ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಚಿತ್ರಸಂತೆಯಲ್ಲಿ ನನ್ನೊಂದಿಗೆ ಮಾತಾಡಿದ ಚಿತ್ರಗಳು" – ಎನ್ ಸಂಧ್ಯಾ ರಾಣಿ

ಎನ್ ಸಂಧ್ಯಾರಾಣಿ
ಚಿತ್ರಸಂತೆಯೊಂದಿಗೆ ಇದು ನನ್ನ ಎರಡನೆಯ ಭೇಟಿ. ಮೊದಲ ಸಲ ಹೋದಾಗ ನನ್ನ ಕಣ್ಣಿಗೆ ಬಿದ್ದದ್ದು, ನನ್ನನ್ನು ಸೆಳೆದದ್ದು ಯಥಾರ್ಥ ಚಿತ್ರಣದ ಚಿತ್ರಗಳು. ಆದರೆ ಎರಡನೆಯ ಭೇಟಿಯ ವೇಳೆಗೆ  ಚಿತ್ರಗಳು ಚೌಕಟ್ಟನ್ನು ದಾಟಿ ನನ್ನೊಂದಿಗೆ ಮಾತಾಡಿದವು, ಅರ್ಧ ಬರೆದ ಕವಿತೆಯಂತಹ ಚಿತ್ರಗಳು, ಏನನ್ನೋ ಸೂಚಿಸುತ್ತಾ ಮತ್ತೇನೋ ಹೇಳುವ ಚಿತ್ರಗಳು, ಏನೂ ಹೇಳದೆ ಬರೀ ಕಣ್ಣು ಮುಚ್ಚಿದ ಬುದ್ಧನ ಕಣ್ಣುಗಳಂತಿದ್ದರೂ ನನ್ನೊಳಗನ್ನು ನನ್ನೆದುರಿಗೆ ತಂದಿಟ್ಟ ಚಿತ್ರಗಳು…..
ಇನ್ನೂ ಮೊದಲು ಬರಬೇಕಿತ್ತು, ಇನ್ನೂ ಹೆಚ್ಚು ಹೊತ್ತು ಇರಬೇಕಿತ್ತು, ಈ ಬಣ್ಣಗಳ ಹೂದೋಟ ಒಂದೇ ದಿನ ಯಾಕಿರಬೇಕಿತ್ತು ಎನ್ನುವ ಕೊರಗಿನಲ್ಲಿ ಹೊರಟೆ.  ಮೊದಲ ಸಲ ನನ್ನ ಕೈಯಲ್ಲಿ ಕ್ಯಾಮೆರಾ ಇರಬೇಕಿತ್ತು ಅನ್ನಿಸಿತ್ತು, ನನ್ನ ಮೊಬೈಲ್ ನಲ್ಲಿ ತೆಗೆದ ಚಿತ್ರಗಳು ಇಲ್ಲಿವೆ. ಹೊರಟು ಬರುವಾಗ ದಾರಿಯಲ್ಲಿ ಎದಿರಾದದ್ದು ಹುಣ್ಣಿಮೆಯ ಚಂದ್ರ. ಯಾಕೋ ಅವನನ್ನು ಮೊಬೈಲ್ ನಲ್ಲಿ ಬಂಧಿಸಬೇಕು ಅನ್ನಿಸಲಿಲ್ಲ, ಕಣ್ತುಂಬಿಕೊಂಡು ಬಂದೆ…
ಚಿತ್ರ ಸಂತೆಯ ಚಿತ್ರಗಳು ಇಲ್ಲಿವೆ.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi-sandhyarani

28 January, 2013

6 Comments

  1. ಟೀನಾ ಶಶಿಕಾಂತ್

    ಕಲಾಕೃತಿಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ ಸಂಧ್ಯಾ!! ಚಿತ್ರಸಂತೆಗೆ ಹೋಗಲು ಸಾಧ್ಯವಾಗಲಿಲ್ಲವೆಂಬ ಬೇಸರವನ್ನು ಹೀಗೆ ನೀಗಿಸಿದ್ದಕ್ಕೆ ನಿಮಗೆ ಧನ್ಯವಾದಗಳು. – ಟೀನಾ.

  2. su.ra

    khooob sooorath…..

  3. Sowmya Kalyankar

    Awesooooooooooooooooooooooooooooooome! Thank u so much! 🙂

  4. pravara

    ನಂಗೂ ನೋಡ್ಬೇಕು ಅಂತಾ ತುಂಬಾ ಆಸೆ ಇತ್ತು, ಒಂದೇ ದಿನ ಅಂತಾ ಕೇಳಿ ಸಖತ್ ಬೇಜಾರಾಯ್ತು ಮಾತ್ರ….. “ಅವಧಿ”ಲೆ ತೋರ್ಸಿದ್ರಲ್ಲ ಸಮಾಧಾನ ಆಯ್ತು

  5. shobhavenkatesh

    avdhinalli chitragala kalakrutigala jhalak torisidakke kushiayithu sandhya.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading