
-ನಾ ದಿವಾಕರ
ಚಲನ ಚಿತ್ರಗಳು ಜನಸಾಮಾನ್ಯರ ಮನರಂಜನೆಯ ಸಾಧನಗಳಾದರೂ, ಒಂದು ಸಾಮಾಜಿಕ ಪರಿಸರದಲ್ಲಿ ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ತಮ್ಮದೇ ಆದ ಪರಿಣಾಮ ಬೀರುವ ಸಾಮಥ್ರ್ಯ ಹೊಂದಿರುತ್ತದೆ. ಸಾಮಾಜಿಕ ಸ್ಥಿತ್ಯಂತರಗಳನ್ನೇ ಆಧರಿಸಿ ಕತೆಗಳನ್ನು ಹೆಣೆಯುವ ನಿಮರ್ಾಪಕ ನಿದೇರ್ಶಕರು ತಮ್ಮ ಚಿತ್ರದ ನಾಯಕನ ಮೂಲಕ ಸಮಾಜಕ್ಕೆ ಆದರ್ಶದ ಪಾಠ ಹೇಳುವುದು ಭಾರತೀಯ ಚಿತ್ರರಂಗದ ವೈಶಿಷ್ಟ್ಯ. ಸಿನಿಮಾ ಪರದೆಯ ಮೇಲಿನ ಪ್ರತಿಯೊಬ್ಬ ನಾಯಕನೂ ರಾಜ್ಯದ ಸಮಸ್ತ ಆರುಕೋಟಿ ಜನತೆಯ ಪ್ರತಿನಿಧಿಯಂತೆಯೇ ವತರ್ಿಸುವುದು ರಾಜಕುಮಾರ್ ಕಾಲದಿಂದಲೂ ನಡೆದುಬಂದ ಪರಂಪರೆ. ಹಾಗಾಗಿ ಪರದೆಯ ಮೇಲೆ ಸಮಾಜ ಸುಧಾರಕರಾಗಿ, ಜನಾನುರಾಗಿಯಾಗಿ, ದುಷ್ಟ ಶಕ್ತಿಗಳನ್ನು ಸೋಲಿಸಿ ಸತ್ಯಸಂಧತೆಯನ್ನು ಕಾಪಾಡುವ ಶಿಷ್ಟ ರಕ್ಷಕರಾಗಿ ಕಾಣಿಸಿಕೊಳ್ಳುವ ಬೆಳ್ಳಿ ತೆರೆಯ ನಾಯಕರು ಸಮಾಜದ ಒಂದು ವರ್ಗದ ಯುವ ಜನತೆಯ ಮೇಲೆ ಗಾಢವಾದ ಪರಿಣಾಮ ಬೀರುವುದು ಸಾಮಾನ್ಯ. ಸಮಾಜದ ಆಗುಹೋಗುಗಳನ್ನು ಬದಲಾಯಿಸುವ ಅಥವಾ ಸುಧಾರಿಸುವ ಸಾಮಥ್ರ್ಯ ಚಲನಚಿತ್ರಗಳಿಗೆ ಅಥವಾ ನಾಯಕರಿಗೆ ಇರುವುದು ಚಚರ್ಾಸ್ಪದವಾದರೂ ಸಾಮಾಜಿಕ ಮೌಲ್ಯಗಳ ನಿಮರ್ಾಣದಲ್ಲಿ ಒಂದು ಮನರಂಜನಾ ಮಾಧ್ಯಮವಾಗಿ ಚಲನಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಕನ್ನಡದ ಮೇರು ನಟ ಡಾ. ರಾಜ್ಕುಮಾರ್ ಈ ರೀತಿ ಆದರ್ಶಪ್ರಾಯ ವ್ಯಕ್ತಿಯಾಗಿ ರೂಪುಗೊಂಡಿದ್ದು ಕಾಕತಾಳೀಯವೇನಲ್ಲ. ಪರದೆಯ ಮೇಲಿನ ನಾಯಕನಂತೆಯೇ ನಿಜಜೀವನದಲ್ಲೂ ನಡೆದುಕೊಂಡ ರಾಜ್ ಒಂದು ಇಡೀ ಪೀಳಿಗೆಗೆ ಆದರ್ಶಪ್ರಾಯರಾಗಿದ್ದರು. ಅವರ ಚಿತ್ರಗಳಲ್ಲಿ ವ್ಯಕ್ತವಾಗುತ್ತಿದ್ದ ಸರಳತೆ, ಸೌಹಾರ್ದತೆ ಮತ್ತು ಸಾಮಾಜಿಕ ಕಳಕಳಿಗಳು ವ್ಯಕ್ತಿಗತ ಜೀವನದಲ್ಲೂ ಕಾಣಬಹುದಾಗಿತ್ತು.
ಆದರೆ ರಾಜ್ ನಿರ್ಗಮನದ ನಂತರದಲ್ಲಿ ಕನ್ನಡ ಚಿತ್ರರಂಗ ನಡೆಯುತ್ತಿರುವ ಹಾದಿ ನೋಡುತ್ತಿದ್ದರೆ, ಆ ಯುಗವೇ ಸಮಾಪ್ತಿಯಾಯಿತೇನೋ ಎನಿಸುತ್ತದೆ. ಪ್ರಸಕ್ತ ಮಾರುಕಟ್ಟೆ ಆಥರ್ಿಕತೆಯಲ್ಲಿ ಚಲನಚಿತ್ರರಂಗವೂ ಒಂದು ಬಂಡವಾಳ ಹೂಡಿಕೆಯ ಕ್ಷೇತ್ರವಾಗಿದ್ದು, ಕಾಪರ್ೋರೇಟೀಕರಣ ಪ್ರಕ್ರಿಯೆಗೊಳಗಾಗಿ ಚಿತ್ರರಂಗದ ಸಾಮಾಜಿಕ ಹೊಣೆಗಾರಿಕೆ ಸಂಪೂರ್ಣ ನಶಿಸಿಹೋಗಿದೆ. ಹಾಗಾಗಿಯೇ ಪರದೆಯ ಮೇಲೆ ಸತ್ಯಸಂಧರಂತೆ ರಾರಾಜಿಸುವ ನಾಯಕ ಶಿಖಾಮಣಿಗಳು ನಿಜಜೀವನದಲ್ಲಿ ವಿಲನ್ಗಳಾಗಿರುತ್ತಾರೆ. ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುತ್ತಿದ್ದ ಉದಯಕುಮಾರ್, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಮುಂತಾದವರು ತಮ್ಮ ನಿಜಜೀವನದಲ್ಲಿ ಉತ್ತಮ, ಉದಾತ್ತ ಚಿಂತನೆಯ ವ್ಯಕ್ತಿಗಳಾಗಿ ಮೆರೆದವರು. ಕನ್ನಡದ ಪ್ರಸಿದ್ಧ ನಟ ತೂಗುದೀಪ ದರ್ಶನ್ ತನ್ನ ಪತ್ನಿಯ ಮೇಲೆ ನಡೆಸಿರುವ ದೌರ್ಜನ್ಯ ಅಕ್ಷಮ್ಯ. ಪತಿ ಪತ್ನಿಯರ ವಿರಸಕ್ಕೆ ಕಾರಣಗಳೇನೇ ಇರಲಿ, ಪತ್ನಿ ವಿಜಯಲಕ್ಷ್ಮಿಯ ಮೇಲೆ ದರ್ಶನ್ ನಡೆಸಿರುವ ಹಲ್ಲೆ ಅಮಾನುಷವಾದದ್ದು. ತನ್ನ ಅನೈತಿಕತೆಯನ್ನು ಸಮಥರ್ಿಸಿಕೊಳ್ಳಲು ಮಹಿಳೆಯೊಬ್ಬಳ ಮೇಲೆ ಅಮಾನುಷ ಹಲ್ಲೆ ಮಾಡಿರುವ ದರ್ಶನ್ ಕ್ಷಮಾಯೋಗ್ಯನಂತೂ ಅಲ್ಲ. ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ತನ್ನ ರಾಜಕೀಯ ಪ್ರಾಬಲ್ಯ ಮತ್ತು ಚಿತ್ರರಂಗದಲ್ಲಿನ ಸ್ಥಾನಮಾನಗಳನ್ನು ಉಪಯೋಗಿಸಿ ರಾಜಿ ಸೂತ್ರಕ್ಕಾಗಿ ಪರಿತಪಿಸುತ್ತಿರುವುದೇ ಇಡೀ ಪ್ರಕರಣದ ಒಳಹೊರಹುಗಳನ್ನು ತೋರಿಸುತ್ತದೆ. ಚಿತ್ರರಂಗದ ದಿಗ್ಗಜರಾದ ಅಂಬರೀಶ್ ಮುಂತಾದವರು ನೊಂದ ಮಹಿಳೆಗೆ ನ್ಯಾಯ ದೊರಕಿಸುವ ಬದಲಾಗಿ ಆಕೆಯ ಮನವೊಲಿಸಿ ದೂರು ವಾಪಸು ಪಡೆಯಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ.
ಒಂದು ವೇಳೆ ವಿಜಯಲಕ್ಷ್ಮಿ ದೂರು ವಾಪಸ್ ಪಡೆದರೂ ದರ್ಶನ್ ನಿರಪರಾಧಿಯಾಗುವುದಿಲ್ಲ. ಕನ್ನಡದ ಹಿರಿಯ ನಟರಾದ ಅಂಬರೀಶ್, ಗಂಡ ಹೆಂಡಿರ ಜಗಳದಲ್ಲಿ ಹೆಂಡತಿಗೆ ಹೊಡೆಯುವುದು ಸಾಮಾನ್ಯ ಅದನ್ನೇಕೆ ದೊಡ್ಡ ವಿಷಯ ಮಾಡಬೇಕು ಎಂದು ಹೇಳಿರುವುದು ದರ್ಶನ್ ಅವರ ಅಪರಾಧಕ್ಕಿಂತಲೂ ದೊಡ್ಡದು. ಗಂಡನಾದವನು ಹೆಂಡತಿಗೆ ಹೊಡೆಯುವುದು ಕೇವಲ ಒಂದು ಕುಟುಂಬದ ವಿಷಯವಲ್ಲ ಅಥವಾ ವೈಯ್ಯಕ್ತಿಕ ವಿಚಾರವಲ್ಲ ಎಂಬ ಸತ್ಯ ಅಂಬರೀಷ್ಗೆ ತಿಳಿದಿರಬೇಕಿತ್ತು. ಇನ್ನೂ ತಮ್ ಊಳಿಗಮಾನ್ಯ ಪರಂಪರೆಯನ್ನು ಬಿಟ್ಟು ಹೊರಬರದ ಚಿತ್ರರಂಗದ ಈ ದಿಗ್ಗಜರು ಆಧುನಿಕ ಮಹಿಳೆಯರ ಸ್ಥಾನಮಾನಗಳನ್ನು ಅಗೌರವದಿಂದ ಕಂಡಿರುವುದು ಸ್ಪಷ್ಟ. ಅಷ್ಟೇ ಅಲ್ಲ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿರುವ ಅಂಬರೀಶ್ ಮತ್ತಿರರು ದರ್ಶನ್ ಮೂಲಕ ಕ್ಷಮಾಪಣೆ ಕೇಳಿಸಿ ಆತನ ಪತ್ನಿಗೆ ನ್ಯಾಯ ಒದಗಿಸಬೇಕಿತ್ತು. ಆದರೆ ಆಕೆಯ ಮೇಲೆ ಒತ್ತಡ ಹೇರಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿರುವುದು ಚಿತ್ರರಂಗದಲ್ಲಿನ ಅನೈತಿಕತೆಯ ದ್ಯೋತಕವಾಗಿದೆ.ದರ್ಶನ್ ಕುಟುಂಬದಲ್ಲಿನ ಬಿರುಕಿಗೆ ಕಾರಣ ಎಂದು ಹೇಳಲಾಗುವ ನಿಖಿತಾ ಎಂಬ ನಟಿಗೆ ಮೂರುವರ್ಷದ ನಿಷೇಧ ಹೇರುವ ಮೂಲಕ ಚಲನಚಿತ್ರ ವಾಣಿಜ್ಯ ಮಂಡಲಿ ದರ್ಶನ್ ಅವರ ಅಪರಾಧಕ್ಕೆ ಮನ್ನಣೆ ನೀಡಿದೆಯೇ ಹೊರತು, ನೊಂದ ಮಹಿಳೆಗೆ ನ್ಯಾಯ ಒದಗಿಸಿಲ್ಲ. ಸಮಾಜಕ್ಕೆ ನೈತಿಕತೆಯ ಮಾರ್ಗ ತೋರಬೇಕಾದ ಒಂದು ಮಾಧ್ಯಮದಲ್ಲಿ ಈ ರೀತಿಯ ಊಳಿಗಮಾನ್ಯ ಧೋರಣೆ ವ್ಯಕ್ತವಾಗುವುದು ಹಿತಕರ ಬೆಳವಣಿಗೆಯಲ್ಲ. ಈ ಸನ್ನಿವೇಶದಲ್ಲಿ ಖಂಡಿತವಾಗಿಯೂ ಡಾ. ರಾಜ್ ನೆನಪಾಗುತ್ತಾರೆ. ತಮ್ಮ ಸಿನಿಮಾಗಳಲ್ಲಿರುವಂತೆಯೇ ನಿಜ ಜೀವನದಲ್ಲೂ ಮಹಿಳೆಗೆ ಉನ್ನತ ಸ್ಥಾನ ನೀಡುತ್ತಿದ್ದ ರಾಜ್ ಎಲ್ಲಿ, ವಂಚಿತ ಮಹಿಳೆಯನ್ನು ಠಕ್ಕುತನದಿಂದ ಬಾಯಿಮುಚ್ಚಿಸುವ ಇಂದಿನ ನಾಯಕ ಶಿಖಾಮಣಿಗಳೆಲ್ಲಿ ? ಕನ್ನಡ ಚಿತ್ರರಂಗದ ಅಧೋಗತಿಗೆ ಇದೊಂದು ಪ್ರತ್ಯಕ್ಷ ಸಾಕ್ಷಿ. ಈ ಪ್ರಕರಣ ಮೌಲ್ಯರಹಿತ ಸಿನಿಮಾರಂಗದ ವಿರಾಟ್ ದರ್ಶನ !






namma social valuesgalanne tiruchikondiruvudarinda ee avagadagalella samanya.illi darshan dampathigalu nepa matra, kalpana,manjula, heege, esto jaevagalu nalugi hodaddu nijakku durantavallave.idu cinemadavara padonde alla,esto hendara madikonda avagadagalige,gandasaru kalavashavagiddare, namma samajika moulyagalu badalaguttiruvude idakke karanaveno, dr raj,vishnu,avara baduku egina navanayakarugalige margadarshanavagabekittu, nimma holadwani,hagu,pisumatu,innadaru ivara kannu teresabekaste. D.RAVI VARMA HOSPET
arthapoornavagide
ಈಗ ಚಿತ್ರರಂಗದಲ್ಲಿ ದಿಗ್ಗಜರು ಅಂತ ಯಾರೂ ಉಳಿದಿಲ್ಲ. ಎಲ್ಲಾ ಮದಗಜಗಳೆ 🙁
naa. divaakara avara annisikegaLu sarvamaanya.
kanam
“ಈ ಸನ್ನಿವೇಶದಲ್ಲಿ ಖಂಡಿತವಾಗಿಯೂ ಡಾ. ರಾಜ್ ನೆನಪಾಗುತ್ತಾರೆ”…nija…paapa leelavathi madam….
Sorry I do not have a kannada software on my laptop. The Kannada industry is ruled today by senseless producers, stupid actors and foolish fans. The Kannada sensibility so apparent earlier began to peter out long back and the incident of wife beating and supporting the action of the actor indirectly by fans,producers and fellow actors is the final nail driven to the coffin.The wife was pressurised to take back her complaint. The producers Association behaved like a institution headed by a dictator and and his cronies. The police also played their role in this horror movie. The only weapon left with us is to refrain from going any movies acted by this ruthless actor.