ಆತ್ಮೀಯರೇ,
`ಧಾರವಾಡ ಸಾಹಿತ್ಯ ಸಂಭ್ರಮದ ವಿಷಯವಾಗಿ ಸೃಷ್ಟಿಯಾಗಿದ್ದ ಗೊಂದಲ ಪರಸ್ಪರ ಚರ್ಚೆಯ ಮೂಲಕ ತಿಳಿಯಾಗಿದೆ. ಎಲ್ಲರ ಸಹಕಾರದಿಂದಾಗಿ ಇದು ಸುಗಮವಾಗಿ ನೆರವೇರಲಿದೆ. ಬೇರೆ ಬೇರೆ ಮೂಲಗಳಿಂದ ಹೆಚ್ಚಿನ ಆರ್ಥಿಕ ನೆರವು ಸಿಕ್ಕಿದ್ದರಿಂದ ಪ್ರತಿನಿಧಿ ಶುಲ್ಕ1,500 ಯಿಂದ 500ಕ್ಕೆ ಇಳಿಸಲಾಗಿದೆ. ಈಗಾಗಲೇ ಹೆಸರು ನೋಂದಣಿ ಮಾಡಿಸಿರುವವರಿಗೆ ಸಂಭ್ರಮದ ಸಂದರ್ಭದಲ್ಲಿ ಹೆಚ್ಚುವರಿ ಹಣವನ್ನು ಮರಳಿ ನೀಡಲಾಗುವುದು. ಇತರ ಸಾಹಿತ್ಯಾಸಕ್ತರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಗೋಷ್ಠಿಗಳಲ್ಲಿ ಮುಕ್ತ ಚರ್ಚೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಸಂಭ್ರಮಕ್ಕೆ ರೂಪಿಸಿದ್ದ ಎಲ್ಲ ನಿಯಮಗಳನ್ನು ರದ್ದು ಪಡಿಸಲಾಗಿದೆ’ ಎಂದು `ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್’ ದ ಅಧ್ಯಕ್ಷರಾದ ಡಾ.ಗಿರಡ್ಡಿ ಗೋವಿಂದರಾಜ ತಮ್ಮ ನಿಲುವು ಪ್ರಕಟಿಸಿದ್ದಾರೆ.
ಸಂಭ್ರಮದ ಜನವಿರೋಧಿ ನಿಲುವು, ಸಾಹಿತ್ಯವನ್ನು ಉಳ್ಳವರ ಸ್ವತ್ತಾಗಿಸುವ ಕಾರ್ಯತಂತ್ರ, ಸಾರ್ವಜನಿಕ ವಲಯದಿಂದ ಅನುದಾನ ಪಡೆದೂ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ, ಭಾಗವಹಿಸುವ ಸಾಹಿತ್ಯಾಸಕ್ತರ ಮೇಲೆ ವಿಧಿ ಸಿರುವ ಸ್ವಾತಂತ್ರ್ಯಹರಣದ ನಿಬಂಧನೆಗಳು, ಸಾಹಿತ್ಯವನ್ನು ಕಾರ್ಪೋರೇಟ್ ವಲಯಕ್ಕೊಯ್ಯುವ ತಂತ್ರಗಳು ಸಾಹಿತ್ಯ ಸಂಭ್ರಮದ ವಿರೋಧಕ್ಕೆ ನಮ್ಮ ಮುಖ್ಯ ಕಾರಣಗಳಾಗಿದ್ದವು.
ಡಾ. ಎಂ.ಎಂ.ಕಲಬುರ್ಗಿಯವರು ಸಂಭ್ರಮದ ನಿಲುವು ಪ್ರತಿಭಟಿಸಿದ ಧಾರವಾಡದಲ್ಲಿರುವ ಗೆಳೆಯರನ್ನು ಮಾತಿಗೆ ಕರೆದು, `ನಿಮ್ಮ ವಿಚಾರ ಸರಿಯಿದೆ. ಅದು ನನಗೂ ಮನವರಿಕೆಯಾಗಿದೆ. ನಮ್ಮ ಗಮನಕ್ಕಿಲ್ಲದೆ ಅವೆಲ್ಲ ರೂಪಗೊಂಡಿದ್ದವು. ನಮ್ಮದು ಜೈಪುರ ಮಾದರಿ ಲಿಟರರಿ ಫೆಸ್ಟಿವಲ್ ಅಲ್ಲ ನಮ್ಮದು ಕನ್ನಡನಾಡಿನ ಧಾರವಾಡ ಮಾದರಿ.ಅದನ್ನೆಲ್ಲ ಮಾಧ್ಯಮಕ್ಕೆ ಹೇಳಿಕೆ ಕೊಟ್ಟು ಸರಿಪಡಿಸುತ್ತೇವೆ’ ಎಂದು ಡಾ ಗಿರಡ್ಡಿ ಗೋವಿಂದರಾಜ ಜತೆಯಲ್ಲಿ ಹೇಳಿದರು. ಈ ಸಂಗತಿ ಕುರಿತು ಅವರ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಈ ಸಂಗತಿಯನ್ನು ನಮ್ಮ ಗೆಳೆಯರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ಅವರಿಗೆ ಹೇಳಿ ಬಂದೆವು. ಸಂಭ್ರಮದ ಸಂಘಟಕರ ನಿಲುವು ಬದಲಾದರೂ ವೈಚಾರಿಕ ಭಿನ್ನಮತ ಇದ್ದೇ ಇದೆ. ನಮ್ಮ ವೈಚಾರಿಕ ನಿಲುವಿನ ಸಾಹಿತ್ಯ ಸಮಾವೇಶ ಮಾಡುವ ನಮ್ಮ ವಿಚಾರವನ್ನು ಅವರೆದುರು ನೇರವಾಗಿ ಹೇಳಿದ್ದಾಗಿದೆ. ಸಂಭ್ರಮದ ದಿನಗಳನ್ನು ಬಿಟ್ಟು ಮಾಡುವುದಾದರೆ ನಾವು ಬರುತ್ತೇವೆ ಎಂಬುದು ಅವರ ಮಾತಾಗಿತ್ತು. ಪತ್ರಿಕೆಗಳಿಗೂ ಸೋಮವಾರ ನಮ್ಮ ನಿಲುವು ತಿಳಿಸುವುದಾಗಿ ಹೇಳಿದ್ದೇವೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬೇಕೆಂಬ ಕೋರಿಕೆ ನಮ್ಮದು.
ಸಂಭ್ರಮದ ಸಂಘಟಕರ ನಿಲುವಿನಲ್ಲಾದ ಬದಲಾವಣೆಗೆ ಮಾರ್ಪಾಟಿಗೆ ನಾಡಿನ ಹಿರಿಯ ಮತ್ತು ಕಿರಿಯ ತಲೆಮಾರಿನ ಗೆಳೆಯರು ತೋರಿದ ಭಿಡೆ ಬಿಟ್ಟ ಪ್ರತಿರೋಧವೇ ಕಾರಣವಾಗಿದೆ. ಪಾಲ್ಗೊಳ್ಳಲಾರೆ ಎಂಬ ನಿರಾಕರಣೆ ಮುಖ್ಯವಾಗಿದೆ. ಈ ಕುರಿತು ನಡೆದ ಚರ್ಚೆಗಳ ಪರಿಣಾಮವಾಗಿದೆ. ಇಂಥ ಯೋಚನೆಯ ಮನಸುಗಳು ಸಕಾಲಿಕವಾಗಿ ಎದ್ದು ನಿಲ್ಲುವುದರಿಂದಾಗಿಯೇ ಜನಮುಖಿಯಾದ ಕನ್ನಡ ಸಾಹಿತ್ಯ ಪರಂಪರೆಯನ್ನು ಉಳ್ಳವರ ಸ್ವತ್ತಾಗದ ಹಾಗೆ ನೋಡಿಕೊಳ್ಳಲು ಸಾಧ್ಯವಾಗಿದೆ.
ಸಂಭ್ರಮದ ನಿಲುವು ಬದಲಾವಣೆ ಆಗಲು ಕಾರಣವಾದ, ನಮ್ಮ ಪ್ರತಿರೋಧಕ್ಕೆ ಶಕ್ತಿ ತುಂಬಿ ಜತೆಗೆ ನಿಂತ ಜನಪರ ಮತ್ತು ಪ್ರಗತಿಪರ ಸಂಘಟನೆಗಳು ಮುಖ್ಯವಾಗಿ ಅವಧಿ ಅಂತರ್ಜಾಲ, ಪತ್ರಿಕೆಗಳಿಗೆ ನಮ್ಮ ಜತೆಗಿರುವ ಎಲ್ಲ ಮನಸುಗಳಿಗೆ ಧನ್ಯವಾದಗಳು.
ಈ ಸಂದರ್ಭದಲ್ಲಿ ನಮ್ಮೊಡನಿದ್ದ ಜಿ. ರಾಮಕೃಷ್ಣ, ಕೆ. ಮರುಳಸಿದ್ದಪ್ಪ. ಎಂ.ಎಂ.ಕಲ್ಬುರ್ಗಿ, ಕೋ . ಚೆನ್ನಬಸಪ್ಪ, ಜಗದೀಶ್ ಮಂಗಳೂರ ಮಠ, ರಹಮತ್ ತರೀಕೆರೆ, ಕುಂವೀ, ಪುರುಷೋತ್ತಮ ಬಿಳಿಮಲೆ, ಎಚ್ಚೆಸ್ಸಾರ್, ಜೋಗಿ, ಜಿ.ಎನ್.ಮೋಹನ್, ಕೆವಿ.ತಿರುಮಲೇಶ್, ಕಡಿದಾಳು ಶಾಮಣ್ಣ, ಬರಗೂರು, ನಾ. ಡಿಸೋಜ, ಎಸ್ ಜಿ ಸಿದ್ದರಾಮಯ್ಯ, ಎಲ್. ಹನುಮಂತಯ್ಯ, ಕೆ.ಪಿ.ಸುರೇಶ, ಸುಮಾ ಎಂಬಾರ್..
..ಸುರೇಶ ಭಟ್, ಪ್ರಕಾಶ್ ಖಾಡೆ, ವಿಠಲ ಭಂಡಾರಿ, ಮಾವಳ್ಳಿ ಶಂಕರ್, ಸಬಿಹ ಭೂಮಿಗೌಡ, ಆರ್.ಕೆ.ಹುಡಗಿ, ಕೆ.ನೀಲಾ, ರಾಜಪ್ಪ ದಳವಾಯಿ, ಶಿವಸುಂದರ್, ನಟರಾಜ್ ಬೂದಾಳು, ಸತೀಶ್ ಕುಲಕರ್ಣಿ, ವಸಂತ ಬನ್ನಾಡಿ, ಕೆ. ಕೇಶವ ಶರ್ಮ,ಎಚ್.ನಾಗವೇಣಿ, ಚಂದ್ರಶೇಖರ್ ನಂಗಲಿ, ಮಹಾಂತೇಶ್ ನವಲಕಲ್, ಶಶಿಧರ್ ಹೆಮ್ಮಾಡಿ, ಆರಿಫ್ ರಾಜಾ..
..ಎಸ್ ಸಿ ದಿನೇಶ್ ಕುಮಾರ್, ಎಸ್ ಗಂಗಾಧರಯ್ಯ, ಸುನಂದಾ ಕಡಮೆ, ಕುಮಾರ್ ಎಸ್ , ರಾಮಚಂದ್ರ ಕುಲಕರ್ಣಿ, ಕುಂಸಿ ಉಮೇಶ್, ಮಲ್ಲಿಕಾರ್ಜುನ್ ಮೇಟಿ, ಲಕ್ಷ್ಮಿ ನಾರಾಯಣ ನಾಗವಾರ , ಕೆ. ಫಣಿರಾಜ್, ಬಿ. ಶ್ರೀನಿವಾಸ್ ಕಾ.ವೆಂ.ಶ್ರೀನಿವಾಸ ಮೂರ್ತಿ, ಶಿವಾನಂದ ಕೆಳಗಿನಮನಿ..
..ದಯಾನಂದ್ ಟಿ. ಕೆ, ಹೃದಯ ಶಿವ, ಸಂದೀಪ್ ಆರಾಧ್ಯ, ನಾ. ದಿವಾಕರ, ಅಶೋಕ್ ಶೆಟ್ಟರ್, ಸಿದ್ದನ ಗೌಡ ಪಾಟೀಲ್ , ದುರ್ಗಾದಾಸ್, ಅರುಣ್ ಜೋಳದ, ವೀರಣ್ಣ ಮಡಿವಾಳರ ಹನಮಂತ ಹಾಲಿಗೆರಿ, ನಾರಾಯಣ ಗುರುಪ್ರಸಾದ್, ಬಿ.ಪೀರ್ ಭಾಷಾ..
..ಜಗದೀಶ್ ಕೊಪ್ಪ, ಇರ್ಫಾನ್ ಮುದಗಲ್ , ಪಿ ವಿ ಹಿರೇಮಠ, ಅನಸೂಯಾ ಕಾಂಬಳೆ, ಇಂದೂಧರ ಇಂದುಧರ್ ಹೊನ್ನಾಪುರ, ಗೌರಿ ಲಂಕೇಶ್, ಬಿ ಮಾರುತಿ, ಮುತ್ತು ಹಾಳಕೇರಿ, ಕಳಕೇಶ್, ಬಸವರಾಜ್ ಹಳ್ಳಿ, ಕೆ. ಅಕ್ಷತಾ, ಮಂಜುನಾಥ್ ಲತಾ, ಪ್ರವರ ಕೊಟ್ಟುರ್ ಮತ್ತೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.
ಪ್ರೀತಿಯಿಂದ,
– ಬಸೂ






astu bega badalayita nimma niluvu?
ಬಸೂ ಸರ್ ಅಖಾಡಕ್ಕೆ ಇಳಿದಾಗಲೇ ನಮಗೆ ಗೊತ್ತಾಗಿತ್ತು….ಇದು ಬದಲಾಗುತ್ತದೆಂದು….ಅದಕ್ಕಾಗಿ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು….