿಂದ ದೂರ ಉಳಿಯುವ ಪರಿಪಾಠ ಸಾಹಿತ್ಯಕ ವಲಯದಲ್ಲಿ ಒಂದು ಬಗೆಯ ಮುಗಮ್ಮಾದ ಯಜಮಾನಿಕೆಯನ್ನು ಹುಟ್ಟುಹಾಕುತ್ತದೆ. ಬಹುದೊಡ್ಡ ಮೌಖಿಕ ಪರಂಪರೆಯಿರುವ ಈ ನೆಲದಲ್ಲಿ ಅದನ್ನೇ ಬಳಸಿಕೊಂಡು ಕತೆ, ನಾಟಕ, ಕಾವ್ಯ ಬರೆದು ಪ್ರಶಸ್ತಿ ಪಡೆದು ಇದ್ದಕ್ಕಿದ್ದಂತೆ ಮೌಖಿಕ ಪರಂಪರೆಯ ವಾರಸುದಾರರನ್ನೇ ಅಜ್ಞಾತರಂತೆ ಪರಿಗಣಿಸುವ ಯಾವ ಉತ್ಸವಗಳೂ ಜನಮುಖಿಯಾಗಲಾರವು ಎನ್ನುವುದನ್ನು ಪ್ರಾಜ್ಞರಾದವರು ಅರಿಯಬೇಕಿದೆ.
ಓದುಗ ಮತ್ತು ಬರಹಗಾರನ ನಡುವೆ ಸೇತುಸಂಬಂಧದ ಅವಶ್ಯಕತೆ ಇದೆಯೇ ಹೊರತು ಗಡಿ ಗೋಡೆಗಳಲ್ಲ. ಆ ದಿಸೆಯಲ್ಲಿ ಕನರ್ಾಟಕ ಜನಸಾಹಿತ್ಯ ಸಮಾವೇಶ ಒಂದು ಔಚಿತ್ಯಪೂರ್ಣ ನೆಲೆಯಲ್ಲಿ ಈ ಸಮಾವೇಶವನ್ನು ಸಂಘಟಿಸುತ್ತಿದೆ. ಸಾಹಿತ್ಯ, ಸಂಸ್ಕೃತಿ ಜನರ ಮಧ್ಯೆಯೇ ಆವೀರ್ಭವಿಸುವ ಅವಶ್ಯಕತೆಯಿದೆ. ಅದೇ ವೇಳೆಗೆ ಯಾವದೋ ಒಂದು ಸಂಭರಮ, ಉತ್ಸವವನ್ನು ವಿರೋಧಿಸಲಿಕ್ಕಾಗಿಯಾಗಲೀ ಇಲ್ಲವೇ ಅದಕ್ಕೆ ಪಯರ್ಾಯವೆಂತಾಗಲೀ ಈ ಬಗೆಯ ಸಮಾವೇಶಗಳು ಹುಟ್ಟುವದಿಲ್ಲ. ಬದಲಾಗಿ ಅಗಾಧವಾದ ಸಾಂಸ್ಕೃತಿಕ ಖಾಳಜಿ ಮತ್ತು ಆತ್ಯಂತಿಕವಾದ ಸಾಹಿತ್ಯಕ ಪರಿಸರದ ನೆಲದಲ್ಲಿಯೇ ಪ್ರಜಾಸತ್ತೆಯನ್ನು ಅಣಕಿಸುವಂತೆ ಯಾವುದೇ ಒಂದು ಸಂಘ, ಸಂಸ್ಥೆ ನಡೆದುಕೊಂಡಾಗ ಅದನ್ನು ತಾತ್ವಿಕವಾಗಿ ವಿರೋಧಿಸದಿದ್ದರೆ ಆ ಸಮುದಾಯದ ಜೀವಂತಿಕೆ, ಜಾಗೃತತೆಯ ಪ್ರಶ್ನೆ ಎದುರಾಗುತ್ತದೆ.
ಹಾಗಾಗದೇ ಒಂದು ಊರಿಗೆ ಹತ್ತಾರು ದಾರಿಗಳಿರುವಂತೆ, ಹತ್ತಾರು ತಾತ್ವಿಕವಾದ ಭಿನ್ನಭಿನ್ನ ಸೆಲೆಗಳೂ ಇರಬೇಕು. ಓದುಗನನ್ನು ಬರಹಗಾರನಿಂದ ದೂರ ಇಟ್ಟು ಮಾಡುವ ಯಾವುದೇ ಸಾಹಿತ್ಯಕ ಕಾರ್ಯಕ್ರಮಗಳು ಅರ್ಥವಂತಿಕೆಯನ್ನು, ಸಾರ್ಥಕತೆಯನ್ನು ಪಡೆದುಕೊಳ್ಳುವದಿಲ್ಲ. ಆ ಕಾರಣಕ್ಕಾಗಿಯೇ ಕನರ್ಾಟಕ ಜನಸಾಹಿತ್ಯ ಸಮಾವೇಶ ಜನರ ನಡುವೆಯೇ ಸಮಕಾಲಿನ ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಳ್ಳುವ, ಅರ್ಥಪೂರ್ಣವಾದ ಸಂವಾದವನ್ನು ಏರ್ಪಡಿಸುವ ಕೆಲಸ ಮಾಡಲಿದೆ. ಊಟದಲ್ಲಿ ವೆರೈಟಿ ಮತ್ತು ಟಿ.ಎ.ಡಿ.ಎ. ಬಯಸಿ ಬರುವವರಿಗೆ ಮಾತ್ರ ಇಲ್ಲಿ ನಿರಾಶೆಯಿದೆ. ಅದನ್ನು ಹೊರತುಪಡಿಸಿ ನಿಜವಾದ ಸಾಹಿತ್ಯಕ ಆಸಕ್ತಿ, ಅರ್ಥಪೂರ್ಣ ಚಚರ್ೆ, ಸಂವಾದದಲ್ಲಿ ಭಾಗವಹಿಸಬೇಕೆನ್ನುವ ಗೆಳೆಯರು ಯಾರು ಬೇಕಾದರೂ ಬಂದು ಭಾಗವಹಿಸಬಹುದು.
ಇದು ಸುಖಲೋಲುಪತೆಯಿಂದ ಹೊರತಾದ ಜನಸಾಹಿತ್ಯ ಸಮಾವೇಶ. ಇದರ ಸ್ವರೂಪ ಎಂಥದ್ದು .? ಎನ್ನುವದರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿರುವೆ. ನಮ್ಮ ತಾತ್ವಿಕತೆ ನಿಮ್ಮದೂ ಆಗಿದ್ದರೆ ಬನ್ನಿ ಪಾಲ್ಗೊಳ್ಳಿ.. ಕೊನೆಯದಾಗಿ ಒಂದು ಮಾತು. ಜರ್ಮನ ಚಿಂತಕ ರಿಲ್ಕ್ ಹೇಳಿದ್ದು ‘ಒಂದು ಸೃಜನಶೀಲ ಆಲೋಚನೆಯಲ್ಲಿ ನಾವು ಮರೆತು ಹೋದ ಸಾವಿರ ಸಾವಿರ ರಾತ್ರಿಗಳ ಪ್ರೀತಿ ಮತ್ತೆ ಜೀವ ಪಡೆಯುತ್ತದೆ.’ ಇಂಥಾ ನಂಬುಗೆಯನ್ನು ಬಲಗೊಳಿಸುವ ನಿಟ್ಟಿನಲ್ಲಿಯೇ ಕನರ್ಾಟಕ ಜನಸಾಹಿತ್ಯ ಸಮಾವೇಶದ ಆಶಯವಡಗಿದೆ.







geleya jogura lekhana odidirallave! haagiddare neevella kelasa bogase eradu divasagala mattige badigirisi dharavadadalli naale naadiddu sambhavsaliruva ‘KARNATAKA JANA SAHITYA SAMAAVESHA’kke dayavittu banni, naanoo horadalu sajjaaguttiruve,
kumvee
“ಜನಸಾಹಿತ್ಯ” ಹೆಸರೇ ಎಷ್ಟು ಅರ್ಥಪೂರ್ಣ..
ಯಾವುದಕ್ಕೂ ಪರ್ಯಾಯವಾಗದೆ ಪ್ರತಿವರ್ಷ ಇದು ನಡೆಯಲಿ, ಜನದನಿಯಾಗಿ…!
Artapoorna Lekana.Janasahitya Samavesha Nirantaravagi Nadeyuttirali NELAMOOLA MANASUGALU SAMBRAMISALI.ABHINANDANE.