ಏನು ಹೇಳಲೂ ಇಲ್ಲದ ಕಾಲದಲ್ಲಿ

ಕುಸುಮಾ ಪಟೇಲ್
ಏನು ಹೇಳಲೂ ಇಲ್ಲದ ಕಾಲದಲ್ಲಿ
ಆತ ಮೆಲ್ಲನೆ ಉಸುರಿದ್ದ
ಮಾತನಾಡಬೇಕಿದೆ-ನಿನ್ನೊಡನೆ
ಮಾತಿಲ್ಲದೆ ಅಚ್ಚರಿಯೆಂಬಂತೆ
ನೋಡಿದ್ದಳು ಆಕೆ

ಶಲ್ ವಿ ಟಾಕ್
ಓವರ್ ಎ ಕಪ್ ಆಫ್ ಟೀ?
ಮೌನಂ ಸಮ್ಮತಿ ಲಕ್ಷಣಂ-
ಕೆಫೆಯ ಮಂದಬೆಳಕಿನಲ್ಲಿ
ಚಹ ಕುಡಿಯವ ಮೊದಲೇ
ಕಸಿವಿಸಿ
ಆಕೆ ಹಿಡಿದ ಕಪ್ಪಿನ ಮೇಲೆ
ಸಣ್ಣ ಈರ್ಷೆ
ಆ ನವಿರು, ನವಿರಾದ
ಬೆರಳುಗಳು ಚಹ
ತುಟಿಯವರೆಗೂ
ಒಯ್ದಾಗ
ತಡೆಯದೇ
ಹೇಳಿ ಬಿಟ್ಟ-
ಸತ್ಯ ಕಂಡ ಸಾಕ್ರಟೀಸ್ನಂತೆ
ಮದಿರೆ ಮೀರಿದ
ಮಾದಕತೆ, ಮಾಧುರ್ಯ
ಚಹಕ್ಕೆ-
ಏನು ಎಂಬ ಪ್ರಶ್ನೆಗೆ
ಹೊರಡೋಣವಾ?
ಎಂದಷ್ಟೇ ಹೇಳಿದ.






0 Comments