ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛಾಯಾ ಭಗವತಿ ಡಬ್ಬಲ್ ಧಮಾಕಾ..

ಶ್ರೀಮತಿ ಛಾಯಾ ಭಗವತಿಯವರ ಪ್ರವಾಸ ಕಥನ ‘ಹಿಮಗಿರಿಯಾನ’ ಪುಸ್ತಕಕ್ಕೆ ಗೆಳೆಯ ಅಜಿತ್ ಎಸ್. ಕೌಂಡಿನ್ಯರವರು ವಿನ್ಯಾಸ ಮಾಡಿರುವ ಮುಖಪುಟ. ಈ ಪುಸ್ತಕವು ಶ್ರೀ ಚಂದ್ರಶೇಖರ ಆಲೂರರ ಮುನ್ನುಡಿಯೊಂದಿಗೆ ನಮ್ಮ ಗೋಮಿನಿ ಪ್ರಕಾಶನದಲ್ಲಿ ಸದ್ಯದಲ್ಲೇ ಪ್ರಕಟವಾಗಲಿದೆ…

‘ಗೋಮಿನಿ’ಯ ಗುಬ್ಬಚ್ಚಿ ಸತೀಶ್ ಸರ್ ನನ್ನ ಪ್ರವಾಸ ಕಥನದ ಪ್ರಕಟಣೆಯ ಸುದ್ದಿ ಕೊಟ್ಟು, ನೀವೆಲ್ಲರೂ ಹಾರೈಸಿದ ಬೆನ್ನಿಗೇ, ಮೈಸೂರಿನ ರೂಪಾ ಪ್ರಕಾಶನದ ಮಹೇಶ್ ಸರ್ ನನ್ನ ಖುಷಿಯನ್ನು ದುಪ್ಪಟ್ಟುಗೊಳಿಸಲು, ನನ್ನ ಪ್ರಬಂಧಗಳ ಸಂಕಲನವನ್ನು ಇವತ್ತು ಕೈಗಿಟ್ಟಿದ್ದಾರೆ. ನನ್ನ ಕಾಲು ನೆಲದ ಮೇಲೆ ನಿಲ್ಲುತ್ತಲೇ ಇಲ್ಲ…

“ನೀನಿಲ್ಲದೇ ನನಗೇನಿದೆ’ ಪ್ರಬಂಧಗಳ ಸಂಕಲನ ಅಂಕಿತದಲ್ಲಿ ಸಿಗುವುದಂತೆ.
ಓದಿ, ನಿಮ್ಮ ಅನಿಸಿಕೆ ತಿಳಿಸಿ. ಹಾಗೆಯೇ ಮೈಸೂರಿನ ನವಕರ್ನಾಟಕ ಪುಸ್ತಕಾಲಯದಲ್ಲಿಯೂ ಸಿಗುತ್ತದೆ.
2015ರ ಕೊನೆಕೊನೆಯಲ್ಲಿಯೇ ಇದರ ಕೆಲಸ ಆರಂಭವಾಗಿದ್ದರೂ, ಹಲವಾರು ಮಾಂತ್ರಿಕ ಕಾರಣಗಳಿಂದಾಗಿ, 2016ರಲ್ಲಿ ಮುದ್ರಣಗೊಂಡು ಈಗ ಲಭ್ಯವಿದೆ.

ಈ ಪುಸ್ತಕ ಹೊರಬರುವಲ್ಲಿ ದಿನೇಶ್ ಕುಕ್ಕುಜಡ್ಕ, ಅರವಿಂದ ಚೊಕ್ಕಾಡಿ, ಎಂ. ಆರ್. ಭಗವತಿ, ಅರುಣಕುಮಾರ್ ಜಿ, ಮಹೇಶ್ ಸರ್, ಗುರು – ಇವರೆಲ್ಲರ ಸಹಕಾರವಿದೆ. ಎಲ್ಲರಿಗೂ ಕೃತಜ್ಞತೆಗಳು…

ಪುಸ್ತಕಕ್ಕಾಗಿ ಸಂಪರ್ಕಿಸಿ: ಶ್ರೀ ಯು. ಎಸ್. ಮಹೇಶ್ – 93422 74331

‍ಲೇಖಕರು admin

21 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading