ರವಿಕುಮಾರ್ ಈಚಲಮರ

ಈತ ಸುಮಾರು ಇಪ್ಪತ್ತೊಂದು ವರ್ಷದ ಬಿಸಿ ರಕ್ತದ ಹುಡುಗ, ಹುಬ್ಬಳ್ಳಿಯವನು, ಈಗ ಬಿ.ಕಾಂ. ಅಂತಿಮ ವರ್ಷ. ನೂರೈವತ್ತು ಕಿ.ಮೀ ದೂರದಿಂದ ಬಿಜಾಪುರದ ಸಾಹಿತ್ಯ ಸಮ್ಮೇಳನಕ್ಕೆ ಅಡುಗೆ ಕೆಲಸ ಮಾಡಲು ಬಂದಿದ್ದಾನೆ. ಆರು ದಿನಗಳಿಂದ ದಿನಗಳಿಂದ ಹಗಲು ರಾತ್ರಿ ಚಪಾತಿ ಹಿಟ್ಟನ್ನು ನಾದಿದ್ದಾನೆ. ಕೆಲಸ ಕಷ್ಟ ಇದೆಯ ಅಂತಾ ಕೇಳಿದ್ರೆ ‘ಏನ್ ಮಾಡೊದು ಸರ್ ಕೆಲಸ ಮಾಡ್ಲೇಬೇಕು, ಕೆಲಸ ಮಾಡೋದು ತೊಂದ್ರೆ ಇಲ್ಲ ಆದ್ರೆ ಹಗಲು ರಾತ್ರಿ ಎನ್ನದೆ ಮಾಡ್ಬೇಕು ರಾತ್ರಿ ನಿದ್ದೆ ಇಲ್ಲಾ’ ಅಂತಾನೆ.
ಈತ ದಿನಕ್ಕೆ ಮುನ್ನೂರು ರುಪಾಯಿಯಂತೆ ಆರು ದಿನಗಳಕಾಲ ಕೆಲಸ ಮಾಡಿದ್ದಾನೆ ಚಪಾತಿ ಕೆಲಸ ಆಗ ತಾನೆ ಮುಗಿದ್ದದ್ದರಿಂದ ಅಲ್ಲೆ ಪಕ್ಕದಲ್ಲಿ ಮಲಗಿದ್ದ ಈತನನ್ನು ಮಾತನಾಡಿಸಿದಾಗ ಇಷ್ಟು ವಿಷಯಗಳನ್ನು ತಿಳಿಸಿದ, ಮುಂದೆ ಎಂ.ಕಾಂ ಮಾಡುವ ಕನಸನ್ನು ನನ್ನ ಮುಂದೆ ಬಿಚ್ಚಿಟ್ಟ.







ಆಹಾ! ಇದೂ ಸಾಹಿತ್ಯಸೇವೆಯೇ ಎನಿಸುತ್ತದೆ. ಈ ಹುಡುಗನಿಗೆ ಶುಭವಾಗಲಿ!
ಕೆ.ವಿ.ತಿರುಮಲೇಶ್
ಶುಭವಾಗಲಿ ಈ ಯುವಕನಿಗೆ… ಜೈ ಹೋ ..
ದುಡಿಯುವ ಕೈಗಳು ಮತ್ತು ಜ್ಞಾನ ದಾಹದ ಹೊಟ್ಟೆ ತಣ್ಣಗಿರಲಿ. ಆ ಹುಡುಗನ ಕನಸು ನನಸಾಗಲಿ ಎಂಬ ಹಾರೈಕೆ ನನ್ನದು.
– ಪ್ರಸಾದ್.ಡಿ.ವಿ.
ಸಾಹಿತ್ಯ ಸಮ್ಮೇಳನದ ಹಿಂದಿನ ಬೆವರಿನ ಕನಸು ನನಸಾಗಲಿ