ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಡಸಿನ “ಪ್ರೀತಿ” ಅಂದ್ರೆ ಇದೇನಾ!?

chetana2.jpg

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

ಥ್! ಮಳೆ ಹೊಯ್ತಲೇ ಇದೆ ಇನ್ನೂ. ಅದೇನು ಹೊಟ್ಟೆಕಿಚ್ಚೋ? ದಿನಾ ಆಫೀಸಿಂದ ಹೊರಡುವಾಗ ಇದೊಂದು ಗೋಳು. ಇವತ್ತೂ ಲೇಟಾದರೆ ಅಂವ ಮತ್ತೆ ರಗಳೆ ಶುರು ಹಚ್ಚುತ್ತಾನೆ. ಚುಚ್ಚು ನೋಟ ಎಸೆಯುತ್ತಾನೆ. ಆಗೆಲ್ಲ ಎಷ್ಟು ಚೆಂದವಿತ್ತು. ಹೋರಾಟ-ಭಾಷಣಗಳು, ಚರ್ಚೆ ಕಾಂಪಿಟೇಷನ್ನುಗಳು…. “ನಿಮ್ಮಂತ ಹೆಣ್ಣು ಮಕ್ಕಳು ನಮ್ ಸಮಾಜಕ್ಕೆ ಬೇಕು.” ಅಂವ ಮಿನುಗು ಕಣ್ಣಲ್ಲಿ ಮೆಚ್ಚುಗೆ ಸೂಸುತ್ತ ಮೈಯ್ಯಲ್ಲಿ ಮಿಂಚು ಹರಿಸಿದ್ದ. ಮೀಸೆ ಇರೋರೆಲ್ಲಾ ಒಂದೇ ಜಾತಿ, ಮದುವೆ ಹೊತ್ತಿಗೆ ನೋಡಿದರಾಯ್ತು ಅಂತ ಗಂಡಸರೆಡೆಗೊಂದು ಉಪೇಕ್ಷೆ ಇಟ್ಟುಕೊಂಡಿದ್ದ ನಾನು ಸ್ಯಾಟಲೈಟ್ ಹುಡುಗರನ್ನೆಲ್ಲ ದೇವದಾಸರನ್ನಾಗಿಸಿಬಿಟ್ಟಿದ್ದೆ! ಆದರೆ ಇಂವ, ಮೀಸೆಯನ್ನೂ ಮೀರಿ ನನ್ನ ಸೆಳೆದುಬಿಟ್ಟಿದ್ದ!  

ಬೌದ್ಧಿಕ ಸಾಹಚರ್ಯ! ಭೈರಪ್ಪ ಅದ್ಯಾವ ಹೊತ್ತಲ್ಲಿ ಕುಂತು ಹೊಸೆದ ಪದವೋ? ನಮ್ಮ ಸಂಬಂಧಕ್ಕೊಂದು ಲೇಬಲ್ಲು ಹಚ್ಚಲೇಬೇಕಾದಾಗ ಅನಾಮತ್ತು ತೆಗೆದು ಅಂಟಿಸಿಬಿಟ್ಟಿದ್ದೆ! ಕಾಸಗಲ ಕುಂಕುಮದ ಗೆಳತಿ ನೂರು ಸಾರ್ತಿ  “ಹುಷಾರಿ” ಹೇಳಿದ್ದಳು. “ಊರಿಗೆ ಬಂದಿದ್ದು ನೀರಿಗೆ ಬಾರದಿದ್ದೀತೇ” ಹಂಗಿಸಿದ್ದಳು. ಬುದ್ಧಿ- ಊರಾಯ್ತು. ದೇಹ- ನೀರಾಯ್ತು!  

ಈ ಇಂವ ಅದೆಷ್ಟು ಬದಲಾಗಿ ಹೋದ? “ತಿನ್ನುವ ತಟ್ಟೆ ತಳ್ಳದ, ಅಸಹನೆಯಿಂದ ರೇಗದ, ಕೈಯೆತ್ತದ ಗಂಡು, ಗಂಡೇ ಅಲ್ಲ” ಅಂತ ಮನು ತನ್ನ ಎರಡೂವರೆ ಚಿಲ್ಲರೆ ಸಾವಿರ ಶ್ಲೋಕಗಳಲ್ಲೆಲ್ಲೂ ಹೇಳಿಲ್ಲ! ಆದರೂ ಗಂಡಸರೆಲ್ಲರೂ ಇದನ್ನ ಚಾಚೂ ತಪ್ಪದೆ ಪಾಲಿಸ್ತಾ, ತಮ್ಮ “ಗಂಡಸ್ತನ” ಸಾಬೀತುಪಡಿಸಿಕೊಳ್ತಲೇ ಇರ್ತಾರಲ್ಲಾ! ಹೀಗ್ಯಾಕೆ? ಗೆಳತಿಯನ್ನ ಕೇಳಿದೆ…. ನಾನು ಬಾತ್ ರೂಮಿಗೆ ಹೋದಾಗಲೆಲ್ಲ ಮೊಬೈಲಿನ ಮೂಲೆ ಮೂಲೆ ತಡಕುತ್ತಾನೆ. ಅಂವ ಕಾಲ್ ಮಾಡಿದಾಗ ಎಂಗೇಜ್ ಬಂದರೆ ಸಿಡುಕುತ್ತಾನೆ. ದನಿ ಎತ್ತರಿಸಿದರೆ ಕೈ ಎತ್ತುತ್ತಾನೆ. ಮಾತು-ಕಥೆ-ಭಾಷಣ….ಊಹೂಂ! ಎಲ್ಲಕ್ಕೂ “ಜೋಪಾನ” ಅನ್ನುತ್ತಾನೆ. “ನಿನ್ನಿಷ್ಟ” ಅಂದು ಮುಖ ತಿರುವುತ್ತಾನೆ. ಅವನಿಂದ ಈಗ chitra23.jpgಹೋರಾಟ…ಹೆಣ್ಣು ಮಕ್ಕಳು… ಯಾವುದರ ಸದ್ದು-ಸುದ್ದಿಯೇ ಇಲ್ಲವಲ್ಲೇ!? ಹೇಳೇ….ಇಂವ ಹಿಂಗ್ಯಾಕೆ ಆಡ್ತಾನೆ?  

ಗೆಳತಿ ನಗುವಲ್ಲಿ ಈಗ ನೂರು ಗುಟ್ಟು. ಮದುವೆಯಾದವಳ ಹಮ್ಮಿನ ನೂರು ಹೆಮ್ಮೆ! “ಖುಷಿ ಪಡೇ…. ಅಂವ ನಿನ್ನ ಕಳಕೊಳ್ಳಲು ಹೆದರ್ತಾನೆ. ನಿನ್ನನ್ನ ತುಂಬ ತುಂಬ ಪ್ರೀತಿಸ್ತಾನೆ!!”  

ಅವಳ “ಪ್ರೀತಿ” ಹಿಂದಿನ ದನಿಯಲ್ಲಿ ಸಾವಿರ ಅರ್ಥ ತುಳುಕಿತ್ತು. ಸಂಭ್ರಮದ ವಿಷಾದ ಹಣಕಿತ್ತು! ಇದೇನಾ…..ಗಂಡಸಿನ “ಪ್ರೀತಿ”!?

‍ಲೇಖಕರು avadhi

1 August, 2007

7 Comments

  1. pathresh hiremath

    gandasina preethi lekana thumba chennagittu.naavu gandasaru yaavaagalu thumba swarthigalu.

  2. girisha

    hello ಚೇತನಾ
    your exp. is very bad. This is not a love. this very very possiveness. please talk openly to your husband.
    (sorry if i hurt u ?)

    girisha

  3. markata

    hey Girisha, I don’t think she is narrating her experience. Its not from her diary. I feel its a narrating style. light agi levadi madta irodu. And She is explaining “Gandasina Preethi”. I loved it. like “ಬೌದ್ಧಿಕ ಸಾಹಚರ್ಯ!”, ” ಎರಡೂವರೆ ಚಿಲ್ಲರೆ ಸಾವಿರ ಶ್ಲೋಕಗಳಲ್ಲೆಲ್ಲೂ ಹೇಳಿಲ್ಲ!”, “ಸಂಭ್ರಮದ ವಿಷಾದ “

  4. jayakishore

    Hi,
    Write up was nice.touching.
    -Jayakishore

  5. anjali

    Hi

    this is a true comment. Because i am facing this torture daily.

  6. Veena

    keLidre hedrike aagatte, aadre maduve aada takshaNa diDeer badalavaNe aagodu andre nambokke aagolla.. aadru chappaLe onde kainall aagolla, gaNdasina bhaavane gaLanna light aagi levDi maaDi, vishaada padodu entha bhaavane? hmm.. Lot of femisitic views hidden underneath is what I felt.
    Narrating style makes it interesting to read, but idu nijavaada anubhava aagidre maatra asahaneeya…
    To keep any relationship fruitful, both of them need to work..Just not the marriage.

  7. shahid

    hi namasthe akka hw r u just i saw ur kawana

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading