`ಮುಂಬೈ ಚುಕ್ಕಿ ಸಂಕುಲ’ ತಂಡದಿಂದ, ‘ಚೌಕಟ್ಟಿನಾಚೆಯ ಚಿತ್ರಗಳು’
ಪ್ರತೀ ವರ್ಷ ಮಾಟುಂಗಾ ಕರ್ನಾಟಕ ಸಂಘ, ಮುಂಬೈ ಆಯೋಜಿಸುವ, ‘ಅಖಿಲ ಭಾರತ ಕುವೆಂಪು ಏಕಾಂಕ ನಾಟಕ ಸ್ಪರ್ಧೆ’ಯಲ್ಲಿ, `ಮುಂಬೈ ಚುಕ್ಕಿ ಸಂಕುಲ’ ತಂಡವು, ಈ ವರ್ಷ ‘ಚೌಕಟ್ಟಿನಾಚೆಯ ಚಿತ್ರಗಳು’ ನಾಟಕವನ್ನು ದಿನಾಂಕ:19-01-2013ರಂದು ಅಭಿನಯಿಸಿತು.
‘ಚೌಕಟ್ಟಿನಾಚೆಯ ಚಿತ್ರಗಳು’ – ಸ್ತ್ರೀ ಪುರುಷ ಎಂಬ ಲಿಂಗ ಶ್ರೇಷ್ಠತೆಯ ಅಹಂನಲ್ಲಿ ಬೀಗುತ್ತಿರುವ ಸಮಾಜದೊಳಗೆ, ಈ ಎರಡೂ ಅಲ್ಲದ ‘ಮನುಷ್ಯ’ರ ಬದುಕಿನ ಬವಣೆಯ ಚಿತ್ರ…. ಅಡಿಗಡಿಗೂ ಈ ಸಮಾಜದ ತಾತ್ಸಾರ, ಅವಹೇಳನ, ಅಪನಂಬಿಕೆಯಿಂದ ಜರ್ಜರಿತರಾಗಿರುವ ‘ಇವರ’ ಆಚಾರ, ವಿಚಾರ, ನಂಬಿಕೆ ಬೇರೆ ರೀತಿಯದ್ದು. ಆದರೆ male, female ಎಂಬ ಯಾವುದಕ್ಕೂ ಸಲ್ಲದ… ಈ ‘ಇವರು’ ಕಾಣುವ ಕನಸು, ಅನುಭವಿಸುವ ನೋವು, ಪಡುವ ವ್ಯಥೆ, ಅಪ್ಪಟ ಮನುಷ್ಯರದ್ದೇ!
ವಿಭಿನ್ನ ಕಥೆ, ನಿರ್ದೇಶಕರ ಶ್ರಮ ಮತ್ತು ಕಲಾವಿದರ ನಿಪುಣ ಅಭಿನಯಕ್ಕಾಗಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡ ನಾಟಕವಿದು. ಜೊತೆಗೆ ‘ಮುಂಬೈನ ಅತ್ಯುತ್ತಮ ನಾಟಕ’ ಪ್ರಶಸ್ತಿ ಹಾಗೂ ಈ ನಾಟಕದಲ್ಲಿ ಅಮ್ಮನ ಪಾತ್ರ ವಹಿಸಿದ ಮುಂಬೈ ಕನ್ನಡ ರಂಗಭೂಮಿಯ ಶ್ರೇಷ್ಠ ನಟಿ ಅಹಲ್ಯ ಬಲ್ಲಾಳ ಅವರಿಗೆ, ಅತ್ಯುತ್ತಮ ಅಭಿನಯಕ್ಕಾಗಿ ‘ಭಾರತಿ ಕೊಡ್ಲೇಕರ್’ ಪ್ರಶಸ್ತಿ ದೊರಕಿದವು.

ರಚನೆ, ನಿರ್ದೇಶನ, ರಂಗವಿನ್ಯಾಸ, ಬೆಳಕು :ಸಾ. ದಯಾ
ಸಂಗೀತ ಸಂಯೋಜನೆ: ಗೋಪಾಲ್ ತ್ರಾಸಿ
ಕಲೆ, ಪರಿಕರ: ಗಣೇಶ್ ಕುಮಾರ್
ವಸ್ತ್ರವಿನ್ಯಾಸ: ನಯನಾ.ಡಿ.ಸಾಲ್ಯಾನ್,
ಪ್ರಸಾಧನ: ಮಂಜುನಾಥ ಶೆಟ್ಟಿಗಾರ್
ರಂಗ ನಿರ್ವಹಣೆ: ಕುಸುಮಾ ಅಮೀನ್, ಪಿ.ಬಿ.ಚಂದ್ರಹಾಸ
ನೇಪಥ್ಯ: ಚಂದ್ರಶೇಖರ ರಾವ್, ಜಿ.ಪಿ.ಕುಸುಮಾ
ಸಂಗೀತ ಸಂಯೋಜನೆ: ಗೋಪಾಲ್ ತ್ರಾಸಿ
ಕಲೆ, ಪರಿಕರ: ಗಣೇಶ್ ಕುಮಾರ್
ವಸ್ತ್ರವಿನ್ಯಾಸ: ನಯನಾ.ಡಿ.ಸಾಲ್ಯಾನ್,
ಪ್ರಸಾಧನ: ಮಂಜುನಾಥ ಶೆಟ್ಟಿಗಾರ್
ರಂಗ ನಿರ್ವಹಣೆ: ಕುಸುಮಾ ಅಮೀನ್, ಪಿ.ಬಿ.ಚಂದ್ರಹಾಸ
ನೇಪಥ್ಯ: ಚಂದ್ರಶೇಖರ ರಾವ್, ಜಿ.ಪಿ.ಕುಸುಮಾ
ಪಾತ್ರವರ್ಗ: ಜಗದೀಶ್ ಡಿ ರೈ, ದಿನೇಶ್ ರೇಂಜಾಳ್, ರಾಜೇಂದ್ರ ಮಡಿವಾಳ, ಭೀಮರಾಯ ಚಿಲ್ಕ, ನವೀನ್ ಶೆಟ್ಟಿ ಇನ್ನಾಬಾಳಿಕೆ, ಗೋಪಾಲ್ ತ್ರಾಸಿ,
ಅಹಲ್ಯ ಬಲ್ಲಾಳ್, ಸುಧಾ ಶೆಟ್ಟಿ, ಕರುಣಾಕರ ಶೆಟ್ಟಿ ಹೆಬ್ರಿ.
ನಾಟಕದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

ಈ ಸಲದ ಮಾಟುಂಗಾ ಕರ್ನಾಟಕ ಸಂಘ, ಮುಂಬೈ ಆಯೋಜಿಸುವ,‘ಅಖಿಲ ಭಾರತ ಕುವೆಂಪು ಏಕಾಂಕ ನಾಟಕ ಸ್ಪರ್ಧೆ’ಯಲ್ಲಿ, ಜನರಿಂದ ಅಪಾರ ಮೆಚ್ಚುಗೆ ಪಡೆದ ನಾಟಕವಿದು.
ಮುಂಬೈ ಕನ್ನಡಿಗರಾದ ಈ ನಾಟಕದ ರಚನೆಕಾರ,ನಿರ್ದೇಶಕ ಸಾ.ದಯಾ ಅವರು ಆಲೋಚನೆಗಳು ಸದಾ ಸಮಾಜಪರ ಕಾಳಜಿಯುಳ್ಳಂಥವು. ಹೀಗಾಗಿಯೇ ಅವರು ಬರೆದ ‘ಎಲ್ಲ’ ನಾಟಕಗಳಲ್ಲೂ ಒಂದಲ್ಲ ಒಂದು ರೀತಿಯಿಂದ ಸಮಾಜದ ನಿರ್ಲಕ್ಷ್ಯಕ್ಕೊಳಗಾದ, ವಿವಿಧ ಸಮೂಹದ, ನೋವನ್ನು, ಅವರುಗಳ ಕನಸನ್ನು, ಕಟು ವಾಸ್ತವವನ್ನು ಬಿಂಬಿಸುತ್ತವೆ. ಪ್ರೇಕ್ಷಕರನ್ನು ಆ ದಿಕ್ಕಿನೆಡೆ ಯೋಚಿಸಲು ಮಜಬೂರ್ ಮಾಡುತ್ತವೆ. ರಚನೆಯಲ್ಲಾಗಲಿ, ರಂಗವೇರಿದ ಮೇಲಾಗಲಿ ವೈಭವ, ಆಡಂಬರಗಳಿಲ್ಲದೆಯೇ ಸಹಜ ಬದುಕಿನ ಅಸಹಜತೆಯನ್ನು ಇವರ ನಾಟಕಗಳು ಬಿಂಬಿಸುತ್ತವೆ. ಸಾ.ದಯಾ ಅವರು ಸ್ವತಃ ಕವಿಯೂ ಆಗಿರುವುದರಿಂದ ಅವರ ನಾಟಕದಲ್ಲಿ ಕಾವ್ಯಗುಣವಿರುತ್ತದೆ. ಮೃದು ಮನಸಿನ, ಸ್ವಸ್ಥ ಸಮಾಜದ ಕನಸು ಕಾಣುವ, ಇನ್ನೊಬ್ಬರಿಗೆ ಕೇಡು ಬಯಸದ, ರಾಜಕೀಯ ಗೊತ್ತಿಲ್ಲದ ಈ ವ್ಯಕ್ತಿಯಿಂದ ಇಂಥ ನಾಟಕಗಳು ಜೀವ ತಳೆಯುವುದು ಅಚ್ಚರಿಯಲ್ಲವೇ ಅಲ್ಲ.
ನಾನು ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಇದೇ ನಿರ್ದೇಶಕರ ‘ನಾ ಕೊಂದ ಹುಡುಗ’ನಾಟ್ಕದ ಮೂಲಕ.
ಥ್ಯಾಂಕ್ಯು ದಯಾ, ಅಪರೂಪದ ವಿಷಯವುಳ್ಳ ನಾಟಕದ ಮೂಲಕ ನಾನು ಅಭಿನಯ ಕ್ಷೇತ್ರಕ್ಕೆ ಕಾಲಿಡಲು ಅವಕಾಶ ಕೊಟ್ಟಿದ್ದಕ್ಕೆ.:)
ಸಾ. ದಯಾ(ದಯಾನಂದ್ ಸಾಲ್ಯಾನ್) ನನ್ನ ಗೆಳೆಯ ಮಾತ್ರ ಅಲ್ಲ, ನನ್ನ ಅಣ್ಣ ಕೂಡ. ವ್ರುತ್ತಿಪರರಲ್ಲದ ನಮ್ಮನ್ತವರನ್ನೇ ಅವರು ನಾಟಕಕ್ಕೆ ಬಳಸಿಕೊಳ್ಳುತ್ತಿದ್ದದ್ದು ವಿಶೇಷ. ಸುಮಾರು 15 ವರ್ಷಗಳ ಹಿಂದೆ ಅವರ ಗರ್ಭ ನಾಟಕದಲ್ಲಿ ನಾನು ಅಭಿನಯಿಸಿದ್ದೆ. ನಮ್ಮ ನಾಟಕಕ್ಕೆ ಕುವೆಂಪು ನಾಟಕ ಸ್ಪರ್ಧೆಯಲ್ಲಿ 3ನೆ ಬಹುಮಾನ ಬಂದಿತ್ತು. ಅಪ್ಪಟ ಮಗು ಮನಸ್ಸಿನ ನಿರ್ದೇಶಕ ಸಾ. ದಯಾ. ಮುಂಬೈಯಲ್ಲಿ ಎಲ್ಲ ನಿರ್ದೇಶಕರ ದಾರಿ ಒಂದಾದರೆ ದಯಾ ಆರಿಸಿಕೊಂಡ ಕಾಲು ದಾರಿ ಇನ್ನೊಂದು. ಮುಂಬೈ ಕನ್ನಡ ಜಗತ್ತು ನನಗೆ ಇಷ್ಟವಾಗುದಕ್ಕೆ ದಯಾ ಕೂಡ ಒಂದು ಕಾರಣ. ಅಭಿನಂದನೆಗಳು ದಯಾ.