ಗೋಧೂಳಿ ಹಾರುವ ಹೊತ್ತು…

ಪದಾರ್ಥ ಚಿಂತಾಮಣಿ’ ಎಂಬ ಫೇಸ್ ಬುಕ್ ಪುಟ ಆರಂಭವಾಗಿದೆ. ಇದಕ್ಕೆ ಚಾಲನೆ ನೀಡಿರುವವರು ದೂರದ ಕುವೈತ್ನಲ್ಲಿರುವ ಆಜಾದ್ ಐ ಎಸ್ ಅವರು. ಪ್ರತಿ ನಿತ್ಯವೂ ಪದಗಳಿಗೆ ಅರ್ಥ ಹುಡುಕುವ, ಪದ ಗೊಂದಲ ನಿವಾರಿಸುವ, ಪದಕ್ಕೆ ಚೌಕಟ್ಟು ಹಾಕುವ, ಹಾಕಿದ ಚೌಕಟ್ಟನ್ನು ಕಿತ್ತು ಸ್ವತಂತ್ರಗೊಳಿಸುವ ಈ ಆಟ ಓದಿದವರಿಗೆ ಗೊತ್ತು. ಈ ಸಾಹಸಕ್ಕೆ ಆಜಾದ್ ಅವರನ್ನು ಅಭಿನಂದಿಸುತ್ತಾ ಅದರ ಒಂದು ತುಣುಕು ಇಲ್ಲಿ ನೀಡಿದ್ದೇವೆ. ಪದಾರ್ಥ ಚಿಂತಾಮಣಿ ಬೇಕಾದವರು ಇಲ್ಲಿ ಭೇಟಿ ನೀಡಿ.

ಆಜಾದ್ ಐ ಎಸ್

ಸಂಜೆಯ ಅದ್ರಲ್ಲೂ ಮುಸ್ಸಂಜೆ ಸಮಯ “ಗೋಧೂಳಿ” ವಾವ್ ಎಂತಹ ಪದ …!!!! ಸಿರಿಗನ್ನಡಂ ಗೆಲ್ಗೆ.. ಇದನ್ನ ವಿಶ್ಲೇಷಣೆ ಮಾಡೋಣ.. ಇದು ಗೋವು ಎಬ್ಬಿಸುವ ಧೂಳು…ಎಂಬರ್ಥದ್ದು.. ಗೋವು ಧೂಳು ಎಬ್ಬಿಸೋ ಹಾಗಾಗೋದು ಬೆಳಿಗ್ಗೆ ಮತ್ತೆ ಸಂಜೆ… ಆದರೆ ಈ ಪದದ ರಮ್ಯತೆ ನೋಡಿ… ಇದು ಹಳ್ಳಿಯ ಸೊಗಡಿಗೆ ಅನ್ವಯ ಇದು ಅನ್ನದಾತನ ದಿನಚರಿಗೆ ಅನ್ವಯ ಗೋವುಗಳು ಬೆಳಿಗ್ಗೆ ಹುಲ್ಲುಗಾವಲಿಗೆ ಮೇಯಲು ಹೋಗುತ್ತಿದ್ದ ಸಮಯ ಬೆಳಿಗ್ಗೆ – ವಾಪಸ್ಸಾಗುತ್ತಿದ್ದ ಸಮಯ ಸಂಜೆ ಮುಖ್ಯ ವಾದದ್ದು… ಬೆಳಿಗ್ಗೆ ಹೊಲಕ್ಕೆ ಅಥವಾ ಮೇಯಲು ಹೋಗುವ ರಾಸುಗಳನ್ನು ಹಳ್ಳಿಯ ಅನುಭವ ಇರುವವರು ಗಮನಿಸರಬೇಕು ..ಅವು ಮನೆಯಿಂದ ಹೊರಹೋಗುವಾಗ ಹುಮ್ಮಸ್ಸಿರುವುದಿಲ್ಲ ..ಹಾಗಾಗಿ ಹೆಚ್ಚು ಸಡಗರ ಜೋರು ಇರೊಲ್ಲ… ಸಹಜವಾಗಿ ಧೂಳು ಏಳಲ್ಲ…. ಸಂಜೆ, ಕತ್ತಲಾಗುವ ಸಮಯ ಮುಸ್ಸಂಜೆ, ರಾಸುಗಳು ಮನೆಗೆ ವಾಪಸ್ಸಾಗುವಾಗ ಎಂತಹ ಹುಮ್ಮಸ್ಸು…!! ಆಗ ಅವುಗಳ ನಡೆವ ಜೋರಿಗೆ ಧೂಳು ಏಳುತ್ತದೆ.. ಅದಕ್ಕಾಗಿ ಗೋ ಧೂಳಿ… ಇನ್ನೊಂದು ವೈಜ್ಞಾನಿಕ ಕಾರಣ…ಅದು ಸಂಜೆ ಅನ್ನುವುದಕ್ಕೆ… ಬೆಳಗ್ಗೆ ರಾಸುಗಳ ನಡೆಗೆ ಧೂಳು ಏಳುವ ಸಾಧ್ಯತೆ ಕಡಿಮೆ, ರಾತ್ರಿಯ ಮಂಜು, ತಣ್ನನೆಯ ವಾತಾವರಣ..ಮಣ್ಣನ್ನು ತೇವಗೊಳಿಸಿರುತ್ತೆ, ಹಾಗಾಗಿ. ದಿನದ ಸೂರ್ಯನ ಬಿಸಿಲಿಗೆ ಮಣ್ಣು ಒಣಗುತ್ತೆ, ಜನ ದನ ಬಂಡಿ ಎಲ್ಲ ನಡೆದಾಡುವುದರಿಂದ ಧೂಳು ಬಹಳ ಸೂಕ್ಷ್ಮಕಣವಾಗುತ್ತೆ ಹಾಗಾಗಿ ರಾಸುಗಳ ನಡೆಗೆ ಮತ್ತು ಜೋರಿಗೆ ಹೆಚ್ಚು ಧೂಳು ಏಳುತ್ತೆ… ಹೇಗೆ…ಪದ ಸಂಯೋಜನೆ ನಮ್ಮ ಹಿರಿಯರದ್ದು!!!!!!!!]]>

‍ಲೇಖಕರು G

March 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

    • ಅಜ಼ಾದ್

      ಸತೀಶ್ ನಿಮ್ಮ ಕಾಣಿಕೆಗಳಿಗೆ ಸ್ವಾಗತ ನಮ್ಮ ಗುಂಪನ್ನು ಸೇರಿಕೊಳ್ಳಿ….ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ.

      ಪ್ರತಿಕ್ರಿಯೆ
  1. ಅಜ಼ಾದ್

    “ಅವಧಿ” ಗೆ ಪದಾರ್ಥ ಚಿಂತಾಮಣಿ ಬಳಗದ ಯುಗಾದಿಯ ಹಾರ್ದಿಕ ಶುಭಾಶಯಗಳು ಮತ್ತು ನಮ್ಮ ಪ್ರಯತ್ನವನ್ನು ನಿಮ್ಮ ಈ ಬಹುವ್ಯಾಪಕ ಮಾಧ್ಯಮದ ಮೂಲಕ ಕನ್ನಡಿಗರಿಗೆ ಪರಿಚಯಿಸುತ್ತಿರುವುದಕ್ಕೆ ನೂರು ನಮನ ಹಾಗೂ ಧನ್ಯವಾದಗಳು…
    ಕನ್ನಡ ಪದ ಬಳಕೆಯಲ್ಲಿ ನಾವು ಹಿಂಜರಿಯುತ್ತೇವೆ ಎನ್ನುವುದು ನನಗಂತೂ ನಿಜ ಅನ್ನಿಸಿದೆ.. ಕನ್ನಡಿಗರ ಪದಭಂಡಾರ ಶ್ರೀಮಂತವಾದುದು ಎನ್ನುವುದಕ್ಕೆ “ಗೋಧೂಳಿ” ಉದಾಹರಣೆ ಕೊಟ್ಟೆ.
    ಕನ್ನಡದ ಮಿತ್ರರು ಕನ್ನಡ ಪ್ರೇಮಿಗಳು ನಮ್ಮೊಂದಿಗೆ ಕೈ ಜೋಡಿಸಿದರೆ ಸುಂದರ ಕನ್ನಡ ಪದಾರ್ಥ ಚಿಂತಾಮಣಿಯ ಭಂಡಾರ ತಯಾರಾಗುವುದರಲ್ಲಿ ಸಂಶಯವಿಲ್ಲ. ಭಾಷಾ ಪಂಡಿತ ಹಿರಿಯರು ನಮ್ಮನ್ನ ನಡೆಯನ್ನು ತಿದ್ದಿ ಮಾರ್ಗದರ್ಶನ ನೀಡಬೇಕೆಂದು ವಿನಂತಿ.
    ಮತ್ತೊಮ್ಮೆ ’ಅವಧಿ’ಯ ಎಲ್ಲಾ ಓದುಗರಿಗೆ ನಮ್ಮೆಲ್ಲರ ವತಿಯಿಂದ ಯುಗಾದಿ ಶುಭಾಶಯಗಳು

    ಪ್ರತಿಕ್ರಿಯೆ
  2. shivu k

    “ಗೋಧೂಳಿ” ಪದ ಮತ್ತು ಸಮಯ ಎರಡೂ ಕೂಡ ನನ್ನ ಅಚ್ಚುಮೆಚ್ಚು ಏಕೆಂದರೆ ಅದು ನನ್ನ ಫೋಟೊಗ್ರಫಿ ಸಮಯ.

    ಪ್ರತಿಕ್ರಿಯೆ
  3. malathi S

    wow chennagide Azad bhaiyyaa!!!
    nimge yugadi habbada shubhaashyagaLu
    🙂
    malathi S

    ಪ್ರತಿಕ್ರಿಯೆ
  4. prakash hegde

    ನಿಜಕ್ಕೂ ಒಳ್ಳೆಯ ಕೆಲಸ….
    ಮುಂದುವರೆಸು ಆಝಾದು…
    ಪದಾರ್ಥ ಚಿಂತಾಮಣಿ ಎಂದಾಕ್ಷಣ “ಪಾವೆಂ ಆಚಾರ್ಯರು” ನೆನಪಾದರು….
    ಜೈ ಹೋ !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: