23-2-2014 ರ ಭಾನುವಾರ ಚಿತ್ರದುರ್ಗದಲ್ಲಿ
ಎರಡು ಪುಸ್ತಕಗಳ ಬಿಡುಗಡೆ ಮತ್ತು ’ಹೊಸ ಕಾಲಕ್ಕೆ ಹೊಸ ಪರಿಭಾಷೆ’
ವಿಷಯದಡಿ ವಿಚಾರ ಸಂಕಿರಣ ನಡೆಯುತ್ತದೆ.
ಇದು ’ಅವಧಿ’, ’ಅಭಿನವ’, ’ಅಭಿರುಚಿ’ ಮತ್ತು ’ದಲಿತ ಸಂಘಟನೆಗಳ ಒಕ್ಕೂಟ’ ಜಂಟಿಯಾಗಿ ಆಯೋಜಿಸುತ್ತಿರುವ ಕಾರ್ಯಕ್ರಮ.
ಕಾರ್ಯಕ್ರಮದ ಆತ್ಮೀಯ ಆಹ್ವಾನ ನಿಮಗಾಗಿ…









– ಕಾರ್ಯಕ್ರಮ ಯಶಸ್ವಿಯಾಗಲಿ.
karyakrama yashashviyagali
ಉತ್ತಮ ವಿಷಯಗಳನ್ನೇ ವಿವಾರ ಗೋಷ್ಠಿಗೆ ಆಯ್ಕೆ ಮಾಡಲಾಗಿದೆ. ಇಡೀ ಕಾರ್ಯಕ್ರಮ ಅಧ್ಬುತವಾಗಿ ಯಶಸ್ವಿಯಾಗಲಿ…
Sir, Nimma Ahvana nanna edeyolage.
ಯಾರ ಜಪ್ತಿಗೂ ಸಿಗದ ನವಿಲುಗಳು ಕೃತಿ ನೋಡಿದಾಗ ಹಳೆಯದೊಂದು ನೆನಪು ಮತ್ತೆ ಮತ್ತೆ ನೆನಪಾಯಿತು. ೨೦೦೬ನೇ ಇಸ್ವಿ ಇರಬೇಕು. ಧಾರವಾಡದ ಪತ್ರಿಕೋದ್ಯಮ ವಿಭಾಗದಿಂದ ದೆಹಲಿ ಟೂರ್ ಹೊರಟಿದ್ದೆವು. ಓದಲು ಏನಾದರೂ ಜೊತೆಗಿರಲಿ ಎಂದು ಧಾರವಾಡದ ಕವಿವಿ ಲೈಬ್ರಿಗೆ ಹೋದೆ. ಯಾರ ಜಪ್ತಿಗೂ ಸಿಗದ ನವಿಲುಗಳು ಪುಸ್ತಕ ಸಿಕ್ಕಿತು. ತೆಗೆದುಕೊಂಡು ರೈಲು ಏರಿದೆ. ಆಗಿಷ್ಟು, ಈಗಿಷ್ಟು ಎಂದು ಓದಿದೆ. ಇನ್ನೂ ಓದಬೇಕೆನಿಸಿತು. ಅವತ್ತು. ನನ್ನ ಎಲ್ಲ ಸಹ ಪಾಠಿಗಳು ದೆಹಲಿಯ ಶಾಪಿಂಗ್ಗೆ ಹೋದರು. ನನಗೆಲ್ಲಿಯ ಭಾಗ್ಯ ಶಾಪಿಂಗ್. ದಲಾಲಿ ಅಂಗಡಿಯಲ್ಲಿ ಅವ್ವ ಬಡ್ಡಿ ಸಾಲ ಮಾಡಿ ದೆಹಲಿಗೆ ಕಳಿಸಿದ್ದಳು. ಎಲ್ಲರೂ ಹೋದರು. ನಾನೊಬ್ಬನೇ ಉಳಿದೆ. ಜತೆಗೆ ಯಾರ ಜಪ್ತಿಗೂ ಸಿಗದ ನವಿಲುಗಳು ಇತ್ತು. ಪಕ್ಕದಲ್ಲಿಯೇ ನೆಹರೂ ಪ್ಲಾನಿಟೋರಿಯಂ ಇತ್ತು. ವಿಶಾಲವಾದ ಜಾಗ ಒಂದು ಕುರ್ಚಿಯಲ್ಲಿ ಕುಳಿತು. ಪುಸ್ತಕ ಓದುತ್ತಾ ಕುಳಿತೆ. ನಾಲ್ಕು ದಾಂಢಿಗರು ಬಂದು ಕ್ಯಾ ಪಡತಾ ಅಂತಾ ಜೋರಾಗಿ ಕೇಳಿದರು. ನನಗೋ ಹಿಂದೀ ಅಷ್ಟಕ್ಕಷ್ಟೇ. ಬರುವ ಸ್ವಲ್ಪ ಹಿಂದಿಯಲ್ಲಿಯೇ ದೇವನೂರರ ಬಗ್ಗೆ ತಿಳಿಸಿಕೊಟ್ಟೆ. ಸ್ವಲ್ಪವೇ ಬರೆದರೂ ಇವರನ್ನು ಬಿಟ್ಟು ಸಾಹಿತ್ಯಲೋಕದ ಬಗ್ಗೆ ಮಾತಾಡುವಂತಿಲ್ಲ. ಎಂದೆ. ಅವರಿಗೂ ಅಭಿಮಾನ ಬಂತು. ನನ್ನ ಕೈಯಲ್ಲಿದ್ದ ಪುಸ್ತಕವನ್ನು ಮುಟ್ಟಿ ನೋಡಿದರು. ಆನಂತರ ಅವರು ಹೋದ ಮೇಲೆ ಸ್ವಲ್ಪ ಹೊತ್ತು ಓದಿ ಬಂದೆ. ನಾವು ಇಳಿದುಕೊಂಡ ರೂಮಿನಲ್ಲಿ ನನ್ನ ನೆಚ್ಚಿನ ಗುರು ಎ.ಎಸ್.ಬಾಲಸುಬ್ರಹ್ಮಣ್ಯ ಸರ್ ಇದ್ದರು. ಯಾಕೋ ಶಾಪಿಂಗ್ ಹೋಗಲಿಲ್ವಾ? ದುಡ್ಡು ಇಲ್ವೇನೋ ಕೊಡಲಾ? ಅಂದರು. ಬೇಡ ಸರ್ ಎಂದೆ. ನನ್ನ ಕೈಯಲ್ಲಿನ ಪುಸ್ತಕ ನೋಡಿದರು. ತೆಗೆದುಕೊಂಡು ಓ ನಮ್ಮ ದೇವನೂರು ಎಂದು ಉದ್ಗಾರ ತೆಗೆದರು. ಗುಡ್ ಕಣಯ್ಯ ಸಮಯವನ್ನು ವ್ಯರ್ಥ ಮಾಡಲಿಲ್ಲ ನೋಡು ನೀನು ಎಂದರು. ಅವರು ಕೂಡ ಒಂದೆರಡು ಅಧ್ಯಾಯ ಓದಿದರು. ಈಗಲೂ ನೋವಿದೆ. ಆ ನನ್ನ ಒಡಲಾಳದ ದೇವನೂರು ಸರ್ನ್ನು ಈಗಲೂ ನೋಡಿಲ್ಲ ಎನ್ನುವುದು.
-ಪರಶುರಾಮ ಬೋನೇರ ಗಂಗಾವತಿ
ಅಭಿನಂದನೆಗಳು..
-ಗವಿಸಿದ್ದ ಹೊಸಮನಿ