
ಪರಸ್ಪರ ಮುನಿಸಿಕೊಂಡು, ಮುಖ ತಿರುಗಿಸಿಕೊಂಡು ಓಡಾಡುತ್ತಿದ್ದ ಇಬ್ಬರು ಮಕ್ಕಳನ್ನೂ ಕರೆದು ಅಕ್ಕಪಕ್ಕ ಕೂರಿಸಿಕೊಂಡು “ಮೊನ್ನೆ ಮೊನ್ನೆ ಇನ್ನೂ ಇಬ್ಬರೂ ಒಬ್ಬರಿಗೊಬ್ಬರು ಅಂಟಿಕೊಂಡು ಓಡಾಡುತ್ತಿದ್ದಿರಿ, ಈಗ ಏನು ಪ್ರಾಬ್ಲಂ” ಎಂದೆ. ಇಬ್ಬರೂ ಮಾತಾಡಲಿಲ್ಲ. “ಗಾಡೀಲಿ ಎಲ್ಲಾದರೂ ಬಿದ್ದಿರಾ, ಇಬ್ಬರ ಮುಖಾನು oಡಿಛ್ಝ್ಝಿ ಆಗಿದೆಯೆಲ್ಲಾ, ಜಾಸ್ತಿನೇ ಊದಿಕೊಂಡಿದೆ” ಎಂದಾಗ ಇಬ್ಬರ ಮುಖದ ಹುಬ್ಬು ಕೊಂಚ ಸಡಿಲವಾಯ್ತು. ನೀವೇನು ಎಳೆ ಮಕ್ಕಳಾ, ಎಂದು ರೇಗಿದಾಗ ಒಬ್ಬಳು, “ಅವಳು ಸರಿಯಾಗಿ ಮಾತಾಡಿಸಲ್ಲ, ಅವಳ ಫ್ರೆಂಡ್ಸ್ ಬಂದರೆ ನನ್ನನ್ನ ಮರೆತೇ ಬಿಡ್ತಾಳೆ, ನನ್ನನ್ನ eಠಿ ಮಾಡಿದಳು;” ಇನ್ನೊಬ್ಬಳು “ನಾನು ವಾಕ್ ಕರೆದರೆ ಬರೊಲ್ಲ, ರಿಮೋಟ್ ಅವಳೇ ಹಿಡಿದುಕೊಂಡಿರ್ತಾಳೆ…” ಹಾಗೇ ಮಾತಾಡುತ್ತಾ ಒಬ್ಬಳು ಬಿಕ್ಕಿದಳು. ಮುಖ ಗಂಟಿಕ್ಕಿಕೊಂಡಿದ್ದ ಇನ್ನೊಬ್ಬಳು ಮುಗುಳ್ನಕ್ಕಳು. “uh. ಅಲ್ಲಿಗೆ ಟೂ ಕ್ಯಾನ್ಸಲ್… ನಡೀರಿ ಒಂದು ವಾಕ್ ಹೋಗಿ ಬರೋಣ, ಬೇಗ ರೆಡಿಯಾಗಿ ಬನ್ನಿ”. ಇನ್ನೂ ಮುಖ ಬಿಗಿದುಕೊಂಡೇ ಮೆಟ್ಟಿಲು ಹತ್ತಿ ಹೋದ ಇಬ್ಬರೂ ಬರುವಾಗ ಮುಗುಳ್ನಗುತ್ತಾ ಬಂದರು.
ನಾಲ್ಕಾರು ಹೆಜ್ಜೆ ಹಾಕುವಷ್ಟರಲ್ಲಿ ನನ್ನ ಎಡಬಲದಲ್ಲಿದ್ದವರು ನನ್ನನ್ನ ಹಿಂದೆ ಹಾಕಿ ಜೊತೆಯಾಗಿ ಹೊರಟೇ ಬಿಟ್ಟರು. ಸ್ವಲ್ಪ ದೂರ ಹೋದ ಮೇಲೆ ಒಬ್ಬಳು ‘ಮಾಮ, ನೀವು ಮನೆಗೆ ಹೋಗಿ, ನಿಮಗೆ ತುಂಬಾ oಠ್ಟಿZಜ್ಞಿ ಆಗಿರುತ್ತೆ’ ಎಂದರೆ ಮತ್ತೊಬ್ಬಳು ‘ಅಪ್ಪಾ ನೀನಿನ್ನೂ ಕಾಫಿ ಕುಡಿದಿಲ್ಲ ಮನೆಗೆ ಹೋಗಪ್ಪಾ ಪರವಾಗಿಲ್ಲ…’ ಎಂದಳು. ನಾನು ಮನದಲ್ಲಿಯೇ ನಗುತ್ತಾ ಹಿಂತಿರುಗಿ ಬಂದೆ.
ಮಕ್ಕಳು ಎಂದರೆ ಅವೇನು ಪುಟ್ಟ ಮಕ್ಕಳಲ್ಲ. ಒಬ್ಬಳಿಗೆ ಇಪ್ಪತ್ತು ವರ್ಷ, ಇನ್ನೊಬ್ಬಳಿಗೆ ಹತ್ತೊಂಬತ್ತು ವರ್ಷ. ಇಪ್ಪತ್ತು ವರ್ಷದ ಆಕಾಂಕ್ಷ ನನ್ನ ತಂಗಿ ಸ್ವರ್ಣಳ ಮಗಳು. ನೀವೆಲ್ಲ ಬಹುವಾಗಿ ಮೆಚ್ಚಿಕೊಂಡ ‘ಕುರುಡೀಕೆರೆಯಲ್ಲಿ ಬೆಳಗಿದ ಬದುಕು’ ಪ್ರಬಂಧದಲ್ಲಿ ಬರುವ ಆಕಾಂಕ್ಷ ಇವಳೇ. ಮೈಸೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಳೆ. ಕಡೆಯ ವರ್ಷಕ್ಕೆ ಹೋಗುವ ಮುನ್ನ ರಜೆಯಲ್ಲಿ ಇಲ್ಲಿಗೆ ಬಂದಿದ್ದಾಳೆ. ಮತ್ತೊಬ್ಬಳು ನಿಮಗೆ ತಿಳಿದೇ ಇದೆ.
ಇವರಿಬ್ಬರಿಗೂ ಮೊದಲಿನಿಂದ ನನ್ನ ಮುದ್ದು ಜಾಸ್ತಿ. ಬಹುಶಃ ನಮ್ಮ ತುಂಬು ಕುಟುಂಬದ ಅಷ್ಟೂ ಮಕ್ಕಳಲ್ಲಿ ನನ್ನಿಂದ ಏಟು ತಿಂದ ಒಂದೇ ಮಗು ಎಂದರೆ ಆಕಾಂಕ್ಷ. ಅವಳು ಕುರುಡೀಕೆರೆಗೆ ಹೋಗಿ ಶಾಲೆಗೆ ಸೇರುವ ಮುನ್ನ ಬೆಂಗಳೂರಿನಲ್ಲಿಯೇ ಇದ್ದಳು. ನಾವು ನಾಲ್ವರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಇಬ್ಬರನ್ನೂ ವಿಜಯನಗರದಲ್ಲಿ ಒಂದು ಬೇಬಿ ಸಿಟ್ಟಿಂಗ್ನಲ್ಲಿ ಬಿಡುತ್ತಿದ್ದೆವು. ನಾಲ್ಕು ಗಂಟೆಗೇ ಮನೆಗೆ ಹೋಗುತ್ತಿದ್ದ ನಾನು, ನೇರವಾಗಿ ಬೇಬಿ ಸಿಟ್ಟಿಂಗ್ಗೆ ಹೋಗಿ ಇಬ್ಬರನ್ನೂ ಮನೆಗೆ ಕರೆದುಕೊಂಡು ಹೋಗುತ್ತಿದ್ದೆ. ಸಾಮಾನ್ಯವಾಗಿ ಇಬ್ಬರನ್ನೂ ನಿಧಾನವಾಗಿ ನಡೆಸಿಕೊಂಡೇ ಹೋಗುತ್ತಿದ್ದೆ. ಅವತ್ತು ಕೊಂಚ ಜ್ವರ ಬಂದಂತಿದ್ದ ನನ್ನ ಮಗಳು ಸ್ವಲ್ಪ ದೂರ ಬಂದ ಮೇಲೆ ನಡೆಯಲು ಸತಾಯಿಸಿದಳು. ಅವಳನ್ನು ಎತ್ತಿಕೊಳ್ಳುತ್ತಿದ್ದಂತೆಯೇ ಇವಳು ಗಲಾಟೆ ಶುರು ಮಾಡಿದಳು. ಇವಳನ್ನೂ ಎತ್ತಿಕೊಂಡೆ ಆದರೆ ಹೆಗಲಲ್ಲಿ ಬ್ಯಾಗ್ ಇದ್ದುದರಿಂದ ಒತ್ತಿದಂತಾಗಿ ಅಳಲಾರಂಭಿಸಿದಳು. ಕೆಳಗೆ ಇಳಿಸಿ ನೀನು ಇವಳಿಗಿಂತ ಒಂದು ವರ್ಷ ದೊಡ್ಡವಳಲ್ವ, ಜತೆಗೆ ಇವಳಿಗೆ ಹುಷಾರಿಲ್ಲ ನೀನು ನಡ್ಕೊಂಡು ಬಾರಪ್ಪಾ ಎಂದು ಆಕೆಗೆ ಮುದ್ದು ಮಾಡಿದೆ. ಅಳು ನಿಲ್ಲಿಸಲಿಲ್ಲ. ಸಹನೆ ಮೀರಿ ಒಂದು ಏಟು ಕೊಟ್ಟೆ. ಅದೇ ಮೊದಲು, ಅದೇ ಕಡೆ. ನಾನು ಮಕ್ಕಳಿಗೆ ಹೊಡೆದವನೇ ಅಲ್ಲ. ಪುಟ್ಟಿ ಇರಿಟೇಟ್ ಮಾಡಿದಾಗೆಲ್ಲ ಪುಂಖಾನುಪುಂಖವಾಗಿ ಬೈಗುಳಗಳು (ಬ್ರಾಹ್ಮಣರ!) ಬಾಯಲ್ಲಿ ಬರುತ್ತವೆಯೇ ಹೊರತು ಏಟು ಕೊಟ್ಟಿಲ್ಲ.
ನಂತರ ಅವಳು ಕುರುಡೀಕೆರೆಗೆ ಸೇರಿದರೂ ಬಹುಶಃ ಒಂದೇ ವಯೋಮಾನದವರಾದ್ದರಿಂದ ಇವರಿಬ್ಬರ ಬಾಂಧವ್ಯ ಗಟ್ಟಿಯಾಯ್ತು. ಯಾವುದೇ ಕಾರ್ಯಕ್ರಮ, ಮದುವೆಗೆ ಸೇರಿದರೂ ಇಬ್ಬರೂ ಜೊತೆ ಸೇರಿ ಬಿಡುತ್ತಾರೆ. ಊರಿಗೆ ಹೋದಾಗಲೂ ಅಷ್ಟೇ, ಬೇರೆಯವರೊಂದಿಗೆ ಬೆರೆಯುವುದೇ ಇಲ್ಲ. ಇಪ್ಪತ್ತಾದರೂ ಇನ್ನೂ ಮಕ್ಕಳಂತೆ ಮುನಿಸಿಕೊಂಡು, ‘ಯಾರಾದರೂ ಟೂ ಕ್ಯಾನ್ಸಲ್ ಮಾಡಿಸಲಿ’ ಎಂಬ ಆಸೆಯಿಂದ ತಮ್ಮ ಛಿಜಟ ಕಾಪಾಡಿಕೊಂಡೇ ಓಡಾಡುತ್ತಾರೆ.
ಆದರೆ ನಮ್ಮ ಅಮೂಲ್ಯ ಹಾಗಲ್ಲ. ಅವಳು ಅಪಾರ ತಾಳ್ಮೆಯ, ವಿವೇಕದ, ಸಜ್ಜನಿಕೆಯ ಹುಡುಗಿ. ಅವಳು ಮಗುವಾಗಿದ್ದಾಗಿನಿಂದಲೂ ಯಾರೊಂದಿಗಾದರೂ ಜಗಳ ಮಾಡಿದ್ದನ್ನ, ಮುನಿಸಿಕೊಂಡು ಮಾತು ಬಿಟ್ಟಿದ್ದನ್ನ ನಾವ್ಯಾರೂ ಕಂಡೇ ಇಲ್ಲ. ಶಾಲೆ, ನಂತರ ಪಿಯು, ನಂತರ ಇಂಜಿನಿಯರಿಂಗ್, ಕೂಡಲೇ ಕಾಣದ ಊರಲ್ಲಿ ಕೆಲಸ, ಪಿ.ಜಿಯಲ್ಲಿ ವಾಸ… ಎಲ್ಲ ಕಡೆ ಎಲ್ಲರೊಡನೆ ಹೊಂದಿಕೊಂಡು ಹೋಗುವ ಸ್ವಭಾವ. ಟೀಂ ಲೀಡರ್ಗಳು ಸಾಕಷ್ಟು ಜನ ಸಿಗುತ್ತಾರೆ. ಆದರೆ ಇವಳು ಅದ್ಭುತವಾದ SಛಿZಞ ಆಜ್ಝಿbಛ್ಟಿ. ಕಾಲೇಜಲ್ಲಿ ಓದುವಾಗ ನಂತರ ಚೆನ್ನೈ ಸೇರಿದಾಗಲೂ ಅಷ್ಟೆ. ಅದು ಹೇಗೊ ಗೊತ್ತಿಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಮಹತ್ವವನ್ನ ಅವಳು ಅರಿತಿದ್ದಾಳೆ. ಎಂಥ ಸಮಸ್ಯೆ ಬಂದರೂ ನಗುನಗುತ್ತಾ ಎದುರಿಸುತ್ತಾಳೆ, ಬಗೆಹರಿಸುತ್ತಾಳೆ. ಅಜಾತ ಶತ್ರುವಿನಂತಿರುವ ಅವಳ ಸ್ನೇಹಲೋಕ ಕೂಡ ಬಹು ದೊಡ್ಡದು. ನಮ್ಮ ಕುಟುಂಬದ ಮಕ್ಕಳಿಗೆಲ್ಲಾ ಇವಳು ಆದರ್ಶ, ಟ್ಝಛಿ Iಟbಛ್ಝಿ ( ನಮ್ಮ ಯಶೋದಕ್ಕನ ಮಗ ಪುನೀತ್ ಕೂಡ ಅಮೂಲ್ಯಳ ಥರವೇ) ಇಂಥ ಹುಡುಗಿ ಕೂಡ ಅಂದು ಎಲ್ಲರೆದುರು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು. ಅಷ್ಟೇ ಅಲ್ಲ ಅಲ್ಲಿ ನೆರೆದ ಎಲ್ಲರ ಕಣ್ಣುಗಳು ಹನಿಗೂಡುವಂತೆ ಮಾಡಿದಳು. ಈ ಅಮೂಲ್ಯ ನನ್ನ ಗೆಳತಿಯಂಥ ಅಕ್ಕ ಆಶಾಳ ಮಗಳು. ಮೂವತ್ತು ವರ್ಷದ ಹಿಂದೆ ನಮ್ಮ ಹಳ್ಳಿ ಮನೆಯ ಮುಂದೆ ಹಾಕಿದ ಚಪ್ಪರದಲ್ಲಿ ಅವಳನ್ನು ಧಾರೆ ಎರೆದು ಕೊಟ್ಟಾಗಲೂ ಹೀಗೇ ಆಗಿತ್ತು. ಅವಳೂ ಹೀಗೇ ಅತ್ತು ನಮ್ಮೆಲ್ಲರ ಹೃದಯವನ್ನ ಆರ್ದ್ರ ಗೊಳಿಸಿದ್ದಳು. ಆ ಸಂದರ್ಭದಲ್ಲಿ ಐದಾರು ನಿಮಿಷ ಮಾಯವಾಗಿದ್ದ ನನ್ನನ್ನ ಗೆಳೆಯ ಗೆಳತಿಯರೆಲ್ಲ ಮುಖ ತೊಳೆದುಕೊಂಡು ಬರಲು ಹೋಗಿದ್ದೆಯಾ ಎಂದು ತಮಾಷೆ ಮಾಡಿದ್ದರು. ಈಗಲೂ ಅಮೂಲ್ಯಳನ್ನ ಸಮಾಧಾನಪಡಿಸಿ ಅವಳ ಬಾಳಸಂಗಾತಿ ಪ್ರಶಾಂತ್ರೊಂದಿಗೆ ಕಳಿಸಿ, ವಾತಾವರಣ ಕೊಂಚ ತಿಳಿಯಾಗುತ್ತಿದ್ದಂತೆಯೇ, ನನ್ನಂತೆಯೇ ಕಾಣೆಯಾಗಿದ್ದ ಅಮೂಲ್ಯಳ ತಮ್ಮ ಅಮೋಘನನ್ನ ಎಲ್ಲರೂ ವಾಶ್ರೂಂಗೆ ಹೋಗಿ ಬಂದೆಯಾ ಎಂದು ಚುಡಾಯಿಸುತ್ತಿದ್ದರು. ಮೂರು ದಶಕದ ನಂತರವೂ ನಮ್ಮೆಲ್ಲರ ಭಾವಲೋಕದಲ್ಲಿ ಅಂಥ ಬದಲಾವಣೆಗಳೇನು ಆದಂತೆ ಕಾಣಲಿಲ್ಲ.
ಆಕಾಂಕ್ಷ, ಮಾಧುರ್ಯರನ್ನ ಕಂಡರೆ ಒಂದು ಬಗೆಯ ಮುದ್ದು. ಆದರೆ ಅಮೂಲ್ಯಳನ್ನ ಕಂಡರೆ ಆಗಸದಷ್ಟು ಅಕ್ಕರೆ. ನನ್ನ ಪ್ರಕಾರ ಮಕ್ಕಳು ಪ್ರೇಮ ವಿವಾಹವಾದಾಗ, (ಅಕಸ್ಮಾತ್ ಅವರು ಪೋಷಕರನ್ನ ಧಿಕ್ಕರಿಸಿ ಹೋಗಿದ್ದರೂ) ಅವರಿಬ್ಬರೂ ಸುಖವಾಗಿರುತ್ತಾರೆ ಎಂದು ಪೋಷಕರು ನೆಮ್ಮದಿ ತಾಳಬಹುದು. ಆದರೆ ಈ ZZಜಛಿb ಮದುವೆ ಮಾಡಿದಾಗ ಹೆಣ್ಣು ಗಂಡು-ಇಬ್ಬರ ಕುಟುಂಬ ವರ್ಗದವರಿಗೂ ಒಂದು ಬಗೆಯ ಆತಂಕ, ತಲ್ಲಣ ಇದ್ದೇ ಇರುತ್ತದೆ. ಅವರಿಬ್ಬರಿಗೂ ಹೊಂದಾಣಿಕೆ ಆಯ್ತಾ? ಹೇಗೋ… ಏನೇನೋ ತವಕ. ಹೀಗಾಗಿ ಅಮೂಲ್ಯಳ ಮದುವೆಯ ನಂತರ ನನ್ನ ಎದೆಯಲ್ಲಿಯೂ ಒಂದು ಬಗೆಯ ತಳಮಳ, ಎಲ್ಲ ಕಡೆಯಿಂದ ಉತ್ತಮವಾದ ಛಿಛಿb ಚಿZh ದೊರೆತರೂ ಕೂಡ.
ಅವಳು ಮದುವೆಗೆ ತೆಗೆದುಕೊಂಡಿದ್ದ ರಜೆಯ ಕಡೆಯ ದಿನ ಇಬ್ಬರ ಆಫೀಸಿಗೂ ಹತ್ತಿರವಾಗುವಂಥ ಮನೆ ಮಾಡಿದ್ದರು. ಇಬ್ಬರೂ ಹೊಸಮನೆಯನ್ನ ಸರಳವಾಗಿ, ಅಚ್ಚುಕಟ್ಟಾಗಿ ಸಿದ್ಧಪಡಿಸಿಕೊಂಡಿದ್ದರು. ಅಂದು ಸೋಮವಾರ ಮಧ್ಯಾಹ್ನ ಅಮೂಲ್ಯಳಿಗೆ ಫೋನ್ ಮಾಡಿದೆ. ತುಂಬಾ ಸಲ ರಿಂಗ್ ಆದರೂ ತೆಗೆದುಕೊಳ್ಳಲಿಲ್ಲ. ಯಾವುದಾದರೂ ಸಿನೆಮಾಕ್ಕೆ ಹೋಗಿರಬೇಕು ಎಂದುಕೊಂಡು ಮತ್ತೆ ಪ್ರಯತ್ನಿಸಲಿಲ್ಲ. ಎರಡೇ ನಿಮಿಷಕ್ಕೆ ಅವಳೇ ಫೋನ್ ಮಾಡಿದಳು. “ಏನ್ ಮಾಮಾ, ಎಲ್ಲೂ ಹೋಗಲಿಲ್ಲವಾ”-ಅದೇ ಉಲ್ಲಾಸದ ದನಿ. “ಏನಪ್ಪಾ ಏನ್ ಮಾಡ್ತಿದ್ದೆ” ಎಂದೆ “ಹೊರಗಡೆ ಬಟ್ಟೆ ಒಗೀತಿದ್ದೆ ಮಾಮ. ಅದಕ್ಕೆ ತಕ್ಷಣ ಫೋನ್ ತಗೊಳೊಕ್ಕೆ ಆಗಲಿಲ್ಲ”-ಆ ಮಾತು ಕೇಳುತ್ತಿದ್ದಂತೆಯೇ ಅದೇಕೋ ನನ್ನ ಕೊರಳ ಸೆರೆ ಉಬ್ಬಿ ಕಂಠ ಗದ್ಗದಿತವಾಯ್ತು. ಬಾಯಿಂದ ಮಾತೇ ಬರಲಿಲ್ಲ. ಮತ್ತೆ ಅವಳ ದನಿ “ಮಾಮ ಡ್ರೈವ್ ಮಾಡ್ತಿದೀರಾ.” ತಕ್ಷಣ ಸಾವರಿಸಿಕೊಂಡು, “ಏನಪ್ಪಾ ನಿನಗೇನಾದರೂ ಬುದ್ಧಿ ಇದೆಯಾ, ಈ ಮಟಮಟ ಮಧ್ಯಾಹ್ನದ ಬಿಸಿಲಲ್ಲಿ ಬಟ್ಟೆ ಒಗಿತಿದೀಯಾ, ನಾಳೆಯಿಂದ ಆಫೀಸ್ಗೆ ಹೋಗಬೇಕು…” ಮುಂತಾಗಿ ರೇಗಿದೆ. ಜಾಣೆ, ನನ್ನ ದನಿಯನ್ನ ಅರಿತು “ಏನ್ ಮಾಮ ನೀವು ಥೇಟ್ ನಮ್ಮ ಅಮ್ಮನ ಥರಾನೆ ಆಡ್ತೀರಿ. ಅಕ್ಕ-ತಮ್ಮ ಒಳ್ಳೆ ಜೋಡಿ” ಎಂದು ನಕ್ಕು, ನನ್ನನ್ನೂ ನಗಿಸಿ “ಹೊರಗಡೆ ನೆರಳಿದೆ, ಪ್ರಶಾಂತ್ ಇವತ್ತಿನಿಂದ ಆಫೀಸ್ಗೆ ಹೋಗ್ತಿದ್ದಾರೆ. ಬಿಡುವಿತ್ತಲ್ಲ ಅದಕ್ಕೇ ಒಂದೊಂದಾಗಿ ಕೆಲಸ ಮುಗಿಸ್ತಿದೀನಿ” ಎಂದಳು.
ದಿನಕಳೆದಂತೆ ಅವರ ಅನ್ಯೋನ್ಯತೆ, ಹೆಸರಿನಂತೆಯೇ ಪ್ರಶಾಂತವಾಗಿರುವ ಅವರ ಪ್ರಸನ್ನತೆ, ನಿರ್ಮಲ ಗುಣವನ್ನ ಕಂಡಾಗ ಒಂಥರಾ ಸಮಾಧಾನ.
ನನ್ನ ತಂದೆಯವರಂತೆ ನಾನು ಹೆಣ್ಣು ಮಕ್ಕಳ ಪಕ್ಷಪಾತಿ. ಅಕ್ಕ ತಂಗಿಯರ ಮಕ್ಕಳಿಗೆ ಏನಾದರೂ ಕೊಡಿಸುವಾಗ ಹೆಣ್ಣು ಮಕ್ಕಳಿಗೇ ಆದ್ಯತೆ. ಈ ಆಕಾಂಕ್ಷಳ ತಮ್ಮ ಅನರ್ಘ್ಯ ಬೇಸಗೆ ರಜೆಯಲ್ಲಿ ಕ್ರಿಕೆಟ್ ಕಲಿಯಲು ಬಂದು ಎರಡು ತಿಂಗಳು ಮನೆಯಲ್ಲಿದ್ದರೂ ಕಡೆಯ ದಿನದವರೆಗೂ ಅವನಿಗೆ ಏನಾದರೂ ಕೊಡಿಸಬೇಕು ಎಂಬುದು ಮನಸ್ಸಿಗೆ ಹೊಳೆದೇ ಇರಲಿಲ್ಲ. ಆದರೂ ಈ ಹುಡುಗರಿಗೆಲ್ಲ ಮಾಮ ಎಂದರೆ ಪಂಚಪ್ರಾಣ. ನನ್ನ ಬಾಲ್ಯ ಕಾಲ ಸಖಿ, ನನ್ನ ತಂಗಿ ಕಲಾಳಿಗೆ ಇಬ್ಬರೂ ಗಂಡು ಮಕ್ಕಳು. ಮಂಡ್ಯದಲ್ಲಿರುವ ಅವಳ ಮನೆಗೆ ಹೋಗಿ ಬಂದಾಗಲೆಲ್ಲ ನನ್ನವಳ ಮೂಡ್ ಎಲಿವೇಟ್ ಆಗುತ್ತದೆ. ಇಬ್ಬರು ಮಕ್ಕಳು ಇಂಜಿನಿಯರಿಂಗ್ ಮುಗಿಸಿ ಉನ್ನತ ವ್ಯಾಸಂಗಕ್ಕೆ ಸಿದ್ಧತೆ ನಡೆಸುತ್ತಿದ್ದು ಹಿರಿಯ ಮಗ ನಿಶ್ಚಯ್ ಅಡುಗೆ ಮನೆ ಸೇರಿ ಅಮ್ಮನ ಸಹಾಯಕ್ಕೆ ನಿಲ್ಲುತ್ತಾನೆ. ಹೊರಗಿನದನ್ನೆಲ್ಲ ಅವನ ತಮ್ಮ ಅಕ್ಷಯ್ ಮತ್ತು ಅವರ ಅಪ್ಪ ನೋಡಿಕೊಳ್ಳುತ್ತಾರೆ. ವಿಷಯ ಇದಲ್ಲ. ಊಟ ಮುಗಿಸಿ ನಾವು ಎಲೆ ಅಡಿಕೆ ಹಾಕಿಕೊಳ್ಳುತ್ತಾ ಕುಳಿತಿದ್ದರೆ ವರಾಂಡದ ದಿವಾನ್ ಮೇಲೆ ಅಪ್ಪನ ತೊಡೆಯ ಮೇಲೆ ಮಲಗಿ ಕಿರಿಯವನು ಮುದ್ದು ಮಾಡಿಸಿಕೊಳ್ಳುತ್ತಿರುತ್ತಾನೆ. ಅತ್ತೆ-ಮಾಮ ಎಂದಲ್ಲ. ಮನೆಗೆ ಯಾರೇ ಬಂದರೂ ಇಬ್ಬರು ಮಕ್ಕಳೂ ಸಹಾಯಕ್ಕೆ ಅಮ್ಮನ ಎಡ ಬಲಕ್ಕೆ ನಿಲ್ಲುತ್ತಾರೆ.
ಇಂಜಿನಿಯರುಗಳಿಂದ ತುಂಬಿ ಹೋಗಿರುವ ನಮ್ಮ ದೊಡ್ಡ ಕುಟುಂಬದಲ್ಲಿ ಒಬ್ಬಳೇ ಒಬ್ಬಳು ಡಾಕ್ಟರ್. ಅವಳು ನಮ್ಮ ಯಶೋದಕ್ಕನ ಮಗಳು ಪ್ರೀತಿ. ಮಾಗಡಿ ಬಳಿಯ ಹಳ್ಳಿಯೊಂದರ, ಸರ್ಕಾರಿ ಆಸ್ಪತ್ರೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾಳೆ. ಅವರ ಮನೆಯಲ್ಲಿ ಇಬ್ಬರು ಇಂಜಿನಿಯರ್ಗಳಿದ್ದರೂ ಅವಳು ಧೈರ್ಯವಾಗಿ ಮೆಡಿಕಲ್ ಸೇರಿದಳು. ಅವಳ ಪತಿ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿಯೇ ದುಡಿಯುತ್ತಿದ್ದಾರೆ. ಹೀಗಾಗಿ ಯಾರಾದರೂ ಅಷ್ಟೇ ಎಂಬಿ ಆದ ಮೇಲೆ ಎಂಡಿ ಮಾಡಲೇಬೇಕು ಮುಂತಾಗಿ ಮಾತಾಡಿದಾಗಲೆಲ್ಲ ನಾನು ಜಗಳಕ್ಕೆ ಇಳಿಯುತ್ತೇನೆ. ಬರೆಯುತ್ತಾ ಹೋದಂತೆ ‘ಮೇಟಿ ವಿದ್ಯೆಯೇ ಲಾಸು’ಗೆ ಸ್ಫೂರ್ತಿ ನೀಡಿದ ದೊಡ್ಡಕ್ಕನ ಮಗ ವಿಶ್ವ ನೆನಪಾಗುತ್ತಿದ್ದಾನೆ.
ಓಹೋ! ಇದೇಕೋ ಜೀವನ ಚರಿತ್ರೆ ಆಗುವಂತೆ ಕಾಣುತ್ತಿದೆ. ಇಲ್ಲಿಗೆ ನಿಲ್ಲಿಸುತ್ತೇನೆ. ತೀರಾ ವೈಯಕ್ತಿಕ ಅನ್ನಿಸಿದರೆ ಕ್ಷಮಿಸಿ. ನಿಮ್ಮೆಲ್ಲರ ಮನೆಯಲ್ಲಿಯೂ ಇಂಥವೇ ಮಕ್ಕಳು ಇರುತ್ತಾರಲ್ಲವೇ?







nimma sarala bhashe thumba esta
Mavaiah, It was nice to read!
Thumba dinagalla nanthara nimma lekana odhi kushi aythu sir