ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿಡಗಳ ಮೇಲೆ ತುಂಡು ಬಟ್ಟೆ ಪೀಸುಗಳು..

ಬಾದಲ್ ನಂಜುಂಡಸ್ವಾಮಿ 

ಹಳ್ಳದಲ್ಲಿ ಮನೆ.

ಮನೆ ಸುತ್ತಾ ಕಾಂಪೌಂಡ್ ರೀತಿಯಲ್ಲಿ ಕಳ್ಳಿಗಿಡಗಳು.

ಗಿಡಗಳ ಮೇಲೆ ತುಂಡು ತುಂಡು ಬಟ್ಟೆ ಪೀಸುಗಳು. ಅದೇನು ಅಂತ ಅರ್ಥವಾಗಲಿಲ್ಲ.

ಬರೀ ನಮ್ಮನೆ ಅಂತಲ್ಲ ಅಕ್ಕ ಪಕ್ಕದ್ ಮನೇಲೂ ಅವು ನೇತಾಡುತ್ತಿದ್ದವು.

ನಾನು ಎಷ್ಟೋ ವರುಷಗಳ ತನಕವೂ ಅವುಗಳನ್ನು ನೆಲ ಒರೆಸುವ ಬಟ್ಟೆ ಅಂತಲೇ ಅಂದುಕೊಂಡಿದ್ದೆ!

ಬಚ್ಚಲು ಮನೆಯ ತಂತಿಗಳಲ್ಲಿ ಹಾಗು ಕಳ್ಳಿಗಿಡಗಳಲ್ಲಿ ಅವುಗಳನ್ನು ಒಗೆದು ಒಣ ಹಾಕಿರುವುದು ಮತ್ತೆ ನೆನಪಾಯಿತು. ಒಣಗಾದ ಮೇಲೆ ಮತ್ತೆ ಅವುಗಳನ್ನೇ ಉಪಯೋಗಿಸುತ್ತಿದ್ದದ್ದು ಗೊತ್ತಾಗುತ್ತಿತ್ತು. ಆಮೇಲೆ ಇಬ್ಬರು ಅಕ್ಕಂದಿರೂ ಮನೆಯಿಂದ ಖಾಲಿ ಆಗಿ ಎಷ್ಟೋ ವರುಷಗಳ ನಂತರ ಹಿಂಗೇ ನಾವ್ ನಾವ್ ಹುಡುಗರು ಅಲ್ಲೆಲ್ಲೋ ಅರಳೀಕಟ್ಟೆಯಲ್ಲಿ ಕೂತು ಮಾತನಾಡಿಕೊಳ್ಳುತ್ತಿದ್ದಾಗ ಅರಿವಾಗಿತ್ತು. ಆ ಬಟ್ಟೆ ಪೀಸುಗಳು ಏನೆಂದು!

ಇದಾದ ಮೇಲೆ ಇದರ ಬಗ್ಗೆ ಅಲ್ಲಲ್ಲಿ ನಾವು ಹುಡುಗರು ಮಾತನಾಡಿಕೊಳ್ಳುತ್ತಿದ್ದದ್ದು ಟೀವಿಯಲ್ಲಿ ಕ್ರಿಕೆಟ್ ಮಧ್ಯೆ ಅಡ್ವರ್ಟೈಸ್ಮೆಂಟ್ ತೋರಿಸುತ್ತಿದ್ದಾಗಲೇ!

ಈಗ ಇದನ್ನೆಲ್ಲಾ ನೋಡುತ್ತಿದ್ದಾಗ ಈಗನಿಸಿದ್ದು. ಹಳ್ಳಿಯಲ್ಲಿ ಮೂರೊತ್ತು ಊಟಕ್ಕೂ ಗತಿಯಿಲ್ಲದ ಬಡವನ ಹೆಣ್ಣು ಮಗುವೊಂದು ತನಗೆ ಅದು ಬೇಕೆಂದು ಹೆಂಗೆ ಬಾಯ್ಬಿಟ್ಟು ಅಪ್ಪನ ಬಳಿ ದುಡ್ಡು ಕೇಳೀತು ಅಂತ? ಆತನೂ ಕೂಡ ಎಷ್ಟು ಬಾರಿ ಅಂತ ತೆಗೆದುಕೊಟ್ಟಾನು? ಅದಕ್ಕೂ ಮುಂಚೆ ಹಳ್ಳಿಯಲ್ಲಿ ಒಬ್ಬಗಂಡಸು ಇಂಥದರ ಬಗ್ಗೆ ಬಾಯ್ಬಿಟ್ಟು ಮಾತನಾಡುತ್ತಾನೆ ಎಂಬುದೇ ಸಂಶಯ!

ಶಾಲೆಗೆ ಹೋಗುವ ಅವಳು ಈಗಲೂ ಬಟ್ಟೆಯನ್ನೇ ಉಪಯೋಗಿಸುತ್ತಿರಬಹುದು?

‍ಲೇಖಕರು avadhi

10 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading