ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.

ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.

ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ‌’ ಉತ್ತಮ‌ಕಾದಂಬರಿ ಪ್ರಶಸ್ತಿ ದೊರಕಿದೆ.

ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.

ಭಾಗ – ೧

ಅಂದು ಗೆಳೆಯರೆಲ್ಲರೂ ಕೂಡಿ ಸಣ್ಣ ವಿಷಯಕ್ಕೆ ಅವಮಾನ ಮಾಡಿದ್ದರಿಂದ ಮನಸ್ಸು ಬೇಜಾರಾಗಿ ಒಬ್ಬನೇ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಬೇಜಾರು ಕಳೆಯಲು ಮುಖ್ಯ ರಸ್ತೆಯ ಬದಲು ಹಳ್ಳದ ದಾರಿಯಿಂದ ಹೋಗೋಣ ಎಂದು ಹೊರಟೆ. ಹಳ್ಳ ಎಂದರೆ ನನಗೆ ಇಷ್ಟದ ಸ್ಥಳ. ಬಟ್ಟೆ ಒಗೆಯಲು ಹೋಗುತ್ತಿದ್ದ ಅಮ್ಮನೊಂದಿಗೆ ಆಗಾಗ ಹೋಗುತ್ತಿದ್ದೆ. ನೀರಿನಲ್ಲಿ, ಉಸುಕಿನಲ್ಲಿ ಆಟವಾಡುತ್ತಿದ್ದೆ.

ಆದರೆ ಅಂದು ಹಳ್ಳ ನಿರ್ಜನವಾಗಿತ್ತು. ಯಾಕೆ ಅಂತ ಗೊತ್ತಾಗಲಿಲ್ಲ. ಅಲ್ಲಿ ಹೋದ ಕೂಡಲೇ ಹಳ್ಳದ ದಾರಿಯಲ್ಲಿ ಚಿಟ್ಟೆಗಳ ಹಾರುತ್ತಿದ್ದನ್ನು ನೋಡಿದೆ. ಖುಷಿಯಾಯಿತು. ಎಲ್ಲಾ ಮರೆತೆ. ಗೆಳೆಯರ ಹಾಗೆ ಅಂಬರಿ ತಪ್ಪಲು ತೆಗೆದಕೊಂಡು ಅವುಗಳನ್ನು ಸಾಯಿಸುವ ಕೆಟ್ಟ ಕೆಲಸ ಮಾಡಲಿಲ್ಲ. ದೂರದಿಂದ ಬಗೆಬಗೆಯ ಚಿಟ್ಟೆಗಳ ಕಂಡು ಸಂಭ್ರಮಿಸಿದೆ. ಚಿಟ್ಟೆಯ ಬಗೆಗಿನ ಹಾಡುಗಳನ್ನು ಹಾಡಿ ಅವುಗಳ ಹಿಂದೆ ಓಡಾಡಿದೆ. ಮುಳ್ಳಿನ ಗಿಡಕ್ಕೆ ಸಿಕ್ಕಿಕೊಂಡಿದ್ದ ಒಂದು ಚಂದದ ಚಿಟ್ಟೆಯನ್ನು ನಿಧಾನವಾಗಿ ಅದರಿಂದ ಬಿಡಿಸಿ, ಸುಧಾರಿಸಿಕೊಳ್ಳಲು ಗಿಡದ ಮೇಲೆ ಇಟ್ಟೆ. ಅದು ಕೃತಜ್ಞತೆಯ ನೋಟ ಬೀರಿದಂತೆ ಮುಖ ಎತ್ತಿ ನೋಡಿತು.

ಅಲ್ಲೆ ಮುಂದೆ ಇದ್ದ ಪಾರ್ಥೇನಿಯಂ ಗಿಡದ ಎಲೆ ಮರಿದು, ತೊಟ್ಟಿಕ್ಕುತ್ತಿದ್ದ ಅದರ ರಸವನ್ನು ಪಿನ್‌ನ ಮಧ್ಯದ ದುಂಡಗಿನ ಭಾಗಕ್ಕೆ ಹಚ್ಚಿ ಅದನ್ನು ‘ಉಫ್’ ಎಂದು ಊದಿದೆ. ಸಾಬೂನಿನ ನೀರಿನ ನೊರೆ ಗುಳ್ಳೆಗಳಂತೆ ಆ ರಸವೂ ಊದಿದಾಗ ಗುಳ್ಳೆಗಳಾಗಿ ಹಾರುತ್ತಿದ್ದನ್ನು ನೋಡಿ ಆನಂದಪಟ್ಟೆ. ಮತ್ತೆ ಮೇಲೆ ಮೇಲಕ್ಕೆ ಹಾರಿಸಿದೆ. ಮೇಲಿಂದ ಮೇಲೆ ಊದಿ ಊದಿ ನೂರಾರು ಗುಳ್ಳೆಗಳನ್ನು ಎಬ್ಬಿಸಿ, ಹಾರುವುದನ್ನು ನೋಡಿ, ನೀರಿನಲ್ಲಿ ಹರಿದುಕೊಂಡು ಹೋಗುವುದನ್ನು ನೋಡಿ ಸಂಭ್ರಮಿಸಿದೆ.

ನಂತರ ಹಳ್ಳದ ನೀರಿನಲ್ಲಿ ಆಡುತ್ತಾ, ಕಲ್ಲನ್ನು ನೀರಲ್ಲಿ ಎಸೆಯುತ್ತಾ ಬರುತ್ತಿದ್ದೆ. ಈ ಸಾರಿ ಗೆಳೆಯರೊಂದಿಗೆ ನೀರಲ್ಲಿ ಕಲ್ಲನ್ನು ಪುಟಿಸುವ ಪೈಪೋಟಿಯಲ್ಲಿ ನಾನೇ ಮೊದಲಾಗಬೇಕು ಎಂದು ಪ್ರಯತ್ನ ನಡೆಸಿದೆ. ಮೊದಲು ನೀರಿಗೆ ಸಮನಾಂತರವಾಗಿ ಕಲ್ಲು ಒಗೆದರೆ ನೀರಿನಲ್ಲಿ ‘ಡುಬುಕ್’ ಎಂದು ಮುಳಗುತ್ತಿತ್ತು. ಇತ್ತೀಚಿಗೆ ಎರಡು ಸಾರಿ ನೀರಿನ ಮೇಲೆ ಪುಟಿಸುವ ತಂತ್ರ ಕಂಡುಕೊAಡಿದ್ದೆ. ಈ ಸಾರಿ ಇಪ್ಪತ್ತು ಮೂವತ್ತು ಸಾರಿ ನಿರಂತರ ಎಸೆತದ ಪ್ರಯತ್ನದ ನಂತರ ನೀರಿನ ಮೇಲೆ ಆರು ಬಾರಿ ಪುಟಿಸುವ ಯಶಸ್ಸನ್ನು ಪಡೆದೆ. ಅದು ನನಗೆ ಹೆಚ್ಚು ಖುಷಿಕೊಟ್ಟಿತು. ಈ ಸಾರಿ ಹಳ್ಳಕ್ಕೆ ಅಥವಾ ಕೆರೆ ಕಡೆಗೆ ಹೋದಾಗ ನನ್ನ ಕೌಶಲ್ಯ ತೋರಿಸಬೇಕು ಅಂದುಕೊ೦ಡೆ.

ಆಮೇಲೆ ನುಣುಪಾದ ಉಸುಕು ನೋಡಿ ಅದರಲ್ಲಿ ಆಡುವ ಆಸೆಯಾಯಿತು. ಮೊದಲು ಗುಬ್ಬಿಯ ಮನೆ ಕಟ್ಟಿದೆ. ಬಾಗಿಲು ಕಿಡಕಿ ಹೊಗೆಗಿಂಡಿ ಮಾಡಿ ಸಂಭ್ರಮಿಸಿದೆ. ರಸ್ತೆ ಮಾಡಿದ. ಜಾಲಿ, ಬೇವಿನ ಮರದ ಕೊಲ್ಲಿ ಮುರಿದು ಗಿಡ ನೆಡೆಸಿದೆ. ಹಳ್ಳದ ಬದಿಯಲ್ಲಿ ಬೆಳೆೆದಿದ್ದ ತರತರಹದ ಹೂಗಳಿಂದ ಸಿಂಗರಿಸಿದೆ. ವರತೆ ತೋಡಿದೆ. ಅದರಲ್ಲಿ ನೀರು ಬಂದವು. ಅದನ್ನೆ ಪುಟ್ಟ ಸ್ವಿಮಿಂಗ್ ಫೂಲ್ ಮಾಡಿದೆ. ಮೋಜಿಗೆ ಹಳ್ಳದ ಮೀನನ್ನು ಜೋಪಾನವಾಗಿ ಹಿಡಿದು ವರತೆಯಲ್ಲಿ ಬಿಟ್ಟೆ. ಹಿಡಿದಾಗ ಉಸಿರಾಟ ತೊಂದರೆ ಅನುಭವಿಸುತ್ತಿದ್ದ ಮೀನು, ವರತೆಯ ಸ್ವಿಮಿಂಗ್ ಫೂಲ್‌ನಲ್ಲಿ ಬಿಟ್ಟೊಡನೆ ಬದುಕಿದೆ ಎಂದು ಸುಧಾರಿಸಿಕೊಂಡು ಅತ್ತ ಇತ್ತ ಓಡಾಡತೊಡಗಿತು. ನನ್ನ ಬ್ಯಾಗ್ ಎನ್ನುವ ಮ್ಯೂಜಿಯಂನಲ್ಲಿ ಅದಕ್ಕೆ ಹಾಕಲು ಆಹಾರ ಏನಾದರೂ ಇವೆಯೆ ಎಂದು ನೋಡಿದೆ. ಶಾಲಾ ಬ್ಯಾಗ್‌ನ ಪಾಕೇಟ್‌ನ ಮೂಲೆಯಲ್ಲಿ ಒಂದಿಷ್ಟು ಮಂಡಾಳು, ಶೇಂಗಾ ಚಾಕಲೇಟ್, ಬೆಲ್ಲ ಸಿಕ್ಕವು. ನಾನು ಒಂದೊAದಾಗಿ ಅದಕ್ಕೆ ಹಾಕ ತೊಡಗಿದೆ. ಮೀನು ಹಸಿದಿತ್ತೇನೋ ನಿಧಾನವಾಗಿ ಅದು ಹಾಕಿದ್ದನ್ನು ‘ಗಬಕ್’ ಎಂದು ಬಾಯಲ್ಲಿ ಹಿಡಿದು ನುಂಗ ತೊಡಗಿತು. ನಾನು ಒಂದೊAದೆ ಕಾಳು, ತುಣುಕು ಹಾಕಿದಂತೆ ಅದು ‘ಗಬಕ್’ ಎಂದು ಹಿಡಿದು ವರತೆಯಲ್ಲಿ ಡುಬುಕಿ ಹಾಕುತ್ತಿತ್ತು. ನಂತರ ವರತೆಯಿಂದ ಪಕ್ಕದಲ್ಲಿಯೆ ಹರಿಯುತ್ತಿದ್ದ ಹಳ್ಳದ ನೀರಿಗೆ ದಾರಿ ಮಾಡಿ ಮೀನು ಸ್ವತಂತ್ರವಾಗಿ ಹೋಗಲು ದಾರಿಮಾಡಿದೆ. ನಾನು ಮಾಡಿದ ದಾರಯಲ್ಲಿ ಬರುತ್ತಿದ್ದ ನೀರಿನೊಂದಿಗೆ ಹಳ್ಳದಲ್ಲಿ ಹರಿದು ಹೋಯಿತು.

ನಂತರ ಉಸುಕಿನಲ್ಲಿ ಮೇಷ್ಟ್ರು ಹೇಳಿದ್ದ ಲೆಕ್ಕ ಬಿಡಿಸಲು ಹೋದೆ. ಬರಲಿಲ್ಲ, ಎಲ್ಲವನ್ನೂ ಅಳುಕಿಸಿದೆ. ಡ್ರಾಯಿಂಗ್ ಮೇಷ್ಟುç ಹೇಳಿಕೊಟ್ಟಿದ್ದ ಕೋಳಿ ಚಿತ್ರ ಇಳಿಸಿದೆ. ಚೆನ್ನಾಗಿ ಬಂತು. ಭಾರತ ನಕಾಶೆ ಇಳಿಸಿದೆ, ಅದರಲ್ಲಿ ಕರ್ನಾಟಕ ನಕಾಶೆ, ಅದರಲ್ಲಿ ರಾಯಚೂರು ಜಿಲ್ಲೆ ಇಳಿಸಿ ನಮ್ಮೂರನ್ನು ಗುರುತಿಸದೆ. ನಕಾಶೆ ಚೆನ್ನಾಗಿ ಬಂದದ್ದು ನೋಡಿ ಈ ವರ್ಷ ನಕಾಶೆಯಲ್ಲಿ ಪೂರ್ಣ ಅಂಕ ಗ್ಯಾರೆಂಟಿ ಅಂದುಕೊAಡೆ. ವಿಜ್ಞಾನದಲ್ಲಿ ಎಲ್ಲಾ ಚಿತ್ರ ಬಂದರೂ ಹೃದಯದ ಚಿತ್ರ ಬರೆಯಲು ಒದ್ದಾಡುತ್ತಿದ್ದೆ. ಉಸುಕಿನಲ್ಲಿ ಚೆಂದದ ಚಿತ್ರ ಇಳಿಸಲು ಸಾಧ್ಯವಾಗುತ್ತಿರುವುದನ್ನು ನೋಡಿ ಅಂದು ಚಿತ್ರಕಲಾ ಶಿಕ್ಷಕರು ಹೇಳಿದ ಸರಳ ವಿಧಾನದಂತೆ ಉಸುಕಿನ ಮೇಲೆ ಪ್ರಯೋಗ ಮಾಡಿದೆ. ನನಗೆ ನಂಬಲಾಗಲಿಲ್ಲ ಅಷ್ಟು ಸೊಗಸಾಗಿ ಬಂದಿತ್ತು. ಅದನ್ನು ಸೆರೆಹಿಡಿಯೋಣ ಎಂದರೆ ಮೊಬೈಲ್ ಇರಲಿಲ್ಲ. ಮನೆಗೆ ಹೋಗಿ ತರೋಣ ಅಂದರು ಮನೆ ಬಹಳ ದೂರ ಇತ್ತು. ಮೊಬೈಲ್ ಚಂದದ ವಸ್ತು. ಯಾರೂ ನೋಡಿದ್ರೂ ಮೊಬೈಲ್ ಮುಟ್ಟಬೇಡಿ, ನೋಡಬೇಡಿ, ಹಿಡಿಯಬೇಡಿ ಅಂತ ಹೇಳೊರೆ. ಆದರೆ ಹೇಳೊರೆಲ್ಲ ಮೊಬೈಲ್ ಹಿಡಿದೇ ಕುಳಿತಿರುತ್ತಾರೆ. ಪಿ.ಟಿ ಸರ್ ‘ಗುಟುಕಾ ಹಾಕಿಕೋಬಾರದೋ, ಸೀಗರೇಟು ಸೇದಬಾರದೋ” ಎಂದು ಸ್ಟಿçಕ್ ಆಗಿ ಹೇಳಿ ನಮ್ಮಿಂದನೇ ಸಿಗರೇಟು ಗುಟುಕಾ ತರಿಸುವ ಹಾಗೆ. ಯಾರೋ ಮೊಬೈಲ್ ನೋಡಿ ಕೆಟ್ಟಿದ್ದಾರೆ, ಫೋಬಿಯಾಕ್ಕೆ ಒಳಗಾಗಿದ್ದಾರೆ ಎಂದರೆ ಎಲ್ಲರೂ ಹಾಗೆ ಆಗುತ್ತಾರಾ? ಇಂತಹ ಆಲೋಚನೆ ಆ ವಯಸ್ಸು ಅನುಭವಿಸಿ ಬಂದವರಾಗಿ ಯಾಕೆ ಮಾಡಲ್ಲವೇನೋ? ಎಂದು ಅಂದುಕೊಳ್ಳುತ್ತಾ ನಾನು ರಚಿಸಿದ ಚಿತ್ರವನ್ನು ಕಣ್ಣಿನ ಕ್ಯಾಮಾರಾದಲ್ಲಿ ಸೆರೆ ಹಿಡಿದು ಕೊಳ್ಳುತ್ತಿದ್ದೆ. ಉಸುಕಿನಾಟದಲ್ಲಿ ಎಲ್ಲವನ್ನು ಮರೆತಿದ್ದೆ.

ಅಷ್ಟರಲ್ಲಿ ‘ಪಟಪಟಪಟ’ ಬಡಿದುಕೊಳ್ಳುವ ಧ್ವನಿ ಬಂದಿತು. ಯಾರೋ ಬಟ್ಟೆ ಒಗೆದು ಒಣಗಿಸಲು ಗಾಳಿಗೆ ಹಿಡಿದಿರುವರು ಎಂದುಕೊ೦ಡು ಸುಮ್ಮನಾದೆ. ಮತ್ತೆ ಅದೇ ಧ್ವನಿ ಜೋರಾಯಿತು. ಸುತ್ತಲೂ ನೋಡಿದೆ. ಏನೂ ಕಾಣಲಿಲ್ಲ. ಮತ್ತೆ ಮತ್ತೆ ಅದೇ ಧ್ವನಿ ಮರುಕಳಿಸಿತು. ಸೂಕ್ಷö್ಮವಾಗಿ ಸುತ್ತಲೂ ನೋಡಿದಾಗ ಜಾಲಿಗಿಡದಲ್ಲಿ ಗಾಳಿಪಟವೊಂದು ಸಿಕ್ಕಿ ಬಿದ್ದಿತ್ತು. ಅದು ಗಾಳಿಗೆ ಹಾರುತ್ತಿತ್ತು. ಪಟವನ್ನು ಹರಿಯುವೆ ಎನ್ನುವಂತೆ ಮುಳ್ಳು ಅದರ ಮೇಲೆ ಬೀಳಲು ಪ್ರಯತ್ನಿಸುತ್ತಿತ್ತು. ಪಟ ಎಂದರೆ ಪಂಚಪ್ರಾಣವಾದ ನನಗೆ ಆ ಕೆಂಪುಬಣ್ಣದ ಗಾಳಿಪಟ ನನ್ನನ್ನು ಆಕರ್ಷಿಸಿತು. ಪಟ ಹರಿಯದೆ ಇದ್ದುದರಿಂದ ನೋಡಲು ವಿಶೇಷವಾಗಿದ್ದರಿಂದ ಅದನ್ನು ತೆಗೆದುಕೊಂಡು ಹೋಗಬೇಕೆನಿಸಿತು. ‘ಪಾಪ! ಯಾರ ಪಟವೋ ಏನೋ? ಹಾರಿಸುವವರು ಯಾರಾದರು ಇದ್ದಾರೇನು? ಬಿಡಿಸಿ, ಅವರಿಗೆ ಕೊಟ್ಟರಾಯಿತು’ ಎಂದು ಸುತ್ತಲೂ ನೋಡಿದೆ. ಯಾರೂ ಇರಲಿಲ್ಲ. ದಾರ ಕಟ್ಟಾಗಿ ಇಲ್ಲಿಗೆ ಬಂದು ಬಿದ್ದಿರಿರಬಹುದು ಎಂದು ಭಾವಿಸಿ ಗಾಳಿಪಟದ ಮೇಲಿನ ಆಸೆಗೆ ಮುಳ್ಳುಗಳನ್ನು ಲೆಕ್ಕಿಸದೆ ನಿಧಾನ ದಾರಿಮಾಡಿಕೊಂಡು ಹೋಗಿ. ಹರಿಯದಂತೆ ಸಿಕ್ಕಿಕೊಂಡಿದ್ದ ಗಾಳಿಪಟವನ್ನು ಬಿಡಿಸಿಕೊಂಡು ಕೈಯಲ್ಲಿ ಹಿಡಿದುಕೊಂಡು ನೋಡಿದೆ, ವಿಶೇಷವಾಗಿತ್ತು. ಎಲ್ಲಿಯೂ ಕೂಡಾ ಹರಿದಿರಲಿಲ್ಲ. ಇಲ್ಲಿಗೆ ಬಂದದ್ದು ಒಳ್ಳೆಯದೆ ಆಯಿತೆಂದು ಅದನ್ನು ಹಿಡಿದು ನೀರನ್ನು ನಿಧಾನವಾಗಿ ದಾಟುತ್ತಾ ಖುಷಿಯಿಂದ ಹೊರಟೆ.

ಸ್ವಲ್ಪ ದೂರ ಹೋಗಿರಲಿಲ ್ಲ“ತ್ಯಾಂಕ್ಯೂ ದೋಸ್ತ . . .” ಎಂಬ ಧ್ವನಿಬಂತು.
ಕೂಗಿದವರು ಯಾರು ಹಿಂದೆ ಮುಂದೆ ನೋಡಿದೆ, ಯಾರೂ ಇರಲಿಲ್ಲ.
ಮುಂದೆ ನಡೆದೆ “ತ್ಯಾಂಕ್ಯೂ ಫ್ರೆಂಡ್ . . .” ಎನ್ನುವ ಧ್ವನಿ ಮತ್ತೆ ಕೇಳಿತು.
ಮತ್ತೊಮ್ಮೆ ಮೇಲೆ ಕೆಳಗೆ ನೋಡಿದೆ, ಸುತ್ತಲೂ ತಿರುಗಿ ತಿರುಗಿ ನೋಡಿದೆ. ಯಾರೂ ಇರಲಿಲ್ಲ.

ಪಟವೇ ಹಾರಿ ಕೆನ್ನೆಗೆ ಮುತ್ತು ಕೊಟ್ಟಂತೆ ಮಾಡಿ ನಾನೇ ಮಾತಾಡಿದ್ದು ಎಂದು ಖಾತ್ರಿ ಪಡಿಸಿತು. ಕಾರ್ಟೂನ್‌ಗಳಲ್ಲಿ, ನಾವೆಲ್ಲ ಅಂಗಿಗೆ ಹಾಕಿಕೊಳ್ಳುವ ಸ್ಟೈಲ್ ಬ್ಯಾಡ್ಜ್ಗಳಲ್ಲಿಯ ಸ್ಮೆöÊಲ್ ಇಮೋಜಿಯಂತೆ ಪಟದಲ್ಲಿ ಕಂಡಿತು.

ಮೊದಲೆ ಸ್ಮಶಾನದ ದಂಡೆಗಿರುವ ಹಳ್ಳ. ಅಪ್ಪ ಅಮ್ಮ ಯಾವಾಗಲೂ ಆ ದಾರಿಯಲ್ಲಿ ಅಡ್ಡಾಡಬೇಡ ಎಂದು ಸದಾ ಹೇಳುತ್ತಿದ್ದರು. ಬೇಜಾರು ಕಳೆಯಲು ಇಂದು ಹಳ್ಳದ ಹಾದಿ ಹಿಡಿದಿದ್ದಕ್ಕೆ, ನೀರಿನಲ್ಲಿ ಆಟವಾಡುತ್ತಾ ಬಂದಿದ್ದಕ್ಕೆ, ಉಸುಕಿನಲ್ಲಿ ಆಡಿದ್ದಕ್ಕೆ ಏನೆಲ್ಲ ಆಗುತ್ತಿದೆ ಎಂದು ಗಾಭರಿಯಾಗಿ ಆ ಪಟವನ್ನು ಎಸೆದ.

ಅದು ದೂರವೇನೋ ಹೋಗಿ ಬಿದ್ದಿತು; ಮರುಕ್ಷಣದಲ್ಲಿ ಮತ್ತೆ ಹಾರಿ ನನ್ನ ಕೈ ಸೇರಿತು. ನಮಗೆ ಭಯ ಇನ್ನೂ ಹೆಚ್ಚಾಯಿತು. ಮತ್ತೆ ಎಸೆದು ಓಡತೊಡಗಿದೆ ‘ಅಪ್ಪ . . . ಅಮ್ಮ . . . ಯಾರಾದರೂ ಕಾಪಾಡಿ” ಎಂದು.

। ನಾಳೆಗೆ ।

‍ಲೇಖಕರು Admin

16 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading