ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೌರಮ್ಮನದು ತಾಯ ಕರಳು…

ಕಲೀಮ್ ಉಲ್ಲಾ

ಗುಬ್ಬಚ್ಚಿ ಥರ ಆಗಿದ್ರು.”ಕೊನೇ ಸಲ ಹೇಳ್ತಿದ್ದೀನಿ ಆರೋಗ್ಯ ಸರಿಯಾಗಿ ನೋಡ್ಕೊಳ್ರಿ. ಎಂಟ್ಹತ್ತು ಮಾತ್ರೆ ನುಂಗೋ ಥರ ಆಗಿದ್ದೀರ.ಮೈಯಲ್ಲಿ ಮಟನ್ನೇ ಇಲ್ಲ ಅದ್ಯಾವ ಡಾಕ್ಟ್ರು ನಿಮಗೆ ಲಿಪಿಡ್ ಪ್ರೋಫೈಲ್ ಜಾಸ್ತಿಯಾಗಿದೆ ಎಂದವನು” ಎಂದು ರೇಗಿಸುತ್ತಿದ್ದೆ. ಬಹುವಚನ ಬಳಸುತ್ತಿದ್ದ ಗೌರಮ್ಮ ಹೀಗೆ ರೇಗಿಸಿದರೆ “ಇವನೊಬ್ಬ ಹಳೇ ಸಾಬಿ ಬುದ್ಧಿ ಹೇಳೋಕೆ ಬಂದ” ಎಂದು ನಕ್ಕು ಸಿಗರೇಟು ಹತ್ತಿಸುತ್ತಿದ್ದರು.

ಅವರ ಸಾವು ಇಪ್ಪತೈದು ವರ್ಷದ ಅದೆಷ್ಟೋ ನೆನಪುಗಳ ಬೀಸಿ ಒಗೆಯುತ್ತಿದೆ. ನಾಳೆ ಸತ್ತು ಮಲಗಿರುವ ಗೌರಮ್ಮನ ನೋಡಲು ಮನಸ್ಸು ಗಟ್ಟಿಮಾಡಿಕೊಂಡು ಹೋಗುತ್ತಿರುವೆ. ಲಂಕೇಶರ ಗಂಡುತನ,ದೈರ್ಯ,ಬದ್ಧತೆ,ಅಂತಃಕರಣ, ಎಲ್ಲಾ ಇದ್ದ ಗೌರಮ್ಮನದು ತಾಯ ಕರಳು. ಅದೆಷ್ಟೋ ಸಲ ನಾನು ಬರೆದ, ಸಿಕ್ಕಾಗ ಹೇಳಿದ ಹೆಣ್ಣು ಮಕ್ಕಳ ದುಃಖದ ಕಥೆ ಕೇಳಿ ಗಳಗಳ ಅತ್ತ ಆ ಹೆಂಗರುಳ ಪ್ರೀತಿಯ ಬಲು ಹತ್ತಿರದಿಂದ ಕಂಡವನು ನಾನು.

ಇನ್ನು ಹೇಳುವುದು ಬಹಳ ಇದೆ.ನಿದ್ದೆ ಬರುತ್ತಿಲ್ಲ.ಬೆಳಗ್ಗೆ ಆ ದಿಟ್ಟೆಯ ನೋಡಲು ಹೊರಡಬೇಕು.ದಾವಣಗೆರೆಯಲ್ಲಿ ಗೌರಮ್ಮನಿಗೆ ಗೊತ್ತಿಲ್ಲದಂತೆ ನಾನು ತೆಗೆದ ಕೊನೆಯ ಫೋಟೊ ಇದು. ನಮಕ್ಕ ತೀರಿಕೊಂಡಿದ್ದಾಳೆ ಅನ್ನುವ ನೋವು ತಡೆದುಕೊಳ್ಳಲಾಗುತ್ತಿಲ್ಲ.ಸಾವನ್ನು ಒಪ್ಪಲಾಗುತ್ತಿಲ್ಲ.

‍ಲೇಖಕರು avadhi

6 September, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading