ಕವಯತ್ರಿ ವಿಭಾ ಅವರ ನೆನಪಿನಲ್ಲಿ ಸಂಘಟಿಸಿದ 2011 ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಯು ಧಾರವಾಡದ ಶ್ರೀ ಚನ್ನಪ್ಪ ಅಂಗಡಿ ಅವರ ‘ಭೂಮಿ ತಿರುಗುವ ಶಬ್ದ’ ಎಂಬ ಹಸ್ತಪ್ರತಿಗೆ ದೊರಕಿದೆ. ಈ ಪ್ರಶಸ್ತಿಯು ರೂ.5000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಸ್ಪಧರ್ೆಯ ತೀಪರ್ುಗಾರರಾಗಿ ಕನ್ನಡದ ಖ್ಯಾತ ವಿಮರ್ಶಕರುಗಳಾದ ಡಾ. ಎಸ್ ಜಿ ಸಿದ್ದರಾಮಯ್ಯ ಹಾಗೂ ಡಾ. ಎಂ ಎಸ್ ಆಶಾದೇವಿ ಕಾರ್ಯನಿರ್ವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪ್ರಶಸ್ತಿ ಪುರಸ್ಕೃತ ಕೃತಿಯ ಬಿಡುಗಡೆ ಇದೇ ಅಕ್ಟೋಬರ ಕೊನೆಯ ವಾರ ಧಾರವಾಡದಲ್ಲಿ ನೆರವೇರುವುದು. ಪ್ರಸ್ತುತ ಈ ಕೃತಿಯು ಗದುಗಿನ ಲಡಾಯಿ ಪ್ರಕಾಶನದಿಂದ ಪ್ರಕಟಗೊಳ್ಳಲಿದೆ.
ಕವಿ ಚನ್ನಪ್ಪ ಅಂಗಡಿಯವರ ಪರಿಚಯ: ಎಂಎಸ್ಸಿ ಸ್ನಾತಕೋತ್ತರ ಪದವೀಧರರಾದ ಚನ್ನಪ್ಪ ಅಂಗಡಿಯವರು ಧಾರವಾಡದಲ್ಲಿ ಕೃಷಿ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದಾರೆ. ಈಗಾಗಲೇ ‘ಮಂದ ಬೆಳಕಿನ ಸಾಂತ್ವನ’ ಎಂಬ ಕವನ ಸಂಕಲನವನ್ನೂ ಹಾಗೂ ‘ಮಣ್ಣಿನೊಳಗಣ ಮರ್ಮ’ ಎಂಬ ಕಥಾ ಸಂಕಲನವನ್ನೂ ಪ್ರಕಟಿಸಿದ್ದಾರೆ. ಕಾಯಕಯೋಗಿ, ಕದಂಬ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಪ್ರಜಾವಾಣಿ, ಸಂಕ್ರಮಣ, ಹಣತೆ ಮುಂತಾದ ಪತ್ರಿಕೆಗಳು ನಡೆಸುವ ಕಾವ್ಯ ಮತ್ತು ಕಥಾ ಸ್ಪಧರ್ೆಗಳಲ್ಲಿ ಹಲವು ಬಾರಿ ಬಹುಮಾನಿತರಾಗಿದ್ದಾರೆ. ಪೇಜಾವರ ಸದಾಶಿವ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪ್ರಕಾಶ ಮತ್ತು ಸುನಂದಾ ಕಡಮೆಸಂಚಾಲಕರು.






0 Comments