ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ :ಕಾಡು, ಕಡಲು, ಬಯಲು ತೊರೆದು ಮರಳುಗಾಡಿಗೆ…

ಅಲ್ಲಿ: ದೃಷ್ಟಿ ಹಾಯಿಸುವಲ್ಲೆಲ್ಲಾ ಕಾಣುವುದು ಮರಳು, ಬರೀ ಮರಳು. ಬಸ್ಸಿನಲ್ಲಿಯೋ, ಕಾರಿ ನಲ್ಲಿಯೋ ಪ್ರಯಾಣ ಮಾಡುತ್ತಿದ್ದಾಗ ಮಧ್ಯ ನಿಂತರೆ ಮರಳ ಕಡಲಿನ ನಡುವೆ ನಿಂತ ಅನುಭವ. ಒಂದೇ ಒಂದು ಹಸಿರು ಗಿಡವಿಲ್ಲ, ಜೀವರಾಶಿಯ ಸುಳಿವೇ ಇಲ್ಲ. ದೂರದಲ್ಲೆಲ್ಲೋ ಒಂದು ಓಯಸಿಸ್, ಕೆಲವು ಖರ್ಜೂರದ  ಮರಗಳನ್ನ ಬಿಟ್ಟರೆ ಬೇರೇನೂ ಇಲ್ಲ. ಹಸಿರು, ಜೀವರಾಶಿ ಇರಲಿ ನೂರಾರು ಮೈಲಿ ಪಯ ಣಿಸಿದರೂ ಒಂದು ಹನಿ ನೀರೂ ಕಾಣುವುದಿಲ್ಲ! ನಮಗೆ ಕಾಣದ ಎಣ್ಣೆ ಬಾವಿಗಳಷ್ಟೇ ಅಲ್ಲಿರುವುದು. ಅದೊಂದೇ ಅಲ್ಲಿನ ನೈಸರ್ಗಿಕ   ಸಂಪತ್ತು. ಅದೊಂದೇ ಪ್ರಕೃತಿ ನೀಡಿದ ಭಾಗ್ಯ!

ಈ ಪುಟ್ಟ ರಾಜ್ಯವೇ ಒಂದು ಮಲೆನಾಡು. ಎಲ್ಲಿ ಸಂಚರಿಸಿದರೂ ಹಸಿರು ಹೊದ್ದ ಪರ್ವತಗಳು. ಬದಿಯಲ್ಲಿ ಮೇರೆಯರಿಯದ ಕಡಲು. ಹಸಿರೆಂದರೆ ಎಂಥ ಹಸಿರು, ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ಕಡಲು. ಒಂದಲ್ಲ, ಎರಡಲ್ಲ ಸಾವಿರಾರು ಸಸ್ಯ ಪ್ರಭೇ ದಗಳು. ಪರ್ವತಗಳಿಂದ ಧುಮುಕುತ್ತಿರುವ ನೂರಾರು ಜಲಪಾತಗಳು. ಬಸ್ಸು ಅಥವಾ ಕಾರಿನಲ್ಲಿ ಪಯಣಿಸುತ್ತಿದ್ದರೆ ನೂರಾರು ಮೈಲಿಗಳ ಹಾದಿಗುಂಟ ಅಸಂಖ್ಯಾತ ನೀರಿನ ಝರಿಗಳು.

ಇಲ್ಲಿ ಏನು ಬೆಳೆಯುವುದಿಲ್ಲ? ಕಾಫಿ, ಟೀ, ಬಾಳೆ, ಏಲಕ್ಕಿ, ರಬ್ಬರ್, ಭತ್ತ; ಕಡಲತಡಿಯ ಗುಂಟ ಹಬ್ಬಿದ ತೆಂಗು, ಸಮುದ್ರ ತಂದು ಸುರಿಯುವ ಮೀನು… ಪುಟ್ಟ ರಾಜ್ಯಕ್ಕೆ ಹಲವು ನೈಸರ್ಗಿಕ   ಬಂದರುಗಳನ್ನ ನೀಡಿರುವ ಸಮುದ್ರ, ಪುಟ್ಟ ಕಡಲಿನಂತೆ ಕಾಣುವ ಬೃಹತ್ ಜಲರಾಶಿ. ಅರೆ ಏನಿಲ್ಲ, ಇದು ನಿಜಕ್ಕೂ ದೇವತೆಗಳು ತಮ್ಮ ಸ್ವಂತಕ್ಕಾಗಿ ಸೃಷ್ಟಿಸಿಕೊಂಡ ಸ್ವರ್ಗವೇ ಸರಿ.

ಇದು ಕೇರಳ. ವರೇ ಹೇಳಿಕೊಳ್ಳುವಂತೆ God’s own country. ನಾಲ್ಕು ದಿನಗಳ ಪುಟ್ಟ ಪ್ರವಾಸ ಮುಗಿಸಿ ಅಲ್ಲಿಂದ ಬರುವಾಗ ನನ್ನನ್ನ ಗುಂಪಾಗಿ ಕಾಡಿದ್ದು: ಇಂಥ ನಿಸರ್ಗದತ್ತ ಸ್ವರ್ಗವನ್ನ ತೊರೆದು ಜನ ಕೊಲ್ಲಿ ದೇಶಗಳು ಅಥವಾ ಗಲ್ ಎಂದು ಕರೆಯ ಲ್ಪಡುವ ಆ ಮರಳುಗಾಡನ್ನ ಯಾಕೆ ಹಂಬಲಿಸುತ್ತಾರೆ, ಕನಸುತ್ತಾರೆ? ಅಲ್ಲಿಗೆ ಹೇಗಾದರೂ ಹೋಗಿ ಬಿಡಬೇ ಕೆಂದು ಯಾಕೆ ಹಂಬಲಿಸುತ್ತಾರೆ.

‍ಲೇಖಕರು G

11 February, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading