ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.
ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.
ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ’ ಉತ್ತಮಕಾದಂಬರಿ ಪ್ರಶಸ್ತಿ ದೊರಕಿದೆ.
ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.
ಭಾಗ – 3
“ಆಯ್ತಾ, ಎಷ್ಟು ಹೊತ್ತಾಯ್ತು, ಜಾಲಿಯ ಸಂಧಿಯಲ್ಲಿ ಹೋಗಿ” ಎಂದಿತು.
“ಇನ್ನೂ ಅದಾ . . . ಸ್ವಲ್ಪ ತಡಿಬೇಕು” ಎಂದೆ.
“ಸುಸೂ ಇಷ್ಟೊತ್ತು ಮಾಡತಾರಾ?”
“ನೀನು ಮನುಷ್ಯನಾಗಿದ್ರೆ ಗೊತ್ತಾಗುತ್ತಿತ್ತು”
ಸ್ವಲ್ಪ ಬಿಟ್ಟನಂತರ “ಆಯ್ತಾ ?”ಎಂದಿತು.
“ಅಯ್ಯೊ ಮಾರಾಯ? ಏನು ಕಿರಿಕಿರಿ! ಬೇಕಿದ್ರೆ ನೀನು ಹೋಗಿಬಿಡು”ಎಂದೆ.
“ಆಯ್ತು ಆಯ್ತು” ಎಂದು ಸ್ವಲ್ಪ ಹೊತ್ತಿನ ನಂತರ “ಅರ್ಧ ಗಂಟೆ ತನ ಸುಸೂ ಮಾಡುವವರು ಜಗತ್ತಿನಲ್ಲಿ ನೀನೆ ನೋಡು” ಎಂದಿತು.
“ಥೋ ಥೋ ಥೋ. . . ಸೂಸೂ ಅಲ್ಲ ‘ದೋ’ ನಂಬರ್ ಬಂದದ” ಎಂದೆ.
ಅದು ಲೆಕ್ಕ ಹಾಕಿ “ಸುಸೂಗೆ ಅರ್ಧ ತಾಸು . . . ಈ ದೋ ನಂಬರ್ ಗೆ ಒಂದು ತಾಸು ಹಿಡಿಲಾ?” ಎಂದು ಕೂಗಿತು.
“ನೋಡು, ನಿನಗ ಕೆಲಸ ಇದ್ದರೆ ಹೋಗಿಬಿಡು. ನನ್ನದು ಲೇಟಾಗುತ್ತೆ” ಎಂದೆ ಜಾಲಿಯ ಒಳಗಿಂದ ಹೇಳಿದೆ ಅರಾಮಾಗಿ ತಣ್ಣಗೆ ಕುಳಿತುಕೊಂಡು, ಅದರಿಂದ ಮುಕ್ತಿ ಪಡೆಯಲು.
“ಮನುಷ್ಯರಂಗ ನಮ್ಮದೇನು ಕೆಲಸ, ನೀನು ಬರತನ ಕುಳಿತಿರುತೀನಿ. ಬಾ” ಎಂದಿತು.
ಇದು ನನ್ನ ಬಿಡುವ ಹಾಗೆ ಕಾಣುತ್ತಿಲ್ಲ. ಏನೂ ಮಾಡಲಿ ಎಂದುಕೊ೦ಡು ಮಾತಾಡಿದ್ರೂ ಉತ್ತರಿಸದೆ ಕುಳಿತುಬಿಡೋಣ ಎಂದು ಗಪ್ಪಗೆ ಕುಳಿತೆ.
“ಮುಗಿತಾ”
“. . .”
ಇನ್ನೂ ಎಷ್ಟೊತ್ತು”
“. . .”
“ಸಾಕಾಯ್ತಪ್ಪ ನಿನ್ನ ಕಾದು ಕಾದು”
“. . .”
“ನಾನು ಬರಲಾ”
“. . .”
ನಾನು ಬರುತೀನಿ”
“. . .”
“ನಿನಗ ಭಾಗ್ಯ ಇಲ್ಲ, ಓ.ಕೆ ಬಾಯ್”
“. . .”
ಗಾಳಿಪಟದ ಮಾತು ಮತ್ತೆ ಕೇಳಿ ಬರಲಿಲ್ಲ. ಜಾಲಿಯ ಮರದ ಪೊದೆಯನ್ನು ಸರಿಸಿ ಅಣಕಿ ಹಾಕಿ ನೋಡಿದೆ. ಪಟ ಕಾಣಲಿಲ್ಲ. ಹೊರಗೆ ಬಂದು ಸುತ್ತಲೂ ನೋಡಿದೆ. ಪಟ ಕಣ್ಣಿಗೆ ಬೀಳಲಿಲ್ಲ. ಅಂತೂ ಪಿಶಾಚಿ ತೊಲಗಿತು. ಬೇಗ ಮನೆ ತಲುಪಬೇಕು ಎಂದು ಹೊರಟೆ.
ಹತ್ತು ಹೆಜ್ಜೆ ಹೋಗಿರಲಿಲ್ಲ. ವಿಶಿಲ್ ಹಾಕುತ್ತಿರುವಂತೆ ಕೇಳಿತು. ವಿಜಿಲ್ನಲ್ಲಿ ನನ್ನ ಹೆಸರು ಬರುತ್ತಿತ್ತು. ಸುತ್ತಲೂ ನೋಡಿದೆ ಏನೂ ಕಾಣಲಿಲ್ಲ. ನನ್ನ ನಡಿಗೆ ಜೋರು ಮಾಡಿದೆ. ಮತ್ತೆ ವಿಜಿಲ್ ಹಾಕಿ ಫಿಲ್ಮ್ ನಲ್ಲಿ ಭಯದಿಂದ ಹೋಗುವಾಗ ಸಡನ್ ಆಗಿ ಮುಂದೆ ವ್ಯಕ್ತಿ ಅಥವಾ ಗೊಂಬೆ ಬಂದು ಬೆಚ್ಚಿಬೀಳಿಸುವಂತೆ ಪಟ ಸಡನ್ ಆಗಿ ಮುಂದೆ ಬಂದಿತು. ನಾನು “ಅಮ್ಮಾ . . . ದೆವ್ವಾ . . .” ಎಂದು ಚೀರಿ ಬಿದ್ದೆ.
ಮುಖಕ್ಕೆ ನೀರು ಬಿತ್ತು. ಕಣ್ಣು ತೆರೆದ ನೋಡಿದೆ. ಪಟ ತನ್ನ ಬಾಲದಿಂದ ನೀರನ್ನು ಚಿಮುಕಿಸುತ್ತಿತ್ತು. ನಾನು ಎಚ್ಚರಗೊಂಡು “ಏನೋ ಖೊಡಿ, ಎಷ್ಟು ಅಂಜಿಸಿಬಿಟ್ಟೆ” ಎಂದೆ.
“ನೀನು ಎಂತಹ ಖೋಡಿ, ಎಷ್ಟು ನನ್ನನ್ನು ಕಾಡಿಸಿಬಿಟ್ಟೆ” ಎಂದು ನಕ್ಕಿತು.
“ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲಿ ಅಂದAಗಾಯ್ತು, ನನ್ನ ಮಾತ್ರ ಬಿಡುತ್ತಿಲ್ಲ ನೀನು”
“ನಿನಗೆ ಸಹಾಯ ಮಾಡದೆ ಹೋಗಲಾರೆ ನಾನು”
“ಆಯ್ತು ಮಾಡುವಿಯಂತೆ, ಈ ಪರಿ ಅಂಜಿಸುವುದಾ?”
ಭಯದಿ೦ದ ಒದ್ದೆಯಾಗದಲ್ಲದೆ ಇನ್ನೇನು ಪ್ಯಾಂಟಲ್ಲೆ ಸುಸೂ ಮಾಡಿಕೊಂಡಿದ್ದ ನನ್ನ ಪ್ಯಾಂಟು ನೋಡಿ “ಏನು? ತಾಸುಗಟ್ಟಲೆ ಸುಸೂ ಮಾಡಿದ್ರೂ ಮತ್ತೆ ಬಂದಿದೆ” ಎಂದು ನಕ್ಕಿತು
“ನಿನ್ನಿಂದ ತಪ್ಪಿಸಿಕೊಳ್ಳಲು ‘ಸುಸೂ, ದೊ ನಂಬರ್’ ನಾಟಕ ಮಾಡಿದೆ”
ಅದು ನಗುತ್ತಾ “ಏನು? ಈಗ ಎಲ್ಲಾ ನಿರಾಳ ಆದೆಲ್ಲ. ನಾನು ಕೆಳಗಿಳಿಸಬಾರದು ಅಂತ ಅಂದುಕೊAಡಿದ್ದೆ. ಮೇಲೆ ಹೋಗಿ ಅಲ್ಲಿಂದ ಮಾಡಿದ್ರ . . . ಥೂ ಥೂ ಥೂ . . . ನೆನಸಿಕೋಬಾರದಪ್ಪ. ಯಾರ ಮ್ಯಾಲೆರ ಬಿದ್ದರ ಏನು ಕತಿ. ಛೇ. . .ಛೇ. . .…ಛೇ. . .” ಎಂದು ನಕ್ಕಿತು.
ಅದು ಆಪ್ತವಾಗಿ ಮಾತನಾಡೋದು, ತಮಾಷೆ ಮಾಡೋದನ್ನು ನೋಡಿ ಓಡಿಹೋಗಬೇಕೆನ್ನುವ, ಅದರಿಂದ ತಪ್ಪಿಸಿಕೊಳ್ಳಬೇಕೆನ್ನುವ ಆಸೆ ಕಮರಿತು. “ನಂಬಿಕೆ ಬಂತಾ ನನ್ನ ಮೇಲೆ. ನನ್ನ ಪವರ್ ಗೊತ್ತಾಯ್ತಾ. ಯಾರನ್ನಾದರೂ ಆಗಲಿ ನಾವು ಅಂಡರ್ ಎಸ್ಟೀಮೆಟ್ ಮಾಡಬಾರದು. ಈಗಲಾದರೂ ನಂಬಿಕೆ ಬಂದಿದ್ರೆ ನನ್ನ ಜೊತೆ ಬರಬಹುದು. ಇಲ್ಲಂದ್ರ ನಿನ್ನಿಷ್ಟ” ಎಂದಿತು.

ಮೊದಲು ಭಯ ಅನಿಸಿದ್ರೂ ಅದು ಅಷ್ಟು ಹೇಳೊದನ್ನು ನೋಡಿ ಆಸೆ ಚಿಗುರಿತು. ಏನೋ ಲೆಕ್ಕಾಚಾರ ಹಾಕ ತೊಡಗಿದೆ.
“ಆಯ್ತು ಆಯ್ತು ನಿನ್ನ ಲೆಕ್ಕಾಚಾರ ಚುಕ್ತಾ ಮಾಡ್ತೀನಿ ಬಾ” ಎಂದು ಕರೆದು “ನನ್ನ ಚುಂಗು ಹಿಡಿ” ಎಂದಿತು. ಮೇಲೆ ಹೋಗುತ್ತಲೆ ಆ ದಾರ ಉದ್ದವಾಗಿ ನನಗೆ ಸೋಂಟದ ಪಟ್ಟಿಯಂತೆ ಬಿಗಿಯಿತು. ಹೆಚ್ಚು ಒತ್ತಡವಾಗದೆ, ಸಿಟ್ಟಿಂಗ್ ಚೇರನಂತೆ ನನಗೆ ಅನುಭವವಾಯಿತು. ಪ್ಯಾರಾಚ್ಯೂಟ್ ನಲ್ಲಿ ಮೇಲೆ ಹಾರುತ್ತಿದ್ದಂತೆ ಅನುಭವ ಆಗ ಹತ್ತಿತು. ಮೇಲೆ ನೋಡಿದರೆ ಪಟ ನಗುತ್ತಿತ್ತು.
ಮೇಲೇ ಮೇಲೆ ಹಾರುತ್ತಿದ್ದಂತೆ ಕೆಳಗಡೆ ಕಟ್ಟಡಗಳು ಸಣ್ಣವಾಗತೊಡಗಿದವು. ಅಷ್ಟು ಅಗಲದ ನನ್ನೂರು ಕಿರುಬೆರಳಿನಷ್ಟಾಯಿತು. ನಮ್ಮೂರ ದೊಡ್ಡ ಗುಡ್ಡ ಸಣ್ಣ ಕಲ್ಲಾಯಿತು. ಫಿಲ್ಮ್ನಲ್ಲಿ, ಟಿವಿಯಲ್ಲಿ ವಿಮಾನದಿಂದ ಕೆಳಗಿನ ಪ್ರದೇಶ ಹೇಗಿರುತ್ತದೆÉಂದು ನೋಡಿದ್ದೆ. ಈಗ ಪ್ರತ್ಯಕ್ಷ ದರ್ಶನವಾಗತೊಡಗಿತು. ದ್ರೋಣ ಕ್ಯಾಮರದ ವಿಡಿಯೋದಲ್ಲೂ ಕಂಡಿದ್ದೆ. ವಿಮಾನದ ಮೇಲಿಂದ ನನ್ನೂರನ್ನು ನೋಡಬೇಕು ಎಂದುಕೊ೦ಡಿದ್ದ ಆಸೆ ಈಡೇರ ಹತ್ತಿತು. ಮೊಬೈಲ್ ಇದ್ದಿದ್ರ ದ್ರೋಣ್ ವಿಡಿಯೊದಂತೆ ಶೂಟ್ ಮಾಡಬಹುದಿತ್ತು ಅಂತ ಅನಕೊಂಡೆ. “ಅನಕೊಂತಿಯಾ ನಕೊಂತಿಯಪ್ಪ, ಮನುಷ್ಯರೂ ಉದ್ರಿ ಸಿಕ್ಕರ ಎಲ್ಲವನ್ನೂ ಕಟ್ಟಿಕೋತಾರ’ ಎಂದು ನಕ್ಕಿತು.
“ಇದು ಒಳ್ಳೆ ಪಟಪ, ಗೆಳೆಯರಿಗಿಂತ ನೀನಾ ಚಲೋ” ಎಂದೆ.
“ಆಯ್ತು ಆಯ್ತು ಪುಸಿ ಹೊಡಿಬೇಡ” ಎಂದು ನಕ್ಕಿತು. ಮೊದಲಿದ್ದ ಭಯ ಅದರ ಪ್ರೀತಿಯ ಮಾತುಗಳಿಂದ ಕಡಿಮೆ ಆಗಿತ್ತು. ಮೇಲೆ ಮೇಲೆ ಹೋದಂತೆ ಭೂಭಾಗವೆ ಸಣ್ಣದಾಗಿ ಕಾಣತೊಡಗಿತು. ಮೋಡಗಳ ರಾಶಿ ಕೆಳಗೆ ಇತ್ತು. ವಿಜ್ಞಾನ ಮೇಷ್ಟ್ರು ಹೇಳುವ ಪಾಠಗಳೆಲ್ಲ ಈಗ ಸತ್ಯ ಎನಿಸಿದವು.
“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ”ಪದ್ಯ ನೆನಪಾಗಿ ಅಳ್ಳಿಯಂತಹ ಮೋಡ ಕೆಳಗೆ ಹೋಗುತ್ತಿರುವುದನ್ನು ನೋಡಿದೆ. ಒಂದೆಡೆ ಎರಡು ಮೋಡಗಳು ಡಿಕ್ಕಿ ಹೊಡೆಯುವಾಗ ಮೇಷ್ಟ್ರು ಹೇಳುತ್ತಿದ್ದ ಸ್ಥಾಯಿ ವಿದ್ಯುತ್ನ್ನು ಮುಂದೆ ನೋಡಿದಂತಾಗಿ ಭಯದಿಂದ ತತ್ತರಿಸಿದೆ. ‘ಏನೂ ಆಗಲ್ಲಪ್ಪ ನಾವು ದೂರದಾಗಿದ್ದೀವಿ. ಎಲೆಕ್ಟ್ರೋ ಸ್ವ್ಯಾ೦ಟಿಕ್ಸ್, ಅದು ಅಪ್ಪಳಿಸೋದು ನಮಗಲ್ಲ, ಗಿಡಕ್ಕ ಅಂಬೋ ಸೆನ್ಸ್ ಇಲ್ಲನೂ ಸೈನ್ಸ್ ಸ್ಟುಡೆಂಟ್ಗೆ’ ಎಂದು ಕಾಲೆಳೆಯಿತು.
“ಆಯ್ತಪ ನಾನಿನ್ನು ಹುಡುಗ ಅಷ್ಟು ಹಂಗಸಬ್ಯಾಡ. ನಿನ್ನಷ್ಟು ತಿಳಿದವನಲ್ಲಪ” ಎಂದು ಟಾಂಗ್ ಕೊಟ್ಟೆ.
“ಹೋ . . . ಹೋ . . . ನಮಗ ತಿರುಗುಬಾಣವೊ” ಎಂದು ಪಟ ಅನ್ನುತ್ತಿರುವಾಗಲೆ ಸಮುದ್ರ ಬಂದಿತು. “ಹೇ . . . ಹೇ . . . ಸಮುದ್ರ ಬಂದಿತು. ಹತ್ರಕ ಹೋಗಬ್ಯಾಡ ನಾನು ಬಿದ್ದುಬಿಟ್ಟರೆ?” ಎಂದು ಪ್ರಶ್ನಿಸಿದೆ
“ತಾವು ಬೀಳುವಾ ಹಾಗಿದ್ದರೆ ಯಾವಾಗಲೋ ಬೀಳುತ್ತಿದ್ರಿ ಸಾಹೇಬರ?”
“ಹಾಗಾದರ ಯಾಕೆ ನೀನು ಇತ್ತ ಕರಕೊಂಡು ಬಂದಿ” ಎಂದೆ.
“ನಿನ್ನ ಮನಸ್ಸನ್ನು ಕೇಳು. ಸಮುದ್ರ ಹ್ಯಾಂಗಿರುತ್ತ ನೋಡಬೇಕು ಅಂತ ಅಂದುಕೊ೦ಡಿದ್ದು ಸುಳ್ಳಾ” ಎಂದು ಪ್ರಶ್ನಿಸಿದಾಗ. ನಾನು ಅಂದುಕೊ೦ಡಿದ್ದು ಖರೆ ಇತ್ತು. “ಹಾಗಾದರ ಅನಕೊಂಡಿದ್ದಕೆಲ್ಲ ಕಡೆ ಕರೆದುಕೊಂಡು ಹೋಗ್ತೀಯಾ?” ಎಂದು ಕೇಳಿದೆ.
“ಹೋಗ್ತಿಯಾ ಅಂತ ನನಗ ಪ್ರಶ್ನೆ ಮಾಡ್ತಿಯಾ?” ಎಂದು ನಕ್ಕಿತು.
ಕೆಲವೇ ಕ್ಷಣಗಳಲ್ಲಿ ಸಮುದ್ರದತ್ತ ಅದು ಕರೆದೊಯ್ಯಿತು . . . ಮಧ್ಯ ಹೋಗುತ್ತಿದ್ದಂತೆ ಸುತ್ತ ನಾಲ್ಕೂ ಕಡೆ ನೀರೆ ನೀರು . . . ಭೂಪ್ರದೇಶ ಇಲ್ಲದಂತಾಯಿತು. ಭಯದಿಂದ ತತ್ತರಿಸಿದೆ. ನಾನು ಏನು ಅಂದುಕೊಳ್ಳುತ್ತಿದ್ದೆನೊ ಅಲ್ಲಿಗೆ ಹೋಗುತ್ತಿದ್ದೆ. ಸಡನ್ ಆಗಿ ಕಾಡನ್ನು ನೋಡಲು ಆಸೆ ಪಟ್ಟೆ. ಕೆಲವೇ ಕ್ಷಣದಲ್ಲಿ ಪಶ್ಚಿಮ ಘಟ್ಟಕ್ಕೆ ಒಯ್ಯಿತು. ಬಯಲು ಸೀಮೆಯ ನಾನು ಆ ಕಾಡನ್ನು ನೋಡಿ ಸಂಭ್ರಮಿಸಿದೆ. ದೂರದಲ್ಲಿ ಹರಿಯುತ್ತಿದ್ದ ಜಲಪಾತಗಳ ಹತ್ತಿರ ಹೋಗಬೇಕೆನಿಸಿತು. ಅದು ಕರೆದೊಯ್ಯಿತು. ಕಾಡಿನ ಪ್ರಾಣಿಗಳ ಸಹಜ ಬದುಕನ್ನು ನೋಡಬೇಕೆನಿಸಿತು, ಪಕ್ಷಿಗಳ ಕಲರವ ಆಸ್ವಾದ ಕೇಳ ಬಯಸಬೇಕೆನಿಸಿತು. ಜಿಯೋಗ್ರಾಫಿಕಲ್ ಚಾನಲ್ನಲ್ಲಿ ಬರುವ ವಿಡೀಯೋಗಳಂತೆ ಸಮೀಪದ ದರ್ಶನ ಭಾಗ್ಯ ಮಾಡಿಸಿತು. ಮತ್ತೆ ಸಮುದ್ರ ನೋಡಬೇಕೆಂದು ಅಂದುಕೊ೦ಡಾಗ ಕರಾವಳಿಗೆ ಒಯ್ಯಿತು. ವಿಧಾನಸೌಧ ಎಂದೆ ಬೆಂಗಳೂರಿಗೆ ಕರೆದೊಯ್ಯಿತು, ಮೈಸೂರ ಅಂದರೆ ಅರಮನೆಗೆ ಕರೆದೊಯ್ಯಿತು, ಶ್ರವಣಬೆಳಗೋಳ ಎಂದೊಡನೆ ಗೊಮ್ಮಟೇಶ್ವರ, ವಾಸ್ತುಶಿಲ್ಪ ನೋಡಬೇಕು ಎಂದೋಡನೆ ಬೇಲೂರು, ಹಳೆಬೀಡು, ಹಂಪೆ, ಐಹೊಳೆ, ಪಟ್ಟದಕಲ್ಲು ಸಾಕೆನಿಸುವಷ್ಟು ದರ್ಶನ ಮಾಡಿಸಿತು. ನನಗೇನು ನೋಡಬೇಕೆನಿಸಿತ್ತೊ ಅದನ್ನೆಲ್ಲ ತೋರಿಸಿತು. ವಿದ್ಯುತ್ ತಯಾರಿಸುವ ಶಕ್ತಿನಗರ, ಚಿನ್ನ ಸಿಗುವ ಹಟ್ಟಿ, ಕಬ್ಬಿಣ, ಉಕ್ಕು, ಕಾರ್ಖಾನೆ ಏನೇನು ಅಂದು ಕೊಳ್ಳುತ್ತಿದ್ದೆನೋ ಅಲ್ಲೆಲ್ಲ ಕರೆದೊಯ್ಯಿತು. ಎಲ್ಲಾ ಜಾಗದಲ್ಲೂ ಅಡ್ಡಾಡಿಸಿತು, ಕೈಹಿಡಿದು ತೋರಿಸಿತು, ತಿನ್ನಿಸಿತು, ಕುಡಿಸಿತು. ಒಳ್ಳೆಯ ಟೂರ್ ಮಾಡಿದಂತೆ ನಾನು ಎಲ್ಲವನ್ನು ಮರೆತಿದ್ದೆ.
ಅಷ್ಟರಲ್ಲಿ ನನಗೊಂದು ಗುರುಗಳು ಹೇಳಿದ್ದ ಜಾನಪದ ಕತೆಯೊಂದು ನೆನಪಿಗೆ ಬಂದು ಭಯ ಶುರುವಾಯಿತು. ಅದು ಬೇಸಿಗೆಯ ಸಮಯ. ಬಿರುಬಿಸಿಲಿನಲ್ಲಿ ಒದ್ದಾಡುತ್ತ ಬರುತ್ತಿದ್ದ ದಣಿದ ವ್ಯಕ್ತಿ ದಾರಿಯಲ್ಲಿ ಸಿಕ್ಕ ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳಲು ಕುಳಿತು ಕೊಳ್ಳುತ್ತಾನೆ. ಅದು ಎಂತಹ ಸ್ಥಳ ಎಂದರೆ ಕೇಳಿದ್ದೆಲ್ಲಾ ಕೊಡುವ ಅಕ್ಷಯ ವೃಕ್ಷ. ಬಿಸಿಲಲ್ಲಿ ಬಳಲಿದ್ದ ಅವನು ‘ಇಲ್ಲಿ ಒಂದಿಷ್ಟು ನೀರು ಸಿಕ್ಕಿದ್ರೆ ಚೆನ್ನಾಗಿರುತ್ತಿತ್ತು’ ಎಂದುಕೊAಡ. ಹಾಗೆ ಅಂದ ಕೂಡಲೆ ಪಕ್ಕದಲ್ಲೆ ತಂಪಾದ ನೀರು ಅವನಿಗೆ ಸಿಕ್ಕಿತು. ಖುಷಿಯಿಂದ ನೀರು ಕುಡಿದು ದಾಹ ಆರಿಸಿಕೊಂಡ ನಂತರ ಹಸಿವಾಗಿತ್ತು ‘ತಂಪಾದ ಮರವಿದೆ ನೀರಡಿಕೆಯೂ ತಿರಿತು ಊಟವೂ ಜೊತೆಗಿದ್ರೆ ಚೆನ್ನಾಗಿರುತಿತ್ತು’ ಎಂದುಕೊ೦ಡಾಗ ಮರುಕ್ಷಣದಲ್ಲಿ ಸುಗ್ರಾಸ ಭೊಜನ ಪಕ್ಕದಲ್ಲೆ ಬಂದಿತು. ಸಂತೋಷದಿAದ ತಿಂದ ಅವ ‘ಮಲಗಲಿಕ್ಕೆ ಒಂದು ಮಂಚ ಇದ್ರ ಸಾಕಿತ್ತು ನೋಡು’ ಅಂದಕೊAಡ. ಕೂಡಲೆ ಮೆತ್ತನೆ ಮಂಚ ಕೂಡಾ ಕಂಡಿತು. ಅರಾಮವಾಗಿ ಮಲಗಿಕೊಂಡ, ಬೇಸಿಗೆಕಾಲ ಗಾಳಿ ಇರಲಿಲ್ಲ ‘ ಗಾಳಿ ಹಾಕಲಿಕ್ಕೆ ಯಾರಾದರೂ ಇದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅಂದಕೊAಡ ಕೂಡಲೆ ಅಲ್ಲಿ ಇಬ್ಬರು ಹೆಣ್ಣುಮಕ್ಕಳು ಗಾಳಿಹಾಕಲಿಕ್ಕೆ ರೆಡಿಯಾಗಿ ನಿಂತಿದ್ದರು. ಅವರು ಬೀಸುವ ಬೀಸಣಿಕೆ ಗಾಳಿಗೆ ತಣ್ಣಗೆ ಕಣ್ಣುಮುಚ್ಚಿ ಮಲಗಿಕೊಂಡ. ಅಲ್ಲಿಯವರೆಗೂ ಒಳ್ಳೆಯದನ್ನೆ ಆಲೋಚಿಸಿದ ಅವನಿಗೆ ಒಳ್ಳೆಯದೆ ಆಗಿತ್ತು. ಈಗ ಅವನಿಗೆ ಕೆಟ್ಟ ಯೋಚನೆ ಬಂದಿತು. ‘ಅಯ್ಯೊ! ಅಂದು ಕೊಂಡುದೆಲ್ಲ ಸಿಗುತ್ತಿವೆ ಅಂದ್ರೆ ಇಲ್ಲೆನೂ ರಾಕ್ಷಸ ಅದಾನಾ’ ಎಂದು ಕೊಂಡಾಗ. ಗಾಳಿ ಹಾಕುವವರು ರಾಕ್ಷಸರಾಗಿ ನಗ ಹತ್ತಿದರು. ಅವನು ಭಯಗೊಂಡು ‘ನನ್ನ ಕೊಂದ್ರೆ ಹ್ಯಾಂಗ?” ಎಂದು ಮನದಲ್ಲಿ ಅಂದುಕೊAಡ. ಕೊನೆಗೆ ಅವರು ಅವನು ಅಂದುಕೊ೦ಡ ಹಾಗೆ ಮಾಡಿದರು. ‘ನಾವು ಸದಾ ಧನಾತ್ಮಕವಾಗಿ ಚಿಂತೆ ಮಾಡಿದರೆ ಒಳ್ಳೆಯದೆ ಆಗುತ್ತದೆ, ಋಣಾತ್ಮಕವಾಗಿ ಚಿಂತೆ ಮಾಡಿದ್ರೆ ಕೆಟ್ಟದೆ ಆಗುತ್ತದೆ’ ಎನ್ನುವ ಸಂದೇಶ ಹೇಳುವ ಕತೆ. ಗುರುಗಳು ‘ಯದ್ಭಾವ ತದ್ಭವತಿ’ ಎಂದು ಮೇಲಿಂದ ಮೇಲೆ ಹೇಳುತ್ತಿದ್ದ ಸಂಗತಿ ಜ್ಞಾಪಕಕ್ಕೆ ಬಂದು ಒಳ್ಳೆಯದು ಆಲೋಚಿಸಬೇಕಂದ್ರೂ ಆಲದ ಮರದ ಮುಂದೆ ಹೋಗುವಾಗ ‘ಜಾಗ್ರತೆÀ, ದೆವ್ವ ಇದೆ’ ಎಂದು ಕೇಳಿದ ಸುದ್ದಿ ಆ ಗಿಡ ನೋಡಿದೊಡನೆ ಬರುವಂತೆ ಇಲ್ಲಿಯೂ ನನಗೆ ಹಾಗೆ ಆಯಿತು. ಇದು ಕೆಟ್ಟು ಮಾಡಿದ್ರೆ ಎಂದು ನಾನು ಕೆಟ್ಟದಾಗಿ ಯೋಚಿಸಿದೆ ‘ಒಂದು ವೇಳೆ ಇದು ಹಾಗೆ ಮಾಡಿಬಿಟ್ಟರೆ’ ಎಂದು.
“ನಿಮ್ಮ ಮುನುಷ್ಯರ ಹಾಗೆ ಒಳ್ಳೆಯದನ್ನು ಮಾಡಿದವರಿಗೆ ಕೆಟ್ಟದ ಮಾಡುವವ ನಾನಲ್ಲ. ನೀನೇನು ಗಾಬರಿಯಾಗಬ್ಯಾಡಪ. ಅಲ್ಲ, ಪ್ರಕೃತಿಯನ್ನ ಎಷ್ಟು ಹಾಳು ಮಾಡಿರಿ ಯೋಚಿಸಿ. ಅದೂ ಆಮ್ಲಜನಕ ಕೊಡವÀ ಗಿಡಗಳನ್ನು ಕತ್ತರಿಸಿದರೂ, ಕತ್ತರಿಸುತ್ತಿದ್ದರೂ ಅವು ನಿಲ್ಲಸಾವೇನೋ ಸೈನ್ಸ್ ಸಾಹೇಬ. ಎಷ್ಟೆ ಅನ್ಯಾಯ ಮಾಡಿದ್ರು ನಿಮಗೆ, ನಿಮ್ಮ ಮಕ್ಕಳಿಗೆ, ಮುಂದೆ ನಿಮ್ಮ ಮೊಮ್ಮಕ್ಕಳಿಗೆ, ಮರಿಮೊಮ್ಮಕ್ಕಳಿಗೂ ಹಣ್ಣು ಕಾಯಿ ಕೊಡೊದನ್ನು ನಿಲ್ಲಿಸುತ್ತಾವೆ ಅಂದುಕೊ೦ಡ್ರಾ? ನಿಮ್ಮ ಮನುಷ್ಯ ಜನ್ಮಕ್ಕಿಷ್ಟು ಬೆಂಕಿ ಹಾಕ. ನೀವು ಮಾತ್ರ ದ್ವೇಷ ಕಾರತ್ತಾ ಹೊಡೆದಾಡಿ ಸಾಯಕತಿರಿ” ಎಂದು ಬೈಯಲಿಕ್ಕೆ ಶುರು ಹಚ್ಚುಗೊಂತು.
“ತಪ್ಪಾಯ್ತಪ್ಪ ತಪ್ಪಾಯ್ತು. ಮುನುಷ್ಯರ ಮೇಲಿನ ಇಡಿ ಸಿಟ್ಟನ್ನು ನನ್ನ ಒಬ್ಬನ ಮ್ಯಾಲಿ ಹಾಕಿದರ ಹ್ಯಾಂಗ ತಡಕೊಳ್ಳಿ, ನಾನಿನ್ನು ಸಣ್ಣ ಹುಡಗ” ಎಂದೆ.
“ಈಗಿನ ಹುಡುಗರು ನಿವ್ಯಾರೂ ಸಣ್ಣ ಹುಡುಗರಲ್ಲಪ್ಪ, ಮೊಬೈಲ್ ಕೈಯಾಗ ಸಿಕ್ಕಮ್ಯಾಲೆ ದೊಡ್ಡವರಾಗಿಬಿಟ್ಟೀರಿ” ಎಂದಿತು.
‘ಮೊಬೈಲ್’ ಎಮದ ಕೂಡಲೇ ವಾಸ್ತವಕ್ಕೆ ಬಂದು “ಅಯ್ಯೋ. . . ? ಎಷ್ಟು ದಿನ ಆಯ್ತು ಮನೆ ಬಿಟ್ಟು. ಮನೆಯಲ್ಲಿ ಎಷ್ಟು ಗಾಭರಿಯಾಗಿರಲಿಕ್ಕಿಲ್ಲ. ಅಮ್ಮ ನನ್ನನ್ನು ಬಿಟ್ಟು ಊಟ ಮಾಡುವುದೇ ಇಲ್ಲ. ಒಣ ಆಸೆ ಪಟ್ಟು ಮನೆಯವರಿಗೆಲ್ಲ ತೊಂದರೆಯಲ್ಲಿ ಸಿಕ್ಕು ಹಾಕಿಕೊಳ್ಳುವ ಹಾಗೆ ಮಾಡಿದೆನಲ್ಲ ಎಂದು ಬೇಗ ಮನೆ ಮುಟ್ಟಿದರೆ ಸಾಕು. ತಪ್ಪು ಮಾಡಿದೆ ” ಎಂದುಕೊ೦ಡೆ.
“ಇಲ್ಲಿ ಯಾರೂ ಯಾರಿಗೂ ಅನಿವಾರ್ಯ ಅಲ್ಲಪ. ನಿಮ್ಮ ತಾತ ಸತ್ತಾಗ ಅಜ್ಜಿ, ನಿಮ್ಮ ಅಪ್ಪ,ಅಮ್ಮ ಎಷ್ಟು ಅತ್ರು? ನಾಲ್ಕು ದಿನ ಅಷ್ಟ ಎಲ್ಲಾ ನಡಿಯೋದಾ”
“ಅಂದ್ರಾ. . . ? ನಾನು ಅವರ ಪಾಲಿಗೆ ಸತ್ತಿನಾ?” ಎಂದು ಅಳತೊಡಗಿದೆ.
“ಅಳಬೇಡ ಕೂಸೆ. . . ಕುಡಿ ನನ್ನ . . .” ಎಂದು ನಕ್ಕಿತು.
“ನನಗ ಸಂಕಟ ನಿನಗ ಚೆಲ್ಲಾಟ, ಒಗಟೊಗಟಾಗಿ ಮಾತಾಡಬೇಡ”
“ಹಿಂಗ ನೀವು, ಕೆಲಸ ಆಗೋತನ ಅಷ್ಟ. ದಡ ಸೇರಿದಮೇಲೆ ಅಂಬಿಗನನ್ನು ನೆನೆಸದವರು” ಎಂದು ನಕ್ಕು ನೇರವಾಗಿ ಮನೆಯ ಮುಂದೆ ಇಳಿಸಿತು.
ನಾನು ‘ಮನೆಯ ಮುಂದೆ ಜನ ಸೇರಿರುತ್ತಾರೆ, ಎಲ್ಲ ಕಡೆ ನನ್ನದೇ ಮಾತು, ಪೊಲೀಸರು ಬಂದಿರುತ್ತಾರೆ. ಅಮ್ಮ ಎಷ್ಟು ನೊಂದುಕೊ೦ಡಿರುತ್ತಾಳೊ? ಅಪ್ಪ ಎಷ್ಟು ಕೋಪಗೊಂಡಿರುತ್ತಾರೋ?”ಎ೦ದು ಭಯಗೊಂಡಿದ್ದೆ. ನಾನು ಅಂದುಕೊ೦ಡ೦ತಹ ಯಾವ ವಾತಾವರಣ ಇರಲಿಲ್ಲ. ನಾನು ಮನೆಯ ಮುಂದೆ ಇಳಿದಾಗ ಶಾಲೆ ಬಿಟ್ಟ ಗೆಳೆಯರು ಮನೆಗೆ ಹೋಗುತ್ತಿದ್ದರು. ‘ಎಷ್ಟು ದಿನವಾಯಿತು ಶಾಲೆಗೆ ಬಂದಿಲ್ಲ, ಯಾಕೆ ಬಂದಿಲ್ಲ ಎಲ್ಲಿಗೆ ಹೋಗಿದ್ದೆ?’ ಎಂದು ಕೇಳುತ್ತಾರೆ ಎಂದು ಭಾವಿಸಿದ್ದೆ. ಅಂತಹದ್ದೇನು ಆಗಿರಲಿಲ್ಲ. ನಾನು ಗಾಭರಿ ಪಟ್ಟು ನಿಂತಿದ್ದರೆ “ಏನೋ ಈಗ ಹಳ್ಳದಲ್ಲಿದ್ದಿ, ಎಷ್ಟು ಬೇಗ ಬಂದಿ” ಎಂದು ಕಿರಣ ಕೇಳಿದ. ಸಮಯ ನೋಡಿದೆ ಅದೆ ಮನೆಗೆ ಬರುವ ಸಮಯವೇ ಆಗಿತ್ತು.
“ಅರೆ . . . ಇದು ಹೇಗೆ ಸಾಧ್ಯ? ನಾನು ಇದುವರೆಗೂ ಮೇಲೆ ಹಾರಿದ್ದು, ಎತ್ತೆತ್ತಲೋ ಸುತ್ತಿದ್ದು, ಕಂಡಿದ್ದು ಕನಸಾ . . . ?” ಎಂದೆ.
ಅದು ನಕ್ಕಿತು.
“ನಿಜ ಹೇಳು” ಎಂದೆ.
ಮತ್ತೆ ನಕ್ಕಿತು.
“ನನಗೆ ಹುಚ್ಚು ಹಿಡಿಸುತ್ತಿಯಪ್ಪಾ?” ಎಂದೆ.
ಅದು ಮತ್ತೆ ನಕ್ಕಿತು.
“ದೊಡ್ಡವನಿದ್ದಿಯಪ್ಪ, ತ್ಯಾಂಕ್ಯೂ ಬರಲಾ” ಎಂದೆ
“ನನ್ನನ್ನು ಮನೆಯೊಳಗ ಕರೆದೊಯ್ಯಲ್ವಾ?”ಎಂದಿತು..
“ನೀನೇನು ಸಾಮಾನ್ಯ ಗಾಳಿಪಟವಲ್ಲಪ” ಎಂದೆ.
“ಸಾಮಾನ್ಯ ಎಂದರೆ ಸಾಮಾನ್ಯ, ಅಸಮಾನ್ಯ ಎಂದರೆ ಅಸಮಾನ್ಯ ದೆಟ್ ಈಜ್ ಐ! ಆಯ್ ಆಮ್ ಮಿಸ್ಟರ್ ರೆಡ್ ಕೈಟ್” ಎಂದಿತು.
“ಓ . . . ವಾಟ್ ಎ ಸ್ವೀಟ್ ನೇಮ್. ನಿನಗೂ ಹೆಸರು ಇದೆಯಾ?”
“ನಿಮಗಷ್ಟೆ ಇದೆ ಅಂತ ತಿಳಿದುಕೊಂಡಿರೋ?”
“ಮತ್ತೆ ನೀನು ನನಗೆ ಹೇಳಲಿಲ್ಲ?”
“ಮತ್ತೆ ನೀನು ನನಗೆ ಕೇಳಲಿಲ್ಲಾ” ಎಂದು ತಮಾಷೆ ಮಾಡಿತು.
“ತ್ಯಾಂಕ್ಯೂ ಮಿಸ್ಟರ್ ರೆಡ್ ಕೈಟ್”
“ಇಟ್ಸ್ ಓ.ಕೆ. ನನ್ನನ್ನು ಉಳಿಸಿರುವೆ ನಿನಗೆ ನಾನು ಸಹಾಯ ಮಾಡುವೆ”
“ಇದುವರೆಗೆ ನಿನ್ನ ಮಾಯಾಜಾಲದಲ್ಲಿ ಏನೆಲ್ಲಾ ತೋರಿಸಿದೆ. ಸಹಾಯ ಮಾಡಿದೆಯಲ್ಲ”
“ಇದು ಸಹಾಯ ಅಲ್ಲ, ನೀನು ಅಂದುಕೊAಡೆ ನಾನು ತೋರಿಸಿದೆ. ಅಷ್ಟೆ”
“ಆಯ್ತು ಬಾ” ಎಂದು ಮನೆಯೊಳಗೆ ಗಾಳಿಪಟ ಹಿಡಿದುಕೊಂಡು ಹೋದೆ.
ಹಾಲ್ ನಲ್ಲಿ ಇದ್ದ ಅಪ್ಪ “ಏನೋ ಹೊಸ ಗಾಳಿಪಟ ಮಾಡಿದಿ. ಸೋ ಬ್ಯೂಟಿಫುಲ್. ತಾ ನೋಡೋಣ” ಎಂದು ಕಸಿದುಕೊಂಡರು.
ನನಗೆ ಭಯ ಆಯಿತು. ಎಲ್ಲಿ ಅದರ ರಹಸ್ಯ ತಿಳಿದು ಬಿಡುವರೇನೋ ಎಂದು.
“ಚೆನ್ನಾಗಿದೆ. ನೀನು ಮಾಡಿದ್ದಂತೂ ಅಲ್ಲ . . . ದುಡ್ಡು ಕೊಟ್ಟು ತಂದಿಯಾ . . .? ಒಳ್ಳೆಯದೆ ಆಯ್ತು ಬಿಡು. ಹೇಗಾದರೂ ನಾಳೆ ಗಾಳಿ ಪಟ ಸ್ಪರ್ಧೆ ಇದೆ. ಇದನ್ನೆ ಹಾರಿಸು” ಎಂದರು.
‘ಹೌದಲ್ಲ ಮರೆತೆ ಹೋಗಿತ್ತು. ಎಂತಹ ಪೆದ್ದು ನಾನು. ಗೆಳೆಯರೊಂದಿಗೆ ಜಗಳವಾಡಿ ಮರೆತು ಬಿಟ್ಟಿದ್ದೆ. ಎಂತಹಾ ಯೋಗಾಯೋಗ. ನಾಳೆ ಗಾಳಿಪಟ ಸ್ಪರ್ಧೆ ಇರುವುದಕ್ಕೂ ಇವತ್ತು ಮಿ.ರೆಡ್ ಕೈಟ್ ಸಿಕ್ಕಿರುವುದಕ್ಕು ಎಂತಹ ಕಾಕತಾಳಿಯ ಎಂದುಕೊ೦ಡು “ಹೌದಪ್ಪ ಅದಕ್ಕೆ ತಂದೆ” ಎಂದು ಅಪ್ಪನಿಂದ ಗಾಳಿಪಟ ಹಿಡಿದು ಒಳ ಓಡಿ ಹೋದೆ. “ನಾನು ಗಾಳಿಪಟನ ನೋಡುತ್ತೇನೆ ನಿಲ್ಲೊ” ಎನ್ನುವ ಅಮ್ಮನ ಮಾತನ್ನು ಕೇಳಿಸಿಕೊಳ್ಳದೆ.
ನನ್ನ ರೂಮಿಗೆ ಹೋದೊಡನೆ ಪಟವನ್ನು ಸೂಕ್ಷö್ಮವಾಗಿ ಪರಿಶೀಲಿಸಿದೆ. ಅದು ಸ್ಮೈಲ್ ಕೊಟ್ಟಿತು. ಮಿ.ಕೈಟ್ ಅಪ್ಪನಿಗೇನು ಗೊತ್ತಾಗಲಿಲ್ಲ ಅಲ್ಲ” ಎಂದೆ.
“ನೋ ಚಾನ್ಸ್ . . . ಐ ಆಮ್ ಟಾಕ್ ವಿತ್ ಯೂ ಓನ್ಲಿ” ಎಂದು ನಕ್ಕಿತು.
“ಒಳ್ಳೆ ಅಲ್ಲಾವುದ್ದೀನನ ಲ್ಯಾಂಪ್ ತರಹ ಇದ್ದೀಯಲ್ಲ. ಅಲ್ಲಿ ದೀಪ ಉಜ್ಜಿದೊಡನೆ ಭೂತ ಬರುತ್ತಿತ್ತು ಇಲ್ಲಿ ನೀನು ಮಾತನಾಡುತ್ತಿದ್ದೀಯಾ?” ಎಂದೆ
“ಮತ್ತೆ ಮತ್ತೆ ರಾಕ್ಷಸ, ಭೂತ ಎಂದು ನನ್ನ ಮರ್ಯಾದೆ ತೆಗೆಯುತ್ತಿದ್ದಿಯಾ?” ಎಂದು ಕೈಟ್ ಮುಖ ಸೊಟ್ಟ ಮಾಡಿಕೊಂಡಿತು.
“ಹೊ. . . ಹೊ . . . ಮಿಸ್ಟರ್ ರೆಡ್ ಕೈಟ್ ನವರಿಗೂ ಕೋಪ ಬರುತ್ತದೋ” ಎಂದು ನಕ್ಕೆ.
“ಎಲ್ಲ ನಿನ್ನ ಸಹವಾಸ ದೋಷ” ಎಂದು ನಕ್ಕಿತು.
“ಹೌದು . . . ಅಪ್ಪಾ ಹೇಳಿದ್ದು ಕೇಳಿಸಿಕೊಂಡೆಯಲ್ಲ”
“ಹಾ೦ . . . ಕೇಳಿಸಿಕೊಂಡೆ. ನಾವು ಸ್ಪರ್ಧೆ ಮಾಡುತ್ತಿರುತ್ತೇವೆ”
ನನಗೂ ಕುತೂಹಲ ಉಕ್ಕಿ “ಏಲ್ಲಿ . . . ಯಾರೊಂದಿಗೆ . . . “ ಎಂದು ಪ್ರಶ್ನೆ ಮಾಡಿದೆ.
“ಸ್ವಾರಿ ಏನೊ ಬಾಯಿ ತಪ್ಪಿ ಬಂತು. ಈಟ್ ಇಸ್ ಔಟ್ ಆಫ್ ಸೆಲೆಬಸ್ ಆಫ್ ಯುವರ್ ಚಾಪ್ಟರ್” ಎಂದಿತು ಗಂಭಿರವಾಗಿ. ಅದು ಗಂಭಿರವಾಗಿ ಹೇಳಿದ್ದರಿಂದ ನಾನು ಕೇಳಲು ಹೋಗಲಿಲ್ಲ
“ಹೌದು ಕಳೆದ ಐದು ವರ್ಷದಿಂದ ನಾನು ಭಾಗವಹಿಸುತ್ತಿದ್ದೇನೆ. ಎಷ್ಟೆ ಗೆಲ್ಲಲು ಪ್ರಯತ್ನ ಮಾಡಿದರೂ ಬರಿ ಅನ್ಯಾಯ ಮಾಡುತ್ತಾರೆ. ಗೆಲ್ಲಲು ಆಗುತ್ತಿಲ್ಲ” ಎಂದೆ.
“ಈಗ ನಾನು ಇದ್ದಿನಲ್ಲ” ಎಂದು ನಕ್ಕಿತು.
“ಇಲ್ಲ ಮಿ.ಕೈಟ್ ಅವರು ಕೆಟ್ಟವರು. ತಾವೆ ಗೆಲ್ಲಬೇಕೆಂದು ಫಿಲ್ಮ್ ನಲ್ಲಿ ತೋರಸ್ತಾರಲ್ಲ, ಹಾಗೆಲ್ಲಾ ಮೋಸ ಮಾಡುತ್ತಾರೆ”
“ನನಗೇ ಹೇಗೆ ಗೊತ್ತಾಗಬೇಕು? ನಾನೇನು ಸಿನೇಮಾ ನೋಡಿದ್ದೀನಾ?”
“ಭಾರಿ ಕಿಲಾಡಿ ಇದ್ದಿ ಮಿ.ರೆಡ್ ಕೈಟ್. ನಾನು ನಂಬಲ್ಲ. ನಿನಗೆ ಗೊತ್ತಿರದ ವಿಷಯನೇ ಇಲ್ಲ. ನಾಟಕ ಮಾಡ್ತೀಯಾ? ಆದರೂ ಈ ಸಾರಿ ಮತ್ತೆ ಸೋಲುವೇನು ಎನ್ನುವ ಭಯ”
“ಆಶಾಭಾವ ಇರಬೇಕು, ಗೆದ್ದೆ ಗೆಲ್ಲುವೆನು ಒಂದು ದಿನ ಎನ್ನುವ. ಈ ಸಾರಿ ಅವೆಲ್ಲ ನಡಿಯೋದಿಲ್ಲ”
“ಇಲ್ಲಪ ಕೆಟ್ಟವರು ಇದ್ದಾರೆ. ಗಾಳಿಪಟ ಎಲ್ಲರಿಗಿಂತಲೂ ಮೇಲೆ ಹೋಗುವಂತೆ ಇದ್ದರೆ ದಾರ ಕಟ್ ಮಾಡಿ ಬೀಳುವ ಹಾಗೆ ಮಾಡುತ್ತಾರೆ”
“ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲವೆ”
“ಇದೆ, ಆದರೆ ಮನುಷ್ಯರು ಅಷ್ಟು ಒಳ್ಳೆಯವರಲ್ಲ”
“ಐ ನೋ . . . ನೀನು ಹಾಂಗಿಲ್ಲವಲ್ಲ”
“ಸರಿ ರೆಡಿಯಾಗು ನಾಳೆ ಹಾರಲು” ಎಂದೆ
ಓ.ಕೆ ನೀನು ಊಟಗೀಟ ಮಾಡು. ನಾನು ರೆಸ್ಟ್ ಮಾಡುತೀನಿ ಎಂದಿತು.
। ನಾಳೆಗೆ ।






0 Comments