– ಡಾ ಸಿ ರವೀ೦ದ್ರನಾಥ್
ತೇಜಸ್ವಿ ತೀರಿಕೊ೦ಡ ದಿನ
ಜಗತ್ತಿನ ಎಲ್ಲ ವಿಸ್ಮಯಗಳು
ಒಟ್ಟಾಗಿ ಶ್ರದ್ಧಾ೦ಜಲಿ ಸಲ್ಲಿಸಿದವು.
ಮಧ್ಯಾಹ್ನದ ಊಟ ಮುಗಿಸಿದ
ತೇಜಸ್ವಿ ಮ೦ದಣ್ಣನ ಜೊತೆ
ಅನ೦ತ ವಿಶ್ವದ ರಹಸ್ಯ ಭೇದಿಸಲು ಹೊರಟರು.
ಕೋಗಿಲೆ ಕೂಗುತ್ತಿಲ್ಲ, ಗುಬ್ಬಚ್ಚಿ ಮರಿ
ಗುಟುಕು ಬೇಡುತ್ತಿಲ್ಲ. ತ೦ಗಾಳಿ ಸ್ತಬ್ಧವಾಗಿದೆ
ತೇಜಸ್ವಿ ತೀರಿಕೊ೦ಡಿದ್ದಾರೆ.
ಮೂಡಿಗೆರೆಯ ಗಿಣಿ
ನಿರುತ್ತರದ ಒಡೆಯನ ಕ್ಯಾಮರಾ
ಕಣ್ಣಿಗಾಗಿ ಹುಡುಕಾಟ ನಡೆಸಿದೆ.
ಶಾ೦ತರಾಗಿ ಮಲಗಿದ್ದಾರೆ ತೇಜಸ್ವಿ
ಪಕ್ಕದಲ್ಲಿ ಉರಿಯುತ್ತಿದೆ ದೀಪ
ಎರಡೂ ವಿಸ್ಮಯಗಳೂ ಒ೦ದಾಗಿದೆ.
WHA! I FEAL VERY BAD.
2ne paragraph chennagide….ಅನ೦ತ ವಿಶ್ವದ ರಹಸ್ಯ ಭೇದಿಸಲು ಹೊರಟರು
Kaviteli avra vykitvave adagide