ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಲಾಮಗಿರಿಯ ಕಹಿಯುಂಡವರಿಗಷ್ಟೇ ಸ್ವಾತಂತ್ರ್ಯದ ರುಚಿಯೂ ಅರ್ಥವಾಗುವುದು

ಸಂತೋಷ್ ಕುಮಾರ್

ಇವತ್ತು ಕೌಲಾಲಂಪುರದ ಒಂದು ಥಿಯೇಟರ್ನಲ್ಲಿ ಜೂನಿಯರ್ NTR ನ ತೆಲುಗು ಸಿನೆಮಾ “ರಭಸ” ನೋಡೋಕೆ ಅಂತ ಗೆಳೆಯನೊಡನೆ ಹೋಗಿದ್ದೆ. ಇಡೀ ಥಯೇಟರ್ ಜನಗಳಿಂದ ಭರ್ತಿ.
ಸಿನಿಮಾ ಶುರುವಾಗೋಕೆ ಮುಂಚೆ ಸ್ವಾತಂತ್ರ್ಯಕ್ಕೆ ಹೋರಾಡಿದ ನಾಯಕರೊಬ್ಬರ ಆ ದಿನಗಳಲ್ಲಿ ಮಾಡಿದ ಎರಡು ನಿಮಿಷದ ಭಾಷಣದ ತುಣುಕು. ಅಷ್ಟು ಹೊತ್ತಿನವರೆಗೆ ಮಾತನಾಡುತ್ತಿದ್ದ ಎಲ್ಲರೂ ತಕ್ಷಣ ಮೌನ. ಮಲಯ್ ಭಾಷೆಯಲ್ಲಿದ್ದುದರಿಂದ ಅದರ ಅರ್ಥ ನಿಜವಾಗಿ ಅರ್ಥವಾಗದಿದ್ದರೂ, ಆ ವ್ಯಕ್ತಿಯ ಮಾತಿನ ಭಾವ ಮಾತ್ರ ಜನಗಳ ಕಷ್ಟ,ಮತ್ತು ಎಲ್ಲರನ್ನು ಗುಲಾಮಗಿರಿಯಿಂದ ಬಿಡುಗಡೆಯತ್ತ ಸೆಳೆಯುವ ಹಾಗೂ ಅದಕ್ಕಾಗಿ ಹೋರಾಡಲು ಹುರಿದುಂಬಿಸುವ ವಿಷಯಗಳೆಲ್ಲವನ್ನೂ ಅರ್ಥ ಮಾಡಿಸುವಂತಿತ್ತು.

ನಂತರ ಯೋಚಿಸಿದೆ . ಹೌದು, ಮಲೇಷಿಯನ್ನರಿಗೆ ಇಂದು ಸ್ವಾತಂತ್ರ್ಯ ದಿನಾಚರಣೆ. ಅದಕ್ಕಾಗಿಯೇ ಆ ವಿಡಿಯೋ ತುಣುಕನ್ನು ಪ್ರದರ್ಶಿಸಿದ್ದು ಕೂಡ.
ನಂತರ ದಯವಿಟ್ಟು ಎದ್ದು ನಿಂತು ಗೌರವ ಸೂಚಿಸಿ ಎಂಬ ಸಂದೇಶದೊಂದಿಗೆ ಆ ದೇಶದ ರಾಷ್ಟ್ರಗೀತೆಯನ್ನು ಹಾಕಲಾಯಿತು. ಇಡೀ ಥಿಯೇಟರ್ಗೆ ಬಂದಿದ್ದ ಪ್ರತಿಯೊಬ್ಬರೂ ಎದ್ದು ನಿಂತರು. ನಾನೂ ನನಗರಿವಿಲ್ಲದಂತೆಯೇ ಎದ್ದು ನಿಂತೆ.
ಆಮೇಲೆ ನಾನು ಮಾಡಿದ್ದು ಸರಿಯಾ ಅಂತ ಯೋಚಿಸಿದೆ. ತಪ್ಪು ಅಂತ ಅನ್ನಿಸಲಿಲ್ಲ. ಸ್ವಾತಂತ್ರ್ಯವೆಂದರೆ ಅದು ನಮದಷ್ಟೇ ಅಲ್ಲ ಅದು ಒಂದು ಪಾರಿವಾಳದ್ದೇ ಆಗಿರಲಿ ಇನ್ನೊಬ್ಬ ವ್ಯಕ್ತಿಯದೇ ಆಗಲಿ, ಅಥವಾ ಇನ್ನೊಂದು ದೇಶದವರದೇ ಆಗಲಿ. ಅದನ್ನು ನಾವು ಗೌರವಿಸಬೇಕು.
ಗುಲಾಮಗಿರಿಯ ಕಹಿಯುಂಡವರಿಗಷ್ಟೇ ಸ್ವಾತಂತ್ರ್ಯದ ರುಚಿಯೂ ಅರ್ಥವಾಗುವುದು ಅಲ್ಲವೇ?

‍ಲೇಖಕರು G

2 September, 2014

2 Comments

  1. lalithasiddabasavaiah

    yes , u r correct

  2. Kiran

    Ella OK, aadre ತೆಲುಗು ಸಿನೆಮಾ yaake?? adoo ಜೂನಿಯರ್ NTR 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading