ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್ ಸೇರಿ ನಾಲ್ವರಿಗೆ ‘ಬರಗೂರು ಪ್ರಶಸ್ತಿ’

ನಾಡೋಜ ಡಾ.ಬರಗೂರು ಪ್ರತಿಷ್ಠಾನ ವತಿಯಿಂದ ಕೊಡಮಾಡುವ ʻಬರಗೂರು ಪ್ರಶಸ್ತಿʼಗೆ ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್, ಬಿ.ಕೆ.ಸುಮಿತ್ರ ಮತ್ತು ಚಂದ್ರಕಾಂತ್ ಪೋಕಳೆ ಆಯ್ಕೆಯಾಗಿದ್ದಾರೆ.

ಸೃಜನಶೀಲ ಕ್ಷೇತ್ರಗಳಾದ ಸಾಹಿತ್ಯ ಮತ್ತು ಸಿನಿಮಾದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಪರಿಗಣಿಸುತ್ತಿದ್ದು, ೨೦೨೦ ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಗಿರೀಶ್ ಕಾಸರವಳ್ಳಿ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಶ್ರೀಮತಿ ಸಾರಾ ಅಬೂಬಕರ್ ಅವರನ್ನು ಆಯ್ಕೆ ಮಾಡಲಾಗಿದೆ.

೨೦೨೧ ರ ಸಾಲಿಗೆ, ಸಿನಿಮಾ ಗೀತಗಾಯನ ಹಾಗೂ ಸುಗಮ ಸಂಗೀತ ಖ್ಯಾತಿಯ ಬಿ.ಕೆ.ಸುಮಿತ್ರ ಹಾಗೂ ಮರಾಠಿಯಿಂದ ಕನ್ನಡಕ್ಕೆ ೪೦ ಕ್ಕೂ ಅಧಿಕ ಕೃತಿಗಳನ್ನು ಭಾಷಾಂತರ ಮಾಡಿದ ಚಂದ್ರಕಾಂತ್ ಪೋಕಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸುಂದರರಾಜ ಅರಸು, ಡಾ.ರಾಜಪ್ಪ ದಳವಾಯಿ ತಿಳಿಸಿದ್ದಾರೆ.

ಈ ಪ್ರಶಸ್ತಿಯು ತಲಾ ೨೫ ಸಾವಿರ ರೂ.ಗಳನ್ನು ಒಳಗೊಂಡಿದೆ. ಪ್ರಶಸ್ತಿ ಫಲಕದೊಂದಿಗೆ ಪುರಸ್ಕೃತರನ್ನು ಅಕ್ಟೊಬರ್ ೩೦ ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಗೌರವಿಸಲಾಗುತ್ತದೆ.

‍ಲೇಖಕರು Admin

18 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading