ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಅಯ್ಯೊ.. ಮೇರಾ ದುಕಾನ ಬರಬಾದ ಹೋಗಾಯ…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

14

। ಕಳೆದ ವಾರದಿಂದ ।

“ಏನು ಮಾಡಿದೊ…? ರಕ್ತ ಕಾರಿಕೊಂಡಿ ಏನೊ?”ಎಂದ.
ನೋವಿನಿ೦ದ ನರಳುತ್ತಿದ್ದ ಅವ “ಇಲ್ಲ ಸೇಟ್… ನನಗೇನು ಗೊತ್ತಿಲ್ಲ… ಸೊಳ್ಳೆ ಓಡಾಡುತಿತ್ತು ಹೊಡೆಯುತ್ತಿದ್ದೆ… ರಕ್ತ ಎಲ್ಲಿಂದ ಬಂತೊ ಗೊತ್ತಿಲ್ಲ”
ಮತ್ತೊಮ್ಮೆ ‘ಪಿಚಕ್’ ಅಂತ ಉಗುಳಿದೆ
“ಒ..ದೇಖೊ.. ಬಡಾ ಮಚ್ಛರ್.. ತುಮಾಹಾರೆ ಗಲೆ ಪರ್ ಹೈ.. ಹೇ ರಾಮ್.. ಕೈಸಾ ಜಮಾನಾ ಆಗಯಾ? ಮೈ ಐಸೆ ಮಚ್ಛರ್ ಅಭಿ ತಕ್ ದೇಖಾನಹಿ” ಎಂದು ಕೂಗಿದೊಡನೆ..
“ಸೇಟ್..ಎಂತಹ ಪರಿ ಕಚ್ಚಿದೆ.. ಸೇಟು.. ಎಲ್ಲಿದೆ… ರಕ್ತ ಜಗ್ಗಿಕೊಂಡ೦ಗಾತು…! ನನ್ನ ರಕ್ತನಾ..? ಅಯ್ಯೊ… ಅದು ನನ್ನ ಮೇಲೆ ಕುಳಿತಿದೆಯಾ?” ಎಂದು ಹೆಗಲಿಗೆ ಹೊಡಕೊಂಡ.
ಬಾಯಲ್ಲ ರಕ್ತದಿಂದ ತುಂಬಿತ್ತು.. ಉಗುಳಿದ೦ಗೆಲ್ಲ ಬರತಿತ್ತು… ಸೊಳ್ಳೆ ನುಂಗಿದಾಗ.. ಅಥವಾ ವಿಷ ವಸ್ತು ತಿಂದಾಗ ಅದು ಹೋಗುವವರೆಗೂ ಉಗುಳುವಾಂಗ… ಹಾರಿ ನಾನು ಉಗುಳುತ್ತಾ ಹೋದೆ. ಅದು ಟೇಸ್ಟ್ ನೋಡುತ್ತಿದ್ದ ಅಲ್ವಾದ ಮೇಲೆ ಬಿದ್ದಿತು. ಗಿರಾಕಿ ಏನ್ರಿ ಇದು “ಎಲ್ಲಿಂದ ರಕ್ತ ಬೀಳುತಿದೆ..” ಎಂದ.. “ರಕ್ತನಾ…” ಅಂದಾಗಾ ಎಲ್ಲ ಇಲ್ಲಿ ಓಡಿ ಬಂದರು. ನಾನು ಉಗುಳುತ್ತಿದ್ದ ರಕ್ತ ಎಲ್ಲಾ ಸ್ವೀಟ್ ಮೇಲು ಬೀಳ ಹತ್ತಿತು. “ಏನಿದು..ಏನಾಗತಿದೆ?” ಎಂದ್ರು ಎಲ್ಲರೂ
“ಸೊಳ್ಳೆ … ಸೊಳ್ಳೆ …” ಎಂದು ಕೂಗಿದ.
ನಾನು ಉಂಡಿದ್ದರಿ೦ದ ರಕ್ತ ಕುಡಿದಿದ್ದರಿಂದ ಸ್ವಲ್ಪ ದಪ್ಪನಾಗಿ ಎಲ್ಲರಿಗೂ ಕಾಣುವಂತಾಗಿದ್ದೆ… ನಾನು ಕನ್ನಡಿಯ ಮೇಲೆ ಹೋಗಿ ಕುಳಿತೆ…. ನೂರಾರು ಚಿತ್ರಗಳು ದರ್ಪಣದ ಮುಖಾಂತರ ಕಂಡವು. ಅಂಗಡಿಗೆ ಬಂದಿದ್ದವರೆಲ್ಲ ಅಲ್ಲಿ ನೋಡಿ “ಎಂತಹ ದೊಡ್ಡ ಸೊಳ್ಳೆ ?” ಎಂದು ಹೌಹಾರಿದರು.
“ಎಂತಹ ಕಾಲ ಬಂತಪ್ಪ?”ಎ೦ದು ಒಬ್ಬ
“ಈ ಪಾಟಿ ಸೊಳ್ಳೆನ ನೋಡೆ ಇರಲಿಲ್ಲಪ” ಅಂತ ಮತ್ತೊಬ್ಬ.
“ಏನೇನು ನೋಡ ಬೇಕಾಗ್ಯಾದೋ ಈ ಕಣ್ಣಿನಿಂದ” ಎಂದ ಒಬ್ಬ ಅಜ್ಜ
ಮೊಬೈಲ್ ನಲ್ಲಿ ಒಬ್ಬ ವಿಡಿಯೊ ಮಾಡಲಿಕ್ಕೆ ಹತ್ತಿದ.
ಕಡಿಸಿಕೊಂಡಿದ್ದ ಅಂಗಡಿ ಆಳು… ಅಲ್ಲಿದ್ದ ಹಿಟ್ ನ್ನು ತೆಗೆದುಕೊಂಡು ಸ್ಪ್ರೇ ಮಾಡಲಾರಂಭಿಸಿದ… ನಾನು ಜಂಪ್ ಮಾಡುತ್ತಾ ಎಲ್ಲಾ ಕಡೆ ಓಡಾಡಿದೆ. ಆ ಹಿಟ್‌ನ ವಿಷ ಎಲ್ಲಾ ಸ್ವೀಟ್ ಅಂಗಡಿಯ ಪದಾರ್ಥಗಳನ್ನೆಲ್ಲ ಹಾಳು ಮಾಡಿತು… ಐದು ನಿಮಿಷ ಆಗಿರಲಿಲ್ಲ.. ಅಲ್ಲೆ ಇದ್ದ ಟಿವಿಯಲ್ಲಿ ನನ್ ಚಿತ್ರ ಕಾಣ ಹತ್ತಿತು.. ಯಾರೊ ನಾನು ಮಾಡೋದನ್ನೆಲ್ಲ.. ವಿಡಿಯೋ ಮಾಡಿ ನ್ಯೂಜ್ ಚಾನಲ್‌ಗೆ ಕಳುಹಿಸಿದ್ದರು.
‘ಬ್ರೆಕಿಂಗ್ ನ್ಯೂಜ್… ನಮ್ಮಲ್ಲೆ ಮೊದಲು… ನಮ್ಮಲ್ಲಿ ಮಾತ್ರ… ಏನು ಗೊತ್ತಾ? ಪ್ರಪಂಚದ ದೊಡ್ಡ ಗಾತ್ರದ ಸೊಳ್ಳೆ…. ಬಾಬು ಸೇಟ್ ಬೇಕರಿಯಲ್ಲಿ ಪತ್ತೆ….” ಅಂತ ಫ್ಲಾಶ್ ನ್ಯೂಜ್ ಬರತಿತ್ತು
“ಅಯ್ಯೊ ಮೇರಾ ದುಕಾನ ಬರಬಾದ ಹೋಗಾಯ.. ಸಭಿ ಟಿವಿಮೇ ಆಯೆತೊ ಮೇರೆ ದುಕಾನ ಕೊ ಕೌನ್ ಆತಾ ಹೈ” ಎಂದು ಬಿದ್ದು ಒದ್ದಾಡ ತೊಡಗಿದ.

ನ್ಯೂಜನಲ್ಲಿ “ಈಗ ನಮ್ಮ ಪ್ರತಿನಿಧಿ ಇನ್ನು ಅರ್ಧ ಗಂಟೆಯಲ್ಲಿ ವಿಶೇಷ ಫ್ಲೈಟ್ ನಲ್ಲಿ ಹೋಗಿ ಅ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಈಗ ಅಂಗಡಿ ಸೇಟ್ ಫೋನ್ ನಂಬರ್ ಸಿಕ್ಕಿದೆ… ಕರೆ ಮಾಡಿ ಏನು ಆಯ್ತು ಎಂದು ವಿಚಾರಸೊಣ” ಅಂತ ಅನ್ನುವುದರೊಳಗಾಗಿ ಅಂಗಡಿಯ ಬಾಬು ಸೇಟ್ ಮೊಬೈಲ್ ರಿಂಗ್ ಆಗ ಹತ್ತಿತು..
“ಅಯ್ಯೊ..ಹೊ… ಓ..ಮೈ ಖೋ ಗಯಾ ರೇ” ಎಂದು ಅಳತೊಡಗಿದ…
“ಸೇಟು..ಮಾತಾಡು ಟಿ.ವಿಯಲ್ಲಿ ಬರತಿ.. ಸೆಲೆಬ್ರೇಟಿ ಆಗತಿ” ಎಂದು ಹೊರಗಿದ್ದವ ಒಬ್ಬ.
“ಕ್ಯಾ ಕಹತೆ ಹೈ ಜಿ..ಟಿ.ವಿ ಮೇ ಆಯಾ ತೊ… ಕೌನ್ ಆಯಾಗಾ ಮೇರೆ ದುಕಾನ ಕೊ..ಕೋನಾ ಭೇಜಾ ಹೈ ಏ.. ವಿಡಿಯೋ ರೇ?” ಎಂದು ಅಳತೊಡಗಿದ.
ಚಾನಲ್‌ನವರು “ಈಗ ಸೇಟು ಬೇರೆ ಕೆಲಸದಲ್ಲಿದ್ದಾರೆ.. ಹಾಗಾಗಿ ಅಲ್ಲಿ ಅಂಗಡಿಯಲ್ಲಿ ಕೆಲಸ ಮಾಡುವ ಜಾಫರ್ ನಮ್ಮ ಸಂಪರ್ಕಕ್ಕೆ ಸಿಗುತ್ತಿದ್ದಾರೆ… ಅವರು ಆ ಸೊಳ್ಳೆಯಿಂದ ಕಚ್ಚಿಸಿಕೊಂಡವರು ಕೂಡಾ… ಅವನ್ನು ಕೇಳೋಣ.. ಅಲ್ಲಿ ಏನಾಗಿದೆ? ಏನಾಗುತ್ತಿದೆ? ಏನು ಕಚ್ಚಿದೆ?ಹೇಗೆ ಕಚ್ಚಿದೆ? ಕಚ್ಚಿದ ಅನುಭವ ಹೇಗಿದೆ ಖುಷಿಯಾಗತಿದೆಯಾ? ದುಃಖ ಆಗತಿದೆಯಾ?” ಅಂತ.
ತನ್ನ ಹೆಸರು ಟಿವಿಯಲ್ಲಿ ಹೇಳೊದನ್ನ ಕೇಳಿಸಿಕೊಂಡ ಜಾಫರ್‌ಗ.. ಹಿಟ್ ನಿಂದ ಆ ಸೊಳ್ಳೆನ ಸಾಯಿಸೋ ಕೆಲಸವನ್ನ ಬಿಟ್ಟು ನಾನು ಕಚ್ಚಿದ ನೋವು ಮಾಯವಾಗಿ ಫೊನ್ ರಿಂಗ್ ಆಗತಿದ್ದಂಗ “ಹಾಂ… ಹೇಳ್ರಿ.. ನಾನೇ ಜಾಫರ್… ಅದೇನು ಹೇಳ್ರಿ… ಎಂತಹಾ ದೆವ್ವನಂಗ ಇತ್ರಿ ಆ ಸೊಳ್ಳೆ… ನನಗ ಕಚ್ಚಿದ್ರ ಅರ್ಧ ಲೀಟರ್ ಅಷ್ಟು ರಕ್ತ ಕುಡುದು ಎಲ್ಲಿ ಬೇಕು ಅಲ್ಲೆ ಉಗುಳುತ್ತಿದ್ದರೆ… ಥೇಟ್ ಮನುಷ್ಯರು ಉಗುಳಿದಂಗೆ” ಎಂದು ನಾನ್ ಸ್ಟಾಪ್ ಬಿಲ್ಡಪ್ಪ ಕೊಡ ಹತ್ತಿದ.
“ಜಾಫರ್‌ಜಿ.. ಪ್ಲೀಜ್.. ವೇಟ್.. ನಿಧಾನವಾಗಿ ಮಾತನಾಡಿ… ಎಲ್ಲನೂ ಒಮ್ಮೇಲೆ ಹೇಳಿದ್ರೆ.. ಗಂಟೆಗಟ್ಲೇ.. ಪ್ರೋಗ್ರಾ೦ ಮಾಡೋದು ಹೇಗೆ.. ನಾನು ಕೇಳಿದಂಗೆ ಹೇಳಿಕೋತ ಹೋಗಿ.. ಸರಿನಾ?
“ಹಾಂ.. ಸರ್… ನೀವು ಏನು ಕೇಳತಿರೊ ಕೇಳ್ರಿ” ಎಂದು ಬಟ್ಟೆ ಸರಿಮಾಡಿಕೊಂಡ.. ಜೊತೆಗೆ ಹೇರ್ ಸ್ಟೈಲು.
“ಹೇಳಿ ಜಾಫರ್ ಆ ಸೊಳ್ಳೆನ ನೋಡಿದ್ರಾ”
“ಹಾಂ, ಸಾರ್ ಬಾರಿ ದೊಡ್ಡದು ಇತ್ತು?”
“ಥೋ… ಥೋ.. ಥೋ… ಎಷ್ಟು ಕೇಳತೀವಿ ಅಷ್ಟ ಹೇಳಬೇಕು ಅಂತ ಹೇಳಿಲ್ಲಾ ಜಾಫರ್ ಅವರೆ.. ಇಲ್ಲದಿದ್ರೆ ಅಲ್ಲಿದವರಿಗೆ ಕೊಡಿ ಅವರ ಕೂಡಾ ಮಾತಾಡತೀವಿ”
“ಇಲ್ಲ ಸರ್ ಹೇಳಿ ನಾನ ಹೇಳತೀನಿ”
“ಸೊಳ್ಳೆ ನೋಡಿದ್ರಾ?”
“ಹಾಂ.. ನೋಡಿದೆ ಸರ್”
“ನೋಡಿ ವೀಕ್ಷಕರೆ… ನಮ್ಮ ಜಾಫರ್ ಅವರು ಸೊಳ್ಳೆ ನೋಡಿದ್ದಾರೆ ಅಂತ ಹೇಳುತಿದ್ದಾರೆ… ಅದು ಹೇಗಿತ್ತು.. ಏನು ಮಾಡಿತು.. ಅನ್ನೋದನ್ನು ನೋಡೋಣಾ… ಒಂದು ಬ್ರೇಕ್ ನಂತರ” ಎಂದ.
ಅಷ್ಟರಲ್ಲಿ ಮತ್ತೊಂದು ಕರೆ ಬಂತು ಜಾಫರ್ ಗೆ
“ಹಲೋ…” ಎಂದ
“ಜಾಫರ್ ಜಿ ನಾನು ಸುಂಯ್ ಟಿವಿಯವರು”
ಸ್ವಲ್ಪ ಡಿಮ್ಯಾಂಡು ಬಂದಿತ್ತು ಜಾಫರಗೆ “ಹೇಳ್ರಿ….?” ಎಂದ ಗಂಭೀರವಾಗಿ.. ಆಗಲೆ ಅಂಗಡಿ ಮುಂದೆ ಜನಾ ಸಮಾಜಯಿಸುತ್ತಿದ್ದರು… ನನಗೆ ಏನು ತೋಚದಾಗದೆ ಮೂಲೆ ಸೇರಿದ್ದೆ..
“ನೀವು ಸೊಳ್ಳೆ ಕಚ್ಚಿಸಿಕೊಂಡವರ೦ತಲ್ಲ.. ಹಾಗಾಗಿ ನಿಮ್ಮನ್ನ ಸಂದರ್ಶನ ಮಾಡತಿದ್ದವಿ.. ನಿಮ್ಮ ಫೊಟೊ ಟಿ.ವಿಲಿ ಬರತಿದೆ ನೋಡಿ..”
“ಆ ಟಿವಿಯವರು ಬರಿ ವೈಸ್ ಕೇಳಿಸಿದ್ರ ನೀವು ನನ್ನ ಫೋಟೊ ತೋರಸ್ತಿದ್ದೀರಾ?” ಎಂದು ರಿಮೋಟ್ ಹಿಡಿದು ಚಾನಲ್ ಬದಲಿಸದ ತನ್ನ ಫೋಟೊ ಬರುತ್ತಿದ್ದನ್ನು ನೋಡಿ.. ಖುಷಿ ಗೊಂಡು “ಹೇಳಿ ಸರ್.. ಏನು ಬೇಕು ಕೇಳಿ..ನಿಮಗೆ ಹಲ್ವಾ ಬೇಕಾ, ಕುಂದಾಬೇಕಾ, ಬರ್ಫೀ ಬೇಕಾ?”ಎಂದ.
“ಜಾಫರ್ ಅವರೆ, ಯಾವ ಮೂಡನಲ್ಲಿದ್ದೀರಿ… ಸೊಳ್ಳೆ ಬಗ್ಗೆ ಮಾತಾಡಿ.. ಸ್ವೀಟ್ಸ್ ಬಗ್ಗೆ ಅಲ್ಲ”
“ಸ್ವಾರಿ ಸರ್.. ಅಭ್ಯಾಸ ಬಲ”
“ಹೇಳಿ ಜಾಫರ್, ಹೇಗಿತ್ತು ಆ ಸೊಳ್ಳೆ?”
“ಜಾಫರ್… ಬೊಲಾ ಮತ್ತ ರೆ, ಕಟ್ ಕರದೆ ಫೋನ್… ಮೈ ಗಯಾ ರೆ.. ಮೈ ಗಯಾ” ಎಂದ ಬಾಬು ಸೇಟ್.
“ಚುಪ್ ರಹನಾ ಸೇಟ್” ಎಂದು “ಭಾರಿ ಅಂದ್ರೆ ದೊಡ್ಡದಿತ್ತು ಸರ್ ಗುಂಗಾಡಿ ಹಾಂಗೆ” ಎಂದ.
ಅಷ್ಟರಲ್ಲಿ “ಎಲ್ ಟಿವಿಯವರು ಕಂಟಿನ್ಯೂ ಮಾಡತಾರಂತೆ ತೊಗಿ ಜಾಫರ್” ಅಂತ ಯಾರೊ ಕೊಡಲಿಕ್ಕೆ ಬಂದಾಗ… “ಆಮೇಲೆ… ಆಮೇಲೆ… ಅಂತ ಹೇಳು” ಅಂತ ಹೇಳಿದ
“ಜಾಫರ್ ತೂ ಕ್ಯಾಕರ್ ರಹೇ ಹೈ..” ಎಂದು ಮತ್ತೆ ಅಳತೊಡಗಿದ ಬಾಬು ಸೇಟು.. ನಾನು ಅವರ ಮಜಾನೆಲ್ಲ ನೋಡುತ್ತಾ ಮೂಲೆಯಲ್ಲಿ ಕುಳಿತಿದ್ದೆ..ಎಲ್ಲರ ದೃಷ್ಟಿ ಆ ಟಿವಿಯಲ್ಲಿ ಇತ್ತು…
ಚಾನಲ್‌ನವರು ಮುಂದುವರೆಸಿ “ಹೇಳಿ ಜಾಫರ್‌ಜಿ ಕಚ್ಚಿದಾಗ ಏನು ಆಗಿಲ್ಲೇನು?”
“ ಸೂಚಿ ಚುಚ್ಚಿ ರಕ್ತ ಎಳುಕೊಂಡ೦ಗ ಆಯ್ತು ಸಾರ್… ಆದರೆ ಅದು ರಕ್ತನ್ನ ನಮ್ಮ ಯಜುಮಾರಿಗೆ, ಸ್ವೀಟ್ ಮೇಲೆ ಎಲ್ಲ ಕಡೆ ಉಗುಳಿತು ಸಾರ್…”
“ಹೊ.. ಇಂಟರೆಸ್ಟಿ೦ಗ… ನೈಸ್… ಅದನ್ನು ತಿಂದು ಯಾರಾದ್ರೂ ಸತ್ರಾ”
“ಅಯ್ಯೊ ರಕ್ತ ನೋಡಿ ಗಿರಾಕಿಗಳೆಲ್ಲ ಓಡಿ ಹೋಗಿ ಬಿಟ್ರು ಸರ್..”
“ಮತ್ತೆ ಅಲ್ಲೆ ಜನ ಯಾರೂ ಇಲ್ವಾ ಈಗ… ಸೊಳ್ಳೆ ಏನು ಮಾಡತಿದೆ”
“ಜನಾ ರಕ್ತ ಕಾರೋ ಸೊಳ್ಳೆ ಅಂತ ಹೇಳಿ ಜನ ಮುಗಿ ಬಿದ್ದಿದ್ದಾರೆ ಸರ್… ಸೊಳ್ಳೆ ಇದೆ ಸಿಗತಿಲ್ಲ. ಮಾಸ್ಕಟೊ ಹಿಟ್ ನಿಂದ ಒಡದ್ರು ಜುಂ ಎನ್ನುತ್ತಿಲ್ಲ.. ಆಟ ಆಡಸಿತಿದೆ…”
“ಎಲ್ಲಿದೆ ಈಗ..” ಎಂದಾಗ “ ಹೊ..ಅಲ್ಲೆ ಬಾಬು ಸೇಟು ಮೇಲೆ ಕುಳಿತಿದೆ.” ಎಂದ
“ಅಲ್ಲಿರುವ ವೀಕ್ಷಕರೆ… ನಮ್ಮ ಟಿವಿಯಲ್ಲಿ ಮೊದಲು ಪ್ರಸಾರ ಆಗಬೇಕು ಆ ಸೊಳ್ಳೆಯ ಲೈವ್ ವಿಡಿಯೊ… ಯಾರು ಬೇಗ ವಿಡಿಯೋ ಮಾಡಿ ಕಳಿಸುತ್ತಿರೊ ಅವರಿಗೆ ಒಂದು ಲಕ್ಷ ರೂಪಾಯಿ.. ಬಹುಮಾನ.. ಬೇಗ.. ಹರಿ.. ಕ್ಯೂಕ್” ಎಂದು ಕರೆ ನೀಡಿದೊಡನೆ
“ಹಾಂ… ಹಾ೦.. ಲಕ್ಷö..ಲಕ್ಷ.. ನನಗ.. ಲಕ್ಷ…” ಜನ ಮೈಚಳಿ ಬಿಟ್ಟು ರೊಮಾಂಚನಗೊ೦ಡು ಸೇರಿದ್ದ ಜನ ಮೊಬೈಲ್ ವಿಡಿಯೋ ಆನ್ ಮಾಡಿಕೊಂಡು ಅಟ್ಯಾಕ್ ಮಾಡಿದ್ರು. ಟಿವಿ ನೋಡುತ್ತಿದ್ದ ಅಕ್ಕಪಕ್ಕದ ಮನೆಯ ಜನ ಓಡೋಡಿ ಬಂದ್ರು. ಅಷ್ಟು ಜನ ದಾಳಿಗೆ ಸ್ವೀಟ್ಸ ಅಂಗಡಿ ಭೂಕಂಪದ ನಂತರ ಊರಿನ ಸ್ಥಿತಿ, ಪ್ರವಾಹ ಬಂದ ಮೇಲೆ ಬೆಳೆಯ ಸ್ಥಿತಿ, ಕೊಯ್ಲು ಮಾಡಿದಾಗಿನ ಹೊಲದ ಸ್ಥಿತಿ ಹಾಂಗ ಆಯ್ತು. ದಕ್ಕಡಿಗೆ ಮುಂದಿದ್ದ ಗಾಜಿನ ಗ್ಲಾಸು ಒಡೆದು ಹೋದವು.. ಸ್ವೀಟ್ಸ ಚೆಲ್ಲಾಪಿಲ್ಲಿಯಾಗಿ ಕಾಲಿನ ಪಾಲಾದವು.. ಪೈಸಾ ಪೈಸಾ ಲೆಕ್ಕ ಹಾಖಿ.. ಜನರಿಗೆ ಮೋಸ ಮಾಡಿ ಕಟ್ಟಿದ್ದ ಚಂದನೆಯ ಬೇಕರಿ ಕ್ಷಣಾರ್ಧದಲ್ಲಿ ಏನೂ ಉಳಿಲಾರದಂಗ ಆಯ್ತು.

ಇಲ್ಲಿದ್ರ ಸರಿ ಅಲ್ಲ ಅಂತ ಹೊರಗ ಹಾರಿದೆ.. ಅಲ್ಲೊಬ್ಬ “ಅಲ್ಲೆ….ಅಲ್ಲೆ…. ಅಲ್ಲೆ…. ಹೊಂಟಾದ” ಅಂತ ಕೂಗಿದ. ಸಿಕ್ಕ ಸಿಕ್ಕದ್ದನ್ನು ಕಿತ್ತಾಡಿ ಹುಡುಕಾಡುತ್ತಿದ್ದ ಜನ ಎಲ್ಲಿ ಎಲ್ಲಿ ಎಲ್ಲಿ ಅಂತ ಒಟ್ಟಾಗಿ ಕೂಗಿದ್ರ “ಅವ ಅಲ್ಲಿ ಅಲ್ಲಿ ಅಲ್ಲಿ ಅಂತ ನನ್ನ ಹಿಂದ ಬರತಾ ಇದ್ದ. ಅವನಿಂದ ಉಳಿದವರು ನನ್ನ ಪಾಲೊ ಮಾಡಕತಿದ್ರು,.. ‘ಆದ್ರೂ ಬಾಬು ಸೇಟ್ ನ ಅಂಗಡಿ, ನನ್ನಿಂದಾಗಿ ಹಾಳಾಯ್ತು ಅಂತ ದುಃಖ ಆದರೂ ಅವನು ಮಕ್ಕಳಾದ ನಾವೆಲ್ಲ ಹೋದಾಗ… ಉಂಡಿ ಸಣ್ಣ ಮಾಡಿ ಕೊಡೋದು… ಚೇಂಜ್ ಕೊಡದ ಕಳಿಸೋದು ನೆನಪಾಗಿ ಮರಳಿ ಬಂದು ಕೇಳಿದ್ರೆ ಆಗಲೆ ಕೊಟ್ಟೆನಲ್ಲ ಎಂದು ಸುಳ್ಳು ಹೇಳೊದು ಮಾಡತಿದ್ದ. ಅಪ್ಪನೂ ಅವನ ಅಂಗಡಿಯಲ್ಲಿ ಏನೂ ತರಬೇಡಿ.. ತೂಕದಲ್ಲಿ ಹೆಚ್ಚು ಕಮ್ಮಿ ಮಾಡತಾನ ಅಂತಾನೂ ಹೇಳತಿದ್ದ.. ಹಾಗೆ ಆಗಿದ್ದು ಚಲೋ ಆಯ್ತು’ ಎಂದು ಹಾರುತ್ತ ನಾನು ಮತ್ತೊಂದು ಪಕ್ಕದಲ್ಲಿದ್ದ ಕಿರಾಣಿ ಅಂಗಡಿಯಲ್ಲಿ ಹೊಕ್ಕೊಂಡೆ. ಅವನು ಬಾಬು ಸೇಟ್ ನಂಗ ಜನರಿಗೆ ಮೋಸ ಮಾಡುವ ಅಂಗಡಿಯಾವ…ಅಲ್ಲಿಯೋ ಜನ “ನನಗೆ ಲಕ್ಷ… ನನಗ ಲಕ್ಷ… ನನಗ ಲಕ್ಷ” ಅಂತ ಅಟ್ಯಾಕ ಮಾಡಿದ್ರು.. ಆ ಅಂಗಡಿಯ ಟಿವಿಯಲ್ಲಿ ಓಡೊ ಸುದ್ದಿ ಹಾಳು ಮಾಡುವ ಸುದ್ದಿ. ಅಲ್ಲಿಂದ… ಪಕ್ಕದ ದಲ್ಲಾಳಿ ಅಂಗಡಿ, ಮೊಬೈಲ್ ಶೋರೂಮಿಗೆ, ಹೊಮ್ ಅಪ್ಲೈನಸ್‌ಗೆ ನುಗ್ಗಿದಾಗಲೂ ಅದೆ… ರೀತಿ ಆದವು ಅಂಗಡಿಗಳು. ನಾಣು ದಾಳಿ ಇಟ್ಟ ಅಂಗಡಿಗಳು ನಷ್ಟ ಆದರೂ ಅವರೆಲ್ಲ ಗ್ರಾಹಕರಿಗೆ ಮೋಸ ಮಾಡುವವರೆ ಆಗಿದ್ದರು.

‍ಲೇಖಕರು avadhi

8 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading