ಆತ್ಮೀಯರೇ,

ಈ ಗೊಜ್ಜವಲಕ್ಕಿ ಪುಸ್ತಕ ಇದೇ ದಿನಾಂಕ ೨೦ರಂದು ಬೆಂಗಳೂರಿನ ಉದಯಭಾನು ಕಲಾ ಸಂಘ, ಗವಿಪುರ ಸಾಲು ಛತ್ರಗಳ ಎದರು, ರಾಮಕೃಷ್ಣ ಆಶ್ರಮದ ಹಿಂಭಾಗ, ಕೆಂಪೆಗೌಡ ನಗರ, ಬೆಂಗಳೂರನಲ್ಲಿ ಸರಿಯಾಗಿ ೧೦.೦೦ಕ್ಕೆಬಿಡುಗಡೆಯಾಗಲಿದೆ…ದಯವಿಟ್ಟು ತಾವು ಈ ಕಾರ್ಯಕ್ರಮಕ್ಕ ಸಹಕುಟಂಬ ಪರಿವಾರ ಸಹಿತ ಬರ್ರಿ.
ಈ ಪುಸ್ತಕವನ್ನ ’ಛಂದ’ಪುಸ್ತಕದ ವಸುಧೇಂದ್ರವರು ಪ್ರಕಟಿಸುತ್ತಿದ್ದಾರೆ, ಪುಸ್ತಕದ ಬೆನ್ನುಡಿಯನ್ನ ಶ್ರೀ ಗಿರೀಶ ಹತ್ವಾರ (ಜೋಗಿ) ಅವರು ಬರದಿದ್ದು, ಮುಖಪುಟವನ್ನ ವಿನ್ಯಾಸಗೊಳಿಸಿರುವವರು ವಿನಯ ಸಾಯ. ಇನ್ನ ಕರಡು ತಿದ್ದುಪಡಿ ಮಾಡಿದವರು ಅನಂತ ಹುದಂಗಜೆ ಹಾಗೂ ರೇಖಾ ಚಿತ್ರಗಳನ್ನು ಮಾಡಿಕೊಟ್ಟವರು ಮಹಾಂತೇಶ ದೊಡ್ಡಮನಿ. ಹಂಗ ಪೂರ್ತಿ ಬುಕ್ ಬರದಂವ ನಾನ ಮತ್ತ 🙂
ಅವಧಿಯ ಸಮಸ್ತ ಓದುಗರು ಈ ಕಾರ್ಯಕ್ರಮಕ್ಕ ಬಂದು ಗೊಜ್ಜವಲಕ್ಕಿ ತೊಗೊಂಡ ಉಂಡು ಕಾರ್ಯಕ್ರಮ ಯಶಸ್ವಿ ಮಾಡಿಕೊಡಿ ಅಂತ ನಿಮ್ಮಲ್ಲಿ ವಿನಂತಿಸುತ್ತೇನೆ.
ಲಗೂನ ಬಂದವರಿಗೆ ಟಿಫಿನ್ ವ್ಯವಸ್ಥಾನೂ ಅದ ಮತ್ತ…ಲಗೂನ ಬರ್ರಿ.
ನಿಮ್ಮ ಆಗಮನದ ನೀರೀಕ್ಷೆಯಲ್ಲಿ
ಪ್ರಶಾಂತ ಆಡೂರ

***
ಋಷಿ ಪಂಚಮಿ ವೃತಾ ಹಿಡದ ಹೆಣ್ಮಕ್ಕಳು ತಮ್ಮ ಗಂಡಂದರ ಜೋಡಿ ದೈಹಿಕ ಸಂಬಂಧ ಇಟಗೊಬಾರದು, ಅವನ ಜೋತಿ ಒಂದ ಹಾಸಿಗೆ ಮ್ಯಾಲೆ ಮಲ್ಕೋಬಾರದು, no sexual activity for rest of the life ಅಂತ ನಾ ಕೇಳಿನಿ. ಹಿಂಗಾಗೆ ವಯಸ್ಸಾದ ಹೆಣ್ಣಮಕ್ಕಳ ಈ ವೃತಾ ಹಿಡಿತಾರ.
ಕಡಿಕೂ ನಂಗ ಇದನ್ನೇಲ್ಲಾ ನನ್ನ ಹೆಂಡತಿಗೆ ಸಮಾಧಾನದ್ಲೆ ತಿಳಿಸಿ ಹೇಳೋದರಾಗ ಏಳು ಹನ್ನೇರಡ ಆತ. ಈಕಿ ಪೂರ್ತಿ ಎಲ್ಲಾ ಕೇಳೊ ಹಂಗ ಕೇಳಿ ಏನ ಅಂದ್ಲ ಗೊತ್ತ..
“ಅಲ್ಲರಿ, ನಂದ ಹೆಂಗಿದ್ದರೂ ಆಪರೇಶನ್ ಅಂತೂ ಆಗೆ ಬಿಟ್ಟದ,ಮುಂದ ಮಕ್ಕಳ ಆಗೋ ಚಾನ್ಸಿಸ್ ಇಲ್ಲಾ, ಮ್ಯಾಲೆ ಇದೇನ ಜೀವನ ಪೂರ್ತಿ ಹಂಗ ಅಂತ ಏನಿಲ್ಲಾ? ಎಂಟ ವರ್ಷದ ಮಾತ, ಹೆಂಗರ ಕಳಿಬಹುದು. ನೀವು ಒಂದ ಸ್ವಲ್ಪ ಕಂಟ್ರೋಲ್ ಇಟಗೋರಿ, ಇಲ್ಲಾ ನೀವು ಒಂದ ಯಾವದರ ಹಿಂತಾ ವೃತಾ ಇದ್ದರ ಹುಡಕಿ ಹಿಡದ ಬಿಡರಿ” ಅಂದ್ಲು.
ನಂಗ ತಲಿ ಎದಕ್ಕ ಜಜ್ಜಕೋಳಿ ಅನ್ನೋದ ತಿಳಿಲಾರದಂಗ ಆತ. ಅಲ್ಲಾ ಬರೇ ಎಂಟ ವರ್ಷದ ಮಾತ ಅಂತ.. ಈಕಿ ಮುಂದ ಮತ್ತ ಯಥಾ ಪ್ರಕಾರ ಸಂಸಾರ ಮಾಡೋಕಿ ಅಂತ? ಏನ ಹೇಳ್ಬೇಕ ಇಕಿಗೆ. ಹಂಗ ಇಕಿದ ಆಪರೇಶನ್ ಆಗಿದ್ದಿಲ್ಲಾ ಅಂದರ ಋಷಿ-ಪಂಚಮಿ ಉದ್ಯಾಪನಿ ಮಾಡಿ ಆಮ್ಯಾಲೆ ಮತ್ತೊಂದ ಹಡೇಯೋಪೈಕಿನ……………..
ಇದು ನನ್ನ ’ಗೊಜ್ಜವಲಕ್ಕಿ’ಪುಸ್ತಕದ ’ರ್ರಿ…ನಾನು ರಿಷಿಪಂಚಮಿ ಹಿಡಿತೇನ್ರಿ’ ಪ್ರಬಂಧದ ಆಯ್ದ ಭಾಗ.





SUPER SIR.
wE ARE COMING TO MEET YOU. ALL THE BEST FOR THE FUNCTION.
SUMITRA
yes, sir we are waiting for your second book since so many days, i am glad you are coming out with new book.
we shall buy it.
Narayan.K
kuttavalakki ayity ega gojjavallaki!!!. Avallaki andre ast estana nimge ??
super sir……
CHANDA PUSTAKA CHANDA MADYARA-HEMCHANDRA
Enthenth vratha ede nimma kde nammurlli enthadella ellappa nammejamanari no problem anda hage gojjavalakki thinnalikke barakke agthilla sir mydunanige kanye nodalu hoga beku samaramba yashwi agali endu harisuve SUVARNA