
ಸಿ ಕೆ ಗುಂಡಣ್ಣ
ರಂಗ ನಿರಂತರ ತಂಡದ ಹೊಸ ಪ್ರಯೋಗ “ಸಹದೇವ”. ಬಸವರಾಜ್ ಸೊಳೇರಿಪಾಳ್ಯ (ಬಚ್ಚಿ ) ಬಹಳ ಸಮಯದ ನಂತರ ರಚನೆ ಮಾಡಿರುವ ಉನ್ನತ ಸಾಹಿತ್ಯಾತ್ಮಕ ನಾಟಕ ಇದು.
ಜೋಸೆಫ್ ಅವರು ಹೊಸ ಪರಿಚಯದ ರಂಗಾಸಕ್ತರಿಗೆ ನಡೆಸಿದ ನಾಟಕ ಕಾರ್ಯಾಗಾರದಲ್ಲಿ ಸಿದ್ದವಾದ ನಾಟಕ “ಸಹದೇವ”. ನಾಟಕದ ಮಾತುಗಳು ಎಷ್ಟು ಗಾಢವಾಗಿದೆ ಅಂದರೆ, ನಿರ್ದೇಶಕರು ಕಟ್ಟಿ ತೋರಿಸಿರುವ ದೃಶ್ಯವೂ ನಟರು ಹೇಳುವ ಆ ಮಾತುಗಳಿಗೆ ಅಡಚಣೆ ಎನ್ನಿಸುತ್ತದೆ.; ಹಾಗೆ, ಸುಮ್ಮನೆ ಕಣ್ಣು ಮುಚ್ಚಿಕೂಂಡು, ಆ ಮಾತುಗಳನ್ನು ಮನಸ್ಸಿನೊಳಗೆ ಎಂದೆಂದಿಗೂ ಮರೆಯದ ಹಾಗೆ ತುಂಬಿಸಿಟ್ಟುಕೊಳ್ಳಬೇಕು ಅನ್ನಿಸುತ್ತದೆ.
ವೈಶಂಪಾಯನ ಕೊಳವನ್ನು ಬಹಳ ಜಾಣ್ಮೆಯಿಂದ, ಅತ್ಯಂತ ಸಹಜತೆಯಿಂದ ಸೃಜನಾತ್ಮಕವಾಗಿ ನಿರ್ಮಿಸಿದ್ದಾರೆ ನಿರ್ದೇಶಕರು. ಹೊಸ ನಟರುಗಳು ಲವಲವಿಕೆಯಿಂದ ನಟಿಸಿದ್ದಾರೆ.
ಹಳೆಯ ಪರಿಚಯಸ್ಥ ನಟರುಗಳಲ್ಲಿ ಕರ್ಣ ಮತ್ತು ದ್ರೌಪದಿ ಪಾತ್ರಧಾರಿಗಳು ನಾಟಕ ಮುಗಿದ ಮೇಲೂ ಕಾಡುತ್ತಾರೆ – ಬಚ್ಚಿ ಬರೆದ ಮಾತುಗಳಿಗೆ ಸಾರ್ಥಕತೆಯನ್ನು ತಮ್ಮ ನಟನೆಯಿಂದ ನೀಡುತ್ತಾರೆ.
ಸಾಮಾಜಿಕ ಕಳಕಳಿಯ ಆಶಯವನ್ನೂ ತನ್ನ ಒಡಲಾಗ್ನಿಯಲ್ಲಿ ತುಂಬಿಕೊಂಡಿರುವ “ಸಹದೇವ” ಯುದ್ದ ವಿರೋಧಿ ಪ್ರಯೋಗ.
ಪ್ರಸ್ತುತ ಸಾಮಾಜಿಕ ಅಸಮತೋಲನಗಳಿಗೆ ಮೂಕ ಪ್ರಜ್ಞೆಯಾಗಿರುವ ನಾವೆಲ್ಲ ಬುದ್ದಿಜೀವಿಗಳು, ನಮ್ಮ ಅಸಹಾಯಕತೆಯ ನಿರ್ವೀರ್ಯ ನಡೆಗಳಿಂದ “ಸಹದೇವ”ನ ಸಹಚರರೋ ಎನ್ನಿಸುವ ಹಾಗೆ ವಿಷಾದ ಭಾವ ಮೂಡುತ್ತದೆ.





0 Comments